ಪ್ರಚಲಿತ

ಹಿಜ್ಬುಲ್ ಮುಖಂಡನಾದ ಸಮೀರ್ ಟೈಗರ್ ನನ್ನು ಯಮನ ಪಾದಕ್ಕಟ್ಟಿದ ಭಾರತೀಯ ಸೇನೆ! ಮೋದಿ ಸರಕಾರದ ಖಡಕ್ ಎಚ್ಚರಿಕೆಗೆ ಉಗ್ರರ ಬಲಿ!

ಒಂದೊಂದೇ ಉಗ್ರರು ಬಲಿಯಾಗುತ್ತಿದ್ದಾರೆ! ಯಾಕೆ ಗೊತ್ತಾ?! ಹಿಂದೆ ಮೋದಿ ಸರಕಾರವಿದೆ! ಭಾರತದ ವಿರುದ್ಧವಾಗಿ ಯಾರಾದರೂ ಉಸಿರೆತ್ತಿದರೆ ಎಚ್ಚರಿಕೆ ನೀಡಿ! ತಿಳಿದು ಕೊಳ್ಳದೇ, ಗನ್ನು ಹಿಡಿದು ನಿಂತರೆ ನೇರವಾಗಿ ಹಣೆಗೆ ಬುಲೆಟ್ಟು ಹೊಕ್ಕಿಸಿ! ಇಷ್ಟೇ!! ಮೋದಿ ಸರಕಾರದ ಖಡಕ್ ಎಚ್ಚರಿಕೆಯ ನಡೆಗಳು ಇವೆಲ್ಲ ಹೊರತು ಬೇರಿನ್ನೇನು ಅಲ್ಲ!

ಅದಕ್ಕೆ ಸರಿಯಾಗಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಭಯೋತ್ಪಾದಕರಿಗೊಂದು ಎಚ್ಚರಿಕೆ ನೀಡಿದರು! ಸುಮ್ಮನೇ ಶರಣಾದರೆ ಸರಿ!
ಇಲ್ಲವಾದರೆ, ನಿಮ್ಮನ್ನು ಅಟ್ಟಾಡಿಸಿ ಹುಡುಕಿ ಕೊಲ್ಲುತ್ತೇವೆ ಎಂದರು!! ಅಷ್ಟಂದಿದ್ದೇ, ಭಾರತೀಯ ಸೇನೆಯೂ ಸಹ ಸಜ್ಜಾಗಿತ್ತು! ಕಾಶ್ಮೀರದ ಕಣಿವೆಗಳಲ್ಲಿ ಅಡಗಿ ಕೂತಿದ್ದ ಭಯೋತ್ಪಾದಕರು ನಾಗರಿಕರ ಬೆಂಬಲ ತೆಗೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದರು!! ಅಷ್ಟೇ ಅಲ್ಲ! ಪಾಕಿಸ್ಥಾನದಿಂದ ಬಂದ ಹಣವೊಂದು ಬಹಳ ಉತ್ತಮವಾಗಿಯೇ ಕೆಲಸ ನಿರ್ವಹಿಸಿತ್ತು! ಅದಕ್ಕೇ, ಭಾರತೀಯ ಸೇನೆ ನಡೆಸುವ ಪ್ರತೀ ಕಾರ್ಯಾಚರಣೆಗೂ ಸಹ ಅಡ್ಡಗಾಲು ಹಾಕುತ್ತಿದ್ದದ್ದು ಬೇರಾರೂ ಅಲ್ಲ! ಬದಲಾಗಿ, ಕಾಶ್ಮೀರದ ನಾಗರಿಕರು! ಹಣದಾಸೆಗೆ ಕಲ್ಲು ತೂರಾಟ ಮಾಡುತ್ತಿದ್ದ ಅನಕ್ಷರಸ್ಥರು ಎನ್ನುವುದಕ್ಕಿಂತ, ಜಿಹಾದಿ ಮನಃಸ್ಥಿತಿಯುಳ್ಳ ಭಾರತದ ಬಗಲಲ್ಲೇ ಹೊಕ್ಕಿ ಕುಳಿತ ಶತ್ರುಗಳು!

