ಪ್ರಚಲಿತ

ಅಧ್ಯಾಯ 24: ವಿದ್ಯಾ ಭಾರತಿ ಹಾಗೂ ಏಕಲ್ ವಿದ್ಯಾಲಯಗಳು! ಆರೆಸ್ಸೆಸ್ ಹೇಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದಿತು, ಇಲ್ಲಿದೆ ಮಾಹಿತಿ!

ಅಧ್ಯಾಯ 24: ಸಾ ವಿದ್ಯಾ ವಿಮುಚ್ಯತೆ|

ತಮ್ಮನ್ನು ತಾವು ಪ್ರಗತಿಪರರು ಎಂದು ಹೇಳಿಕೊಳ್ಳುವವರ ಮಧ್ಯೆ ಆರೆಸ್ಸೆಸ್ ನಿಜವಾದ ಲಿಬರಲ್ ಗಳನ್ನು ಸಮಾಜಕ್ಕೆ ಕೊಡುತ್ತಿದೆ.ನಮ್ಮ ಸಂಸ್ಕೃತಿ ವಿದ್ಯೆಯನ್ನು ಸಂಪಾದಿಸಿದವನೇ ನಿಜವಾದ ಅರ್ಥದಲ್ಲಿ ಲಿಬರಲ್ ಅಂದರೆ ಅಜ್ಞಾನದಿಂದ ವಿಮೋಚನೆ ಹೊಂದಲು ವಿದ್ಯೆಗಿಂತ ಬೇರೊಂದು ಸಾಧನವಿಲ್ಲ ಎಂದು ಸಾವಿರಾರು ವರ್ಷಗಳ ಮೊದಲೇ ಹೇಳಿದೆ.ಹಾಗಾಗಿಯೇ ನಾವು ಎಂದಿಗೂ ಆರೆಸ್ಸೆಸ್ ನ ಶಿಕ್ಷಣ ಪಡೆದ ವಿದ್ಯಾವಂತರು JNU ವಿನ ವಿದ್ಯಾರ್ಥಿಗಳಂತೆ ಅನುಚಿತವಾಗಿ ವರ್ತಿಸುವುದನ್ನು ಎಂದಿಗೂ ಕಾಣಲು ಸಾಧ್ಯವಿಲ್ಲ. ಅವರೆಲ್ಲರೂ ವಿದ್ಯಾ ದದಾತಿ ವಿನಯಂ ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು. ಹಾಗೂ ಆಚಾರ್ಯ ದೇವೋಭವ ಎಂದು ಗುರುಗಳನ್ನು ಆರಾಧಿಸುವರು.ವಿದ್ಯಾ ಭಾರತಿ ಎಂಬುದು ಆರೆಸ್ಸೆಸ್ ನ ಒಂದು ಅಂಗ ಸಂಸ್ಥೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯೆಯಿಂದ ವಂಚಿತರಾದ ಎಲ್ಲರಿಗೂ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಶುರುವಾದ ಈ ಸಂಸ್ಥೆ ಸಾಧಿಸಿದ್ದು ಮಾತ್ರ ಮಹತ್ತರವಾಗಿ ಗುರಿಯನ್ನು.ವಿದ್ಯಾ ಭಾರತಿ ಎಂದೇ ಪ್ರಖ್ಯಾತಿ ಪಡೆದಿರುವ ವಿದ್ಯಾ ಭಾರತಿ ಶಿಕ್ಷಣ ಸಂಸ್ಥಾನ, ಭಾರತದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಲಿನಲ್ಲಿ ಅತೀ ಹೆಚ್ಚು ಶಾಲೆಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸುಮಾಅರು ೧೨,೦೦೦ ಶಾಲೆಗಳಲ್ಲಿ, ೩೨,೦೦,೦೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಪ್ರಧಾನ ಕಚೇರಿ ಲಕ್ನೋದಲ್ಲಿದ್ದು, ದೆಹಲಿ ಹಾಗು ಕುರುಕ್ಷೇತ್ರಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.

ವಿದ್ಯಾಭಾರತಿಯ ಸ್ಥಾಪನೆ ಹೇಗಾಯಿತು?

