ಪ್ರಚಲಿತ

ಅಧ್ಯಾಯ 21: ಸಂಘದ ನೇತಾರರು ಒಂದು ಮಾತನಾಡಲಿ ಅದನ್ನು ವಿವಾದಕ್ಕೆ ಎಳೆಯೋಣ ಎಂಬ ಉದ್ದೇಶವನ್ನು ಇಟ್ಟುಕೊಂಡ ಪತ್ರಿಕೆಗಳು ಆರೆಸ್ಸೆಸ್ ನ ಮಹತ್ತರವಾದ ಸಾಧನೆಗಳ ಬಗ್ಗೆ ಮಾತನಾಡುವುದೇ ಇಲ್ಲ!

ಅಧ್ಯಾಯ 21: ಆಗಬೇಕಿದೆ ವನವಾಸಿ ಕಲ್ಯಾಣ

ವನವಾಸಿ ಕಲ್ಯಾಣ ಆಶ್ರಮವು ಭಾರತದ ಬುಡಕಟ್ಟು ಜನ ಮತ್ತು ಗಿರಿಜನರ (ವನವಾಸಿಗಳು) ಸಾಮಾಜಿಕ ಮತ್ತು ಆರ್ಥಿಕ ಏಳಿಗೆ ಮತ್ತು ಅಭಿವೃದ್ಡಿಗಾಗಿ ಶ್ರಮಿಸುತ್ತಿರುವ ಅಖಿಲ ಭಾರತ ಮಟ್ಟದ ಸೇವಾಸಂಸ್ಥೆಯಾಗಿದೆ. ಆಶ್ರಮವು ದೂರದ ವನವಾಸಿ ಗ್ರಾಮ/ಹಾಡಿಗಳಲ್ಲಿ ತನ್ನ ಸೇವಾ ಕಾರ್ಯಗಳ ಮೂಲಕ ಹಾಗೂ ಹಲವು ಹತ್ತು ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ವನವಾಸಿ ಬಂಧುಗಳು ಸ್ವಾವಲಂಬಿ ಮತ್ತು ಸ್ವಾಭಿಮಾನಿಗಳಾಗಲು ಶ್ರಮಿಸುತ್ತಿದೆ. ಸಂಸ್ಥೆಯ ಕೆಲಸವು ರಾಷ್ಟ್ರವ್ಯಾಪಿ ಮಟ್ಟದಲ್ಲಿ ನಡೆಯುತ್ತಿದೆ. ೨೦೦೨ರಲ್ಲಿ ವಾರಾಣಾಸಿಯಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಆಶ್ರಮದ ರಾಷ್ಟ್ರೀಯ ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ ಇದು ದೇಶದ ೩೧೨ ಜಿಲ್ಲೆಗಳಲ್ಲಿ ವನವಾಸಿಗಳ ಕ್ಷೇಮಾಭಿವೃದ್ಢಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ೧೨೦೩ ಪೂರ್ಣಾವಧಿ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ಈ ಮಹತ್ತರ ಕೆಲಸ ನಡೆಯುತ್ತಿದೆಯೆಂದೂ ಸಹ ಅವರು ತಿಳಿಸಿದರು. ಕೃಷಿ, ಆರೋಗ್ಯ, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ಷೇಮಾಭಿವೃದ್ಢಿಯೇ ಈ ಯೋಜನೆಗಳ ಉದ್ದೇಶವಾಗಿದೆ. ವನವಾಸಿಗಳು ವಾಸವಾಗಿರುವ ಬಹುತೇಕ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆ, ವಸತಿ ಸಹಿತ ಶಾಲೆ, ವಿದ್ಯಾರ್ಥಿ ನಿಲಯ, ಗ್ರಂಥಾಲಯ ಮತ್ತು ಆರೋಗ್ಯ ಕೇಂದ್ರಗಳನ್ನು ಆಶ್ರಮವು ನಡೆಸುತ್ತದೆ. ವಾರ್ಷಿಕವಾಗಿ ನಡೆಯುವ ಹಲವಾರು ಆಯೋಜನೆಗಳಲ್ಲಿ ವೈದ್ಯಕೀಯ ಶಿಬಿರ, ಪಾರಂಪರಿಕ ಕ್ರೀಡೆಗಳ ಸ್ಪರ್ದಾಕೂಟ, ಮತ್ತು ಬುಡಕಟ್ಟು ಜನರ ಹಬ್ಬಗಳ ಆಚರಣೆಗಳು ಮುಖ್ಯವಾದವುಗಳು.

