ಪ್ರಚಲಿತ

ಭಾರತೀಯ ಸಂಸ್ಕøತಿಯಲ್ಲಿ ಅಕ್ಷಯ ತೃತೀಯದ ಮಹತ್ವದ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗುದಂತೂ ಖಂಡಿತ!!

ಇಂದು ಅಕ್ಷಯ ತೃತೀಯ. ಭಾರತದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಅಕ್ಷಯ ಎಂದರೆ ಕ್ಷಯವಿಲ್ಲದ್ದು ಎಂದರ್ಥ. ಚಿನ್ನ ನಮ್ಮ ದೇಶದ ಅಮೂಲ್ಯ ಭಂಡಾರ. ಆಪತ್ತಿಗೆ ಆಗುವ ನೆಂಟ. ಆ ಕಾರಣದಿಂದಲೇ ಚಿನ್ನವನ್ನು ಸಂಗ್ರಹಿಸಿಡುವ ಪದ್ಧತಿ ರೂಢಿಗೆ ಬಂತು. ವೈಶಾಖ ಮಾಸದ ಶುದ್ಧ ತೃತೀಯವೇ ಅಕ್ಷಯ ತೃತೀಯ. ಅಕ್ಷಯ ತೃತೀಯ ದಿನದಂದು ಇಡೀ ದಿನ ಶುಭ ಮಹೂರ್ತವಿರುತ್ತದೆ. ಅಂದು ಸೂರ್ಯ, ಚಂದ್ರ ಉಚ್ಚ ಸ್ಥಾನದಲ್ಲಿರುತ್ತಾರೆ. ಈ ದಿನದಂದೇ ಶ್ರೀ ವೇದವ್ಯಾಸರು ಮಹಾಭಾರತ ಬರೆಯುವಂತೆ ಗಣೇಶನಿಗೆ ಸೂಚಿಸಿದರಂತೆ. ಪುರಾಣಗಳ ಪ್ರಕಾರ ಜೀವಸೃಷ್ಟಿಯ ಆರಂಭದ ದಿನವೂ ಅಕ್ಷಯ ತೃತೀಯವಾಗಿದೆ. ಅಕ್ಷಯ ತೃತೀಯವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರವಾಗಿ ಹೆಚ್ಚು ಪವಿತ್ರವಾದುದು ಎಂಬುದಾಗಿ ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯವೆಂಬುದು ಶುಭದ ಸಂಕೇತವಾಗಿದೆ. ಎಂದಿಗೂ ಕೊನೆಯಾಗದ ಶುಭ ನಿರೀಕ್ಷೆಗಳು ಎಂಬ ಅರ್ಥವನ್ನು ಅಕ್ಷಯ ತೃತೀಯ ಸಾರಿ ಹೇಳುತ್ತದೆ.!!

ಈ ದಿನದಂದು ನೀವು ಏನು ಮಾಡಿದರೂ ಅದು ನಿಮಗೆ ದೊರೆಯುತ್ತದೆ ಅಂತೆಯೇ ನೀವು ಪಡೆದುಕೊಳ್ಳುವ ಲಾಭ ದುಪ್ಪಟ್ಟಾಗುತ್ತದೆ ಎಂಬ ವಿಶ್ವಾಸವಿದೆ. ಈ ದಿನದಂದು ಜನರು ದಾನ ಧರ್ಮಗಳನ್ನು ಮಾಡುತ್ತಾರೆ. ತಮ್ಮ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ಜನರು ದಾನ ಧರ್ಮಗಳನ್ನು ಮಾಡುತ್ತಾರೆ ಮತ್ತು ಮರಳಿ ಅವರಿಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯನ್ನು ಈ ದಿನವು ಹೊಂದಿದೆ. ಅಂತೆಯೇ ಯಾವುದೇ ಹೊಸ ಕೆಲಸಗಳನ್ನು ನೀವು ಈ ದಿನದಂದು ಆರಂಭಿಸಿದರೆ ಶುಭವಾಗುತ್ತದೆ.. ವಿವಾಹಗಳಿಗೆ ಈ ದಿನ ಶುಭ ಎಂಬ ನಂಬಿಕೆ ಇದೆ. ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಬಲವಾಗಿರುತ್ತದೆ ಮತ್ತು ಅನ್ಯೋನ್ಯವಾಗಿರುತ್ತದೆ ಎಂಬುದು ಜನಜನಿತವಾದ ಮಾತಾಗಿದೆ. ಅಂತೆಯೇ ದಂಪತಿಗಳು ಆನಂದದಿಂದ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ ಮುಂದಿನ ದಿನಗಳನ್ನು ಕಳೆಯುತ್ತಾರೆ. ಅಕ್ಷಯ ತೃತೀಯ ಕೂಡ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ… ಅಕ್ಷಯ ತದಿಗೆಯು ತ್ರೇತಾಯುಗದ ಆರ0ಭದ ಪ್ರಪ್ರಥಮ ದಿನವಾಗಿದೆ “ತೃತೀಯ” ಎ0ಬ ಪದವನ್ನು ಎರಡು ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ.

