ಅಂಕಣಪ್ರಚಲಿತ

“ಮೋದೀಜಿಯ ಜನ್ಮ ಕುಂಡಲಿ ನೋಡಿದ್ದ ಜ್ಯೋತಿಷಿಗಳು ಅವರ ಭವಿಷ್ಯದ ಬಗ್ಗೆ ಏನಂದ್ರು ಗೊತ್ತಾ..?”

ಅದು ಕುಬ್ಜ ದೇಹದ ಸರಳ ವ್ಯಕ್ತಿ. ಸ್ವಾಭಿಮಾನಿ ಭಾರತದ ಹರಿಕಾರ. ತಮ್ಮ ಜೀವನವನ್ನೇ ಈ ದೇಶಕ್ಕಾಗಿ ಮೀಸಲಿರಿಸಿ ದೇಶದ ಉನ್ನತ ಪ್ರಗತಿಗಾಗಿ ಹಗಲಿರುಳು ಶ್ರಮಿಸಿದ ಮಹಾನುಭಾವ. ಅವರೇ ದೇಶ ಕಂಡ ಅತ್ಯಂತ ಶ್ರೇಷ್ಠ ಮಾಜಿ ಪ್ರಧಾನಿ, ರಾಜಕೀಯ ಮುತ್ಸದ್ದಿ, ಲಾಲ್ ಬಹದ್ದೂರ್ ಶಾಸ್ತ್ರೀ.

ಯಾವುದೇ ರಾಜಕೀಯ ಪ್ರತಿಫಲಪೇಕ್ಷೆ ಇಲ್ಲದೆ ದೇಶಸೇವೆಯನ್ನು ಮಾಡುತ್ತಾ ಸ್ವಾಭಿಮಾನ ಬದುಕನ್ನು ನಡೆಸುತ್ತಾ ಬಂದಿದ್ದ ವ್ಯಕ್ತಿ ಶಾಸ್ತ್ರೀಜಿ. ಅಮೇರಿಕಾದಂತಹ ಜಗತ್ತಿನ ದೊಡ್ಡಣ್ಣನಿಗೆ ಸೆಡ್ಡು ಹೊಡೆದು, “ಪಾಕಿಸ್ಥಾನವನ್ನು ವಿರೋಧಿಸಿದರೆ ನಿಮಗೆ ನೀಡುತ್ತಿದ್ದ ಗೋಧಿಯನ್ನು ನಿಲ್ಲಿಸಿಬಿಡುತ್ತೇವೆ” ಎಂದ ಅಮೇರಿಕಾಗೆ, “ನಿಮ್ಮ ಗೋಧಿಯನ್ನು ನಮ್ಮ ಭಾರತ ದೇಶದ ಹಂದಿನೂ ಮೂಸಿನೋಡಲ್ಲ ಹೋಗ್ರೀ” ಎಂಬ ದಿಟ್ಟತನದ ಹೇಳಿಕೆ ಇಡೀ ದೇಶದ ಸ್ವಾಭಿಮಾನವನ್ನೇ ಜಗತ್ತಿನ ಮುಂದೆ ಎದ್ದು ನಿಲ್ಲುವಂತೆ ಮಾಡಿದ್ದರು ಶಾಸ್ತ್ರೀಜಿ. ನಂತರ ನಡೆದದ್ದೇ ಪವಾಡ. ದೇಶವಾಸಿಗಳಲ್ಲಿ ಶಾಸ್ತ್ರೀಜಿ ವಿನಂತಿಸಿಕೊಂಡರು. “ನಾನು ದೇಶಕ್ಕಾಗಿ ವಾರದಲ್ಲಿ ಒಂದು ದಿನ ಉಪವಾಸ ಕೂರುತ್ತೇನೆ. ನೀವೂ ನನ್ನೊಂದಿಗೆ ಕೈಜೋಡಿಸುವಿರಾ..?” ಎಂದು. ಈ ಮಾತನ್ನು ಕೇಳಿದ ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿನೂ ಶಾಸ್ತ್ರೀಜಿಯನ್ನು ಬೆಂಬಲಿಸಿ ವಾರಕ್ಕೆ ಒಂದು ದಿನ ಉಪವಾಸ ಕೂರುತ್ತಾರೆ. ನಮ್ಮ ದೇಶ ಸ್ವಾಭಿಮಾನಿ ದೇಶ ಎಂದು ಮತ್ತೊಮ್ಮೆ ಸಾಭೀತುಪಡಿಸುತ್ತಾರೆ.

