ಪ್ರಚಲಿತ

ಲವ್ ಜಿಹಾದ್‌ನಲ್ಲಿ ಹಿಂದೂ ಹೆಣ್ಣು ಮಗಳನ್ನು ಕೊಂದವನನ್ನು ಎನ್‌ಕೌಂಟರ್ ಮಾಡಿದ ಯುಪಿ ಪೊಲೀಸರು!

ಮತಾಂತರಕ್ಕೆ ಸಮ್ಮತಿ ವ್ಯಕ್ತಪಡಿಸದ ತನ್ನ 17 ವರ್ಷ‌ದ ಹಿಂದೂ ಗೆಳತಿಯ ಜೊತೆ ಜಗಳವಾಡಿ, ಆಕೆಯನ್ನು ಕಟ್ಟಡದಿಂದ ನೂಕಿ, ಹತ್ಯೆ ಮಾಡಿದ್ದ ಮೊಹಮ್ಮದ್ ಸೂಫಿಯಾನ್ ಎಂಬ ಹಂತಕನನ್ನು ಉತ್ತರ ಪ್ರದೇಶದ ಪೊಲೀಸರು ಎನ್‌ಕೌಂಟರ್ ನಡೆಸುವ ಮೂಲಕ ಬಲೆಗೆ ಬೀಳಿಸಿಕೊಂಡಿದ್ದಾರೆ.

ಲಕ್ನೋ‌ದ ಮೊಹಮ್ಮದ್ ಸೂಫಿಯಾನ್ ಎಂಬಾತ ಹಿಂದೂ ಯುವತಿ ನಿಧಿ ಗುಪ್ತಾ ಎಂಬಾಕೆಯ ಜೊತೆ ಪ್ರೇಮ ಸಂಬಂಧ ಬೆಳೆಸಿದ್ದು, ಒಂದು ವರ್ಷದ ಹಿಂದೆ ಆಕೆಗೆ ಮೊಬೈಲ್ ಫೋನ್ ಅನ್ನು ಸಹ ಉಡುಗೊರೆ ನೀಡಿದ್ದ. ಆ ಬಳಿಕ ಆಕೆಯನ್ನು ಮದುವೆಯಾಗಲು ತನ್ನ ಧರ್ಮ‌ಕ್ಕೆ ಮತಾಂತರವಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಮಂಗಳವಾರ ಪಾತಕಿ ಸೂಫಿಯಾನ್ ಮನೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ನಿಧಿ ಅಲ್ಲಿರುವುದು ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಅವರಿಬ್ಬರ ಸಂಬಂಧದ ಬಗ್ಗೆಯೂ ಅವರು ತಿಳಿದುಕೊಂಡಿದ್ದಾರೆ. ಅದಾದ ಬಳಿಕ ಸೂಫಿಯಾನ್ ಮತ್ತು ನಿಧಿ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಆಕೆ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಗೆ ಓಡಿ ಹೋಗಿದ್ದಾಳೆ. ಸೂಫಿಯಾನ್ ಸಹ ಆಕೆಯನ್ನು ಹಿಂಬಾಲಿಸಿದ್ದ. ಕೆಲ ಸಮಯದಲ್ಲಿ‌ಯೇ ಕುಟುಂಬದವರಿಗೆ ಆಕೆಯ ಚೀರಾಟ ಕೇಳಿ ಬಂದಿದ್ದು, ಆಕೆ ಕೆಳಕ್ಕೆ ಬಿದ್ದ ಸದ್ದು ಸಹ ಕೇಳಿದೆ. ತಕ್ಷಣ‌ವೇ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಕೊನೆಯುಸಿರೆಳೆದಿದ್ದಾರೆ. ಆಕೆ ಮೃತಪಟ್ಟ ವಿಷಯ ತಿಳಿದ ಸೂಫಿಯಾನ್ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಘಟನೆಯ ತನಿಖೆಗೆ ಉತ್ತರ ಪ್ರದೇಶದ ಪೊಲೀಸರು 9 ತಂಡಗಳನ್ನು ರಚನೆ ಮಾಡಿದ್ದರು. ಹಂತಕನ ಸುಳಿವು ನೀಡಿದವರಿಗೆ 25 ಸಾವಿರ ರೂ. ನಗದು ಬಹುಮಾನ‌ವನ್ನು ಸಹ ಘೋಷಣೆ ಮಾಡಿದ್ದರು. ಆಕೆಯ ಸಾವಿನ ನಂತರ ನಾಪತ್ತೆಯಾಗಿದ್ದ ಸೂಫಿಯಾನ್ ಪತ್ತೆಯಾದ ತಕ್ಷಣ, ಆತನ ಮೇಲೆ ಎನ್‌ಕೌಂಟರ್ ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಸೂಫಿಯಾನ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಯ ವಿರುದ್ಧ ಕೊಲೆ ಆರೋಪದ ಜೊತೆಗೆ ‘ಕಾನೂನು ಬಾಹಿರ ಧಾರ್ಮಿಕ ಮತಾಂತರ’ ಪ್ರಕರಣವನ್ನು ಸಹ ಪೊಲೀಸರು ದಾಖಲಿಸಿದ್ದಾರೆ.

Tags

Related Articles

Close