ಪ್ರಚಲಿತ

ಶ್ರೀರಾಮನ ಬಂಟ ಹನುಮಂತನಿಗೂ ಅಂಡಮಾನಿಗೂ ಇರುವ ಸಂಬಂಧವಾದರೂ ಏನು ಗೊತ್ತೇ?? ಬೆಚ್ಚಿ ಬೀಳಿಸುವಂತಿದೆ ಅಂಡಮಾನ್ ನ ರಹಸ್ಯ!!

ಪುರಾಣಗಳನ್ನು ಕೆದುಕುತ್ತಾ ಹೋದಾಗ ನಮಗರಿಯದ ಅದೆಷ್ಟೋ ವಿಚಾರಗಳು ನಮ್ಮನ್ನೇ ಒಂದು ಕ್ಷಣ ಬೆಚ್ಚಿಬೀಳಿಸುವಂತೆ ಮಾಡುವುದಂತೂ ಅಕ್ಷರಶಃ ನಿಜ. ಅದಕ್ಕೆ ಸಾಕ್ಷಿ ಎನ್ನುವಂತಿದೆ ಈ ಅಂಡಮಾನಿನ ರಹಸ್ಯ!! ಆದರೆ ಈ ಅಂಡಮಾನ್ ದ್ವೀಪ ಹಾಗೂ ರಾಮಾಯಾಣದ ಕಾಲಕ್ಕೂ ಇರುವ ಸಂಬಂಧಗಳ ಬಗೆಗಿರುವ ಕುರುಹು ಸಿಕ್ಕಿರುವುದೇ ಇನ್ನೂ ವಿಶೇಷ!! ಅದು ಹೇಗಂತೀರಾ……??

ಕೆಲ ವರ್ಷಗಳ ಹಿಂದೆ ಅಂಡಮಾನಿಗೆ ಸುನಾಮಿ ಅಪ್ಪಳಿಸಿದಾಗ ಅಕಸ್ಮಾತ್ ಆಗಿ ವಿಮಾನದಿಂದ ತೆಗೆದ ಚಿತ್ರದಿಂದ ಅಂಡಮಾನಿನ ರಹಸ್ಯವೇ ಬಯಲಾಗಿ ಹೋಗಿದೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬೇಕು!! ಯಾಕೆಂದರೆ ನಾವು ತಿಳಿದ ಚರಿತ್ರೆಯನ್ನೇ ಬದಲಾಯಿಸುವಷ್ಟು ಪುರಾವೆ ಈ ಚಿತ್ರದಲ್ಲಿದೆ. ಅಷ್ಟೇ ಅಲ್ಲದೇ ಈ ಚಿತ್ರಕ್ಕೆ ಪುಷ್ಠಿ ನೀಡುವಂತಹ ಇನ್ನೊಂದು ಪುರಾವೆಯೂ ಸಿಕ್ಕಿದ್ದು, ಅಂಡಮಾನಿನ ರಹಸ್ಯವನ್ನು ತೆರೆದಿಡುವಂತೆ ಮಾಡಿದೆ!!!

ಅಷ್ಟಕ್ಕೂ ಆ ಕುರುಹು ಆದರೂ ಏನು ಗೊತ್ತೇ??

ಸಾವಿರಾರು ವರ್ಷಗಳ ಹಿಂದೆ ಕೆತ್ತಿರುವ ಆ ಕುರುಹು ಸಿಕ್ಕಿರುವುದು ಎರಡನೇ ಮಹಾಯುದ್ಧದಲ್ಲಿ!! ಹೌದು… ಎರಡನೇ ಮಹಾಯುದ್ಧದ ಸಮಯದಲ್ಲಿ ಅಂಡಮಾನ್ ದ್ವೀಪಗಳು ಬ್ರಿಟಿಷರ ವಶದಲ್ಲಿದ್ದ ವಿಚಾರ ತಿಳಿದಿದೆ ಇದೆ!! ಆಗಿನ ಬ್ರಿಟಿಷ್ ಅಧಿಕಾರಿಗಳು ರಾಸ್ ಐಲ್ಯಾಂಡ್ ಎಂಬ ದ್ವೀಪವನ್ನು ತಮ್ಮ ವಸಾಹತು ನೆಲೆಯಾಗಿಸಿ ರಾಜ ವೈಭವದಿಂದ ಬಾಳಿದ್ದರಲ್ಲದೇ ಇದಕ್ಕೆ ಸಂಬಂಧಿಸಿದ ಕುರುಹುಗಳು ಇಂದೂ ಅಲ್ಲಿ ಕಾಣ ಸಿಗುತ್ತದೆ. ಈ ಮಧ್ಯೆ ಸುಭಾಷ್ ಚಂದ್ರ ಬೋಸ್, ಜೈಲಿನಿಂದ ತಪ್ಪಿಸಿಕೊಂಡು ಎಲ್ಲೆಲ್ಲೋ ಸುತ್ತಿ, ಜಪಾನ್ ಸೇರಿ ಆ ದೇಶದ ನಾಯಕರ ಬೆಂಬಲ ತಗೊಂಡು ತಮ್ಮದೇ “ಆಜಾದ್ ಹಿಂದ್” ಸೈನ್ಯವನ್ನು ಕಟ್ಟಿ ಬರ್ಮಾದ ಮೂಲಕ ಬ್ರಿಟೀಷ್ ಆಡಳಿತದ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ ಎನ್ನುವ ವಿಚಾರವನ್ನು ತಿಳಿದಿದ್ದೇವೆ.