ಅದೊಂದು ದಿನ ಶಾಸ್ತ್ರೀಜಿಯ ಮಗನಿಗೆ ಅಧಿಕಾರಿಗಳು ಸರ್ಕಾರಿ ಹುದ್ದೆಯೊಂದನ್ನು ನೀಡುತ್ತಾರೆ. ಈ ವಿಷಯವನ್ನು ತಿಳಿದ ಶಾಸ್ತ್ರೀಜಿ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗುತ್ತಾರೆ. “ನಾನು ಪ್ರಧಾನಿಯಾಗಿದ್ದ ಕಾರಣ ಈ ಹುದ್ದೆ ನಿನಗೆ ಒಲಿದು ಬಂದಿದೆ. ನನ್ನ ಅಧಿಕಾರದಿಂದ ನನ್ನ ಕುಟುಂಬಕ್ಕೆ ಯಾವುದೇ ಲಾಭವಾಗಬಾರದು ಎಂಬ ನಿಯಮವನ್ನು ಪಾಲಿಸಿಕೊಂಡು ಬಂದಿದ್ದೇನೆ. ಹೀಗಾಗಿ ನಿನಗೆ ನೀಡಿರುವ ಈ ಸರ್ಕಾರಿ ಉನ್ನತ ಹುದ್ದೆ ನನ್ನ ನಿಯಮವನ್ನು ಉಲ್ಲಂಘಿಸಿದೆ. ಹೀಗಾಗಿ ನಾನು ನನ್ನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಮಾರ್ಮಿಕವಾಗಿ ತನ್ನ ಮಗನಿಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸ್ತ್ರಿಜಿ ಮಗ, “ನಿಮ್ಮ ಗೌರವಕ್ಕಿಂತ ಮಿಗಿಲಾದುದು ನನಗೆ ಯಾವುದೂ ಇಲ್ಲ. ನಾನು ಈ ಕೂಡಲೇ ನನ್ನ ಹುದ್ದೆಯನ್ನು ತ್ಯಜಿಸುತ್ತಿದ್ದೇನೆ” ಎಂದು. ಅಬ್ಭಾ ಎಂತಹಾ ಸ್ವಾಭಿಮಾನ ಅಲ್ವಾ… ಇಂತಹ ಪ್ರಧಾನಿಗಳು ನಮ್ಮ ದೇಶಕ್ಕೆ ದಕ್ಕಿದ್ದು ಭಾರತದ ಪುಣ್ಯವೇ ಸರಿ. ಆದರೆ ರಾಜಕೀಯ ಕಾರಣಕ್ಕಾಗಿ ಅವರು ವಿದೇಶದಲ್ಲಿಯೇ ನಿಗೂಢವಾಗಿ ಸಾವನ್ನಪ್ಪುತ್ತಾರೆ.

