ಪ್ರಚಲಿತ

2000 ಜನೌಷಧ ಕೇಂದ್ರಗಳನ್ನು ತೆರೆಯಲು ಪ್ರಧಾನಿ ಮೋದಿ ಸರ್ಕಾರ ಸಿದ್ಧತೆ

ದೇಶದ ಬಡ ಜನರ ಆರೋಗ್ಯ ಅವಶ್ಯಕತೆಗಳಿಗೆ ಅಗತ್ಯವಾದ ಔಷಧಗಳನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿ, ವೈದ್ಯಕೀಯ ಸೌಲಭ್ಯಗಳನ್ನು ಜನರ ಕೈಗೆಟುಕುವಂತೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ್ದು.

ಔಷಧಗಳಿಗೆ ದುಬಾರಿ ಬೆಲೆ ತೆತ್ತು ಬಡ ಜನರು ಆರೋಗ್ಯ ಉಳಿಸಿಕೊಳ್ಳಲು ಪರದಾಡುವುದನ್ನು ಮನಗಂಡ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ‘ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ ಗಳನ್ನು ತೆರೆಯುವ ಮೂಲಕ, ದುಬಾರಿ ಔಷಧಗಳನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿ, ಆ ಮೂಲಕ ಆರೋಗ್ಯ ಭಾಗ್ಯ ಕರುಣಿಸುವಲ್ಲಿ ಮಹತ್ವದ ಕಾರ್ಯ ಮಾಡಿದ್ದು ಎಲ್ಲರಿಗೂ ನೆನಪಿದೆ.

ಇದೀಗ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಮತ್ತಷ್ಟು ಜನೌಷಧ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಸುಮಾರು ೨೦೦೦ ಪ್ರಾಥಮಿಕ ಕೃಷಿ ಸಾಲ ಸಂಘಗಳಿಗೆ ಅವಕಾಶವನ್ನು ಒದಗಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಇರುವ ಪ್ರಾಥಮಿಕ ಕೃಷಿ ಸಾಲ ಸಂಘ ಗಳಲ್ಲಿ ೨೦೦೦ ಸಂಘಗಳನ್ನು ಗುರುತಿಸಲಾಗುತ್ತಿದ್ದು, ಆಗಸ್ಟ್ ೨೦೨೩ ರೊಳಗಾಗಿ ೧೦೦೦ ಜನೌಷಧ ಕೇಂದ್ರಗಳನ್ನು ತೆರೆಯಲಾಗುತ್ತದೆ. ಹಾಗೆಯೇ ಮಿಕ್ಕ ೧೦೦೦ ಜನೌಷಧ ಕೇಂದ್ರಗಳನ್ನು ಇದೇ ವರ್ಷದ ಡಿಸೆಂಬರ್ ತಿಂಗಳೊಳಗಾಗಿ ಆರಂಭ ಮಾಡುವುದಾಗಿಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಜನ ಸಾಮಾನ್ಯರ ಕೈಗೆಟುಕದ ದುಬಾರಿ ಬೆಲೆಯ ಔಷಧಗಳನ್ನು ಕಡಿಮೆ ಬೆಲೆಗೆ ವಿತರಣೆ ಮಾಡಿ, ಬಡ ಸಾಮಾನ್ಯ ವರ್ಗದ ಜನರಿಗೂ ಆರೋಗ್ಯ ಅನುಕೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಜನೌಷಧ ಕೇಂದ್ರಗಳು ಮಹತ್ವ ಪಡೆದಿವೆ.

Tags

Related Articles

Close