ಪ್ರಚಲಿತ

ವೈರಲ್ ಆಯಿತು ಪ್ರಭಾಕರ ಭಟ್ಟರ ಜೊತೆ ಸ್ವಯಂಸೇವಕರೊಬ್ಬರ ಫೋಟೋ! ಫೋಟೊ ಹಿಂದಿನ ಅಸಲಿಯತ್ತೇನು? ಫೋಟೋದಲ್ಲಿರುವುದು ಆದಿತ್ಯ ರಾವ್ ಹೌದಾ?!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರೋಪಿ ಆದಿತ್ಯ ರಾವ್ ಎಂಬಾತ ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಆಗಮಿಸಿ ತಾನೇ ಘಟನೆಯ ತಪ್ಪಿತಸ್ಥ ಎಂದು ಒಪ್ಪಿ ಶರಣಾಗಿದ್ದ.
ಯಾವಾಗ ಆರೋಪಿ ಹಿಂದೂ ಎಂದು ತಿಳಿಯಿತೋ ಆವಾಗ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಕೆಲವರ ಬಣ್ಣ ಬದಲಾಗತೊಡಗಿತು.

ಮೊನ್ನೆ ಘಟನೆ ಬೆಳಕಿಗೆ ಬರುತ್ತಿದ್ದಂತೆ, ‘ಅದು ಬಾಂಬ್ ಅಲ್ಲ ಅದು ಪಟಾಕಿ’,
‘ಅದೊಂದು ಅಣುಕು ಪ್ರದರ್ಶನ, ಪೋಲೀಸರು ಬೇಕೆಂತಲೇ ಸುಳ್ಳು ಕಟ್ಟಿದ್ದು’ ಎಂಬೆಲ್ಲ ಹೇಳಿಕೆಗಳು ಸಮಾಜದಲ್ಲಿ ಗಣ್ಯರು ಎಂದೆಸಿಕೊಂಡಿರುವವರಿಂದ ಬರತೊಡಗಿತು. ಇನ್ನು ಕೆಲ ಸೋ ಕಾಲ್ಡ್ ಶಾಂತಿ ಪ್ರಿಯರು ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿದಂತೆ ಆಡುತ್ತಿದ್ದರು.

ಆದರೆ, ಯಾವಾಗ ಬಾಂಬ್ ಇಟ್ಟವ ಹಿಂದೂ ಅಂತ ತಿಳಿಯತೋ ಆವಾಗ ನಕ್ಸಲರು, ಜಿಹಾದಿಗಳು, ಗುಲಾಮರನ್ನು ಆರಾಧಿಸುವ ಕೆಲ ಬುದ್ಧಿ ಜೀವಿಗಳು ಸುಳ್ಳು ಸುದ್ದಿ ಹರಡಲು ಯತ್ನಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಟಿಕೆಟ್ ಆಕಾಂಕ್ಷಿ ವಕೀಲ, ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಹಾಲಿ ಸೋ ಕಾಲ್ಡ್ ಬುದ್ಧಿಜೀವಿ ಮಹೇಂದ್ರ ಕುಮಾರ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಕೂಡ ಆದಿತ್ಯ ರಾವ್ ಸಂಘ ಪರಿವಾರದ ಕಾರ್ಯಕರ್ತ ಎಂಬಂತೆ ಸುಳ್ಳು ಕಥೆಗಳನ್ನು ಸೃಷ್ಟಿಸಿದರು.

ಅಸಲಿಯತ್ತೇನು?
ಭಾಜಪದ ಸಕ್ರಿಯ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಸಂದೀಪ್ ಲೋಬೋ ಎಂಬುವವರು ಹಿಂದೂ ನಾಯಕ ಡಾ ಕಲ್ಲಡ್ಕ ಪ್ರಭಾಕರ ಭಟ್ ಅವರ ಜೊತೆಗೆ ಸಂಘದ ಕಾರ್ಯಕ್ರಮವೊಂದರಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಆದರೆ ಇವರ ಫೋಟೋ ದುರ್ಬಳಕೆ ಮಾಡಿಕೊಂಡ ಹೇಗಾದರೂ ಈ ಪ್ರಕರಣವನ್ನು ಸಂಘ ಪರಿವಾರದ ತಲೆಗೆ ಕಟ್ಟಬೇಕು ಎಂಬ ಹಠಕ್ಕೆ ಬಿದ್ದ ಕಾಂಗ್ರೆಸ್ ಪಕ್ಷ ತನ್ನ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಮೂಲಕ ಸುಳ್ಳು ಸುದ್ದಿ ಹರಡಲು ಯತ್ನಿಸಿದರು. ಆದರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ಧಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂದೀಪ್ ಲೋಬೋ ಅವರು e ಸಂಬಂಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ ಮಾತ್ರವಲ್ಲ ಪೊಲೀಸ್ ಠಾಣೆಗೆ ದೂರನ್ನು ಕೂಡ ನೀಡಿದ್ದಾರೆ.

Tags

Related Articles

FOR DAILY ALERTS
Close