ಶಾಸ್ತ್ರೀಜಿ ನಂತರ ಭಾರತ ಕಂಡ ಮತ್ತೊಬ್ಬ ಧೀಮಂತ ವ್ಯಕ್ತಿಯೇ ಇಂದಿನ ಪ್ರಧಾನಿ, ವಿಶ್ವ ನಾಯಕ ನರೇಂದ್ರ ಮೋದಿ. ಹೌದು. ತಮ್ಮ ರಾಜಕೀಯ ಜೀವನದಲ್ಲಿ ಅದೆಷ್ಟೋ ಅದೃಷ್ಟಗಳನ್ನು ಅನುಭವಿಸಿದವರು ನರೇಂದ್ರ ಮೋದೀಜಿ. ಆದರೆ ಎಲ್ಲೂ ಕೂಡಾ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿದವರೇ ಅಲ್ಲ. ಬಯಸದೆನೇ ಗುಜರಾತಿನ ಮುಖ್ಯಮಂತ್ರಿ ಆದವರು. ಮೋದೀಜಿ ಆಡಳಿತವನ್ನು ನೋಡಿ ಅಪ್ಪಿಕೊಂಡ ಗುಜರಾತಿನ ಜನ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆರಿಸಿಕೊಂಡರು. ಮಾತ್ರವಲ್ಲದೆ ಇವರ ಸಾಧನೆಯನ್ನು ನೋಡಿ ಇಡಿ ದೇಶವೇ ಮನಸೋತು ಅವರನ್ನು ದೇಶಕ್ಕೆ ಬಯಸಿತ್ತು. ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಳಿಸಲಾಯಿತು. ನಂತರ ನಡೆದದ್ದೇ ಪವಾಡ. ದೇಶಕ್ಕೆ ದೇಶವೇ ಕೇಸರೀ ಅಲೆಯಲ್ಲಿ ಕೊಚ್ಚಿ ಹೋಗಿತ್ತು. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರೋಸಿ ಹೋಗಿದ್ದ ಜನತೆಗೆ ಹೊಸ ಆಶಾ ಕಿರಣವೊಂದು ಮೂಡಿತ್ತು. ಮೋದೀಜಿ ಭರ್ಜರಿ ಅಂತರದೊಂದಿಗೆ ವಿಜಯೀಯಾಗಿ ಬಂದು ಪ್ರಧಾನಿ ಹುದ್ದೆ ಅಲಂಕರಿಸಿಯೇ ಬಿಟ್ಟರು.

ಕಾಂಗ್ರೆಸ್‍ಗೆ ತಕ್ಕ ಶಾಸ್ತಿ-ದೇಶಕ್ಕೆ ಸಿಕ್ಕರು ಮತ್ತೊಬ್ಬ ಶಾಸ್ತ್ರಿ…

ಹೌದು. ಅಂದು ದೇಶಕ್ಕೆ ದೇಶವೇ ಕುಣಿದು ಕುಪ್ಪಳಿಸಿಬಿಟ್ಟಿತ್ತು. ಥೇಟ್ ಶಾಸ್ತ್ರೀಜಿಯಂತೆಯೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಮೋದೀಜಿಯನ್ನು ಕಂಡಂತಹ ಜನ, ನಮಗೆ ಮತ್ತೊಬ್ಬ ಶಾಸ್ತ್ರಿಜಿ ಸಿಕ್ಕಿಬಿಟ್ಟರು ಎಂಬ ಹರ್ಷ ದೇಶವಾಸಿಗಳಲ್ಲಿ ಮನೆ ಮಾಡಿತ್ತು. ಓರ್ವ ಕುಬ್ಜ ದೇಹದ ಪ್ರಧಾನಿಯನ್ನು ನೋಡಿದ್ದ ಈ ದೇಶದ ಜನ 56 ಇಂಚಿನ ಎದೆಯುಳ್ಳ ಮತ್ತೊಬ್ಬ ಶ್ರೇಷ್ಠ ಪ್ರಧಾನಿಯನ್ನು ಕಂಡರು.

ಪಾಲಿಸಿಕೊಂಡು ಬಂದದ್ದು ಹಿಂದುತ್ವ-ಕುಟುಂಬ ಇದ್ರೂ ಸ್ವೀಕರಿಸಿದ್ರು ಸನ್ಯಾಸತ್ವ..!!!