ಭಾರತ ದೇಶದಲ್ಲಿ ಸುಮಾರು ಒಂಭತ್ತೂವರೆ ಕೋಟಿಗೂ ಮಿಕ್ಕ ಜನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದಾರೆ. ರಾಷ್ಟ್ರ-ರಾಜ್ಯದ ಕಾನೂನುಗಳಿಂದ ಬೃಹತ್ ಯೋಜನೆ, ಕಾರ್ಖಾನೆಗಳಿಂದ ಸರಿಯಾದ ಪುನರ್ವಸತಿ ಇಲ್ಲದೇ ತಮ್ಮ ಮೂಲ ನಿವಾಸದಿಂದ, ಅರಣ್ಯದಿಂದಲೂ ಹೊರದೂಡಲ್ಪಟ್ಟಿದ್ದಾರೆ. ಬಡತನ, ಅಜ್ಞಾನ, ಮತಾಂತರ ಪಿಡುಗಿನ ವಿರುದ್ಧ ನಿಂತು ಹಲವು ಸೇವಾ ಕಾರ್ಯಕ್ರಮ ಮತ್ತು ವೈವಿಧ್ಯ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವತ್ತ ನಿರಂತರವಾಗಿ ಮುನ್ನಡೆಯುತ್ತಿದೆ ವನವಾಸಿ ಕಲ್ಯಾಣ.೧೯೫೨ರಲ್ಲಿ `ವನವಾಸಿ ಕಲ್ಯಾಣ’ ಆಶ್ರಮ ಬಾಳಾಸಾಹೇಬ ದೇಶಪಾಂಡೆಯವರಿಂದ ಸ್ಥಾಪಿತವಾಯಿತು. ವನವಾಸಿ ಜನಾಂಗಗಳ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿರುವ ಈ ಸಂಸ್ಥೆ ಕರ್ನಾಟಕದಲ್ಲಿ ೧೯೮೮ರಲ್ಲಿ ಆರಂಭವಾಯಿತು. ಕರ್ನಾಟಕದಲ್ಲಿ ೫೦ ವಿವಿಧ ಬುಡಕಟ್ಟುಗಳಿಗೆ ಸೇರಿದ ಸುಮಾರು ೩೫ ಲಕ್ಷ ವನವಾಸಿಗಳು ವಾಸಮಾಡುತ್ತಿದ್ದಾರೆ. ಮೈಸೂರು, ಕೊಡಗು, ಕಾರವಾರ, ಧಾರವಾಡ, ಬೆಳಗಾವಿ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಗೊಂಡ, ಯರವ, ಸೋಲಿಗ, ಜೇನು, ಕುರುಬ, ಬೇಡ, ಹಾಲಕ್ಕಿ ಹೀಗೆ ಅನೇಕ ಜನಾಂಗಗಳ ಮಧ್ಯೆ ೧೩೫ ಸ್ಥಾನಗಳಲ್ಲಿ ೨೧೧ ಸೇವಾಪ್ರಕಲ್ಪಗಳ ಮೂಲಕ ಸೇವಾಚಟುವಟಿಕೆ ನಡೆಸುತ್ತಿದೆ

`ವನವಾಸಿ ಕಲ್ಯಾಣ’:

ವನವಾಸಿ ಜನಾಂಗಗಳ ಪಾಲಿಗೆ ಶಿಕ್ಷಣ ಕಗ್ಗಂಟಾಗಿಯೇ ಉಳಿದಿದೆ. ಈ ಸ್ಥಿತಿಯನ್ನು ಬದಲಾಯಿಸುವ ದೃಷ್ಟಿಯನ್ನಿಟ್ಟುಕೊಂಡು ಶಿಶುಮಂದಿರ, ರಾತ್ರಿಶಾಲೆ, ಬಾಲಸಂಸ್ಕಾರ ಕೇಂದ್ರ ಗಳೆಲ್ಲವನ್ನೂ ವನವಾಸಿ ಕಲ್ಯಾಣ ಮಾಡುತ್ತಿದೆ. ಬಾಲಿಕಾ ವಿದ್ಯಾರ್ಥಿ ನಿಲಯವನ್ನು ಒಳಗೊಂಡಂತೆ ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುತ್ತಿದೆ.
ಆರೋಗ್ಯದ ಕಡೆಗೂ ವನವಾಸಿ ಕಲ್ಯಾಣವು ಕಾಳಜಿಯನ್ನಿಟ್ಟುಕೊಂಡಿದ್ದು, ಆರೋಗ್ಯ ಮಿತ್ರ ಯೋಜನೆಯಡಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರ, ಅಗತ್ಯ ಔಷಧಿ ಮತ್ತು ಪೌಷ್ಠಿಕ ಆಹಾರಗಳ ಪೂರೈಕೆ ಮುಂತಾದವು ವನವಾಸಿ ಜನಗಳ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.ವನವಾಸಿಗಳ ಕ್ರೀಡಾಸಕ್ತಿ ಮತ್ತು ಪ್ರತಿಭೆಯನ್ನು ಕೂಡ ದೃಷ್ಟಿಯಿಂದ ವನವಾಸಿ ಕಲ್ಯಾಣವು ಒಲಿಂಪಿಕ್ಸ್ ಮಾದರಿಯಲ್ಲಿ ೪ ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದ ಕ್ರೀಡಾ ಮಹೋತ್ಸವವನ್ನು ಮಾಡುತ್ತಾ ಬರುತ್ತಿದೆ. ಆರ್ಥಿಕ ಸ್ವಾವಲಂಬನೆ ಯಾವುದೇ ಪ್ರಕಲ್ಪಗಳು ಪೂರ್ಣ ಪರಿಣಾಮ ಬೀರಲು ಅತ್ಯಗತ್ಯ. ವನವಾಸಿಗಳು ತಮ್ಮದೇ ಆದ ಉದ್ಯೋಗದಲ್ಲಿ ಅಥವಾ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲು ಸ್ವಸಹಾಯ ಸಂಘಗಳನ್ನು ಮಾಡಿಕೊಂಡು ಅದರ ಮೂಲಕ ಕೃಷಿವಿಕಾಸ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ. ಸಮುದಾಯ ಕಾರ್ಯ ಕ್ರಮಗಳನ್ನು ಕೂಡ ನಡೆಸುತ್ತಿದೆ. ಇದಲ್ಲದೆ, ವನವಾಸಿ ಕಲ್ಯಾಣವು ಸಾಮೂಹಿಕ ವಿವಾಹಗಳನ್ನು ಕೂಡ ಪ್ರೋತ್ಸಾಹಿಸುತ್ತಾ ಬಂದಿದೆ. ಆ ಮೂಲಕ ದಂಪತಿಗಳಾದ ಜೋಡಿಗಳಿಗೆ ಐದು ಸಾವಿರ ರೂ. ಧನಸಹಾಯ ನೀಡುತ್ತಿದೆ. ಹೀಗೆ ಹಂತಹಂತವಾಗಿ ಸಾಗುತ್ತಿರುವ ವನವಾಸಿ ಕಲ್ಯಾಣವು ನಾಡಿನ ಸಂಸ್ಕೃತಿ, ಪರಂಪರೆ ಯನ್ನು ಎತ್ತಿ ಹಿಡಿಯುವಲ್ಲಿ ಶ್ರಮಿಸುತ್ತಲೇ ಬರುತ್ತಿದ್ದು, ಆ ಮೂಲಕ ವನವಾಸಿ ಜನಾಂಗಗಳ ಪಾಲಿಗೆ ಆರದ ದೀಪವಾಗಿದೆ.ವನವಾಸಿಗಳಲ್ಲಿ ಶಿಕ್ಷಣ ಮಟ್ಟ ಅತ್ಯಂತ ಕಡಿಮೆ ಇದೆ. ಇದನ್ನು ಮನಗಂಡು ಆಶ್ರಮವು ಎರಡು ಪ್ರಕಾರಗಳಲ್ಲಿ ಕಾರ್ಯ ಕೈಗೊಂಡಿದೆ.

