ಪ್ರಚಲಿತ

ಕಾಂಗ್ರೆಸ್-ವಿಜಯ್ ಮಲ್ಯ ಸಂಬಂಧವನ್ನು ಒಪ್ಪಿಕೊಂಡ ಕಾಂಗ್ರೆಸ್..! ರಾಷ್ಟ್ರ ಮಟ್ಟದಲ್ಲಿ ಭಾರೀ ಮುಜುಗರ ಅನುಭವಿಸಿದ ರಾಹುಲ್ ಗಾಂಧಿ..! ಬಿಜೆಪಿ ವ್ಯಂಗ್ಯ…!

ಮಾಡುವಷ್ಟು ಅನಾಚಾರ ಮಾಡಿ ಕೊನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯತ್ತ ಬೆರಳು ತೋರಿಸುತ್ತಿರುವ ಕಾಂಗ್ರೆಸ್ ನಾಯಕರ ಕಪಟ ಬುದ್ಧಿ ಮತ್ತೊಮ್ಮೆ ಬಟಬಯಲಾಗಿದೆ. ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂಗೆ ಈ ಕಾಂಗ್ರೆಸ್ ನಾಯಕರು ಮಾಡಿದ ಅನ್ಯಾಯಗಳನ್ನು ಮತ್ತೋರ್ವರ ತಲೆಗೆ ಕಟ್ಟುವುದರಲ್ಲಿ ಎತ್ತಿದ ಕೈ. ಪಂಜಾಬ್ ಬ್ಯಾಂಕ್ ನಲ್ಲಿ ನೀರವ್ ಮೋದಿ ಎಂಬಾತ ಸಾಲ ಮಾಡಿದ್ದು ಕಾಂಗ್ರೆಸ್ ಅಧಿಕಾರದ ಸಂದರ್ಭದಲ್ಲಿ, ಕೊಟ್ಟಿದ್ದೂ ಕಾಂಗ್ರೆಸ್ ನಾಯಕರೇ… ಆದರೆ ಅದನ್ನು ಈಗ ಭಾರತೀಯ ಜನತಾ ಪಕ್ಷದ ಸರ್ಕಾರದ ಮೇಲೆ ಹೊರಿಸುತ್ತಿದ್ದಾರೆ. ಅಂತೆಯೇ ವಿಜಯ ಮಲ್ಯಾ ಪ್ರಕರರವೂ ಕೂಡಾ. ಆದರೆ ಇದೀಗ ವಿಜಯ್ ಮಲ್ಯ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಭೀತಾಗಿದೆ.

Related image

ರಾಹುಲ್ ಟ್ವೀಟ್ ರೀಟ್ವೀಟ್ ಮಾಡಿದ ಮಲ್ಯ…

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ಪೇಚಿಗೆ ಸಿಲುಕುವವುದು ಹೊಸದೇನಲ್ಲ. ಆದರೆ ಈ ಬಾರಿ ಬೇಡದ ಕೆಲಸ ಮಾಡಿ ಪೇಚಿಗೆ ಸಿಲುಕಿದ್ದಾರೆ. ಕಪ್ಪು ಹಣದ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನ್ನು ಮದ್ಯದ ದೊರೆ ವಿಜಯ್ ಮಲ್ಯ ರೀಟ್ವೀಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ವಿಜಯ್ ಮಲ್ಯ ರ ಸಂಬಂಧವನ್ನು ಬಹಿರಂಗಪಡಿಸಿದೆ.

ಭಾರತದ ವಿವಿಧ ಕಡೆಗಳಲ್ಲಿ ತೀರಿಸಲಾಗಷ್ಟು ಸಾಲ ಮಾಡಿ, ಸರ್ಕಾರ ಬದಲಾಗಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಭಾರತದಿಂದಲೇ ಪಲಾಯನ ಮಾಡಿರುವ ವಿಜಯ್ ಮಲ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ.. ಇವರ ಪತ್ತೆಗೆ ಕೇಂದ್ರ ಸರ್ಕಾರ ಸತತ ಪ್ರಯತ್ನವನ್ನು ಪಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮನಬಂದಂತೆ ತೆಗಳಿ ಈ ಎಲ್ಲಾ ಪ್ರಕರಣಗಳಿಗೆ ಮೋದಿಯೇ ಕಾರಣ ಎಂದು ಬಿಂಬಿಸತೊಡಗಿತು. ಆದರೆ ಈವಾಗ ಇಂತಹಾ ಸೋಗಲಾಡಿ ಹೇಳಿಕೆಗೆ ಬ್ರೇಕ್ ಬಿದ್ದಿದೆ.

Image result for vijay mallya

ಈ ಬಗ್ಗೆ ಸ್ವತಃ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಅನಿಲ್ ಬಲುನಿ ಮಲ್ಯ ರ ಕಾಂಗ್ರೆಸ್ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. “ಕಾಂಗ್ರೆಸ್ ಜೊತೆ ಮಲ್ಯ ಹಿಂದಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ ನಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಹೀಗಿರುವಾಗ ಇದರಲ್ಲಿ ವಿಶೇಷ ಏನೂ ಇಲ್ಲ. ನಮ್ಮ ಸಂಬಂಧ ಈಗಲೂ ಉತ್ತಮವಾಗಿದೆ” ಎಂದು ಹೇಳಿದ್ದಾರೆ. ಈ ಮೂಲಕ ಈವರೆಗೆ ನಡೆಯುತ್ತಿದ್ದ ಕಾಂಗ್ರೆಸ್ ನಾಟಕವನ್ನು ಒಪ್ಪಿಕೊಂಡಿದ್ದಾರೆ.

ಬಿಜೆಪಿ ಕೆಂಡ..!

ಈ ಮಧ್ಯೆ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷದ ವಿರುದ್ದ ಹರಿ ಹಾಯ್ದಿದ್ದಾರೆ. ಕಾಂಗ್ರೆಸ್ ನ ಈ ಮುಖವಾಡ ಕಳಚುತ್ತಿದ್ದಂತೆಯೇ ಕಮಲದ ನಾಯಕರು ಹರಿಹಾಯ್ದಿದ್ದಾರೆ. “ಮಹಾಘಟ ಬಂಧನಕ್ಕೆ ಮಹಾ ಘಥ (ಮಹಾವಂಚಕ) ಬೆಂಬಲ ನೀಡಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ವಿಜಯ ಮಲ್ಯ ರ ಸಂಬಂಧವನ್ನು ದೇಶಕ್ಕೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆ ಏನೋ ಮಾಡಲು ಹೋಗಿ ಏನೋ ಮಾಡಿಕೊಳ್ಳುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಮತ್ತೆ ಈ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಸುಕಾಸುಮ್ಮನೆ ಆರೋಪ ಮಾಡುವ ರಾಹುಲ್ ಗಾಂಧಿಗೆ ಕಾಲವೇ ತಕ್ಕ ಉತ್ತರ ನೀಡಿದೆ.

-ಸುನಿಲ್ ಪಣಪಿಲ

Tags

Related Articles

Close