ಮೋದೀಜಿ ಓರ್ವ ಶ್ರೇಷ್ಠ ಹಿಂದುತ್ವವಾದಿ. ಅವರೇ ಹೇಳಿದಂತೆ “ನಾನೊಬ್ಬ ಹಿಂದೂ ರಾಷ್ಟ್ರೀಯವಾದಿ” ಎಂಬಂತೆ ತನ್ನ ಧರ್ಮದ ಬಗ್ಗೆ ಅಪಾರ ಗರ್ವವನ್ನು ತಳೆದಿದ್ದವರು. ಬಾಲ್ಯದಿಂದಲೇ ರೈಲು ನಿಲ್ದಾಣದಲ್ಲಿ ಚಹಾ ಮಾರಿ ಸಂಪಾದಿಸಿ ತನ್ನ ಶಿಕ್ಷಣವನ್ನು ಪೂರೈಸಿದ ಮೋದೀಜಿ ಹಿಂದುಳಿದ ಬಡಾ ಕುಟುಂಬದಿಂದಲೇ ಬಂದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದು ಹಿಂದೂ ಧರ್ಮವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಅದರ ಏಳಿಗೆಗಾಗಿ ದುಡಿದವರು ಮೋದಿ. ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮೋದೀಜಿ ಹಿಮಾಲಯಕ್ಕೆ ತೆರಳಿ ಆಚರಣೆಗಳನ್ನೂ ಮಾಡಿದ್ದರು.

ಶ್ರೇಷ್ಠ ಸನ್ಯಾಸಿ ಇಲ್ಲವೇ ದೇಶದ ಚಕ್ರವರ್ತಿ-ನಿಜವಾಯ್ತು ಜ್ಯೋತಿಷಿ ಭವಿಷ್ಯ..!

ಹೀಗೆಂದು ಹೇಳಿದವರು ಓರ್ವ ಜ್ಯೋತಿಷಿಗಳು. ಮೋದೀಜಿ ತಾಯಿ, ಅವರ ಜಾತಕ ಕುಂಡಲಿಯನ್ನು ಜ್ಯೋತಿಷಿಗಳ ಬಳಿ ತೋರಿಸಿದ್ರು. ಆವಾಗ ಜ್ಯೋತಿಷಿಗಳು ನರೇಂದ್ರ ಮೋದೀಜಿಯ ಜಾತಕವನ್ನು ನೋಡಿ ಅಚ್ಚರಿ ಪಟ್ಟಿದ್ದರಂತೆ. ಮೋದೀಜಿಯ ಜಾತಕ ಕುಂಡಲಿಯನ್ನು ನೋಡಿದ ಆ ಜ್ಯೋತಿಷಿಗಳು, “ಈ ಜಾತಕದಲ್ಲಿರುವ ಪ್ರಕಾರ ಈ ಹುಡುಗ ಮನೆಮಂದಿಗಳನ್ನು ತ್ಯಜಿಸಿ ಸನ್ಯಾಸಿಯಾಗುತ್ತಾನೆ. ಹೀಗೇನಾದ್ರು ಆದ್ರೆ ಜಗತ್ತಿನ ಮತ್ತೊಬ್ಬ ಶ್ರೇಷ್ಠ ಸನ್ಯಾಸಿಯಾಗುತ್ತಾನೆ, ಧರ್ಮವನ್ನು ಎತ್ತಿ ಹಿಡಿಯುತ್ತಾನೆ. ಇಲ್ಲವೇ ದೇಶದ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಯಾಗುತ್ತಾನೆ. ಹೀಗೇನಾದ್ರು ಆದ್ರೆ ದೇಶವನ್ನು ಮಾತ್ರವಲ್ಲ, ಜಗತ್ತಿನ ಪಾಲಿಗೆ ಚಕ್ರವರ್ತಿಯಾಗುತ್ತಾನೆ” ಎಂದು ಹೇಳಿದ್ದರಂತೆ.