ಆದರೆ ಅದೇ ಸಮಯದಲ್ಲಿ ಜಪಾನ್ ನ ವಿಮಾನ ದಳವೂ ಅಂಡಮಾನಿನ ಬ್ರಿಟೀಷ್ ನೆಲೆಗಳ ಮೇಲೆ ದಾಳಿಯನ್ನು ಶುರು ಮಾಡುತ್ತೆ. ಆಗ ಬ್ರಿಟೀಷರ ಶೆಲ್ ದಾಳಿಯಿಂದ ಜಪಾನ್ ನ ವಿಮಾನಕ್ಕೆ ಬೆಂಕಿ ತಾಗಿ ವಿಮಾನವೇ ಹತ್ತಿ ಉರಿಯುತ್ತೆ!! ಆ ಸಂದರ್ಭದಲ್ಲಿ ಪೈಲೆಟ್ ನಿಗ್ರಹ ತಪ್ಪಿ ವಿಮಾನ “ಬಾರಾಟಂಗ್” ದ್ವೀಪದತ್ತ ಹಾರುತ್ತೇ. ಸುಮಾರು 50 ಕಿ.ಮೀ ಹಾರಿ ಬಾರಾಟಂಗ್ ದ್ವೀಪದ ಗುಡ್ಡಕ್ಕೆ ಅಪ್ಪಳಿಸುತ್ತಿದ್ದಂತೆಯೇ ಅದರ ಡ್ರೈವರ್ ಹಾಗೂ ಹೆಲ್ಪರ್ ಹೊರಗೆ ಪ್ಯಾರಾಶೂಟ್ ಮುಖಾಂತರ ಹಾರಿ ಜೀವ ಉಳಿಸಿಕೊಳ್ಳುತ್ತಾರೆ!!

ಪ್ಯಾರಾಶೂಟ್ ಮುಖಾಂತರ ಹಾರಿ ಜೀವ ಉಳಿಸಿಕೊಂಡರೂ ಕೂಡ ಅವರಲ್ಲಿ ಒಬ್ಬ ಅಲ್ಲಿರೋ “ಜಾರವಾ” ಅನ್ನೋ ಜನಾಂಗದ ವಿಷದ ಬಾಣಕ್ಕೆ ತುತ್ತಾಗಿ ಸಾಯುತ್ತಾನೆ. ಆದರೆ ಆತನ ಹೆಲ್ಪರ್ ಮಾತ್ರ ಹೇಗೋ ತಪ್ಪಿಸಿಕೊಂಡು ಆ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡುತ್ತಾನೆ. ಕೊನೆಗೂ ಒಂದು ವಾರದ ನಂತರ ಆ ಕಾಡಿನಿಂದ ಆಚೆ ಬರುವಷ್ಟರಲ್ಲಿ ಅಂಡಮಾನ್ ದ್ವೀಪಗಳೆಲ್ಲ ಜಪಾನಿಯರ ವಶವಾಗಿರುತ್ತೆ!! ತದನಂತರದಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಆತ ಊಟ ನಿದ್ದೆ ಇಲ್ಲದೆ ಸೊರಗಿ ಸಾಯ್ತಾನೆ!!

