ಪ್ರಚಲಿತ

ಅಧ್ಯಾಯ 23: ದೇಶಪ್ರೇಮಿಗಳಿಗೆ ಭಾರತ ದರ್ಶನ ಮಾಡಿಸಿದ ಮಹಾನುಭಾವ! ಸರಳತೆ, ಸಜ್ಜನಿಕೆ, ಅದ್ಭುತ ವಾಕ್ಪಟುತ್ವ, ಅವರೇ ಶ್ರೀ ವಿದ್ಯಾನಂದ ಶೆಣೈ!

ಅಧ್ಯಾಯ 23: ವಿದ್ಯಾನಂದರಿಗೆ ವಿದ್ಯಾನಂದರೇ ಸಾಟಿ

ಒಬ್ಬ ವ್ಯಕ್ತಿ ಒಂದೆರಡು ಪೀಳಿಗೆಯ ಮೇಲೆ ಯಾವ ರೀತಿ ಪ್ರಭಾವ ಬೀರಬಲ್ಲರು ಎಂಬುದಕ್ಕೆ ವಿದ್ಯಾನಂದ ಶೆಣೈ ಸಾಕ್ಷಿ. ಅವರ ವಾಗ್ಝರಿಯಿಂದ ಭವ್ಯ ಭಾರತದ ಇತಿಹಾಸವನ್ನು ಕೇಳುತ್ತಿದ್ರೆ ಎಂತಹ ವ್ಯಕ್ತಿಯಲ್ಲಿಯೂ ಕೂಡ ರೋಮಾಂಚನವುಂಟಾಗುವದು, ಒಂದು ಕ್ಷಣವಾದರೂ ಇಂತಹ ದೇಶದಲ್ಲಿ ಹುಟ್ಟಿದ ನಾವು ಧನ್ಯ ಎಂಬ ಭಾವನೆ ಬರುವದು.೭೦ ರ ದಶಕದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ನಗರಸಭೆಯ ಸದಸ್ಯರಾಗಿದ್ದ ಅವರು ಬಯಸಿದ್ದರೆ ರಾಜಕೀಯದಲ್ಲಿಯೆ ಮುಂದುವರಿದು ಏನೇನೋ ಆಗಬಹುದಿತ್ತು, ಬಹುಶಃ ಗೂಟದ ಕಾರಿನಲ್ಲಿಯೂ ತಿರುಗಬಹುದಿತ್ತು. ಆದರೆ ಅದೆಲ್ಲವನ್ನು ತ್ಯಾಗ ಮಾಡಿ ಸಂಘಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟರು. ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಹಗಲಿರುಳು ಶ್ರಮಿಸಿದರು.”ಭಾರತ ದರ್ಶನ” ಎಂಬ ಮಾಲಿಕೆ ಯಾರೇ ಕೇಳಿರಲಿ ಅವರೆಲ್ಲರಿಗೂ ವಿದ್ಯಾನ೦ದ ಶೆಣೈ ಅವರನ್ನು ಒಮ್ಮೆಯಾದರೂ ನೋಡಬೇಕೆನಿಸಿರುತ್ತದೆ.ಸಂಘದ ಸ್ವಯಂಸೇವಕರು ಅಥವಾ ಹಿಂದೂಗಳನ್ನು ಬಿಡಿ, ಸಂಘದ ಸಿದ್ಧಾಂತಗಳನ್ನು ಬಹುವಾಗಿ ವಿರೋಧಿಸುವ ಕಾಂಗ್ರೆಸ್ಸಿಗರಿಗೆ ಕೂಡ ಅವರು ಅಚ್ಚುಮೆಚ್ಚು.