೧೯೪೬ ರಲ್ಲಿ ಗುರೂಜೀ ಗೋಳ್ವಾಲ್ಕರ್ ಮಾರ್ಗದರ್ಶನದಲ್ಲಿ, ಭಾರತದ ಮೊತ್ತಮೊದಲ ’ಗೀತಾ’ ಶಾಲೆ ಕುರುಕ್ಷೇತ್ರದಲ್ಲಿ ಆರಂಭವಾಯಿತು. ಮೊದಲ ಸರಸ್ವತೀ ಶಿಶು ಮಂದಿರ ಗೋರಖ್ಪುರದಲ್ಲಿ ೧೯೫೨ ರಲ್ಲಿ ನಾನಾಜೀ ದೇಶ್ ಮುಖ್ ಅವರ ಸಾರಥ್ಯದಲ್ಲಿ ಪ್ರಾರಂಭವಾಯಿತು.
ಸರಸ್ವತಿ ಶಿಶು ಮಂದಿರದ ಮಾದರಿಯಲ್ಲೇ ದೇಶದಾದ್ಯಂತ ಶಾಲೆಗಳು ಪ್ರಾರಂಭವಾದವು. ಈ ಹೊತ್ತಿನಲ್ಲಿ ಇವೆಲ್ಲಾ ಶಾಲೆಗಳ ಕಾರ್ಯಚಟುವಟಿಕೆಗಳನ್ನು ನಿರ್ದಿಷ್ಟವಾದ ರೂಪುರೇಷೆಗಳ ಅಡಿಯಲ್ಲಿ ತಂದು ಅವುಗಳ ನಿರ್ವಹಣೆಯನ್ನು ಕೈಗೊಳ್ಳಬೇಕಾದ ಕಾರಣ, ಶಿಶು ಶಿಕ್ಷಾ ಪ್ರಭಂದಕ ಸಮಿತಿ ಯನ್ನು ಸ್ಥಾಪಿಸಲಾಯಿತು. ಈ ಸಮಿತಿಯು ರಾಜ್ಯ ಮಟ್ಟದಲ್ಲಿ ಶಿಶು ಮಂದಿರಗಳ ನಿರ್ವಹಣಾ ಕಾರ್ಯವನ್ನು ನೋಡಿಕೊಳ್ಳುತ್ತವೆ. ಈ ಸಮಿತಿಯು ದೆಹಲಿ, ಬಿಹಾರ, ಮಧ್ಯ ಪ್ರದೇಶ ಹಾಗೂ ಆಂಧ್ರ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ.
೧೯೭೭-೭೮ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾ ಭಾರತಿಯನ್ನು ಸ್ಥಾಪಿಸಲಾಯಿತು. ವಿದ್ಯಾ ಭಾರತಿಯು ಪ್ರತಿಯೊಂದು ರಾಜ್ಯಗಳ ಸಮಿತಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದು, ಪ್ರಧಾನ ಕಚೇರಿಯು ದೆಹಲಿಯಲ್ಲಿದೆ.

ಸಂಘಟನೆ:

೧೯೯೦ ರ ಸುಮಾರಿಗೆ, ವಿದ್ಯಾ ಭಾರತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಗಳ ಸಂಖ್ಯೆ ೫೦೦೦ ಕ್ಕೆ ಏರಿತ್ತು. ೨೦೦೩ ರ ಹೊತ್ತಿಗೆ ಸುಮಾರು ೧೪೦೦೦ ಶಾಲೆಗಳು ಹಾಗೂ ಸುಮಾರು ೧,೦೭,೦೦೦ ವಿದ್ಯಾರ್ಥಿಗಳ ಬೃಹತ್ ಸಂಸ್ಥೆಯಾಗಿ ವಿದ್ಯಾ ಭರತಿ ಬೆಳೆಯಿತು. ಗ್ರಾಮೀಣ ಜನರಿಗೆ ವಿದ್ಯೆ ಇನ್ನೂ ಮರೀಚಿಕೆಯಗಿದ್ದ ಸಮಯದಲ್ಲಿ ವಿದ್ಯಾ ಭಾರತಿ ತನ್ನ ಕಾರ್ಯ ಕ್ಷೇತ್ರವನ್ನು ಹಳ್ಳಿ ಹಳ್ಳಿಗೂ ವಿಸ್ತರಿಸುವ ಮೂಲಕ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ತಲುಪದಿದ್ದಲ್ಲಿ ವಿದ್ಯೆಯನ್ನು ಕೊಂಡೊಯ್ಯಿತು.ಮಾರ್ಚ್ ೨೦೧೮ ರ ಸಮಯಕ್ಕೆ ವಿದ್ಯಾ ಭಾರತಿ ೨೪,೩೯೬ ಶಾಲೆಗಳು, ೪೫,೦೦,೦೦೦ ವಿದ್ಯಾರ್ಥಿಗಳು, ೯೩೦೦೦ ಶಿಕ್ಷಕರು, ೧೫ ಶಿಕ್ಷಕ ತರಬೇತಿ ಕೇಂದ್ರಗಳು, ೧೨ ಪದವಿ ಕಾಲೇಜುಗಳು ಮತ್ತು ೭ ತರಬೇತಿ ಕಾಲೇಜುಗಳನ್ನು ಹೊಂದಿದೆ.ಇದರ ಒಟ್ಟಿಗೆ, ಶಿಶು ವಾಟಿಕ, ಶಿಶು ಮಂದಿರ, ವಿದ್ಯಾ ಮಂದಿರ, ಸ್ವರಸ್ವತಿ ವಿದ್ಯಾಲಯ ಎಂಬ ಕೇಂದ್ರಗಳಲ್ಲಿ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ ಕಾರ್ಯವನ್ನು ಕೂಡ ವಿದ್ಯಾ ಭಾರತಿ ಮಾಡುತ್ತಿದೆ. ೨೫೦ ಸಂಧ್ಯಾ ಕಾಲೇಜುಗಳು ಹಾಗೂ ೨೫ ಉಚ್ಚ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾ ಭಾರತಿ ನಡೆಸುತ್ತಿದೆ

ಏಕಲ್ ವಿದ್ಯಾಲಯ:

ಏಕ ಶಿಕ್ಷಕ ಶಾಲೆಗಳಾದ ಏಕಲ್ ವಿದ್ಯಾಲಯಗಳು ಆರೆಸ್ಸೆಸ್ ನ ಪ್ರಭಾವ ಕಡಿಮೆ ಇರುವ ಪೂರ್ವೊತ್ತರ ರಾಜ್ಯಗಳಲ್ಲಿ , ಕೇರಳ, ತಮಿಳು ನಾಡಿನಲ್ಲಿ ಕೂಡ ತನ್ನ ಶಾಲೆಗಳನ್ನು ತೆರೆದಿದೆ. ವಿಶೇಷವಾಗಿ ಈ ಶಾಲೆಗಳು ಅವಕಾಶ ವಂಚಿತ ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತನ್ನು ನೀಡುತ್ತಾ ಬಂದಿದೆ.ಏಕಲ್ ವಿದ್ಯಾಲಯಗಳ ಅಡಿಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಪ್ರಾದೇಶಿಕ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನೀಡುತ್ತಿರುವ ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘವಾಗಿದೆ.ಏಕಲ್ ವಿದ್ಯಾಲಯಗಳು ತಮ್ಮ ರೆಕ್ಕೆಯನ್ನು ಚಾಚುತ್ತಾ ೧,೦೦,೦೦೦ ಹಳ್ಳಿಗಳಲ್ಲಿ ಕಲಿ-ನಲಿ ಮಾದರಿಯಲ್ಲಿ ಏಕ ಶಿಕ್ಷಕ ಶಾಲೆಗಳನ್ನು ತೆರೆದಿದೆ.