ಆದರೆ ಆತನ ಬಳಿ ಇದ್ದ ಬ್ಯಾಗ್ ಹುಡುಕಿ ಅದರಲ್ಲಿರೋ ವಸ್ತುಗಳು ಆತನ ಮನೆಗೆ ತಲುಪಿಸ ಬೇಕಾದರೆ ಒಂದು ಮಡಿಕೆ ಚೂರು ಸಿಗತ್ತೆ, ಆ ಮಡಿಕೆಯ ಚೂರಿನ ಮೇಲೆ ಈ ಕುರುಹುಗಳಿರುವುದು ಕಂಡು ಬಂದಿದೆ!! ಆದರೆ, ಅವನಿಗೆ ಆ ಮಡಿಕೆ ಆ ಕಾಡಿನಲ್ಲಿ ಸಿಕ್ಕಿದ್ದಾದರೂ ಹೇಗೆ?? ಅವನು ಒಂದು ವಾರ ಆ ಕಾಡಿನಲ್ಲಿ ಓಡಾಡಿದಾಗ ಎಲ್ಲೋ ಸಿಕ್ಕ ಆ ಮಡಿಕೆ ಅದರ ಮೇಲಿರೋ ಸೂರ್ಯನ ಚಿತ್ರ ಆಕರ್ಷಿಸಿರಬೇಕು. ಆತ ಅದನ್ನು ನೀರು ಕುಡಿಯಲು ಉಪಯೋಗಿಸಿ ಅದನ್ನ ತನ್ನ ಬ್ಯಾಗ್ ನೊಳಗೆ ಇಟ್ಟುಕೊಂಡಿರಬಹುದು ಅಂತ ಜಪಾನ್ ಸುಮ್ಮನಾಗಿ ಬಿಡುತ್ತದೆ!! ಆದರೆ ಇದೇ ಮಡಕೆಯನ್ನು ಅಣುಬಾಂಬಿನಿಂದ ಸತ್ತವರ ನೆನಪಿಗಾಗಿ ಹತ್ತು ವರ್ಷಗಳ ನಂತರ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನದಲ್ಲಿ ಇಡಲಾಗುತ್ತದೆ!! ಆದರೆ ಅದನ್ನು ಯಾರು ಗಮನಿಸದೇ ಹೋದಾಗ ಅಲ್ಲೇ ಇದ್ದ ಒಬ್ಬ ಭಾರತೀಯ ಅದನ್ನು ಗಮನಿಸಿ, ಭಾರತಕ್ಕೆ ತರುತ್ತಾನೆ.

ವಿಪರ್ಯಾಸವೆಂದರೆ, ಸಾವಿರಾರು ವರ್ಷಗಳಿಂದಲೂ ಆ ದ್ವೀಪದಲ್ಲಿ ಯಾವ ಜನಾಂಗವೂ ಮಡಿಕೆ ಉಪಯೋಗಿಸುತ್ತಿರಲಿಲ್ಲ. ಯಾಕೆಂದರೆ ಈ “ಜಾರವಾ” ಜನಾಂಗದವರು ಆಫ್ರಿಕಾದಿಂದ 65-70 ಸಾವಿರ ವರ್ಷಗಳ ಹಿಂದೆಯೆ ಅಲ್ಲಿ ಬಂದು ನೆಲೆಯಾದವರು. ಅವರು ನಾಗರಿಕ ಪ್ರಪಂಚದಿಂದ ದೂರವಾಗಿಯೇ ಉಳಿದ ಜನಾಂಗದವರಾಗಿದ್ರು, ಅವರಿಗೆ ಮಡಿಕೆ ಕುಡಿಕೆಗಳ ಎಳ್ಳಷ್ಟೂ ಜ್ಞಾನವಾಗಲಿ ಅದನ್ನು ಹೇಗೆ ಉಪಯೋಗಿಸಬೇಕೆಂದೇ ಅವರಿಗೆ ತಿಳಿದಿರಲಿಲ್ಲ.