ಅಕ್ಷರಷಃ ಸತ್ಯವಾಯಿತಲ್ಲವೆ. ಸನ್ಯಾಸಿಯಾಗಬೇಕೆಂಬ ಹಂಬಲದೊಂದಿಗೆ ಹಿಮಾಲಯಕ್ಕೆ ತೆರಳಿದರೂ ದೇಶ ಮೋದಿಗಾಗಿ ಕಾಯತ್ತಾ ಇತ್ತು. ಆ ಪರಮೇಶ್ವರನ ಆಯ್ಕೆಯೇ ಬೇರೆಯಾಗಿತ್ತು. ಭ್ರಷ್ಟರಿಂದ ತುಂಬಿತುಳುಕುತ್ತಿದ್ದ ದೇಶವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ವಿಜ್ರಂಭಿಸಲು ಮೋದೀಜಿಯನ್ನು ಆ ಮೊದಲೇ ಆಯ್ಕೆ ಮಾಡಿದ್ದ ಆ ಭಗವಂತ. ಶಾಸಕಾಂಗ ವ್ಯವಸ್ಥೆಯಲ್ಲಿ ಇರದಿದ್ದರೂ ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾದರು ಮೋದೀಜಿ. ಸಂಸತ್ತಿಗೆ ಕಾಲಿಡದವರು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯಾಗಿದ್ರು ಮೋದೀಜಿ. ಇದು ಆ ಭಗವಂತನ ಸಂಕಲ್ಪವಲ್ಲದೆ ಮತ್ತೇನು..?

ಕುಟುಂಬಕ್ಕಾಗಿ ಅಧಿಕಾರ ದುರುಪಯೋಗಗೊಳಿಸದ ಧೀಮಂತ ನಾಯಕ..!

ತಾಯಿ… ಎಲ್ಲನೂ ತಾಯಿ. ಅಮೇರಿಕಾಗೆ ಹೋದ್ರೂನು ಅಮ್ಮನದ್ದೇ ಜಪ. ನನ್ನೆಲ್ಲಾ ಏಳಿಗೆಗೂ ನನ್ನ ಅಮ್ಮನೇ ಕಾರಣ ಎಂದು ಅಮೇರಿಕಾದಲ್ಲಿ ಕಣ್ಣೀರಿಟ್ಟಿದ್ದರು ಮೋದೀಜಿ. ಮೋದೀಜಿಗೆ ಅವರ ಕುಟುಂಬ ಅಂದ್ರೂನು ಅಷ್ಟೇ ಇಷ್ಟ. ಆದರೆ ಅವರು ಅಧಿಕಾರ ವಹಿಸಿಕೊಂಡ ಇಂದಿನವರೆಗೂ ತಮ್ಮ ಕುಟುಂಬಕ್ಕಾಗಿ ರಾಜಕೀಯ ಮಾಡಿದವರಲ್ಲ ಮೋದೀಜಿ. ತಮ್ಮ ಕುಟುಂಬವನ್ನು ಆಡಳಿತದ ಒಳಗೆ ಸೇರಿಸದೆ, ಯಾರನ್ನೂ ರಾಜಕೀಯಕ್ಕೆ ಸೇರಿಸದೆ ಇಂದಿಗೂ ಅವರನ್ನು ತಮ್ಮ ಆಡಳಿತಾತ್ಮಕ ವಿಷಯದಲ್ಲಿ ದೂರವಿಟ್ಟಿದ್ದಾರೆ ಮೋದೀಜಿ. ದೇಶದಲ್ಲಿ ತಾನೊಬ್ಬ ರಾಜಕೀಯಕ್ಕೆ ಬಂದರೆ ಸಾಕು ತನ್ನ ಇಡೀ ಕುಟುಂಬವನ್ನೇ ಕರೆಸಿ ಇಡೀ ಆಡಳಿತವನ್ನೇ ತನ್ನ ಕುಟುಂಬದ ಸುಪರ್ಧಿಗೆ ಸೇರಿಸಿಕೊಂಡು ದೇಶವನ್ನು ಕೊಳ್ಳೆ ಹೊಡೆಯುವಂತೆ ಮಾಡುತ್ತಾರೆ ಇಂದಿನ ರಾಜಕಾರಣಿಗಳು. ಆದರೆ ಮೋದೀಜಿ ಮಾತ್ರ ಎಲ್ಲರಿಗಿಂತ ಭಿನ್ನ. ಇಂದಿಗೂ ಕೂಡಾ ತನ್ನ ದೆಹಲಿಯ ಕೊಠಡಿಯೊಳಗೆ ತನ್ನ ಕುಟುಂಬವನ್ನು ಪ್ರವೇಶಿಸಲು ಅವಕಾಶವನ್ನು ನೀಡಲೇ ಇಲ್ಲ ಮೋದೀಜಿ.