ದುರಾದೃಷ್ಟ ಅದೇ ನೋಡಿ! ಹಿಜ್ಬುಲ್, ಐಸಿಸ್ ಮತ್ತು ಉಳಿದ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರಿಗೆಲ್ಲ ಭದ್ರ ಬುನಾದಿ ಒದಗಿಸಿಕೊಡುತ್ತಿರುವುದು ಮತ್ತದೇ ಕಾಶ್ಮೀರದ ಜಿಹಾದಿ ನಾಗರಿಕರು ಎಂದರೆ ತಪ್ಪಾಗಲಾರದೀತೇನೋ! ವಿಚಾರ ಇಷ್ಟೇ! ಇವತ್ತೂ ಸಹ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಅಡ್ಡ ಪಡಿಸಿದ್ದಾರೆ ಕಾಶ್ಮೀರದ ಜಿಹಾದಿಗಳು! ಅದರಲ್ಲೂ ಸಹ, ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಆದ ಸಮೀರ್ ಟೈಗರ್ ಮತ್ತು ಪೋಸ್ಟರ್ ಬಾಯ್ ಆದ ಅಖಿಬ್ ಖಾನ್ ಅವರು ಅಡಗಿ ಕೂತಿದ್ದಾಗಲೇ ಅವರ ರಕ್ಷಣೆಯ ಕಾರ್ಯವೊಂದು ಪ್ರಾರಂಭವಾಗಿತ್ತು! ಅಷ್ಟೇ! ಅದೂ ಸಹ ಕಾಶ್ಮೀರದ ಕಲ್ಲು ತೂರಾಟಗಾರರಿಂದ!

ಹೌದು! ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದಕ್ಷಿಣ ಕಾಶ್ಮೀರದ ದ್ರಾಬ್ಗಮ್ ಹಳ್ಳಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸ್ವತಃ ಉಗ್ರರ ರಕ್ಷಣೆಗೆ ಕಾಶ್ಮೀರದ ನಾಗರಿಕರೇ ಇಳಿದಿದ್ದಲ್ಲದೇ, ಕಲ್ಲು ತೂರಾಟ ನಡೆಸಿದ ಪರಿಣಾಮ ಸೇನಾ ಮೇಜರ್ ಮತ್ತು ಸೈನಿಕರಿಗೆ ಗಾಯಗೊಂಡಿದೆ ಎಂದು ಹೇಳಲಾಗಿದೆ!

ಕೆಲವು ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದ ಬಳಿಕ ಪೊಲೀಸರು, ಸಿಆರ್ ಪಿ ಎಫ್ ಯೋಧರು ಮತ್ತು ಭಾರತೀಯ ಸೈನ್ಯದ ಕಮಾಂಡೋಗಳು ಪುಲ್ವಾಮಾ ದ್ರಾಬ್ಗಾಮ್ ಗ್ರಾಮದ ಸುತ್ತಲೂ ಮುತ್ತಿಗೆ ಹಾಕಿದ್ದಾರಲ್ಲದೇ, ಹಿಜ್ಬುಲ್ ಸಂಘಟನೆಯ ಅತಿ ಮುಖ್ಯ ಕಮಾಂಡೋವಾದ ಸಮೀರ್ ಟೈಗರ್ ನ ಇರುವಿಕೆ ಬಗ್ಗೆ ಖಚಿತ ಮಾಹಿತಿ ಇತ್ತು ಎಂದು ತಿಳಿದು ಬಂದಿದೆ!

ಭದ್ರತಾ ಸಿಬ್ಬಂದಿಗಳು ಮತ್ತು ಭಾರತೀಯ ಸೇನೆಯ ಯೋಧರು ಈ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಸುತ್ತಲೂ ಅವಿತು ಕುಳಿತಿದ್ದ
ಉಗ್ರಗಾಮಿಗಳು ಬೆಂಕಿ ಚೆಂಡನ್ನು ಎಸೆದಿದ್ದಲ್ಲದೇ, ಇತ್ತ ನಾಗರಿಕರು ಕಲ್ಲು ತೂರಾಟ ನಡೆಸುತ್ತಿದ್ದರು ಎಂದು ಸಿಬ್ಬಂದಿಗಳು ಹೇಳಿದ್ದಾರೆ!

