ಪ್ರಚಲಿತ

ಮಹಾರಾಣ ಪ್ರತಾಪರನ್ನು ಹಾಡಿ ಹೊಗಳಿ ಮೊಘಲರ ವಿರುದ್ಧ ಸಿಡಿದೆದ್ದ ಫೈರ್ ಬ್ರಾಂಡ್!! ಮೊಘಲರ ಕುರುಹುಗಳ ನಾಶಕ್ಕೆ ಪಣತೊಟ್ಟ ಯೋಗಿ!!

ಈಗಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಡೀ ದೇಶ ಉತ್ತರ ಪ್ರದೇಶದತ್ತ ನೋಡುವತ್ತ ಮಾಡಿದ್ದಾರೆ!! ಇದೀಗ ಮೇವಾರ ರಾಜರ ದಿನಾಚರಣೆಯನ್ನು ಆಚರಿಸಿದ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗೀಜಿ ಮತ್ತೆ ಮೊಘಲರ ವಿರುದ್ಧ ದ್ವನಿ ಎತ್ತಿದ್ದಾರೆ!! ನಿಜವಾಗಿ ಹೇಳಬೇಕೆಂದರೆ ಮೊಘಲರು ಭಾರತದಲ್ಲಿರು ಎಲ್ಲಾ ಸಂಪತ್ತನ್ನು ನಾಶ ಮಾಡಿದ್ದಲ್ಲದೆ ಹಿಂದೂಗಳನ್ನು ಮತಾಂತರ ಮಾಡಲು ಪ್ರಯತ್ನಸಿ ತಮಗಿಷ್ಟ ಬಂದಂತೆ ಉಪಯೋಗಿಸಿ ತಮ್ಮ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ್ದಾರೆ!! ಆದರೆ ಕೆಲವರು ಮೊಘಲ್‍ರೇ ಪ್ರಮುಖರು ಎಂಬುವುದನ್ನು ಬಿಂಬಿಸುತ್ತಾರೆ!! ಅಕ್ಬರ್‍ಗಿಂತ ಮಹಾರಾಣ ಪ್ರತಾಪರೇ ಎಲ್ಲಾ ಜನರಿಗೆ ಮಾದರಿ ಎಂಬುದನ್ನು ಯೋಗೀಜೀ ಹೇಳಿದ್ದಾರೆ!! ಎಲ್ಲಾ ಹಿಂದುಳಿದ ಜಾತಿಗಳು ತಮ್ಮನ್ನು ತಾವು ಮಹಾರಾಣ ಪ್ರತಾಪರ ವಂಶಸ್ಥರು ಎಂದು ಪರಿಗಣಿಸಿ ಮಹಾರಾಣ ಪ್ರತಾಪರನ್ನು ತಮಗೆ ಸ್ಫೂರ್ತಿ ನೀಡಿದವರು ಎಂದು ಆರಾಧಿಸುತ್ತಾರೆ.. ಇಂತವರು ನಿಜವಾಗಿ ಎಲ್ಲಿರಿಗೂ ಸ್ಫೂರ್ತಿದಾಯಕ!! ಆದರೆ ಮೊಘಲರು ಯಾರಿಗೆ ಸ್ಫೂರ್ತಿ ಎಂಬುವುದು ತಿಳಿಯುತ್ತಿಲ್ಲ!! ಇಲ್ಲಿಯವರಿಗೆ ಪಠ್ಯಪುಸ್ತಕದಲ್ಲಿ ಮತ್ತು ಇತರ ಎಲ್ಲಾ ಕಡೆಗಳಲ್ಲಿ ಮೊಘಲರ ಶ್ರೇಷ್ಟ ರಾಜರುಗಳು ಎಂದು ಬಿಂಬಿಸಿ ಎಲ್ಲರನ್ನು ನಂಬಿಸಲಾಗಿತ್ತು!! ಆದರೆ ಯಾರು ಶ್ರೇಷ್ಟ ವ್ಯಕ್ತಿಗಳು ಎಂಬುವುದು ಒಂದೊಂದಾಗಿಯೇ ಜಗತ್ತಿಗೆ ತಿಳಿಸುವ ಸಮಯ ಬಂದಿದೆ!!

