ಪ್ರಚಲಿತ

ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆ!! ಬಾಲಕರಿಗೆ ಮಾತ್ರ ಮೀಸಲಿದ್ದ ಸೈನಿಕ್ ಸ್ಕೂಲ್ ಗೆ ಇದೀಗ ಬಾಲಕಿಯರಿಗೂ ಮುಕ್ತ ಅವಕಾಶ!!

ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಏರಿದ ನಂತರದಿಂದ ಉತ್ತರಪ್ರದೇಶದ ಚಿತ್ರಣವೇ ಬದಲಾಗಿ ಹೋಗಿದ್ದು, ಅಧಿಕಾರ ಸ್ವೀಕರಿಸಿದ ಒಂದೇ ಒಂದು ವರ್ಷದಲ್ಲಿ ಬದಲಾವಣೆಯ ಹೊಸ ಛಾಪನ್ನೇ ಸೃಷ್ಟಿಸಿದ್ದಾರೆ. ಅಷ್ಟೆ ಅಲ್ಲದೇ, ತನ್ನ ದಿಟ್ಟ ನಿರ್ಧಾರಗಳಿಂದಾಗಿ ಕೆಲ ರೌಡಿಗಳು ಜೈಲು ಸೇರಿದ್ದರೆ ಇನ್ನು ಕೆಲ ರೌಡಿಗಳು ಜನಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದಾರೆ ಎಂದರೆ ಯೋಗಿ ಆದಿತ್ಯನಾಥ್ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಇಡೀ ದೇಶದಲ್ಲಿಯೇ ಬದಲಾವಣೆಯ ಹೊಸ ಅಲೆ ಎದ್ದಿದ್ದಂತೂ ಅಕ್ಷರಶಃ ನಿಜ

ಆದರೆ ಇದೀಗ ಹುಡುಗರಿಗೆ ಮಾತ್ರ ಪ್ರವೇಶಾತಿ ಕಲ್ಪಿಸುತ್ತಿದ್ದ ಲಕ್ನೋದಲ್ಲಿನ ಉತ್ತರಪ್ರದೇಶ ಸೈನಿಕ್ ಸ್ಕೂಲ್ ನಲ್ಲಿ ಬದಲಾವಣೆಯ ಹೊಸ ಅಲೆ ಎದ್ದಿದ್ದು, ಹುಡುಗರಿಗೆ ಮಾತ್ರ ಸ್ಕೂಲ್ ನಲ್ಲಿ ಅವಕಾಶ ಇರುತ್ತಿದ್ದು, ಇದೀಗ 57 ವರ್ಷಗಳ ಬಳಿಕ ಹೊಸ ಐತಿಹಾಸಿಕ ಬದಲಾವಣೆಯನ್ನು ಜಾರಿಗೊಳಿಸಲಾಗಿದೆ!! ಹೌದು… ಕೇವಲ ಹುಡುಗರಿಗೆ ಅವಕಾಶ ಕಲ್ಪಿಸಲಾಗಿದ್ದ ಸೈನಿಕ್ ಸ್ಕೂಲ್‍ಗೆ ಇದೀಗ ಬಾಲಕಿಯರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ.

ಈಗಾಗಲೇ ನರೇಂದ್ರ ಮೋದಿಯವರು ಮಹಿಳೆಯರಿಗಾಗಿ ನಾನಾ ರೀತಿಯ ಸವಲತ್ತುಗಳನ್ನು ನೀಡುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ವಿಚಾರ ಗೊತ್ತೇ ಇದೆ!! ಅಧಿಕಾರದ ಗದ್ದುಗೆಯನ್ನೇರಿದಂದಿನಿಂದಲೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ಪ್ರಧಾನಿಗಳು ತಮ್ಮ ಸಚಿವ ಸಂಪುಟದಲ್ಲೂ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಮೂಲಕ ಸುದ್ದಿಯಾಗಿದ್ದು, ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗಿಯಾಗುವಂತೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡುತ್ತಲೇ ಬಂದಿದ್ದಾರೆ!!

ಇದಕ್ಕೆ ಉತ್ತಮ ನಿದರ್ಶನ ಎನ್ನುವಂತೆ, ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆಯಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್ ಅವನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ್ದರು. ಅಷ್ಟೇ ಅಲ್ಲದೇ ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿಯಾಗಿದ್ದಲ್ಲದೇ ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು. ಇನ್ನು ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮುಂಬೈ ಅಹಮದಾಬಾದ್ ಶತಾಬ್ದಿ ಎಕ್ಸಪ್ರೆಸ್ ರೈಲಿನಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸುವ ಮೂಲಕ ಹೊಸ ಇತಿಹಾಸವನ್ನೇ ನರೇಂದ್ರ ಮೋದಿ ಸರ್ಕಾರ ಸೃಷ್ಟಿಸಿದ್ದರು!!