ನಾವು ಆರೆಸ್ಸೆಸ್ ನ ಅಷ್ಟು ಒಪ್ಪಲ್ಲ. ಆದರೆ ನಿಮ್ಮ ವಿದ್ಯಾನಂದ ಶೆಣೈರವರ ಭಾರತ ದರ್ಶನ ಮಾತ್ರ ಇಷ್ಟ ಆಗುತ್ತೆ. ಕಷ್ಟ ಪಟ್ರು ಇಷ್ಟ ಪಡದೆ ಇರಲು ಆಗೋದಿಲ್ಲ. ಹಾಗಿದೆ ಅವರ ಮಾತು. ಅದ್ಭುತ ಮಾತುಗಾರ! ಎನ್ನುವವರು ಬಹಳಷ್ಟು ಮಂದಿ.ಭಾರತದಲ್ಲಿ ಜನಿಸಿದ ನಮಗೆ ನಮ್ಮ ದೇಶ ಎಷ್ಟು ಶ್ರೇಷ್ಠವಾದದ್ದು ಎಂದು ತಮ್ಮ ‘ಭಾರತ ದರ್ಶನ’ ಪ್ರವಚನಗಳ ಮುಖೇನ ದರ್ಶನ ಮಾಡಿಸಿದ ಮಹನೀಯರು ಬಿ. ವಿ. ವಿದ್ಯಾನಂದ ಶೆಣೈ.ಪೂಜ್ಯ ವಿದ್ಯಾನಂದ ಶೆಣೈ ಅವರ ಪ್ರವಚನ ಕೇಳುವುದೆಂದರೆ ಕರ್ಣಾನಂದಕರ ಸಂಗೀತವನ್ನು ಅಂತರಾಳದಿಂದ ಅನುಭಾವಿಸುವಂತಹ ಒಂದು ಅಪೂರ್ವ ಸಂಯೋಗ. ಅವರ ವಿದ್ವತ್ತು, ಸ್ಪಷ್ಟತೆ, ಇಂಪಾದ ಧ್ವನಿ, ಅಪೂರ್ವ ಸಾಹಿತ್ಯಕ ಮೌಲ್ಯ ಮತ್ತು ಅವೆಲ್ಲವನ್ನೂ ಮೀರಿಸುವಂತಹ ಅದಮ್ಯ ದೇಶಭಕ್ತಿ, ಕೇಳುಗನೊಂದಿಗೆ ಅಪೂರ್ವ ಅನುಭೂತಿ ಇವೆಲ್ಲಾ ಇನ್ನಿಲ್ಲದಂತೆ ನಮ್ಮ ಹೃನ್ಮನಗಳನ್ನು ಸೆಳೆಯುತ್ತವೆ.ವಿದ್ಯಾನ೦ದ ಶೆಣೈ ಒಬ್ಬ ಅದ್ಭುತ ಮಾತುಗಾರ ಅಷ್ಟೇ ಅಲ್ಲ. ಅವರೊಬ್ಬ ಅಸಾಮಾನ್ಯ ದೇಶಭಕ್ತ, ಅಷ್ಟೇ ಸರಳ ವ್ಯಕ್ತಿ. ಕ೦ಚಿನ ಕ೦ಠದ, ಸರಾಗವಾಗಿ ಹಲವು ಭಾಷೆಗಳಲ್ಲಿ ಅಧಿಕಾರಯುತವಾಗಿ ಮಾತನಾಡುವ, ನಮ್ಮ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಪ್ರಚ೦ಡ ಭಾಷಣಕಾರ ಆಗಿದ್ದರು, ಅತ್ಯುತ್ತಮಸ೦ಘಟಕರಾಗಿದ್ದರು. ಚಿಕ್ಕ೦ದಿನಿ೦ದಲೇ ಸ೦ಘದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡಿದ್ದ ಇವರು ರಾಷ್ಟ್ರಕಟ್ಟುವ ಕಾರ್ಯಕ್ಕೆ ಅಡಚಣೆಯಾಗುತ್ತದೆ ಎ೦ದು ಸ೦ಸಾರವನ್ನು ಕಟ್ಟಿಕೊಳ್ಳಲೇ ಇಲ್ಲ.ಹೊರ ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರ೦ತೆ ಕಾಣಿಸುತ್ತಿದ್ದ, ಸದಾ ಬಿಳಿ ಪೈಜಾಮ ಜುಬ್ಬಾ/ಅ೦ಗಿ ಧರಿಸುತ್ತಿದ್ದ ಆ ಧೀಮ೦ತ ವ್ಯಕ್ತಿಯನ್ನು ಹೊಸಬರಾರೂ ಸುಲಭವಾಗಿ ಗುರುತಿಸಲು ಆಗುತ್ತಿರಲಿಲ್ಲ. ಆದರೆ ಅವರು ಭಾಷಣಕ್ಕೆ ಎದ್ದು ನಿ೦ತರೆ೦ದರೆ ಸಭೆಯಲ್ಲಿ ಮಾತು ಬರದ, ಅಳುತ್ತಿರುವ ಪುಟಾಣಿ ಮಕ್ಕಳೂ ಅಳುನಿಲ್ಲಿಸಿ ಅವರ ಮಾತನ್ನು ಆಲಿಸುತ್ತಿದ್ದವು ಅಂತಹ ಶಕ್ತಿ ಅವರ ಧ್ವನಿಗೆ. ಹಲವು ಸಭೆಗಳಲ್ಲಿ ಕುಳಿತಿದ್ದ ಜನರು ಅವರ ಭಾಷಣ ಮುಗಿಯುವವರೆಗೂ ಅಕ್ಕಪಕ್ಕದಲ್ಲಿ ಯಾರೂ ಮಾತನಾಡಿದ್ದು, ಎದ್ದು ಹೋಗಿದ್ದು ನೋಡಿಲ್ಲ.