ಮೇವಾರದ ರಾಜರ ಆಚರಣೆಯನ್ನು ನಡೆಸಿದ್ದ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಿ ಆದಿತ್ಯನಾಥರು ಮಹಾರಾಣ ಪ್ರತಾಪರ ಬಗ್ಗೆ ಹಾಡಿಹೊಗಳಿದ್ದಾರೆ!! ಅದಲ್ಲದೆ ಮೊಘಲ್ ದೊರೆ ಅಕ್ಬರ್ ಯಾವತ್ತೂ ಉತ್ತವ ವ್ಯಕ್ತಿ ಅಲ್ಲ ಅವರವನ್ನು ಕೆಲ ಹಿಂದೂ ವಿರೋಧಿಗಳು ಈ ರೀತಿಯಾಗಿ ಒಳ್ಳೆಯವರಾಗಿ ಬಿಂಬಿಸಿದ್ದಾರೆ!! ಅಕ್ಬರ್ ಬೀರಬಲ್ ಕತೆ ಓದಿ ಓದಿ ನಮಗೆ ಅಕ್ಬರ್ ಎಂದಾಗ ಇವನೊಬ್ಬ ಉತ್ತಮ ದೊರೆ ಎಂಬ ಭಾವನೆ ಮೂಡುತ್ತದೆ. ಈತ ಇತರ ಮೊಘಲ್ ದೊರೆಗಳಂತೆ ಕ್ರೂರಿಯಲ್ಲದಿದ್ದರೂ ಈತ ಹಿಂದೂಗಳಿಗೆ ಮಾಡಿದ ದ್ರೋಹ ಮಾತ್ರ ಕಡಿಮೆಯಿಲ್ಲ.

ಅಕ್ಬರ್ ಬೀರಬಲ್ಲನ ಕಥೆ ಓದಿ ನಾವೆಲ್ಲಾ ಅಕ್ಬರ್ ಎಂದರೆ ಮಹಾನ್ ಸೆಕ್ಯುಲರ್ ಎಂದು ನಂಬುತ್ತೇವೆ. ಇತರ ಮೊಘಲ್ ದೊರೆಗಳಂತೆ ನಮಗೆ ಆತನ ಮೇಲೆ ಸಿಟ್ಟಿಲ್ಲ. ಆದರೆ ಪ್ರತಾಪರು ಅಕ್ಬರನಿಗೆ ಆಗಾಗ ಒಡ್ಡುತ್ತಿದ್ದ ಪ್ರತಿರೋಧವೇ ಅಕ್ಬರ್ನನ್ನು ಸೆಕ್ಯುಲರ್ ಆಗಿರುವಂತೆ ನೋಡಿಕೊಂಡಿತ್ತು. ಇಲ್ಲದೇ ಹೋಗಿದ್ದರೆ ಅಕ್ಬರ್ ಇತರ ಮೊಘಲ್ ದೊರೆಗಳಂತೆ ಕ್ರೂರಿಯಾಗಿದ್ದ. ಇಸ್ಲಾಂ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಅಕ್ಬರ್ ಕಾಫಿರ್ಗಳನ್ನು ನಾಶ ಮಾಡಲು ಹಿಂದೆಮುಂದೆ ನೋಡಲಿಲ್ಲ. ಈತ ರಜಪೂತರ ವಿರುದ್ಧದ ಪ್ರಾರಂಭಿಕ ಯುದ್ಧಗಳಲ್ಲಿ ಮೆರೆದ ಕ್ರೌರ್ಯ ಇತರ ಮೊಘಲ್ ರಾಜರುಗಳಂತೆ ಕಡಿಮೆ ಇರಲಿಲ್ಲ. ರಜಪೂತ ಮಹಿಳೆಯರನ್ನು ಸತಿಯ ಚಿತಾಗ್ನಿಗೆ ದೂಡಿದ ಪಾಪಕಾರ್ಯದಲ್ಲಿ ಅಕ್ಬರನ ಪಾತ್ರವೂ ಅಷ್ಟೇ ದೊಡ್ಡದಿದೆ. 1568ರಲ್ಲಿ ನಾಲ್ಕು ತಿಂಗಳ ಕದನದ ನಂತರ ಚಿತ್ತೋಡಗಢದ ಕೋಟೆ ಅಕ್ಬರನ ವಶವಾಯಿತು. ಆಗ ಸಮರದಲ್ಲಿ ಬದುಕುಳಿದಿದ್ದ 30,000 ಹಿಂದುಗಳನ್ನು ಮಾರಣಹೋಮ ಮಾಡಿ ಇಸ್ಲಾಂ ಸಾಮ್ರಾಜ್ಯದ ಆಗಮನವಾಗಿದೆಯೆಂದು ಸಾರಿದ್ದು ಇದೇ ಅಕ್ಬರ್. ಹಿಂದೂಗಳ ರುಂಡಗಳನ್ನು ಕಡಿದು ಆ ಪ್ರಾಂತ್ಯದಲ್ಲೆಲ್ಲಾ ಗೋಪುರಗಳ ಮೇಲೆ ನೇತುಹಾಕಿಸಿ ತನ್ನ ಪ್ರಾಬಲ್ಯ ಸಾರಿದ ವಿಕೃತ ನಡೆ ಅಕ್ಬರನದಾಗಿತ್ತು. ಪ್ರತಾಪರು ಅಕ್ಬರನ ಬಲಾಢ್ಯ ಸೈನ್ಯದೆದುರು ಎಂದಿಗೂ ಶರಣಾಗಲೇ ಇಲ್ಲ. ಅಕ್ಬರನಿಗೆ ತಲೆಬಾಗಿದ್ದೇ ಆದರೆ ಪ್ರತಾಪರಿಗೆ ಸಕಲ ವೈಭೋಗಗಳನ್ನು ನೀಡುವುದಾಗಿ ಸಂಧಾನ ಪ್ರಸ್ತಾಪವಾದಾಗಲೂ ಸ್ವಾಭಿಮಾನ ಬಿಡಲಿಲ್ಲ. ಅವರ ಜೊತೆ ವಿವಾಹ ಸಂಬಂಧ ಏರ್ಪಡಿಸಿದ್ದರೂ ಪ್ರತಾಪರು ಮಾತ್ರ ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಅಕ್ಬರನಿಗೆ ಪ್ರತಿರೋಧ ಒಡ್ಡುತ್ತಲೇ ಇದ್ದು ಸದಾ ದೇಶಕ್ಕಾಗಿ ಚಿರರುಣಿಯಾಗಿದ್ದರು!!

