ಪ್ರಚಲಿತ

ಅತಿದೊಡ್ಡ ಸೇಡು ತೀರಿಸಿಕೊಂಡ ಬಿಜೆಪಿ! ಸಖತ್ ವರ್ಕೌಟ್ ಆಯ್ತು ಚಾಣಕ್ಯನ ಪ್ಲಾನ್! ಆನೆಯನ್ನು ಕಿತ್ತು ಬಿಸಾಕಿದ ಹಿಂದೂ ಸಿಂಹ!

ಸೋಲು ಗೆಲುವು ಯಾವುದೂ ಶಾಶ್ವತ ಅಲ್ಲ ಎಂಬುವುದು ಮತ್ತೆ ಸಾಭೀತಾಗಿದೆ. ಮೊನ್ನೆ ಮೊನ್ನೆ ತಾನೇ ಮೋಸದ ರಾಜಕೀಯ ಆಟವಾಡಿ ಗೆಲುವಿನ ಸಂತಸದಲ್ಲಿದ್ದ ಉತ್ತರ ಪ್ರದೇಶದ ಆನೆಗೆ (ಬಹುಜನ ಸಮಾವಾದಿ ಪಕ್ಷ) ಈಗ ಮತ್ತೆ ಆಘಾತವಾಗಿದೆ. ಹಿಂದೂ ಬೆಂಕಿ ಚೆಂಡಿನ ಎದುರು ತಮ್ಮ ಆಟ ಮತ್ತೆ ಮಂಕಾಗಿದೆ. ಭಾರತೀಯ ಜನತಾ ಪಕ್ಷ ಭರ್ಜರಿ ಜಯವನ್ನೇ ಗಳಿಸಿದೆ. ಈ ಮೂಲಕ ಅದ್ಯಾವುದೋ ಸಣ್ಣ ಗೆಲುವಿನ ಸಂತಸದ ಅಲೆಯಲ್ಲಿ ತೇಲುತ್ತಿದ್ದ ಆನೆ ಪಕ್ಷ ಹಾಗೂ ಇನ್ನಿತರ ಎಡಪಕ್ಷಗಳಿಗೆ ಭಾರೀ ಆಘಾತವಾಗಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಮಾಯಾವತಿಗೆ ಸೋಲು..!

ಉತ್ತರ ಪ್ರದೇಶ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವನ್ನು ದಾಖಲಿಸಿದೆ. ರಾಜ್ಯಸಭೆಗೆ ನಡೆದಿದ್ದ 10 ಸ್ಥಾನಗಳ ಪೈಕಿ ಬರೋಬ್ಬರಿ 9 ಸ್ಥಾನಗಳನ್ನು ಗಳಿಸಿದ ಭಾರತೀಯ ಜನತಾ ಪಕ್ಷ ರಾಜ್ಯಸಭೆಯಲ್ಲೂ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೈ ಮತ್ತಷ್ಟು ಬಲವಾಗಿದೆ.

ಮಾಯಾವತಿಗೆ ಭಾರೀ ಮುಖಭಂಗ..!

Image result for amit shah and yogi adityanath celebrating uttar pradesh victory

ಉತ್ತರ ಪ್ರದೇಶದ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿಗೆ ಭಾರೀ ಮುಖಭಂಗವಾಗಿದೆ. ಒಟ್ಟು 10 ಸ್ಥಾನಗಳಿಗೆ ಉತ್ತರ ಪ್ರದೇಶದ ವಿಧಾನ ಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಇದರಲ್ಲಿ 8 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಸುಲಭವಾಗಿ ಜಯಿಸಬಹುದಾಗಿದ್ದ ಸ್ಥಾನವಾಗಿದ್ದವು. ಒಂದು ಸ್ಥಾನ ಸಮಾಜವಾದಿ ಹಾಗೂ ಮತ್ತೊಂದು ಸ್ಥಾನ ಬಹುಜನ ಸಮಾಜವಾದಿ ಪಕ್ಷಕ್ಕೆ ಗೆಲುವು ಧಕ್ಕಬಹುದು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ ಅಲ್ಲಿ ನಡೆದದ್ದೇ ಬೇರೆ.

324 ಸ್ಥಾನಗಳನ್ನು ಹೊಂದಿದ್ದ ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ 8 ಸ್ಥಾನಗಳನ್ನು ಸುಲಭವಾಗಿ ಜಯಿಸಬಹುದಾಗಿದ್ದ ಸ್ಥಾನಗಳಾಗಿತ್ತು. ಆದರೆ ಅಲ್ಲಿ ನಡೆದದ್ದೇ ಬೇರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಾಕ್ಯ ನೀತಿಯಿಂದ ಬಹುಜನ ಸಮಾಜವಾದ ಪಕ್ಷದ ಅಭ್ಯರ್ಥಿ ಮಾಯಾವತಿಗೆ ಭಾರೀ ಮುಖಭಂಗವಾಗಿದೆ.