ಸಾಷ್ಟಾಂಗ ನಮಸ್ಕಾರ ಮಾಡಿದ ರಾಜ್ :

ನ್ನಡದ ವರನಟ ದಿ.ಡಾ.ರಾಜ್ ಕುಮಾರರನ್ನು ವೀರಪ್ಪನ್ ಕಾಡಿಗೆ ಕರೆದುಕೊಂಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ “ಕೇಳಿ” ತರಿಸಿಕೊ೦ಡರು. ಅದರಲ್ಲಿ ವಿದ್ಯಾನಂದರ “ಭಾರತ ದರ್ಶನ” ಕ್ಯಾಸೆಟ್ಟೂ ಒಂದು! ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ. ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ ಸಂಘಪರಿವಾರದ ತಂಡ ಭೇಟಿಕೊಟ್ಟಿತ್ತು. ಮಾತು ಶುರು ಮಾಡಿದ ರಾಜ್, “ನನಗೆ “ಭಾರತ ದರ್ಶನ” ಕ್ಯಾಸೆಟ್ ನಲ್ಲಿ ಮಾತನಾಡಿದವರನ್ನು ನೋಡಬೇಕು, ಒಮ್ಮೆ ಕರೆದುಕೊಂದು ಬನ್ನಿ” ಅಂದರಂತೆ. ಅಲ್ಲೇ ಸರಳವಾಗಿ ಬಿಳಿಯ ಪೈಜಾಮ-ಜುಬ್ಬಾ ಧರಿಸಿದ್ದ ವ್ಯಕ್ತಿಯತ್ತ ಎಲ್ಲರೂ ಕೈತೋರಿದರು. ವಿದ್ಯಾನಂದರು ಸರಳ ನಗೆ ಬೀರುತ್ತಾ ಕೈಮುಗಿದರು. ತಕ್ಷಣ ರಾಜಣ್ಣ ಮಾಡಿದ್ದೇನು ಗೊತ್ತೆ? ಎದ್ದು ಹೋಗಿ ವಿದ್ಯಾನಂದರಿಗೆ ಉದ್ದಂಡ ನಮಸ್ಕಾರ ಹಾಕಿದರಂತೆ! “ನೀವು ಬಹಳ ದೊಡ್ಡವರು, ಎಂಥಾ ಕಂಠವಪ್ಪಾ, ಎಷ್ಟು ತಿಳಿದುಕೊಂಡಿದ್ದೀರಿ, ನೀವು ನಮ್ಮ ಮನೆಗೆ ಬಂದಿರುವುದು ನಮ್ಮ ಭಾಗ್ಯ, ನಿಮ್ಮನ್ನು ನೋಡಿ ಜನ್ಮ ಸಾರ್ಥಕ” ಅಂದರಂತೆ.ಇಂತಾ ಅದ್ಭುತ ವ್ಯಕ್ತಿತ್ವದವರನ್ನು ಹತ್ತಿರದಿ೦ದ ಭೇಟಿಮಾಡಲು ಸಿಕ್ಕರೆ ನಿಜಕ್ಕೂ ಅದು ಅದೃಷ್ಟವೆ ಸರಿ. ಹನ್ನೆರೆಡು ವರ್ಷಗಳ ಹಿಂದಿನ ಮಾತು. ಬೆಂಗಳೂರು ಎನ್ನಾರ್ ಕಾಲೊನಿಯ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಅವರ ಭಾಷಣದ ಏರ್ಪಾಡಾಗಿತ್ತು. ಸಭಾಭವನದ ಹಿಂದೆ ವಿದ್ಯಾರ್ಥಿಗಳಿಗಾಗಿ ಒಂದು ಹಾಸ್ಟೆಲ್ ಇತ್ತು. ಶಿಸ್ತಿನ ಸಿಪಾಯಿಯಾಗಿದ್ದ ವಿದ್ಯಾನ೦ದ ಶೆಣೈಯವರು ಸಮಯಕ್ಕೆ ಮುಕ್ಕಾಲು ಗಂಟೆ ಮೊದಲೇ ಬಂದಿದ್ದರು. ಸಂಸ್ಥೆಯ ಕಾರ್ಯದರ್ಶಿ (ದಿ) ಸುಬ್ಬರಾಯರು ಲೇಖಕರಾದ ಪ್ರಮೋದ್ ಮತೂರ್ ರನ್ನು ಕರೆದು “ಒಮ್ಮೆ ಸಂಸ್ಥೆಯಲ್ಲಿ ಸುತ್ತಾಡಿಸಿ ಕೊಂಡು ಬಾ” ಎಂದು ಅಪ್ಪಣೆ ಕೊಡಿಸಿದರು. ನಾನು ಅವರಿಗೆ ನಮಸ್ಕರಿಸಿ ಒಂದೊಂದೇ ಜಾಗಗಳನ್ನು ತೋರಿಸುತ್ತಾ ಇಬ್ಬರು ಹಾಸ್ಟೆಲಿನ ಹತ್ತಿರ ಬಂದರು.