ಕೆಲ ದಿನಗಳ ಹಿಂದೆ ಸುದ್ಧಿ ವಾಹಿನಿಯೊಂದು ಮೋದೀಜಿಯ ಕುಟುಂಬದ ಬಗ್ಗೆ ಸುಧೀರ್ಘ ಮಾಹಿತಿಯೊಂದನ್ನು ನೀಡಿತ್ತು. ಮೋದೀಜಿಯ ಆಸ್ತಿ ಹಾಗೂ ಅವರ ಕುಟುಂಬದ ಬಗ್ಗೆ ವರದಿಯಲ್ಲಿ ಹಲವಾರು ವಿವರಗಳು ಇದ್ದವು. ಈ ವರದಿಯನ್ನು ನೋಡಿ ಜನತೆ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಅಬ್ಭಾ ಮೋದೀಜಿ ಇಷ್ಟೊಂದು ನಿಸ್ವಾರ್ಥಿಯಾ ಎಂಬ ಮಾತು ದೇಶದಲ್ಲಿ ಮೊಳಗಿದ್ದವು.

* ಮೋದೀಜಿಯ ಹಿರಿಯ ಅಣ್ಣಾ ಒಂದು ಕಾರ್ಖಾನೆಯಲ್ಲಿ ಫಿಟ್ಟರ್ ಆಗಿದ್ದು, ಸದ್ಯ ನಿವೃತ್ತಿ ಹೊಂದಿ ತಮ್ಮ ಪೆನ್ಶನ್ ಹಣದಲ್ಲಿ ಕುಟುಂಬವನ್ನು ನಡೆಸುತ್ತಿದ್ದಾರೆ.

* ಇನ್ನೊಬ್ಬ ಅಣ್ಣಾ ಒಂದು ಪುಟ್ಟ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಇಂದಿಗೂ ತಮ್ಮನ ಬಗ್ಗೆ ಹೆಮ್ಮೆ ಇದೆಯೇ ಹೊರತು, ಅವರಿಂದ ಯಾವುದೇ ಅಪೇಕ್ಷೆಯನ್ನು ಇಟ್ಟುಕೊಂಡವರಲ್ಲ.

* ಮೋದೀಜಿಯ ಕಿರಿಯ ಸಹೋದರ ಪ್ರವಾಸೋಧ್ಯಮ ಇಲಾಖೆಯಲ್ಲಿ ಗುಮಾಸ್ತನಾಗಿ ಸಾಮಾನ್ಯನೆಂಬಂತೆ ಕೆಲಸ ಮಾಡುತ್ತಿದ್ದಾರೆ.

* ಮೋದೀಜಿಯ ಕಿರಿಯ ಸಹೋದರಿ ಓರ್ವ ಸಾಮನ್ಯ ಹುದ್ದೆಯಲ್ಲಿರುವಾತನ ಪತ್ನಿಯಾಗಿದ್ದಾರೆ.

* ಚಿಕ್ಕಪ್ಪನ ಮಗ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.

* ಚಿಕ್ಕಪ್ಪನ ಮಗಳು ಓರ್ವ ಸಾಮಾನ್ಯ ಬಸ್ ನಿರ್ವಾಹಕನ ಪತ್ನಿಯಾಗಿದ್ದಾರೆ.

