ಪ್ರಚಲಿತ

ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಬುದ್ದಿಜೀವಿಗಳಿಗೆ ಕಾಂಗ್ರೆಸ್ ಮೂಲವನ್ನು ಪ್ರಶ್ನಿಸಿದ ಕೇಂದ್ರ ಸಚಿವ!! ನೆಹರೂ ಕೊಂಚ ಸ್ವಾತಂತ್ರ್ಯ ನೀಡಿದ್ದರೆ…..

ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್, ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗಿರುವ ವಿಚಾರ ಗೊತ್ತೇ ಇದೆ!! ಅಷ್ಟು ಮಾತ್ರವಲ್ಲದೇ, ಈ ಹೇಳಿಕೆಗೆ ಉಗ್ರ ಸಂಘಟನೆಯಾದ ಲಷ್ಕರ್-ಇ-ತೊಯ್ಬಾ ಬೆಂಬಲ ವ್ಯಕ್ತಪಡಿಸುವ ಮೂಲಕ ದೇಶದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿತ್ತು!! ಆದರೆ ಇದೀಗ, ಕಾಶ್ಮೀರದ ವಿಚಾರವಾಗಿ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಬುದ್ದಿಜೀವಿಗಳಿಗೆ ಕಾಂಗ್ರೆಸ್ ಮೂಲವನ್ನು ಪ್ರಶ್ನಿಸುವ ಮೂಲಕ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ದಿಟ್ಟ ತಿರುಗೇಟು ನೀಡಿದ್ದಾರೆ!!

ಹೌದು…. ಜಮ್ಮು ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿ ನಿರ್ಮಾಣಕ್ಕೆ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರೇ ಕಾರಣ. ಅಂದು ಅವರು ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸ್ವಾತಂತ್ರ್ಯ ನೀಡಿದ್ದರೇ ಪ್ರಸ್ತುತ ಜಮ್ಮು ಕಾಶ್ಮೀರದ ಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಕಾಂಗ್ರೆಸ್ ಮೂಲವನ್ನು ಪ್ರಶ್ನಿಸುವ ಮೂಲಕ ಜಮ್ಮು ಕಾಶ್ಮೀರದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಪಾಕಿಸ್ತಾನ ದಿನಾಚರಣೆಯ ಸಂಧರ್ಭದಲ್ಲಿ, ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಅವರು ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್‍ಗಿಟ್ ಬಾಲ್ಟಿಸ್ತಾನವನ್ನು ಭಾರತ ಸ್ವತಂತ್ರಗೊಳಿಸಿ ಅದನ್ನು ಜಮ್ಮು ಕಾಶ್ಮೀರದ ಜತೆಗೆ ಏಕೀಕರಿಸಿಯೇ ತೀರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಇಸ್ಲಾಮಾಬಾದಿಗೆ ನೀಡಿದ್ದರು!! ಅಷ್ಟೇ ಅಲ್ಲದೇ,  ಗಿಲ್‍ಗಿಟ್ – ಬಾಲ್ಟಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಅದರ ಮೂಲ ಅಖಂಡ ರೂಪದಲ್ಲಿ ಪುನಃ ಸ್ಥಾಪಿಸುವುದೇ ಭಾರತದ ಗುರಿಯಾಗಿದೆ ಎಂದು ಜೀತೇಂದ್ರ ಸಿಂಗ್ ಹೇಳಿದ್ದರು!!

 jitendra-singh

ಆದರೆ ಇದೀಗ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಅಟ್ಟಹಾಸವು ಮೀತಿ ಮೀರುತ್ತಿದ್ದು, ಪ್ರಸ್ತುತ ಈ ಪರಿಸ್ಥಿತಿ ನಿರ್ಮಾಣಕ್ಕೆ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರೇ ಕಾರಣ ಎಂದು ನೇರವಾಗಿ ಟೀಕಿಸಿದ್ದಾರೆ!! ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ಮತ್ತು ಕಾಶ್ಮೀರದ ಕುರಿತು ಕಾಂಗ್ರೆಸ್ ನಾಯಕರ ದೇಶವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಜೀತೇಂದ್ರ ಸಿಂಗ್, ನೆಹರು ಅವರು ದೇಶದ ಇತರ ರಾಜ್ಯಗಳ ಕುರಿತು ಸರ್ದಾರ್ ಪಟೇಲ್ ರಿಗೆ ನೀಡಿದ್ದ ಸ್ವಾತಂತ್ರ್ಯ ಜಮ್ಮು ಕಾಶ್ಮೀರದ ವಿಷಯದಲ್ಲಿ ನೀಡಿದ್ದರೇ, ದೇಶದ ಇತಿಹಾಸವೇ ಬೇರೆಯಾಗುತ್ತಿತ್ತು ಎಂದು ಹೇಳಿದ್ದಾರೆ!!