ಭಾನುವಾರವಾದ್ದರಿಂದ ಎಲ್ಲ ವಿದ್ಯಾರ್ಥಿಗಳೂ ಬಾಗಿಲು ತೆಗೆದಿದ್ದರು. ಅವರು ಹೊರಗಿನಿಂದಲೆ ಒಂದೊಂದೇ ಕೋಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾ, ಹುಡುಗರು ಒಳಗೆ ಬನ್ನಿರೆಂದೆರೂ ಯಾರ ಕೋಣೆಗೂ ಹೋಗಲಿಲ್ಲ. ಮುಂದೆ ಕೊನೆಯಲ್ಲಿ ಅರ್ಧ ಬಾಗಿಲು ತೆರೆದ ಕೋಣೆ ಯೊಂದಿತ್ತು, ಹೊರಗಡೆ ಗೋಡೆ, ಕಿಟಕಿಯನ್ನು ಪರೀಕ್ಷಿಸಿ ನೋಡಿದಮೇಲೆ, ಒಳಗೆ ನೋಡಬಹುದೇ ಎನ್ನುತ್ತಾ ಬಾಗಿಲು ಪೂರ್ಣ ತೆಗೆದರು, ಒಳಗೆ ಹೋಗಿಬಿಟ್ಟರು, ಅದು ಪ್ರಮೋದರ ಕೋಣೆಯಾಗಿತ್ತು! ಎದುರಿಗೆ ಅವರಿಗೆ ಕಾಣಿಸಿದ್ದು “ಓಂ” ಎಂದು ಸಂಸ್ಕೃತದಲ್ಲಿ ಬರೆದಿದ್ದ ದೊಡ್ಡ ವಾಲ್ ಪೋಸ್ಟರ್, ದೇವತಾಮೂರ್ತಿ, ಫೋಟೋಗಳು, ಪುಸ್ತಕಗಳು, ಗ್ಯಾಸ್ ಸ್ಟೊವ್, ಅಡುಗೆ ಸಾಮಾನು, ಪಾತ್ರೆಗಳು ಎಲ್ಲವನ್ನೂ ಒಪ್ಪವಾಗಿ ಜೋಡಿಸಿಟ್ಟಿದ್ದು, ಕೋಣೆಯಲ್ಲಿ ಕಸ, ಧೂಳು, ಜೇಡರಬಲೆ ಇಲ್ಲದಿರುವುದು ಬಹುಶಃ ಹಿಡಿಸಿತು. “ಕೋಣೆಯನ್ನು ಚೆನ್ನಾಗಿ ಇಟ್ಟುಕೊಂಡಿದ್ದೀಯ” ಅಂದರಂತೆ. ಮಂಚದ ಮೇಲೆ ಕುಳಿತು ಜೊತೆಯಲ್ಲೇ ಬ೦ದಿದ್ದ ವಿದ್ಯಾರ್ಥಿಗಳನ್ನೂ ಉದ್ದೇಶಿಸಿ ಶಿಸ್ತು, ನಡತೆ, ಶ್ರದ್ಧೆಯಬಗ್ಗೆ ನಾಲ್ಕುಮಾತು ಹೇಳಿದರು. ಅರ್ಧ ಗಂಟೆ ಕುಳಿತಿದ್ದು ನಂತರ ಸಭೆಗೆ ಕರೆಬಂದಿದ್ದರಿಂದ ಹೊರಟರು. ಅವತ್ತಿನ ಭಾಷಣಕ್ಕೆ ಸುಮಾರು 800 ಜನ ಸೇರಿದ್ದರು.