ಭಾರತೀಯ ಜನತಾ ಪಕ್ಷದ ಒಟ್ಟು 324 ಸ್ಥಾನಗಳಲ್ಲಿ 9 ಸ್ಥಾನಗಳಿಗೆ ಮತಗಳನ್ನು ವಿಭಜಿಸಲಾಗಿತ್ತು. ಅದರಲ್ಲಿ ಓರ್ವರಿಗೆ 37 ಮತಗಳ ಅಗತ್ಯವಿತ್ತು. ಆದರೆ ಮುಂಜಾಗೃತಾ ಕ್ರಮವಾಗಿ ಒಬ್ಬೊಬ್ಬರಿಗೆ ತಲಾ 39 ಮತಗಳಂತೆ ಹಂಚಲಾಗಿತ್ತು. ಹತ್ತರಲ್ಲಿ 8 ಬಿಜೆಪಿ ಹಾಗೂ 1 ಸಮಾಜವಾದಿ ಪಕ್ಷ ಹಾಗೂ 1 ಬಹುಜನ ಸಮಾಜವಾದಿ ಪಕ್ಷ ಎಂಬ ನಿರೀಕ್ಷೆಗಳಿದ್ದವು. ಗೆಲುವು ನಿಶ್ಚಿತ ಎಂಬ ವಿಚಾರವನ್ನು ಅರಿತುಕೊಂಡೇ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿದ್ದರು.

Image result for amit shah and yogi adityanath celebrating uttar pradesh victory

ಸಮಾಜವಾದಿ ಪಕ್ಷದಿಂದ ಜಯಾ ಬಚ್ಚನ್ ಸ್ಪರ್ಧಿಸಿದ್ದರೆ ಬಹುಜನ ಸಮಾಜವಾದಿ ಪಕ್ಷದಿಂದ ಮಾಯಾವತಿ ಸ್ಪರ್ಧಿಸಿದ್ದರು. ಮಾಯಾವತಿಗೆ ತನ್ನದೇ ಪಕ್ಷದ 19 ಮತಗಳು ಹಾಗೂ ಸಮಾಜವಾದಿ ಪಕ್ಷದ 10 ಮತಗಳು, ಕಾಂಗ್ರೆಸ್ ಪಕ್ಷದ 7 ಮತಗಳು ಮತ್ತು ಪಕ್ಷೇತರ 3 ಮತಗಳು ಎಂದು ಒಟ್ಟು ಮಾಡಲಾಗಿತ್ತು. ಒಟ್ಟು 39 ಮತಗಳನ್ನು ಮಾಯಾವತಿಗೆ ಕ್ರೋಡೀಕರಿಸಿ ಇಡಲಾಗಿತ್ತು. ಈ ಧೈರ್ಯದಲ್ಲೇ ಮಾಯಾವತಿ ಚುನಾವಣೆಗೆ ಇಳಿದು ತಮ್ಮ ಶಕ್ತಿ ಪ್ರದರ್ಶನವನ್ನು ಭಾರತೀಯ ಜನತಾ ಪಕ್ಷದ ಎದುರು ಮಾಡಲು ಸಜ್ಜಾಗಿ ನಿಂತಿದ್ದರು. ಆದರೆ ಅಷ್ಟರಲ್ಲೇ ಮಾಯಾವತಿಗೆ ಶಾಕ್ ಕಾದಿತ್ತು.

ಅನಿರೀಕ್ಷಿತ ಸೋಲುಂಡ ಮಾಯಾವತಿ..!

ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳನ್ನು ಒಟ್ಟು ಹಾಕಿ ತಾನು ಗೆಲ್ಲುತ್ತೇನೆ ಎಂದು ಧೈರ್ಯದಿಂದ ಚುನಾವಣೆಗೆ ಸ್ರ್ಪರ್ಧಿಸಿದ್ದ ಮಾಯಾವತಿಗೆ ಭಾರೀ ಆಘಾತವೇ
ಎದುರಾಗಿತ್ತು. ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಗೆಲುವು ಕಂಡಿದ್ದರೆ ಇತ್ತ ಮಾಯಾವತಿಗೆ ಮುಖಭಂಗವಾಗಿತ್ತು. ಮಾಯಾವತಿ ಗೆಲ್ಲಬೇಕಾಗಿದ್ದ ಸ್ಥಾನವನ್ನು ಭಾರತೀಯ ಜನತಾ ಪಕ್ಷ ಬಾಚಿಕೊಂಡಿತ್ತು.