Image result for yogi adityanath

ರಾಜಸ್ಥಾನ ಅಕ್ಬರನ ವಶದಲ್ಲಿದ್ದಾಗ ಮಹಾರಾಣಾ ಪ್ರತಾಪಸಿಂಹರು ತಮ್ಮ ಸಣ್ಣ ಭೂಮಿಗಾಗಿ 25 ವರ್ಷ ಹೋರಾಡಿದರು. ಆದರೆ ಅಕ್ಬರನಿಗೆ ಸೋಲಿಸಲಾಗಲಿಲ್ಲ. ಪ್ರತಾಪರು ಮುಸಲ್ಮಾನರ ಹಿಡಿತದಿಂದ ರಾಜಸ್ಥಾನದ ಬಹಳಷ್ಟು ಭೂಮಿಯನ್ನೂ ಸ್ವತಂತ್ರಗೊಳಿಸಿದರು. ಕೊನೆಯ ಕ್ಷಣದಲ್ಲಿ ತಮ್ಮ ಪುತ್ರ ಅಮರಸಿಂಹನ ಕೈಹಿಡಿದುಕೊಂಡು ಅವರು ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ವಹಿಸಿ ಪ್ರಾಣ ಬಿಟ್ಟರು. ಇಂದು ಹಿಂದೂಗಳು ಬಹುಸಂಖ್ಯಾರಾಗಿ ಉಳಿದುಕೊಂಡಿರುವುದಕ್ಕೆ ಮಹಾರಾಣಾ ಪ್ರತಾಪರೂ ಕಾರಣ. ಇಲ್ಲದೇ ಹೋಗಿದ್ದರೆ ಮೊಘಲರು ಭಾರತವನ್ನು ಎಂದೋ ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಿರುತ್ತಿದ್ದರು!!

ಇದೀಗಾಗಲೇ ಉತ್ತರ ಪ್ರದೇಶದಲ್ಲಿ ಮೊಘಲರ ಅಟ್ಟಹಾಸವನ್ನು ಮೆರೆದಿದ್ದಕ್ಕೆ ಅನೇಕ ಕುರುಹುಗಳಿವೆ!! ಅದನ್ನೀಗ ಒಂದೊಂದಾಗಿಯೇ ಅಳಿಸಿ ಹಾಕಲು ಯೋಗೀಜೀ ಪ್ರಯತ್ನ ಮಾಡುತ್ತನೇ ಇದ್ದಾರೆ!! ಈಗಾಗಲೇ ಉತ್ತರಪ್ರದೇಶವನ್ನು ಕಂಡು ಕೇಳರಿಯದಂತೆ ಬದಲಾವಣೆ ಮಾಡಿದ ಯೋಗೀಜೀ ಇದೀಗ ಮತ್ತೊಂದು ಮಹತ್ತರ ಬದಲಾವಣೆಯನ್ನೇ ಮಾಡಿದ್ದಾರೆ!! ಉತ್ತರಪ್ರದೇಶದ ಮುಘಲ್ ಸರಾಯ್ ರೈಲ್ವೇ ಸ್ಟೇಶನ್ನಿನ ಹೆಸರನ್ನ ಇದೀಗ ಬದಲಿಸಿರುವ ಯೋಗಿ ಆದಿತ್ಯನಾಥರ ಸರ್ಕಾರ ಇದೀಗ ಅದನ್ನ ಪಂಡಿತ್ ದೀನದಯಾಳ್ ಸ್ಟೇಷನ್ ಅಂತ ಮರುನಾಮಕರಣ ಮಾಡಿದ್ದಾರೆ!!