೩೦ ಎಪ್ರಿಲ್ ೨೦೧೯, ಸುಮಾರು ೮೮,೦೯೭ ಏಕ ಶಿಕ್ಷಕ ಶಾಲೆಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ಶೈಕ್ಷಣಿಕ ಆಂದೋಲನವಾಗಿ ಪ್ರಾರಂಭವಾದ ಏಕಲ್ ವಿದ್ಯಾಲಯಗಳು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಕಾಳಜಿಯೊಂದಿಗೆ. ಏಕಲ್ ವಿದ್ಯಾಲಯಗಳು ಅನಕ್ಷರತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಉದ್ದೇಶದಿಂದ ತನ್ನ ಸೇವೆಯನ್ನು ನೀಡುತ್ತಿದೆ. ಸಮಾನತೆ ಹಾಗೂ ಸರ್ವರನ್ನೂ ಒಳಗೊಂಡ ಏಕಲ್ ವಿದ್ಯಾಲಯದ ಸಿದ್ಧಾಂತ ಹಾಗೂ ಕಾರ್ಯಕ್ಷಮತೆ ಮೆಚ್ಚುಗೆಗೆ ಅರ್ಹವಾದದ್ದೇ ಆಗಿದೆ.ಸುಶಿಕ್ಷಿತರು ಎಂದು ಹೇಳಿಕೊಂಡ ಮಾತ್ರಕ್ಕೆ ಯಾರೂ ನಿಜವಾದ ಬುದ್ಧಿಜೀವಿಗಳಾಗಲು ಸಾಧ್ಯವಿಲ್ಲ. ಬುದ್ಧಿ ಮತ್ತೆಯೊಂದಿಗೆ, ಆಚಾರ, ಸಂಸ್ಕಾರ, ವಿಚಾರ ಎಲ್ಲವೂ ವ್ಯಕ್ತಿತ್ವ ನಿರ್ಮಾಣದ ಹಾದಿಯಲ್ಲಿ ಸಹಕರಿಸಿದಾಗ ಮಾತ್ರ ವ್ಯಕ್ತಿಯೊಬ್ಬ ಪ್ರಗತಿಶೀಲ ಅಥವಾ ಬುದ್ಧಿ ಜೀವಿ ಆಗಬಲ್ಲ.ಇದನ್ನು ಅರಿತೇ ಸಂಘವು ಕೇವಲ ಪದವೀಧರರನ್ನು ರೂಪಿಸದೇ, ಉತ್ತಮ ವ್ಯಕ್ತಿಗಳನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮಾಡುತ್ತಿದೆ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

Chapter 19:

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

Chapter 20:

ಅಧ್ಯಾಯ 20: ಅವರೊಬ್ಬ ವಿಜ್ಞಾನಿ, ಬದುಕಿದ್ದು ಮಾತ್ರ ಸನ್ಯಾಸಿಯ ಹಾಗೆ! ಇದು ರಜ್ಜು ಭೈಯ್ಯ ಎಂದೇ ಪ್ರೀತಿಯಿಂದ ಕರೆಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಜೀವನಗಾಥೆ!

Chapter 21:

ಅಧ್ಯಾಯ 21: ಸಂಘದ ನೇತಾರರು ಒಂದು ಮಾತನಾಡಲಿ ಅದನ್ನು ವಿವಾದಕ್ಕೆ ಎಳೆಯೋಣ ಎಂಬ ಉದ್ದೇಶವನ್ನು ಇಟ್ಟುಕೊಂಡ ಪತ್ರಿಕೆಗಳು ಆರೆಸ್ಸೆಸ್ ನ ಮಹತ್ತರವಾದ ಸಾಧನೆಗಳ ಬಗ್ಗೆ ಮಾತನಾಡುವುದೇ ಇಲ್ಲ!

Chapter 22:

ಅಧ್ಯಾಯ 22: ಆರೆಸ್ಸೆಸ್ ಪ್ರಚಾರಕರೆಂದರೆ ಭೈರಾಗಿಗಳು, ಸಂತರಂತೆ ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟು ತಮ್ಮದೆಲ್ಲವನ್ನು ದೇಶ ಕಟ್ಟುವ ಕಾಯಕಕ್ಕೆ ಸಮರ್ಪಿಸಿ ಬಿಡುತ್ತಾರೆ! ಮೈ ಚ ಜಯದೇವ್ ಕೂಡ ಹಾಗೇ ಬದುಕಿದವರು!

Chapter 23:

ಅಧ್ಯಾಯ 23: ದೇಶಪ್ರೇಮಿಗಳಿಗೆ ಭಾರತ ದರ್ಶನ ಮಾಡಿಸಿದ ಮಹಾನುಭಾವ! ಸರಳತೆ, ಸಜ್ಜನಿಕೆ, ಅದ್ಭುತ ವಾಕ್ಪಟುತ್ವ, ಅವರೇ ಶ್ರೀ ವಿದ್ಯಾನಂದ ಶೆಣೈ!

-Dr.Sindhu Prashanth

Tags

Related Articles

FOR DAILY ALERTS
Close