ಪ್ರಚಲಿತ

ಯೋಗಿಯೇ ನಂ.1 ಸಿಎಂ! ಯೋಗಿ ಅಸಮರ್ಥ ಎಂದ‌ ಎಲ್ಲಾ ವಿರೋಧಿಗಳಿಗೂ ಕಪಾಳಮೋಕ್ಷ ಮಾಡಿದ ಇಂಡಿಯಾ ಟುಡೇ ಸಮೀಕ್ಷೆ!

ರ್ವ ಸನ್ಯಾಸಿ ಕೂಡ ಒಂದು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಾಬೀತು ಪಡಿಸಿದ್ದರು.‌ ಸಾಮಾನ್ಯನನ್ನೂ‌ ಅಸಾಮಾನ್ಯನಾಗಿ ಸೃಷ್ಟಿ ಮಾಡುವ ಬಿಜೆಪಿ ಉತ್ತರ ಪ್ರದೇಶದಲ್ಲಿ ಭಾರೀ ಬದಲಾವಣೆ ಮಾಡಿತ್ತು. ಆದರೆ ವಿರೋಧಿಗಳು ಯಾವ ರೀತಿ ಅರಚಾಡಿದ್ದರು ಎಂದರೆ ಮೋದಿ ಭಾರತವನ್ನು ಒಂದು ಧರ್ಮದ ಕಡೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ, ಯೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಲ್ಲ ಎಂದು ಹೇಳುತ್ತಾ, ದೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದರು. ಆದರೆ ಇದೀಗ ಇಂಡಿಯಾ ಟುಡೇ ಮಾಧ್ಯಮ ನಡೆಸಿದ ಸಮೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ದೇಶದಲ್ಲೇ ಯೋಗಿ ಆದಿತ್ಯನಾಥ್ ಬೆಸ್ಟ್ ಸಿಎಂ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ನಂ‌ ೧ ಸ್ಥಾನವನ್ನೂ ಯೋಗಿಗೆ ನೀಡಿದ ಇಂಡಿಯಾ ಟುಡೇ, ಯೋಗಿ ವಿರೋಧಿಗಳಿಗೆ ಕಪಾಳಮೋಕ್ಷ ಮಾಡಿದೆ.!

ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಯೋಗಿ ನಂ ೧ ಸಿಎಂ!

ದೇಶದಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿಗಳು ಅತೀ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಎಂದು ಸಮೀಕ್ಷೆ ಮಾಡಿದ ಇಂಡಿಯಾ ಟುಡೇ, ನಾಲ್ಕು ಮುಖ್ಯಮಂತ್ರಿಗಳ ಹೆಸರಿನಲ್ಲಿ ಸಮೀಕ್ಷೆ ನಡೆಸಿತ್ತು.‌ ಫಲಿತಾಂಶ ಕಂಡು ಎಲ್ಲರೂ ಆಶ್ಚರ್ಯಗೊಂಡಿದ್ದಾರೆ ಯಾಕೆಂದರೆ ಯೋಗಿ ಮುಖ್ಯಮಂತ್ರಿ ಆದ ನಂತರದಲ್ಲಿ ಉತ್ತರ ಪ್ರದೇಶ ಯಾವ ರೀತಿ ಬದಲಾವಣೆಯಾಗುತ್ತಿದೆ ಎಂದರೆ ಗೂಂಡಾಗಿರಿ, ಗಲಾಟೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ರೌಡಿ ಶೀಟರ್‌ಗಳು ತಾವಾಗಿ ಪೊಲೀಸರಿಗೆ ಶರಣಾಗುತ್ತಿದ್ದಾರೆ. ಇಂತಹ ಬದಲಾವಣೆ ಹಿಂದೆ ಯಾವ ಮುಖ್ಯಮಂತ್ರಿ ಕೂಡ ಮಾಡಿರಲಿಲ್ಲ. ಯೋಗಿಯ ಈ ಆಡಳಿತ ದೇಶದಲ್ಲೇ ಒಂದು ಹೊಸ ಸಂಚಲನ ಸೃಷ್ಟಿಸಿತ್ತು. ಇತ್ತ ಈ ವಿಚಾರ ವಿರೋಧಿಗಳಿಗೆ ಸಹಿಸಲಾಗದೇ ಇದ್ದರೂ, ಇಂತಹ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುವಂತಿರಲಿಲ್ಲ. ಆದರೆ ಯೋಗಿ ಸುಳ್ಳು ಹೇಳುತ್ತಿದ್ದಾರೆ, ಅಂತಹ ಹೇಳಿಕೊಂಡು ತಿರುಗಾಡುವ ಬದಲಾವಣೆ ಏನೂ ಆಗಲೇ ಇಲ್ಲ ಎಂದು ಬಿಂಬಿಸಿದ ವಿಪಕ್ಷಗಳು ಯೋಗಿಯವರ ವರ್ಚಸ್ಸು ಕಡಿಮೆ ಮಾಡಲು ಪ್ರಯತ್ನಿಸಿದರು. ಆದರೆ ಯೋಗಿ ಮಾತ್ರ ತಮ್ಮ ಖಡಕ್ ನಿರ್ಧಾರಗಳಿಂದಲೇ ಜನರ ದಿನನಿತ್ಯದ ಮಾತಾಗಿ ಬಿಟ್ಟರು. ಇದರಿಂದಾಗಿಯೇ ಯೋಗಿ ಸಮೀಕ್ಷೆಯಲ್ಲೂ ನಂ ೧ ಪಟ್ಟ ಅಲಂಕರಿಸಿದ್ದಾರೆ. ಶೇಕಡಾ ೪೦ರಷ್ಟು ಜನ ವೋಟ್ ಮಾಡಿದ್ದು, ಯೋಗಿ ಉತ್ತಮ ಆಡಳಿತಗಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಯೋಗಿಗೆ ನಂ ೧ ಸ್ಥಾನ ಬಂದಿದೆ ಎಂದು ವರದಿ ಮಾಡಲಾಗಿದೆ.!

ಇನ್ನು ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಕೂಡ ಇಂಡಿಯಾ ಟುಡೇ ಸಮೀಕ್ಷೆ ಮಾಡಿದ್ದು, ಮೋದಿ ವರ್ಚಸ್ಸು ಕಡಿಮೆ‌ ಆಗಿಲ್ಲ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿ ಕೂಟದ ಪಕ್ಷಗಳು ಒಂದಾಗಿಯೇ ಇದ್ದರೆ ಬಿಜೆಪಿಗೆ ಗೆಲುವು ಕಷ್ಟದ ಕೆಲಸವಲ್ಲ. ಆದರೆ ಮಹಾಘಟಬಂಧನ ಕೂಡ ಬಲಿಷ್ಟಗೊಂಡಿದೆ, ಆದ್ದರಿಂದ ಯಾವುದನ್ನೂ ಕೂಡ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಅನೇಕ ಚುನಾವಣ ಪೂರ್ವ ಸಮೀಕ್ಷೆಯು ನಡೆದಿದ್ದು, ಯಾವುದೂ ಕೂಡ ಸ್ಪಷ್ಟ ಫಲಿತಾಂಶ ನೀಡಿಲ್ಲ. ಆದ್ದರಿಂದ ಬಿಜೆಪಿ ಯಾವ ಎಷ್ಟು ಸ್ಥಾನ‌ ಗೆಲ್ಲಲಿದೆ ಎಂಬುದರ ಮೇಲೆ ಸರಕಾರದ ಭವಿಷ್ಯ ನಿರ್ಧಾರವಾಗುತ್ತದೆ. ಆದರೆ ಯೋಗಿ ವಿರೋಧಿಗಳು ಇಂಡಿಯಾ ಟುಡೇ ಸಮೀಕ್ಷೆಯ ಫಲಿತಾಂಶ ಕಂಡು ನಿಬ್ಬೆರಗಾಗದೇ ಇರಲು ಸಾಧ್ಯವಿಲ್ಲ.!

-ಅರ್ಜುನ್

Tags

Related Articles

FOR DAILY ALERTS
Close