ಪಂಡಿತ್ ದೀನದಯಾಳ್ ಉಪಾಧ್ಯಾಯರು ಇದೇ ಮುಗಲಸರಾಯ್ ರೇಲ್ವೆ ಸ್ಟೇಷನ್ನಿನಲ್ಲಿ ನಿಗೂಢವಾಗಿ 1962 ರಲ್ಲಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕಾಗಿ ಇದೀಗ ಯೋಗಿ ಸರ್ಕಾರ ಇದನ್ನ ಮುಘಲ್ ಸರಾಯ್ ಹೆಸರನ್ನ ಬದಲಿಸಿ ಇದೀಗ ಪಂಡಿತ್ ದೀನದಯಾಳ್ ಸ್ಟೇಷನ್ ಎಂದು ನಾಮಕರಣ ಮಾಡಿದೆ. ಅದಲ್ಲದೆ ಮುಂದಿನ ವರ್ಷ ನಡೆಯಲಿರುವ ಕುಂಭಮೇಳದ ವೇಳೆಗೆ “ಅಲಹಾಬಾದ್’ಗೆ ಮರುನಾಮಕರಣ ಮಾಡುವ ಸಿದ್ಧತೆ ನಡೆದಿದ್ದು “ಪ್ರಯಾಗ್‍ರಾಜ್’ ಎಂದು ಹೆಸರಿಡಲು ಕೂಡಾ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಅಷ್ಟಕ್ಕೂ “ಪ್ರಯಾಗ್‍ರಾಜ್’ ಎಂದು ಹೆಸರಿಡಲು ನಿರ್ಧರಿಸಿದ್ದಕ್ಕೂ ಬಲವಾದ ಕಾರಣ ಇದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ. ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ ಕಾರಣಕ್ಕಾಗಿ ಅಲಹಾಬಾದ್ ಅನ್ನು “ಪ್ರಯಾಗ್‍ರಾಜ್’ ಎಂದು ನಾಮಕರಣ ಮಾಡಬೇಕೆನ್ನುವುದು ಸರಕಾರದ ಉದ್ದೇಶ. ಈಗಾಗಲೇ ಕುಂಭ ಮೇಳದ ಬ್ಯಾನರ್ಗಳಲ್ಲಿ ಅಲಹಾಬಾದ್ ಎಂಬ ಹೆಸರನ್ನು ಪ್ರಯಾಗ್‍ರಾಜ್ ಆಕ್ರಮಿಸಿಕೊಂಡಿದೆ!! ಅದಲ್ಲದೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅಲಹಾಬಾದ್ ಎಂದು ನಾಮಕರಣ ಮಾಡಿರುವಂತಹದ್ದು ಮೊಘಲರು!! ಮೊಘಲರ ಕುರುಹುವನ್ನು ಹೊಂದೊಂದಾಗಿಯೇ ಉತ್ತರ ಪ್ರದೇಶದಿಂದ ಇಲ್ಲವಾಗಿಸುವಲ್ಲಿ ಯೋಗೀಜೀ ನಿರತರಾಗಿದ್ದಾರೆ!! ಅದಲ್ಲದೆ ಈಗಾಗಲೇ ಫಜಿಯಾಬಾದ್ ಅನ್ನು ಕೂಡಾ ಅಯೋಧ್ಯಾ ಧಾಮ್ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಈ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂಬ ಹೆಸರನ್ನಿಡುವ ಮೂಲಕ ಯೋಗಿ ಆದಿತ್ಯನಾಥರು ಮತ್ತಷ್ಟು ಪ್ರಸಿದ್ಧಿಯನ್ನು ಹೊಂದುತ್ತಿದ್ದಾರೆ!!

ಹೀಗೆ ಹಿಂದೂ ರಾಷ್ಟ್ರವನ್ನು ಮುಸ್ಲಿಮರ ಆಕ್ರಮಣದಿಂದ ಇಡೀ ದೇಶವನ್ನೇ ಬದಲಾಯಿಸಿಬಿಟ್ಟಿದ್ದರು!! ಇದೀಗ ಉತ್ತರ ಪ್ರದೇಶದಲ್ಲಿ ಒಂದೊಂದಾಗಿಯೇ ಇವರ ಕುರುಹುಗಳನ್ನು ಇಲ್ಲವಾಗಿಸುವಲ್ಲಿ ಶ್ರಮವಹಿಸುವ ಹಾಗೆ ಪ್ರತೀಯೊಂದು ರಾಜ್ಯದಲ್ಲಿ ಕೂಡಾ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿ ಹುಟ್ಟಿ ಬಂದರೆ ಭಾರತದಲ್ಲಿ ಬದಲಾವಣೆಯ ಮಹಾಪೂರವೇ ಆಗುತ್ತದೆ!!

source: www.republicworld.com

  • ಪವಿತ್ರ
Tags

Related Articles

Close