ಎಡವಿದ್ದೆಲ್ಲಿ..?

Image result for amit shah and yogi adityanath celebrating uttar pradesh victory

39 ಮತಗಳ ಧೈರ್ಯ ಇಟ್ಟುಕೊಂಡಿದ್ದ ಮಾಯಾವತಿಗೆ ಆ ಶಾಸಕರು ಕೈಕೊಟ್ಟಿದ್ದರು. ಅದರಲ್ಲಿ ತನ್ನದೇ ಪಕ್ಷದ ಅನಿಲ್ ಸಿಂಗ್ ಎಂಬಾತ ಹಾಗೂ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ನಿತಿನ್ ಅಗರ್‍ವಾಲ್ ಮತ್ತು ಮಾಯಾವತಿಗೆ ಮತ ಹಾಕುತ್ತೇನೆ ಎಂದಿದ್ದ ಅಮನ್ ಮಣಿ ತ್ರಿಪಾಟಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿದ್ದರು. ತನ್ನ ಪಕ್ಷಕ್ಕೆ ಮತಗಳನ್ನು ಹಾಕದೆ ಅಡ್ಡ ಮತದಾನ ಮಾಡಿ ಮಾಯಾವತಿಯನ್ನು ಸೋಲಿಸಿ ಬಿಟ್ಟರು. ಬಿ.ಎಸ್.ಪಿ.ಶಾಸಕ ಮುಕ್ತಾರ್ ಅನ್ಸಾರಿ ಹಾಗೂ ಎಸ್.ಪಿ. ಶಾಸಕ ಹರಿ ಓಮ್ ಯಾದವ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಹೀಗಾಗಿ ಅವರ ಮತಗಳು ತನಗೆ ಸಿಗದೆ ಮಾಯಾವತಿ ಮತ್ತೆ ಕಾಂಗಾಲಾಗಿ ಹೋಗಿದ್ದರು. ಆದರೆ ಉಳಿದ ಇಷ್ಟು ಮತಗಳನ್ನು ನಂಬಿಕೊಂಡು ಅವರು ರಾಜ್ಯಸಭಾ ಅಖಾಡಕ್ಕೆ ಇಳಿದಿದ್ದರು. ಆದರೆ ಆ 3 ಶಾಸಕರು ಅಡ್ಡ ಮತದಾನದ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವ ಮೂಲಕ ಮಾಯಾವತಿಯನ್ನು ಸೋಲಿಸಿಬಿಟ್ಟಿದ್ದಾರೆ.

ಮಹಾರಾಜರೇ ಬೇಕಾಗಿತ್ತು..!

ಇನ್ನು ಅಡ್ಡ ಮತದಾನ ಮಾಡಿದ ಆ ಮೂರು ಮಂದಿ ಶಾಸಕರು ತಾವು ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. “ನಮಗೆ ಮಹಾರಾಜರು (ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಮಹಾರಾಜ್ ಎಂದು ಕರೆಯುತ್ತಾರೆ) ಬೇಕಾಗಿತ್ತು. ಅವರು ಉತ್ತಮ ಆಡಳಿತವನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರ ಕೈ ಬಲಪಡಿಸಲು ನಾವು ಮುಂದಾಗಿದ್ದು ಹೀಗಾಗಿ ನಾವು ಅವರ ಪಕ್ಷಕ್ಕೆ ಮತ ಹಾಕಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಸ್ವತಃ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷದ ಶಾಸಕ ಅನಿಲ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಮಾಯಾವತಿಗೆ ಭಾರೀ ಮುಖಭಂಗವಾಗಿದೆ.

ಸಖತ್ ವರ್ಕೌಟ್ ಆಗಿತ್ತು ಶಾ ಗೇಮ್ ಪ್ಲಾನ್..!