ಅಷ್ಟೇ ಅಲ್ಲದೇ ದೇಶವನ್ನು ಬಹುದಿನಗಳಿಂದ ಆಳಿದ ಕಾಂಗ್ರೆಸ್ ನ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್, ಕಾಶ್ಮೀರದ ಸಮಸ್ಯೆ ಬಗ್ಗೆ ಸರಿಯಾಗಿ ಸ್ಪಂದಿಸಲೇ ಇಲ್ಲ. ಆದ್ದರಿಂದಲೇ ಇಷ್ಟು ವರ್ಷವಾದರೂ ಕಣಿವೆಯಲ್ಲಿ ಅದೇ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ, ಜಮ್ಮು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿ ಮುರಿದು ಬೀಳುವ ಮೂಲಕ ಅಲ್ಲಿ ಉಂಟಾಗಿರುವ ರಾಜಕೀಯ ಅತಂತ್ರ ಸ್ಥಿತಿಯ ದುರ್ಲಾಭಕ್ಕೆ ಪಾಕಿಸ್ತಾನ ಯತ್ನಿಸುವ ಸಾಧ್ಯತೆ ಇರುವುದಂತೂ ಅಕ್ಷರಶಃ ನಿಜ.

2014ರ ಜಮ್ಮು-ಕಾಶ್ಮೀರ ವಿಧಾನ ಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಇದ್ದ ಸಂದರ್ಭದಲ್ಲಿ, ಆ ರಾಜ್ಯದಲ್ಲಿ ತನ್ನ ಬೇಳೆಬೇಯಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿತ್ತಾದರೂ ಬಿಜೆಪಿ- ಪಿಡಿಪಿ ಮೈತ್ರಿಯಲ್ಲಿ ಸರ್ಕಾರ ರಚನೆಯಾದಾಗ ಪಾಕ್ ಯತ್ನಕ್ಕೆ ಹಿನ್ನೆಡೆಯಾಗಿತ್ತು. ಆದರೆ ಮೈತ್ರಿ ಸರಕಾರ ಮುರಿದು ಬಿದ್ದು, ರಾಜ್ಯಪಾಲರ ಆಡಳಿತ ಜಾರಿಗೆ ಬರುತ್ತಿರುವ ಆ ರಾಜ್ಯದಲ್ಲಿಯ ರಕ್ಷಣಾ ವ್ಯವಸ್ಥೆ ಈಗ ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತಿದ್ದು, ಆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡುವಂತ ಪಾಕಿಸ್ತಾನದ ಯತ್ನಗಳು ಸಫಲ ಕಾಣುವುದು ಕಷ್ಟವಾಗಿದೆ!!

Jitendar Singh

ಇನ್ನು ಈ ಬಗ್ಗೆ ಮಾತಾನಾಡಿರುವ ಜೀತೇಂದ್ರ ಸಿಂಗ್, ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರದ ಪ್ರದೇಶವನ್ನು ಅಕ್ರಮವಾಗಿ ವಶ ಪಡಿಸಿಕೊಳ್ಳಲು ಪಾಕಿಸ್ತಾನ ಹವಣಿಸುತ್ತಿದೆ. ಈ ಸಮಸ್ಯೆ ಜೀವಂತವಾಗಿರಲು ಅಂದು ನೆಹರು ಅವರು, ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹಸ್ತಕ್ಷೇಪ ಮಾಡಲು ಬಿಟ್ಟಿರಲಿಲ್ಲ!! ಇದೀಗ ಆ ಸಮಸ್ಯೆ ದೈತ್ಯಾಕಾರವಾಗಿ ಬೆಳೆದು ನಿಂತಿದೆ. ನೆಹರು ಜಮ್ಮು ಕಾಶ್ಮೀರದ ಮುಖಂಡ ಶೇಖ್ ಅಬ್ದುಲ್ಲಾ ಜೊತೆ ವಿಶೇಷ ಸಂಬಂಧ ಹೊಂದಿದ್ದರು. ಅದಕ್ಕಾಗಿಯೇ ಅವರು ಜಮ್ಮು ಕಾಶ್ಮೀರದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು, ಆದರೆ ಅದು ದೇಶವಿರೋಧಿಯಾಗಿ ಪರಿಣಮಿಸಿತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ನೆಹರೂರವರು ಅಧಿಕಾರದ ಗದ್ದುಗೆಯನ್ನು ಹಿಡಿದಂದಿನಿಂದಲೂ ಮಾಡಿರುವ ಅನ್ಯಾಯಗಳು ಇಂದು ಭಾರತೀಯರಾದ ನಮ್ಮನ್ನು ಕಾಡುತ್ತಿದೆಯಲ್ಲದೇ, ಕಾಶ್ಮೀರದ ಸಮಸ್ಯೆಯನ್ನು ಇಂದಿಗೂ ಸರಿಪಡಿಸಲು ನಮ್ಮಿಂದ ಆಗುತ್ತಲೇ ಇಲ್ಲ!! ಅಂದು ಜವಾಹರ್ ಲಾಲ್ ನೆಹರೂರವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಕೊಂಚ ಪ್ರಮಾಣದ ಸ್ವಾತಂತ್ರ್ಯವನ್ನು ನೀಡಿದ್ದರೇ ಇಂದು ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಅಕ್ಷರಶಃ ನಿಜ.

ಮೂಲ:
http://www.dnaindia.com/india/report-indian-history-would-have-been-different-if-sardar-patel-handled-j-k-jitendra-singh-2629843 

http://www.india.com/news/india/union-minister-jitendra-singh-slams-congress-says-didnt-let-sardar-vallabhbhai-patel-handle-jammu-and-kashmir-like-other-princely-states-3133472/

– ಅಲೋಖಾ

Tags

Related Articles

Close