ಅನೌಪಚಾರಿಕ ಶಿಕ್ಷಣ
ಇದರಲ್ಲಿ ವನವಾಸಿ ಹಾಡಿಗಳಲ್ಲಿನ ಎಲ್ಲಾ ವಯಸ್ಸಿನ ಜನಗಳಿಗೂ ಮುಟ್ಟುವಂತೆ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ಶಿಶುಮಂದಿರ: ೩ ರಿಂದ ೬ ವರ್ಷ ವಯಸ್ಸಿನ ಮಕ್ಕಳಿಗೆ ಪ್ರತಿದಿನ ೩ ಗಂಟೆಗಳ ಕಾಲ ಶಿಶುಗೀತೆ, ನೃತ್ಯ, ಶ್ಲೋಕ, ಆಟ, ಬಾಯಿಪಾಟ, ಕಥೆ ಮುಂತಾದ ಪ್ರಾಥಮಿಕ ಸಂಗತಿಗಳನ್ನು ಕಲಿಸಲಾಗುತ್ತದೆ. ಇದು ನಗರದಲ್ಲಿ ನಡೆಯುವ ಪೂರ್ವ ಪ್ರಾಥಮಿಕ ಶಾಲೆಯ ಹೋಲಿಕೆಯಂತಿದ್ದು, ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ.
ಬಾಲ ಸಂಸ್ಕಾರ ಕೇಂದ್ರ: ೬ ರಿಂದ ೧೪ ವಯಸ್ಸಿನ ಮಕ್ಕಳಿಗಾಗಿ ಮೂರು ಗಂಟೆಗಳ ಕಾಲ ಆಟ, ಭಜನೆ, ದೇಶಭಕ್ತಿ ಗೀತೆ ಮತ್ತು ಕಥೆ ಹೇಳಿಕೊಡುವ ಕೇಂದ್ರ.
ಮನೆ ಪಾಠ: ಬಾಲ ಸಂಸ್ಕಾರ ಕೇಂದ್ರದ ಮುಂದುವರಿದ ಭಾಗವಾಗಿ ಶಾಲೆ ಬಿಟ್ಟ ಮಕ್ಕಳಿಗೆ ಮತ್ತು ಹಿರಿಯರಿಗೆ ಅಕ್ಷರಾಭ್ಯಾಸ ಮಾಡಿಸುವುದು. ಹಾಗೂ ಶಾಲೆಗೆ ಹೋಗುವ ಮಕ್ಕಳಿಗೆ ಪಾಠ ಪ್ರವಚನಗಳನ್ನು ನಡೆಸುವದು.ಈ ಎಲ್ಲಾ ಚಟುವಟಿಕೆಗಳನ್ನು ವನವಾಸಿ ಹಾಡಿಗಳಲ್ಲಿ ವಸತಿ ಮಾಡುವ ಆಶ್ರಮದ ಪೂರ್ಣಾವಧಿ ಮಹಿಳಾ ಸೇವಾವ್ರತಿಗಳು ನಡೆಸುತ್ತಾರೆ.