ಅಲ್ಲಿರೋ ಜನಾಂಗದವರಿಗೆ ಇತ್ತೀಚೆಗೆ ಭಾರತದ ಸರ್ಕಾರದವರು ಊಟ ಮಾಡೋಕೆ ಅಲ್ಯುಮಿನಿಯಂ ಪ್ಲೇಟ್ ಕೊಟ್ಟು ಬಂದಿದ್ದರೂ ಕೂಡ…. ಅವರು ಆ ಅಲ್ಯುಮಿನಿಯಂ ಪ್ಲೇಟನ್ನೆ ಕತ್ತರಿಸಿ ಅವುಗಳನ್ನು ಚೂರುಗಳನ್ನಾಗಿ ಮಾಡಿ ಅದರಿಂದ ಬಾಣದ ತುದಿಗಳಿಗೆ ಉಪಯೋಗಿಸುತ್ತಿದ್ದಾರೆ!! ಹಾಗಾದರೆ ಅಲ್ಲಿಗೆ ಆ ಮಡಿಕೆ ಹೇಗೆ ಬಂತು ಎನ್ನುವ ಪ್ರಶ್ನೆ ಮೂಡುವುದಂತೂ ಸಹಜ!! ಆದರೆ ಅದನ್ನು ತಂದಿರುವುದು ಬೇರಾರೂ ಅಲ್ಲ… ಎಷ್ಟೋ ಸಾವಿರಾರು ವರ್ಷಗಳ ಹಿಂದೆ ಬಂದಿದ್ದ ಹನುಮಂತ ಹಾಗು ಆತನ ಜನರು!!!

ಹಾಗಾದರೆ ಹನುಮಂತನಿಗೂ ಅಂಡಮಾನಿಗೂ ಇರುವ ಸಂಬಂಧವೇನು ಗೊತ್ತೇ!!??

ರಾಮ ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಯ ಬಳಿ ಬಂದು ಅಲ್ಲಿ ವಾಲಿಯ ವಧೆ ಮಾಡಿ ಸುಗ್ರೀವ ಹನುಮಂತರ ಜೊತೆ ಶ್ರೀಲಂಕಾಕ್ಕೆ ರಾವಣನ ಮೇಲೆ ಯುದ್ಧಕ್ಕೆ ಹೋಗಿದ್ದು ನಮಗೆಲ್ಲ ಗೊತ್ತಿರೋ ವಿಷಯವೇ!! ಆದರೆ ತದನಂತರದ ದಿನಗಳಲ್ಲಿ ಏನಾಗುತ್ತದೆ ಎಂಬುವುದು ಯಾರಿಗೂ ಗೊತ್ತಿಲ್ಲ!! ವಾಲಿ ಸತ್ತ ನಂತರ, ಸುಗ್ರೀವ ಶ್ರೀಲಂಕಾಗೆ ಹೋದ ಮೇಲೆ ಪರದೇಶಿಗಳಾಗಿದ್ದ ಅವನ ಪ್ರಜೆಗಳಿಗೆ, ಶ್ರೀಲಂಕಾದಿಂದ ಸತ್ತ ಸಾವು ನೋವುಗಳ ಸುದ್ಧಿ ತುಂಬಾನೆ ಆಘಾತಕ್ಕೀಡು ಮಾಡಿದವು. ಯಾರದೋ ಹೆಂಡತಿಯ ರಕ್ಷಣೆಗೆ ನಮ್ಮ ಕುಟುಂಬದವರು ಸಾಯ್ತಿದ್ದಾರಲ್ಲ ಹಾಗು ನಮ್ಮ ವಾಲಿಯನ್ನೇ ಕಳೆದುಕೊಂಡು ಬಿಟ್ಟೆವಲ್ಲ ಎನ್ನುವ ಕೋಪ ಅಲ್ಲಿರೋ ಜನಗಳಲ್ಲಿತ್ತು. ಸತ್ತವರ ಪತ್ನಿಯರ ಆಕ್ರಂದನ ಶಾಪವಾಗತ್ತೆ, ಇಡೀ ಕಿಷ್ಕಿಂದೆಯ ಜನ ಸುಗ್ರೀವ ಹಾಗು ಆಂಜನೇಯರ ಕಡೆಗೆ ಸಿಡಿದೇಳುತ್ತೆ.

