ರಾಜ್ಯ

ದುಬೈನಲ್ಲಿ ಮೋದಿ ಮಾನ ಕಳೆಯಲು ಹೋಗಿ ತಾನೇ ಮಾನ ಕಳೆದುಕೊಂಡ ರಾಹುಲ್.! ಕೆಲ ಕಾಲ ನೇರಪ್ರಸಾರವೇ ಬಂದ್..!

ರಫೆಲ್‌ ರಫೆಲ್‌ ರಫೆಲ್‌… ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಯಾವ ಮಾರ್ಗದಲ್ಲೂ ಕಟ್ಟಿ ಹಾಕಲಾಗದ ರಾಹುಲ್ ಗಾಂಧಿ ರಫೆಲ್‌ ಮಂತ್ರವನ್ನು ಪಠಿಸುತ್ತಿರುವುದು ದೇಶಕ್ಕೆ ಮಾತ್ರವಲ್ಲದೆ ಜಗತ್ತಿಗೆ ಗೊತ್ತಿರುವ ವಿಚಾರವಾಗಿದೆ. ಆದರೆ ಇದೀಗ ಪ್ರಧಾನಮಂತ್ರಿ ಮೋದಿಯವರನ್ನು ನಿಂದಿಸಲು ದುಬೈಗೆ ತೆರಳಿ ಮಾನ ಕಳೆದುಕೊಂಡಿದ್ದು ಮತ್ತೆ ರಾಹುಲ್ ಗಾಂಧಿ ಸುದ್ಧಿಯಾಗಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ದುಬೈನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ರಾಗಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮನಬಂದಂತೆ ನಿಂದಿಸಿದ್ದರು. ಕೇವಲ ಪ್ರಧಾನಿಯವರನ್ನು ಮಾತ್ರವೇ ನಿಂದಿಸಿದ್ದಲ್ಲದೆ ಭಾರತವನ್ನೂ ನಿಂದಿಸಿದ್ದು, ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳುವ ಮೂಲಕ ಹೊರದೇಶದಲ್ಲಿ ಭಾರತದ ಮಾನವನ್ನು ಹರಾಜು ಹಾಕಿದ್ದರು. ಇದಿಷ್ಟೇ ಮ್ಯಾಟರ್ ಎಂದು ತಿಳಿದುಕೊಂಡಿದ್ದ ಭಾರತೀಯರಿಗೆ ಇದೀಗ ಮತ್ತೊಂದು ಹೊಸ ಸುದ್ಧಿ ಬಂದಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ದುಬೈ ಭಾಷಣದ ನೇರ ಪ್ರಸಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತಂತೆ. ಕಾರಣ ತಿಳಿದರೆ ನಿಮಗೇ ಶಾಕ್ ಆಗಬಹುದು. ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಬಳಿ ಓರ್ವ 14 ವರ್ಷದ ಬಾಲಕಿ ರಾಗಾ ಬಳಿ ಪ್ರಶ್ನೆಯನ್ನು ಕೇಳಿದ್ದಳಂತೆ. “ಭಾರತದಲ್ಲಿ ಸ್ವಾತಂತ್ರ್ಯ ನಂತರ ೮೦% ರಷ್ಟು ಆಡಳಿತವನ್ನು ನಿಮ್ಮ ಪಕ್ಷವೇ ನಡೆಸಿದೆ. ಇಲ್ಲಿಯವರೆಗೆ ಯಾವ ಬದಲಾವಣೆಗಳನ್ನು ನಿಮ್ಮ ಪಕ್ಷ ತಂದಿದೆ” ಎಂದು ಪ್ರಶ್ನಿಸುತ್ತಾಳೆ. ಇನ್ನೂ ಮುಂದಕ್ಕೆ ಹೋದ ಆ ಬಾಲಕಿ “ನೀವು ಜಾತ್ಯಾತೀತ ಪಕ್ಷ ಎಂದು ಹೇಳುತ್ತೀರಿ, ಆದರೆ ಗುಜರಾತ್ ಚುನಾವಣಾ ಸಂದರ್ಭದಲ್ಲಿ ೮ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ಯಾಕೆ?” ಎಂದು ಪ್ರಶ್ನಿಸುತ್ತಾಳೆ.

ಬಾಲಕಿಯ ಪ್ರಶ್ನೆಗೆ ತಬ್ಬಿಬ್ಬಾದ ಕಾಂಗ್ರೆಸ್ ಮಹಾರಾಜ ಕೆಲಕಾಲ ಮಾತನಾಡಲೇ ಆಗಿಲ್ಲವಂತೆ. ಇದನ್ನು ಮನಗಂಡು ಕಾರ್ಯಕ್ರಮದ ಆಯೋಜಕರು ನಡೆಸುತ್ತಿದ್ದ ನೇರಪ್ರಸಾರವನ್ನೇ ಸ್ಥಗಿತಗೊಳಿಸಿದ್ದರಂತೆ. ಕೆಲ ಹೊತ್ತು ಬಾಲಕಿಯ ಪ್ರಶ್ನೆಗೆ ಉತ್ತರ ನೀಡಲು ರಾಹುಲ್ ಗಾಂಧಿಗೆ ಆಗಿಯೇ ಇಲ್ಲ. ಈ ಘಟನೆ ನಂತರ ಬೆಳಕಿಗೆ ಬಂದಿದ್ದು ರಾಷ್ಟ್ರೀಯ ಸುದ್ಧಿ ವಾಹಿನಿ ಹಾಗೂ ಪತ್ರಿಕೆಗಳು ಬಿತ್ತರಿಸಿವೆ. ಕೆಲ ಉದ್ಯೋಗಿಗಳನ್ನು ಒತ್ತಾಯ ಪೂರ್ವಕವಾಗಿ ಕೆಲಸ ಮಾಡುತ್ತಿದ್ದ ಕಂಪನಿಗಳಿಂದಲೇ ಕರೆದೊಯ್ಯಲಾಗಿತ್ತು ಎಂಬ ಆರೋಪವೂ ಇತ್ತು. ಇದೀಗ ಓರ್ವ ಬಾಲಕಿಯ ಪ್ರಶ್ನೆಗೆ ಇಂಗು ತಿಂದ ಮಂಗನಂತಾದ ರಾಹುಲ್ ಗಾಂಧಿ ಇದೀಗ ಮತ್ತೆ ತಲೆ ತಗ್ಗಿಸುವಂತಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close