ಯಾವ ಕ್ಯಾಸೆಟ್ಟು? :

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಮ್ಮ ರಾಷ್ಟ್ರದ ಬಗ್ಗೆ, ಅದರ ಇತಿಹಾಸ, ಅದರ ಧರ್ಮ, ಭಾಷೆ, ನದಿಗಳು, ದೇವಾಲಯಗಳು, ಪುಣ್ಯ/ತೀರ್ಥಕ್ಷೇತ್ರಗಳು, ಮಹಾನ್ ವ್ಯಕ್ತಿಗಳು, ಆಚಾರ್ಯರು, ರಾಜವಂಶ…..ಒಟ್ಟಿನಲ್ಲಿ ನಮ್ಮ ಭವ್ಯಭಾರತದ ಬಗ್ಗೆ ಸಂಪೂರ್ಣ ಸಂಕ್ಷಿಪ್ತ ವಿವರಣೆ ನೀಡುತ್ತಾರೆ, ನಿಮಗೆಲ್ಲೂ ಬೇಸರವೆನಿಸಲಾರದು, ಕಾರಣ ಇದೊಂದು ಒಣಭಾಷಣ ಮಾಲೆ ಅಲ್ಲವೇ ಅಲ್ಲ. ಎಂಥವರಲ್ಲೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಲ್ಲಿ ಸಫಲವಾಗುತ್ತದೆ, ಈ ಧ್ವನಿಸುರುಳಿ.ಭಾರತ ದರ್ಶನದ ಕುರಿತು ಸಂತ ಭದ್ರಗಿರಿ ಅಚ್ಯುತದಾಸರ ಮಾತುಗಳು ಇಂತಿವೆ: “ಇದೊಂದು ಚೇತೋಹಾರಿ ಕಥಾನಕ. ಒಂದು ಮಗು ತನ್ನ ತೊಡೆಯ ಮೇಲೆ ಕುಳಿತು ಅವಳನ್ನು ವರ್ಣಿಸಿದಂತೆ ಮೋಹಕವಾಗಿ ಸಾಗಿದೆ ಈ ಉಪನ್ಯಾಸದ ಪ್ರವಾಹ”. ಕನ್ನಡಿಗರ ಕಣ್ಮಣಿ ರಾಜ್ ಕುಮಾರ್ ನುಡಿದಿದ್ದಾರೆ “ಭಾರತ ದರ್ಶನದಲ್ಲಿ ವಿವರಣೆಗಳನ್ನು ಕೇಳುವಾಗ ನನಗೆ ಕಣ್ತುಂಬಿ ಬರುತ್ತದೆ. ಆ ಭಾಷೆ, ವರ್ಣನೆ, ಅಬ್ಬಬ್ಬಾ! ಎಂಥ ದೇಶ ನಮ್ಮದು! ಎಲ್ಲರೂ ಕೇಳಬೇಕು”.ಬಿ. ವಿ. ವಿದ್ಯಾನಂದ ಶೆಣೈ ಅವರು ತಮ್ಮ ಜೀವಿತದ 56ವರ್ಷಗಳಲ್ಲಿ ಬ್ರಹ್ಮಚರ್ಯವನ್ನು ಪಾಲಿಸಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕರ್ತರಾಗಿ ಕಾರ್ಯನಿವಹಿಸಿದರು. ಪರಿಷತ್ತಿನ ನಿರ್ವಹಣಾ ಕಾರ್ಯದರ್ಶಿಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ ಅಪ್ರತಿಮ ಖ್ಯಾತಿ ಗಳಿಸಿದ್ದ ಅವರು ರಾಜ್ಯದಲ್ಲಿ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಇದಲ್ಲ್ಲದೆ ದೇಶದ ಇತರೆಡೆಗಳಲ್ಲಿ ಸಹಾ ಅವರ ಉಪನ್ಯಾಸಗಳು ಪ್ರಖ್ಯಾತಗೊಂಡಿದ್ದವು. ಅವರು ಹೊರತಂದಿದ್ದ ‘ಭಾರತ ದರ್ಶನ’ ಧ್ವನಿ ಸುರುಳಿಗಳು 60,000ಕ್ಕೂ ಹೆಚ್ಚು ಸೆಟ್ಟುಗಳ ಮಾರಾಟ ದಾಖಲೆಯನ್ನು ನಿರ್ಮಿಸಿವೆ.