ರಾಮಾಯಣದಲ್ಲಿ ವೀರರಂತೆ ಚಿತ್ರಿಸಲ್ಪಟ್ಟಿರೋ ಅವರು ತಮ್ಮದೇ ಜನರಿಗೆ, ತಮ್ಮದೇ ದೇಶದಲ್ಲಿ(ಕಿಷ್ಕಿಂಧ್ಯೆಯಲ್ಲಿ) ದ್ರೋಹಿಗಳಾಗಿ ಕಾಣ್ತಾರೆ. ಹಾಗಾಗಿ ಅಲ್ಲಿಂದ ಅವರು ದೋಣಿ ಹತ್ತಿ ಸಮುದ್ರದಲ್ಲಿ ತಪ್ಪಿಸಿಕೊಂಡು ಹೋಗಿ ಪೂರ್ವದಲ್ಲಿನ ದ್ವೀಪಗಳನ್ನು(ಈಗಿನ ಅಂಡಮಾನ್, ನಿಕೋಬಾರ್) ಸೇರಿ ಅಲ್ಲೇ ನೆಲೆಸ್ತಾರೆ. ಆ ದ್ವೀಪಗಳೇ ಮುಂದೆ ಹನುಮಾನ್ ಅಂತಲೂ ನಂತರ ಹಂಡುಮಾನ್ ಅಂತಲೂ ಕೊನೆಗೆ ಅಂಡಮಾನ್ ಅಂತಲೂ ಹೆಸರಾಗತ್ತೆ.

 

ಈ ಕಥೆಯ ಸಾರಾಂಶ ಈಗಲೂ ಅಂಡಮಾನ್ ನಲ್ಲಿರೋ ಮ್ಯೂಸಿಯಮ್ ನಲ್ಲಿರೋ ಸವಿವರದಲ್ಲಿ ಹೇಳಾಗುತ್ತದೆ!! ಇಂಡೋನೆಷಿಯಾದ ಜನರ ನಂಬಿಕೆಯಂತೆ ಹನುಮಾನ್, ಸೀತೆಯ ಹುಡುಕಾಟದಲ್ಲಿ ಇಂಡೋನೇಷಿಯಾದಿಂದ ಹಾರಿ ಮೊದಲು ಈ ದ್ವೀಪದಲ್ಲಿಯೇ ಹೆಜ್ಜೆ ಇಟ್ಟು, ನಂತರ ಲಂಕೆಗೆ ಹೋದನಂತೆ. ಅದಕ್ಕೆಂದೆ ಅದನ್ನು “ಹಂಡುಮಾನ್” ಎನ್ನುತ್ತಾರೆ ಎನ್ನುವ ನಂಬಿಕೆ ಅಲ್ಲಿದೆ.

ಇನ್ನು ಈ ಬಗ್ಗೆ, ದೆಹಲಿಯಲ್ಲಿರೋ ಪಾರೋ. ಪದ್ಮನಾಭರಾವ್ ಎನ್ನುವವರು ಒಂದು ವೆಬ್ ಸೈಟಿನಲ್ಲಿ ಹೀಗೆ ಬರೆಯುತ್ತಾರೆ,  “On the basis of ‘SKANDA PURANA’, the author has identified or discovered Andaman as the legendary Gandhamadana”

“ರಾಮಾಯಣದ ಕೊನೆಯಲ್ಲಿ ಆಂಜನೆಯನು “ಗಂಧಮಾಧನ ಗಿರಿ” ಎಂಬ ಸ್ಥಳಕ್ಕೆ ಹೊರಟನೆಂದು” !! ಆದರೆ ಆ ಸ್ಥಳ ಎಲ್ಲಿದೆ ಅನ್ನೋದು ಇನ್ನೂ ವಿವಾದವಾಗಿಯೇ ಇದೆ. ಆದರೆ ಸ್ಕಂದಪುರಾಣಗಳಲ್ಲಿ ಉಲ್ಲೇಖಿಸಿರೋ ಬೆಟ್ಟದ ಸಾಲುಗಳು ಅಂಡಮಾನ್ ಎಂದೇ ವಾದಿಸುತ್ತದೆ. ಹಾಗೆಯೇ ಯೂರೋಪಿಯನ್ನರು ಈ ದ್ವೀಪಕ್ಕೆ ಸಾವಿರಾರು ವರ್ಷಗಳಿಂದಲೇ ಬರುತ್ತಿದ್ದು ಅವರ ನಾಲಿಗೆಯಲ್ಲಿ “ಗಂಧಮಾಧನ ಗಿರಿ” ಯನ್ನು ಅಂಡಮಾನ್ ಆಗಿರಲೂಬಹುದು ಅಂತಾರೆ.