ವಿದ್ಯಾರ್ಥಿ ನಿಲಯ
ವನವಾಸಿ ಕಲ್ಯಾಣ ಆಶ್ರಮವು ಹಾಡಿಗಳ ಮಕ್ಕಳಿಗೋಸ್ಕರ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸುವದರ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಅನುಕೂಲತೆಗಳನ್ನು ಕಲ್ಪಿಸಿದೆ. ಕರ್ನಾಟಕದಲ್ಲಿ ಪ್ರಸ್ತುತ ಇಂತಹ ೫ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದೆ. ಹೆಣ್ಣುಮಕ್ಕಳಿಗಾಗಿ ದಾಂಡೇಲಿಯಲ್ಲಿ ಮತ್ತು ಗಂಡು ಮಕ್ಕಳಿಗಾಗಿ ಚಿಪಗೇರಿ, ಅಂಬಿಕಾನಗರ, ಕುಮಟಾ ಹಾಗೂ ಮಂಗಲಗಳಲ್ಲಿ ಇವೆ. ಈ ವಿದ್ಯಾರ್ಥಿ ನಿಲಯಗಳಲ್ಲಿ ಪಠ್ಯೇತರ ಚಟುವಟಿಕೆಗಳಾದ ಆಟಗಳು, ಯೋಗಾಸನ, ಶಾರೀರಿಕ ಶಿಕ್ಷಣಗಳಲ್ಲದೆ ಸಂಸ್ಕಾರಪೂರಕವಾದ ಭಜನೆ, ದೇಶಭಕ್ತಿಗೀತೆ, ವೀರಪುರುಷರ ಕಥೆಗಳು, ಶ್ಲೋಕಗಳು, ನೃತ್ಯ ಇತ್ಯಾದಿಗಳನ್ನು ಕಲಿಸಲಾಗುತ್ತದೆ. ಜ್ಞಾನಾರ್ಜನೆಗಾಗಿ ಪುಸ್ತಕ ಭಂಡಾರದ ವ್ಯವಸ್ತೆಯೂ ಇದೆ.
ದೂರದುಸ್ತರವಾದ ಸರಕಾರಿ ಶಾಲೆಗಳಿಲ್ಲದ ವನವಾಸಿ ಹಾಡಿಗಳಲ್ಲಿ ಆಶ್ರಮವು ಏಕಲ್ ವಿದ್ಯಾಲಯಗಳ ಜಾಲವನ್ನೇ ಹೊಂದಿದೆ. ಇವು ಒಬ್ಬ ಶಿಕ್ಷಕರಿಂದಲೇ ನಡೆಸಲ್ಪಡುವ ಶಾಲೆಗಳಾಗಿರುತ್ತವೆ.ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆ ಆರೆಸ್ಸೆಸ್ ಯಾವುದೋ ಕುಕೃತ್ಯವನ್ನೇ ನಡೆಸಿದೆ ಎಂದು ಬಿಂಬಿಸುವ ಮಾಧ್ಯಮಗಳ ನಡುವೆ ಸಂಘವು ತನ್ನ ಕೆಲಸವನ್ನು ಸದ್ದು ಗದ್ದಲಗಳಿಲ್ಲದೆ ನಡೆಸಿಕೊಂಡು ಹೋಗುತ್ತಿದೆ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

Chapter 19:

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

Chapter 20:

ಅಧ್ಯಾಯ 20: ಅವರೊಬ್ಬ ವಿಜ್ಞಾನಿ, ಬದುಕಿದ್ದು ಮಾತ್ರ ಸನ್ಯಾಸಿಯ ಹಾಗೆ! ಇದು ರಜ್ಜು ಭೈಯ್ಯ ಎಂದೇ ಪ್ರೀತಿಯಿಂದ ಕರೆಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಜೀವನಗಾಥೆ!

-Dr.Sindhu Prashanth

Tags

Related Articles

FOR DAILY ALERTS
Close