ವಿದ್ಯಾನಂದರು ಯಾವತ್ತೂ ಹೆಸರು ಮಾಡಲು, ಸ್ವಪ್ರಚಾರವನ್ನು ಬಯಸಲಿಲ್ಲ. ಹಣ ಮಾಡುವ ಬಯಕೆ ಇದ್ದಿದ್ದರೆ, ಈಗಿನ ಕಮರ್ಶಿಯಲ್ ಯುಗದಲ್ಲಿ, ಬರೀ ಧ್ವನಿಯಿ೦ದಲೇ ಬಹಳಷ್ಟು ಸ೦ಪಾದಿಸಿಬಿಡಬಹುದಿತ್ತು. ಅವರು ವಿಧಿವಶರಾದಾಗ ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಯೇ ಬರಲಿಲ್ಲ. ಅದೇ ಒಬ್ಬ ರಾಜಕೀಯ ಪುಢಾರಿ ಸತ್ತಮೇಲೆ ಅವನ ಗುಣಗಾನ ಮಾಡುವುದರಲ್ಲೇ ಕಾಲಕಳೆಯುವ ಮಾಧ್ಯಮಗಳು, ರಜಾಘೋಷಿಸುವ ಸರಕಾರಗಳು, ನಮ್ಮಲ್ಲಿ ನಿಜವಾದ ರಾಷ್ಟ್ರಭಕ್ತರಿಗೆ ಏನು ಬೆಲೆ ಕೊಡುತ್ತೇವೆ ಎಂದು ಇದರಿಂದ ಅರಿವಾಗುತ್ತದೆ.ಅಷ್ಟಕ್ಕೂ ಇವರಾರು ಎಂದು ಇನ್ನೂ ಹೆಚ್ಚು ತಿಳಿಯಬೇಕೆ೦ದರೆ ನೀವು “ಭಾರತ ದರ್ಶನ” ಧ್ವನಿಮುದ್ರಣವನ್ನು ಒಮ್ಮೆ ಕೇಳಲೇಬೇಕು.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

Chapter 19:

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

Chapter 20:

ಅಧ್ಯಾಯ 20: ಅವರೊಬ್ಬ ವಿಜ್ಞಾನಿ, ಬದುಕಿದ್ದು ಮಾತ್ರ ಸನ್ಯಾಸಿಯ ಹಾಗೆ! ಇದು ರಜ್ಜು ಭೈಯ್ಯ ಎಂದೇ ಪ್ರೀತಿಯಿಂದ ಕರೆಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಜೀವನಗಾಥೆ!

Chapter 21:

ಅಧ್ಯಾಯ 21: ಸಂಘದ ನೇತಾರರು ಒಂದು ಮಾತನಾಡಲಿ ಅದನ್ನು ವಿವಾದಕ್ಕೆ ಎಳೆಯೋಣ ಎಂಬ ಉದ್ದೇಶವನ್ನು ಇಟ್ಟುಕೊಂಡ ಪತ್ರಿಕೆಗಳು ಆರೆಸ್ಸೆಸ್ ನ ಮಹತ್ತರವಾದ ಸಾಧನೆಗಳ ಬಗ್ಗೆ ಮಾತನಾಡುವುದೇ ಇಲ್ಲ!

Chapter 22:

ಅಧ್ಯಾಯ 22: ಆರೆಸ್ಸೆಸ್ ಪ್ರಚಾರಕರೆಂದರೆ ಭೈರಾಗಿಗಳು, ಸಂತರಂತೆ ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟು ತಮ್ಮದೆಲ್ಲವನ್ನು ದೇಶ ಕಟ್ಟುವ ಕಾಯಕಕ್ಕೆ ಸಮರ್ಪಿಸಿ ಬಿಡುತ್ತಾರೆ! ಮೈ ಚ ಜಯದೇವ್ ಕೂಡ ಹಾಗೇ ಬದುಕಿದವರು!

-Dr.Sindhu Prashanth

Tags

Related Articles

FOR DAILY ALERTS
Close