ಅಷ್ಟೇ ಅಲ್ಲದೇ, ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡುವ ದೃಷ್ಟಿಯಿಂದ ದೇಶದ ಆರ್ಥಿಕ ರಾಜಧಾನಿ ಎನಿಸಿರುವ ಮುಂಬಯಿನಲ್ಲಿ 8 ಮಹಿಳಾ ನೇತೃತ್ವದ ಪೊಲೀಸ್ ಸ್ಟೇಶನ್‍ಗಳನ್ನು ಹೊಂದಿರುವ ದೇಶದ ಏಕೈಕ ನಗರ ಎಂದೆನಿಸಿಕೊಂಡಿದೆ. ಆದರೆ ಇದೀಗ ಹುಡುಗರಿಗೆ ಮಾತ್ರ ಪ್ರವೇಶಾತಿ ಕಲ್ಪಿಸುತ್ತಿದ್ದ ಲಕ್ನೋದಲ್ಲಿನ ಉತ್ತರಪ್ರದೇಶ ಸೈನಿಕ್ ಸ್ಕೂಲ್ 57 ವರ್ಷಗಳ ಬಳಿಕ ಬಾಲಕಿಯರಿಗೂ ಮುಕ್ತಗೊಂಡಿದೆ. ಕಳೆದ ಶುಕ್ರವಾರ ಈ ಸೈನಿಕ್ ಸ್ಕೂಲ್ ಗೆ 15 ಬಾಲಕಿಯರು ಪ್ರವೇಶಾತಿ ಪಡೆದುಕೊಂಡಿದ್ದು, ಈ ಮೂಲಕ ಶಾಲೆಯ ಆಲ್ ಬಾಯ್ಸ್ ಇನ್ ಸ್ಟಿಟ್ಯೂಷನ್ ಟ್ಯಾಗ್ ಕಳಚಿದೆ.

ಹೌದು… ಯುಪಿ ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿಯ ಜಂಟಿ ಪ್ರಯತ್ನದ ಫಲವಾಗಿ ಬಾಲಕಿಯರಿಗೆ ಈ ಶಾಲೆಯಲ್ಲಿ ಕಲಿಯುವ ಅವಕಾಶ ಲಭಿಸಿದೆ. ಇನ್ನು ಈ ಬಗ್ಗೆ ಸೈನಿಕ್ ಸ್ಕೂಲ್ ನ ಪ್ರಾಶುಂಪಾಲ ಕೊಲೊನಿಯಲ್ ಅಮಿತ್ ಚ್ಯಾಟರ್ಜಿ ಮಾತಾನಾಡಿ, “ಸೇನೆಗೆ ಸೇರುವ ಮಹತ್ವಾಕಾಂಕ್ಷೆ ಹೊಂದಿರುವ 15 ಮಂದಿ ಬಾಲಕಿಯರು ನಮ್ಮ ಶಾಲೆಯಲ್ಲಿ ಮೊದಲ ಅಧ್ಯಯನಕ್ಕೆ ಹಾಜರಾಗಿದ್ದಾರೆ ” ಎಂದು ಹೇಳಿದ್ದಾರೆ.

ಈಗಾಗಲೇ ಮಿಗ್ -21 ವಿಮಾನವನ್ನು ಯಶಸ್ವಿಯಾಗಿ ಚಲಾಯಿಸುವ ಮೂಲಕ ಮಹಿಳಾ ಪೈಲಟ್ ಅವನಿ ಚತುರ್ವೇದಿ ಗಮನ ಸೆಳೆದಿದ್ದರಲ್ಲದೇ ಭಾರತದ ಮಹಿಳೆಯರ ತಾಕತ್ತು ಕೇವಲ ಯುದ್ದಭೂಮಿಯಲ್ಲಿ ಮಾತ್ರವಲ್ಲದೇ ಬಾನಂಗಳದಲ್ಲಿ ಪ್ರದರ್ಶಿತವಾಗಿತ್ತು!! ಹೆಣ್ಣು ಕೇವಲ ಮನೆ ಒಳಗಡೆ ಇದ್ದರೆ ಸಾಕು ಎಂದು ತುಚ್ಛವಾಗಿ ಕಾಣುತ್ತಿದ್ದ ಸಮಾಜಕ್ಕೆ ಹೆಣ್ಣು ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧಿಸಬಲ್ಲಳು ಎನ್ನುವುದನ್ನು ನರೇಂದ್ರ ಮೋದಿ ಸರ್ಕಾರವು ತೋರಿಸಿಕೊಟ್ಟಿದೆ!!