ಆದರೆ ಹನುಮಾನ್ ಹಾಗು ಅವರ ಜನರು ಅಂಡಮಾನ್ ದ್ವೀಪಕ್ಕೆ ಬಂದಾಗ ತಂದ ಮಡಿಕೆಗಳೇ ಈಗ ಸಿಕ್ಕಿರೋ ಮಡಿಕೆ ಹಾಗು ಸಮುದ್ರದಲ್ಲಿ ಕಂಡ ಆ ಚಿತ್ರಗಳು ಅನ್ನೋದು ವಿಜ್ಞಾನಿಗಳ ವಾದ. ಆದರೆ ತದನಂತರದಲ್ಲಿ ಹನುಮಾನ್ ಹಾಗು ಅವನ ಜನರ ಕಥೆ ಏನಾಯ್ತು ಎಂದರೆ, ಜಾರವಾಗಳಿಗೆ ಹೊರಗಿನ ಜನರೆಂದರೆ ಅವರಿಗಾಗದು!! ಹಾಗಾಗಿ ಅಲ್ಲಿಗೆ ಬಂದ ಜನರನ್ನು ಅವರ್ಯಾರು ಜೀವಸಹಿತ ಉಳಿಸುತ್ತಿರಲಿಲ್ಲ!! ಹಾಗಾಗಿ ಹನುಮಾನ್ ಸೈನ್ಯದಿಂದ ಯುದ್ಧ ಘರ್ಷಣೆಯಾಗಿ ಅವರ ಸಂತತಿ ನಾಶವಾಗಿರಬಹುದು ಅನ್ನೋದು ಇತಿಹಾಸದಲ್ಲಿ ಇನ್ನೂ ಬಚ್ಚಿಟ್ಟಿರೋ ರಹಸ್ಯವಾಗಿದೆ.

ಆದರೆ ಈ ಮಡಕೆಯಲ್ಲಿ ಇರುವ ಚಿತ್ರದ ಅರ್ಥ ಮಾತ್ರ ತಿಳಿಯೋದು ಸ್ವಲ್ಪ ಕಠಿಣವೇ ಆದರೂ ಅದನ್ನು ಡಿಕೋಡ್ ಮಾಡಿದಾಗ(  right to left  ಓದಿ)  ಮೊದಲು ಕಾಣೋದು ದೊಡ್ಡ ಸೂರ್ಯನ ಚಿತ್ರ(ಸೂರ್ಯವಂಶದವ) ನಂತರ ಚಿಕ್ಕ ಸೂರ್ಯ(ಸೂರ್ಯನ ಸೇವಕ), ನೀರಿನ ಜಾಡಿಗೆ, ನೀರಿನ ಚಿತ್ರ(ಮೂರು ಗೆರೆಗಳು), ನಂತರ ಇರುವ ಚಿತ್ರ ತೋರಿಸೋದು ಐಲ್ಯಾಂಡ್ ಅದನ್ನು ಡಿಕೋಡ್ ಮಾಡಿದ ವಿಜ್ಞಾನಿಗಳ ಪ್ರಕಾರ ಅದರರ್ಥ( right to left ಓದಿ) “ಸೂರ್ಯ ವಂಶದ ರಾಜನ ಯೋಧ/ಸೇವಕ ಸಾಗರ ದಾಟಿ ದ್ವೀಪ ಸೇರಿದ” ಎಂದು!

ಇಲ್ಲಿ ಸೂರ್ಯ ವಂಶದ ರಾಜ ಎಂದರೆ “ರಾಮ” ಹಾಗು ಯೋಧ/ಸೇವಕ ಅಂದರೆ “ಹನುಮಾನ್”, ಆತ ಸಾಗರವನ್ನು ದಾಟಿ ಅಂಡಮಾನ್ ಸೇರಿದ ಎನ್ನುವ ಅರ್ಥವನ್ನು ನೀಡುತ್ತೆ!! ಒಟ್ಟಿನಲ್ಲಿ ಅಂಡಮಾನ್ ಗೂ ಹನುಮಂತನಿಗೂ ಇರುವ ಸಂಬಂಧಗಳು ಒಂದು ಮಡಕೆಯ ಮೂಲಕ ತಿಳಿದು ಬಂದಿದೆ ಎಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ವಿಚಾರವೇ ಆಗಿದೆ!! ಇಂತಹ ಅದೆಷ್ಟೋ ವಿಚಾರಗಳು ಇತಿಹಾಸದ ಗರ್ಭದಲ್ಲಿ ಅಡಗಿದೆಯೋ ನಾ ಕಾಣೆ!!

ಮೂಲ:
https://www.nationalistviews.com/after-ramayana-where-lord-hanuman-went-to/

– ಅಲೋಖಾ

Tags

Related Articles

Close