ನೆನಪಿರಲಿ. ಇವರೆಲ್ಲರ ಆದಾಯವೂ ತಿಂಗಳಿಗೆ 15 ಸಾವಿರ ಮೀರಿಲ್ಲ. ಅಷ್ಟೇ ಹಣದಲ್ಲಿ ತಮ್ಮ ಕುಟುಂಬವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಕೆಲವರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟೆಲ್ಲ ಕಷ್ಟಗಳನ್ನು ಅನುಭವಿಸಿ ಜೀವನ ಸಾಗಿಸುತ್ತಿದ್ದರೂ ಇಂದಿಗೂ ಮೋದೀಜಿ ಬಳಿ ಕೈಚಾಚಿಲ್ಲ. ಮೋದೀಜಿ ಎಷ್ಟೊಂದು ಸ್ವಾಭಿಮಾನಿಯೋ ಅಷ್ಟೇ ಸ್ವಾಭಿಮಾನಿ ಮೋದೀಜಿ ಕುಟುಂಬ. ಮೋದೀಜಿ ಈವರೆಗೂ ಯಾರನ್ನು ಆಡಳಿತಾತ್ಮಕ ವಿಷಯದಲ್ಲಿ ತಮ್ಮ ಕುಟುಂಬವನ್ನು ಹತ್ತಿರ ಬರಲು ಬಿಟ್ಟಿಲ್ಲ. ಬಿಡಿ… ಅವರ ಕುಟುಂಬ ಕೂಡಾ ಅವಕಾಶವನ್ನು ಕೇಳಿಕೊಂಡು ಮೋದೀಜಿಯ ಬಳಿ ಹೋಗಲೇ ಇಲ್ಲ. ಓರ್ವ ದೇಶದ ಪ್ರಧಾನಿಯ ಕುಟುಂಬದ ಕಥೆ ಎಷ್ಟೊಂದು ರೋಚಕ ಅಲ್ವಾ…

ಇನ್ನೊಂದು ಮನಕಲಕುವ ವಿಷಯ ಇದೆ ನೋಡಿ. ಮೋದೀಜಿಯ ಹಿರಿಯ ಅಣ್ಣನ ಮಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಉನ್ನತ ಮಟ್ಟದ ಚಿಕಿತ್ಸೆಯ ಅಗತ್ಯ ಇತ್ತು. ಹಣ ಹೊಂದಿಸಲು ಸಾಧ್ಯವೇ ಆಗಿರಲಿಲ್ಲ. ಆದರೂ ಅವರ ಕುಟುಂಬದ ಸಹಾಯಕ್ಕಾಗಿ ಮೋದೀಜಿ ಬಳಿ ಕೇಳಲೇ ಇಲ್ಲ. ಕನಿಷ್ಟ ಪಕ್ಷ ಅವರು, ನಾವು ಮೋದೀಜಿ ಕುಟುಂಬಸ್ಥರು ಎಂಬ ವಿಷಯವನ್ನೂ ಆಸ್ಪತ್ರೆಯಲ್ಲಿ ತಿಳಿಸಲಿಲ್ಲ. ಯಾಕೆ ಕೇಳಲಿಲ್ಲ ಎಂಬ ಪ್ರಶ್ನೆಗೆ ಬಂದಂತಹ ಉತ್ತರ ಅದ್ಭುತವಾಗಿತ್ತು. “ನರೇಂದ್ರ ಹಣ ಸಂಪಾದನೆ ಮಾಡಲು ಹೋದವನಲ್ಲ. ಅವನ ಬಳಿ ಏನೂ ಇಲ್ಲವಲ್ಲಾ… ನಾವು ಕೇಳೋದಾದ್ರೂ ಹೇಗೆ..? ಆತನ ಹುದ್ದೆಗೆ ಸಿಗುವ ಸಂಭಳದಿಂದಲೇ ಆತ ಜೀವನ ನಡೆಸಬೇಕಲ್ವೇ?”… ನಿಜವಾಗಿಯೂ ಇಂತಹ ಕುಟುಂಬವನ್ನು ಪಡೆದ ಮೋದೀಜಿಯೇ ಧನ್ಯರಲ್ಲವೇ…?