ಸೇನಾ ಪಡೆಗಳ ನೇಮಕದಲ್ಲಿರುವ ಲಿಂಗ ತಾರತಮ್ಯ ತೊಡೆದು ಹಾಕಬೇಕು ಹಾಗೂ ಮಹಿಳೆಯರಿಗೂ ಉತ್ತಮ ಅವಕಾಶ ನೀಡಬೇಕು ಎಂಬ ವಿಷಯ ಸಾಕಷ್ಟು ಸದ್ದು ಮಾಡಿದರೂ ಅದು ಕೇವಲ ಚರ್ಚಾ ಹಂತಕ್ಕೆ ಸೀಮಿತವಾಗಿತ್ತು. ಆದರೆ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ಮರು ದಿನವೇ ಈ ನಿರ್ಧಾರ ಹೊರಬಂದಿರುವುದು ಸಾಕಷ್ಟು ಗಮನ ಸೆಳೆದಿತ್ತು!! ಈ ಬಗ್ಗೆ ಭಾರತೀಯ ಸೇನೆಯ ಅಡ್ಜಂಟ್ ಜೆನರಲ್ ಅಶ್ವಿನಿ ಕುಮಾರ್ ಮಾಹಿತಿ ನೀಡಿದ್ದು, “ಪ್ರತಿ ವರ್ಷ 52 ಮಹಿಳೆಯರಂತೆ ಒಟ್ಟು 800 ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದರು.

UP Sainik School In Lucknow Admits Girls, First Time In 57 Years

ಈ ನಿರ್ಧಾರ ಜಾರಿಯಾಗುವ ಮೂಲಕ ಮಿಲಿಟರಿ ಪೊಲೀಸ್ ಪಡೆಗಳಲ್ಲಿ ಮಹಿಳೆಯರನ್ನು ನೇಮಿಸಿಕೊಂಡ ದೇಶಗಳ ಪಟ್ಟಿಗೆ ಭಾರತವೂ ಸೇರಲಿದ್ದು, ಈ ಹಿಂದೆ ಜರ್ಮನಿ, ಆಶ್ಟ್ರೇಲಿಯಾ, ಕೆನಡಾ, ಅಮೆರಿಕ, ಬ್ರಿಟನ್, ಡೆನ್ಮಾರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್ ಹಾಗೂ ಇಸ್ರೇಲ್ ಸೇನೆಯಲ್ಲಿ ಈ ಅವಕಾಶ ಕಲ್ಪಿಸಲಾಗಿತ್ತು. ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಲು ಮಹಿಳೆಯರೂ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಈ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಮೊದಲ ಹಂತದಲ್ಲಿ ಸೇನಾ ಪೆÇಲೀಸ್ ಪೇದೆಗಳ ನೇಮಕಾತಿ ನಡೆಸಲಾಗುವುದು ಎಂದು ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ತಿಳಿಸಿದ್ದರು!!

ಅದರಂತೆಯೇ ಇದೀಗ ಭಾರತೀಯ ಮಹಿಳೆಯರು ಯುದ್ದಭೂಮಿಯಲ್ಲಿ ಶತ್ರುಗಳೊಂದಿಗೆ ಸೆಣಸಾಡಲು ಸಿದ್ದ ಎನ್ನುವುದನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾರೆ!! ಆದರೆ ಇದೀಗ ಲಕ್ನೋದಲ್ಲಿನ ಉತ್ತರಪ್ರದೇಶ ಸೈನಿಕ್ ಸ್ಕೂಲ್ 57 ವರ್ಷಗಳ ಬಳಿಕ ಬಾಲಕಿಯರಿಗೂ ಅವಕಾಶ ಕಲ್ಪಿಸಿಕೊಡುವ ಮೂಲಕ ಹೊಸ ಹೆಜ್ಜೆಯನ್ನಿಟ್ಟಿದ್ದಲ್ಲದೇ ಹೊಸ ಬದಲಾವಣೆಯ ಅಲೆಯನ್ನು ಸೃಷ್ಟಿಸಿದ್ದಾರೆ!!!

ಮೂಲ: https://www.ndtv.com/india-news/up-sainik-school-in-lucknow-admits-girls-first-time-in-57-years-1841225

– ಅಲೋಖಾ

Tags

Related Articles

Close