“ಎಲ್ಲಿ ಬೆಂಕಿಯುಂಡೆಗಳು ನಮ್ಮವರಿಗೆ ಹಾನಿ ಮಾಡತೊಡಗಿದವೋ, ಆಗ ಅನುವಾರ್ಯವಾಗಿ ಎನ್ಕೌಂಟರ್ ನಡೆಸಲಾಯಿತು! ಎರಡೂ ತಂಡಗಳ ಮಧ್ಯೆ ಗುಂಡಿನ ಚಕಮಕಿಯೂ ನಡೆದಿದೆ ಎಂದು ಹೇಳಿರುವ ಪೋಲೀಸರು, ಕಲ್ಲು ತೂರಾಟಗಾರರ ವರ್ತನೆಗೆ ತಕ್ಕ ಉತ್ತರ ಕೊಡದೇ ಇದ್ದರೆ ಸಮಸ್ಯೆ ಯಾಗುವುದು ಖಂಡಿತ ಎಂದು ಹೇಳಿದ್ದಾರೆ!

“While the security personnel were conducting searches in the area, they came under fire from the militants hiding in the area. The fire was returned y the troops, triggering an encounter. The exchange of gunfire was going on when reports last poured in. Two security men including an army Major and soldier have been injured in the gunfight. The injured have been evacuated to hospital.” – The police

ಗನ್ ಫೈರ್ ನಡೆಯುವಾಗ, ಸೈನ್ಯದ ಮೇಜರ್ ಮತ್ತು ಸೈನಿಕರು ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೋಲಿಸರು ಹೇಳಿದ್ದಾರೆ!! ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ಪೋಲಿಸರು ಸ್ಪಷ್ಟೀಕರಿಸಿದ್ದಾರೆ!

ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸಮೀರ್ ಟೈಗರ್ ಅಲಿಯಾಸ್ ಮನನ್ ವಾನಿ ಈ ವರ್ಷದ ಆರಂಭದಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿಕೊಂಡಿದ್ದ ಪಿಎಚ್ಡಿ ವಿದ್ವಾಂಸ! ಆದರೆ, ಸೇರಿ ವರ್ಷವಾಗುವುದರೊಳಗೇ ಭಾರತೀಯ ಸೇನೆಯ ಗುಂಡೇಟಿಗೆ ಬಲಿಯಾಗಿದ್ದಾನೆ!

ಅದಾಗ್ಯೂ ಕೂಡ, ಪ್ರದೇಶದ ಸ್ಥಳೀಯರು ಯುವಕರನ್ನು ಕಾರ್ಯಾಚರಣೆ ನಡೆಯುತ್ತಿದ್ದ ಪ್ರದೇಶಕ್ಕೆ ಕರೆ ತಂದಿದ್ದಲ್ಲದೇ, ಪೋಲೀಸ್ ಮತ್ತು ಸಿಆರ್ ಪಿಪ್ ಯೋಧರಿಗೆ ತಡೆಯೊಡ್ಡಿದ್ದಾರೆ! ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳೀಯರು, ಅಷ್ಟಲ್ಲದೇ ಬೆಂಕಿಯುಂಡೆಗಳನ್ನೂ ಎಸೆದಿದ್ದಾರೆ ಎಂದು ತಿಳಿಸಲಾಗಿದೆ‌.

“Meanwhile, locals of the area, especially youth have taken to roads and attempted to march towards the encounter site. They clashed with the police and paramilitary personnel, who intercepted them. The youth pelted stones on the cops, who retaliated by firing tear smoke shells.” – The police force

ಅದಲ್ಲದೇ, ಸುಮಾರು ಹೊತ್ತಿನ ನಂತರ ಹಿಜ್ಬುಲ್ ಕಮಾಂಡರ್ ಆದ ಸಮೀರ್ ಟೈಗರ್ ಮತ್ತು ಪೋಸ್ಟರ್ ಬಾಯ್ ಅಖಿಬ್ ಖಾನ್ ಅನ್ನು ಯಮನ ಪಾದಕ್ಕಟ್ಟಿದ್ದಾರೆ ಸೈನಿಕರು!

Source : New Indian Express


ಪೃಥು ಅಗ್ನಿಹೋತ್ರಿ

Tags

Related Articles

Close