Image result for amit shah and yogi adityanath celebrating uttar pradesh victory

ಹೌದು. ಈ ಎಲ್ಲಾ ರಾಜಕೀಯ ಆಟಗಳ ಹಿಂದಿರುವ ಮಾಸ್ಟರ್ ಮೈಂಡ್ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್ ಶಾ. ತನ್ನ ರಾಜಕೀಯ ತಂತ್ರಗಾರಿಕೆಯಲ್ಲೇ ಹೆಸರುವಾಸಿಯಾಗಿದ್ದ ಅಮಿತ್ ಶಾ ಉತ್ತರ ಪ್ರದೇಶದಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲೂ ತಮ್ಮ ಚಾಣಾಕ್ಷತೆಯನ್ನು ಮೆರೆದಿದ್ದಾರೆ. ಇದು ಮಾಯಾವತಿಗೆ ಬಿಸಿ ಮುಟ್ಟಿದ್ದು ಇದೀಗ ಎಲ್ಲವನ್ನೂ ಕಳೆದುಕೊಂಡು ಒಬ್ಬಂಟಿಯಾಗಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕೇವಲ ಒಂದು ಮತ ಬೇಕಾಗಿದ್ದಾಗ ಮಾಯಾವತಿ ಕೈಕೊಟ್ಟು ಸರ್ಕಾರ ಬೀಳುವಂತೆ ಮಾಡಿದ್ದರು. ಆ ಸೇಡನ್ನು ಅಮಿತ್ ಶಾ ಇದೀಗ ಸಖತ್ ಆಗಿಯೇ ತೀರಿಸಿಕೊಂಡಿದ್ದಾರೆ.

ಉಪಚುನಾವಣೆಯಲ್ಲಿ ಸೋತಿದ್ದ ಕಮಲ…

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲೋಕಸಭಾ ಕ್ಷೇತ್ರವಾದ ಘೋರಕ್ ಪುರ ಸಹಿತ 3 ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸೋಲುಂಡಿತ್ತು. ಈ ವೇಳೆ ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶದಲ್ಲಿ ಮುಗ್ಗರಿಸಿಯೇ ಬಿಟ್ಟಿತು ಎಂದೇ ಹೇಳಲಾಗಿತ್ತು. ಆದರೆ ಉತ್ತರ ಪ್ರದೇಶದಿಂದ ರಾಜ್ಯಸಭಾಕ್ಕೆ ನಡೆದ ಚುನಾವಣೆಯಲ್ಲಿ ಮಾಯಾವತಿಗೆ ಭಾರೀ ಮುಖಭಂಗವಾಗಿದ್ದು ಎಷ್ಟೇ ಪಕ್ಷಗಳೂ ಒಗ್ಗಟ್ಟಾದರೂ ಭಾರತೀಯ ಜನತಾ ಪಕ್ಷವನ್ನು ಸೋಲಿಸೋದು ಸುಲಭದ ಮಾತಲ್ಲ ಎಂಬ ಸಂದೇಶವನ್ನು ಸಾರಿಯೇ ಬಿಟ್ಟಿದೆ.

ರಾಜೀನಾಮೆ ನೀಡುತ್ತೇನೆ ಎಂದಿದ್ದ ಮಾಯಾವತಿ!

Related image

ಈ ಹಿಂದೆ ಭಾರತೀಯ ಜನತಾ ಪಕ್ಷದಿಂದ ನೊಂದು ತಾನು ತನ್ನ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಎಂದು ನಾಟಕ ಮಾಡುತ್ತಿದ್ದರು. ಆದರೆ ಅದು ತನ್ನ ಚುನಾವಣಾ ಸಮೀಪವಿರುವಾಗಲೇ ಈ ರೀತಿಯ ನಾಟಕವಾಡುತ್ತಿದ್ದಾರೆ ಎಂದು ತಿಳಿದ ಜನರು ನಂತರ ಮಯಾವತಿಯನ್ನು ನಂಬಲಿಲ್ಲ. ದಲಿತ ಟ್ರಂಪ್ ಕಾರ್ಡ್ ಇಟ್ಟುಕೊಂಡು ನಾಟಕವಾಡಿದ್ದ ಮಾಯಾವತಿಗೆ ಇದೀಗ ಅದೇ ದಲಿತರ ಪರವಾಗಿರುವ ಪಕ್ಷದವರು ಎನಿಸಿಕೊಂಡವರೇ ಕೈಕೊಟ್ಟಿದ್ದು ಮಾಯಾವತಿಗೆ ಭಾರೀ ಹಿನ್ನೆಡೆಯಾಗಿದೆ.

ಒಟ್ಟಾರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ರಣನೀತಿ ಸಖತ್ ವರ್ಕೌಟ್ ಆಗಿದ್ದು,
ಮಾಯಾವತಿಯನ್ನು ಮನೆಗೆ ಕಳಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೂ ಭಾರೀ ಉಪಕಾರಿಯಾಗಿದ್ದು ಮಾಯಾವತಿಯ ಬಹುಜನ ಸಮಾಜವಾದಿ ಸಹಿತ ಅನೇಕ ಪಕ್ಷದ ನಾಯಕರೂ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಬೀಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close