ಮೋದೀಜಿಯ ಬಗ್ಗೆ ಅವರ ಎದುರಾಳಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ಆದರೆ ತಮಗೆ ಸಿಕ್ಕ ಸಂಭಳದಲ್ಲೇ ತಮ್ಮ ನಿತ್ಯದ ಆಹಾರ ಪದಾರ್ಥಗಳಿಗೆ ಖರ್ಚು ಮಾಡುತ್ತಾರೆ ಎಂದರೆ ನಂಬಲೇಕು. ಇಂತಹ ನಾಯಕ ಮತ್ತೊಬ್ಬನಿರುವನೇ..? ಹದಿನಾಲ್ಕು ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ, 3 ವರ್ಷ ದೇಶದ ಪ್ರಧಾನ ಮಂತ್ರಿಯಾಗಿ ಮೋದೀಜಿ ಯಾವುದೇ ಕಾರಣಕ್ಕೂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಲ್ಲ. ತಮ್ಮ ಕುಟುಂಬದ ಯಾವೊಬ್ಬ ಸದಸ್ಯನನ್ನೂ ತನ್ನ ಅರ್ಹತೆಯಿಂದ ರಾಜಕೀಯ ಪ್ರವೇಶ ಮಾಡಲು ಅವಕಾಶ ನೀಡಲಿಲ್ಲ.

ಲಾಲ್ ಬಹದ್ದೂರ್ ಶಾಸ್ತ್ರೀಜಿ ಹಾಗೂ ಮೋದೀಜಿಗೆ ಇಂತಹ ವಿಷಯದಲ್ಲಿ ವ್ಯತ್ಯಾಸಗಳಿವೆಯಾ. ಎಷ್ಟೊಂದು ಸ್ವಾಭಿಮಾನ ಜೀವನವನ್ನು ಮೋದೀಜಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಶಾಸ್ತ್ರೀಜಿ, ಅಟಲ್ ಬಿಹಾರಿ ವಾಜಪೇಯಿ ನಂತರ ದೇಶ ಉತ್ತಮ ಪ್ರಧಾನ ಮಂತ್ರಿಯನ್ನು ನೋಡುತ್ತಿದೆ. ಅವರ ಆಡಳಿತವನ್ನು ಜಗತ್ತೇ ಒಪ್ಪಿಕೊಂಡು ಮುದ್ದಾಡುತ್ತಿದೆ. ಅವರಿಗೆ ಕನಿಷ್ಟ ಪಕ್ಷ ನಮ್ಮಿಂದಾಗುವ ಬೆಂಬಲವನ್ನಾದ್ರೂ ನೀಡಬಾರದೆ.

ದೇಶದ ಕೀರ್ತಿಯನ್ನು ಆಕಾಶದೆತ್ತರ ಹಾರಿಸಲು ಕಟಿಬದ್ದರಾಗಿ ನಿಂತಿರುವ ನಮ್ಮ ಹೆಮ್ಮೆಯ ಪ್ರಧಾನಿಗೆ ನಾವೆಲ್ಲಾ ಪ್ರೋತ್ಸಾಹಿಸದಿದ್ದರೆ ನಾವು ಖಂಡಿತಾ ಉತ್ತಮ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅರ್ಥ. ನಮ್ಮೆಲ್ಲಾ ಆಯುಷ್ಯವನ್ನು ಆ ಭಗವಂತ ಮೋದೀಜಿಗೆ ನೀಡಿ ಇನ್ನಷ್ಟು ಕಾಲ ದೇಶಸೇವೆಯನ್ನು ಮಾಡುವ ಅವಕಾಶವನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಭಾಯಿ ಮೋದೀಜಿಗೆ ನೀಡಲಿ ಎನ್ನುವುದೇ ಸಮಸ್ತ ದೇಶ ಭಕ್ತರ ಹರಕೆ…

-postcard team

Tags

Related Articles

Close