ಮೊದಲನೆಯದಾಗಿ, ಭಾರತೀಯ ಹಬ್ಬವಾಗಿರುವ ಈ ಪರ್ವದಿನವು ವೈಶಾಖ ಮಾಸದ ಮೂರನೆಯ ದಿನದ0ದೇ ಒದಗಿ ಬರುತ್ತದೆ. ಎರಡನೆಯದಾಗಿ, ತ್ರೇತಾಯುಗದ ಆರ0ಭದ ದಿನವು ಅಕ್ಷಯಾ ತೃತೀಯದ ದಿನವಾಗಿತ್ತೆ0ದು ಹೇಳಲಾಗಿದೆ. ಹಿ0ದೂಗಳ ನ0ಬಿಕೆಯ ಪ್ರಕಾರ ಈಗ ನಡೆಯುತ್ತಿರುವ ಕಲಿಯುಗವನ್ನೂ ಒಳಗೊ0ಡ0ತೆ ನಾಲ್ಕು ಯುಗಗಳು ಅಥವಾ ಶಕೆಗಳಿವೆ. ಅವು ಯಾವುದೆಂದರೆ: ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಹಾಗೂ ಕಲಿಯುಗ.

ಹಿಂದೂ ಧರ್ಮದ ಪ್ರಕಾರ ಹಿಂದೂ ಧರ್ಮದ ಪ್ರಾರಂಭದ ಬಗ್ಗೆ ಪುರಾಣಗಳಲ್ಲಿ ವಿವರಿಸಿರುವ ಪ್ರಕಾರ ಈ ದಿನ ವಿನಾಯಕ, ವಿಘ್ನನಿವಾರಕ ಅಥವಾ ಗಣೇಶನು ವೇದವ್ಯಾಸರು ಹೇಳುತ್ತಾ ಹೋದಂತೆ ಮಹಾಭಾರತವನ್ನು ಬರೆಯುತ್ತಾ ಹೋಗುತ್ತಾನೆ. ಈ ದಿನದಂದು ಲೋಕವನ್ನು ಲೋಕರಕ್ಷಕನಾದ ಭಗವಾನ್ ವಿಷ್ಣು ಆಳುತ್ತಿದ್ದ. ಪುರಾಣದ ಪ್ರಕಾರ ತ್ರೇತಾಯುಗದ ಈ ದಿನದಂದು ಭಾರತದ ಪವಿತ್ರ ನದಿಯಾದ ಗಂಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು ಎಂದು ಹೇಳಲಾಗಿದೆ. ಇವೆರಡೂ ಕಾರಣಗಳಿಗಾಗಿ ‘ಅಕ್ಷಯ ತೃತೀಯ’ ಪವಿತ್ರ ದಿನವಾಗಿದೆ. ಪರಶುರಾಮನ ಹುಟ್ಟಿದ ದಿನ ‘ಅಕ್ಷಯ ತೃತೀಯ’ವನ್ನು “ಆಖಾ ತೀಜ್” ಎಂದು ಕರೆಯಲಾಗುತ್ತದೆ. ಆಖಾ ತೀಜ್ ಎಂದರೆ ಸಾಂಪ್ರಾದಾಯಕವಾಗಿ ವಿಷ್ಣುವಿನ ಆರನೆಯ ಅವತಾರವಾದ ಪರಶುರಾಮನ ಹುಟ್ಟಿದ ದಿನ ಎಂದೂ ಕರೆಯಲಾಗುತ್ತದೆ. ಅಲ್ಲದೇ ಇದೇ ದಿನದಂದು ನಾಲ್ಕು ಯುಗಗಳಲ್ಲಿ ಪ್ರಥಮ ಮತ್ತು ಸುವರ್ಣಯುಗ ಎಂದೇ ಕರೆಯಲಾಗುತ್ತಿದ್ದ ಸತ್ಯಯುಗವೂ ಪ್ರಾರಂಭವಾಯಿತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

Image result for akshaya tritiya

ದೇವತೆಗಳ ಕೋಶಾಧಿಪತಿಯಾದ ಕುಬೇರ ಈ ಭಾರತೀಯ ಹಬ್ಬದ ದಿನದ0ದು ಚಿನ್ನವನ್ನು ಕೊ0ಡುಕೊಳ್ಳುವುದರ ಹಿ0ದಿರುವ ಉದ್ದೇಶವಾದರೂ ಏನೆ0ದು ಎ0ದಾದರೂ ಯೋಚಿಸಿದ್ದೀರಾ? ಗಮನಾರ್ಹವಾಗಿ, ಈ ದಿನದ0ದು ಚಿನ್ನ, ಬೆಳ್ಳಿ, ಅಥವಾ ಇತರ ಅಮೂಲ್ಯವಾದ ವಸ್ತುಗಳನ್ನು ಕೊ0ಡುಕೊಳ್ಳುವುದು ಮ0ಗಳಕರವೆ0ದು ಪರಿಗಣಿಸಲಾಗಿದ್ದು, ಇದರಿ0ದ ವ್ಯಕ್ತಿಯೋರ್ವರ ಸ0ಪತ್ತು ಅಕ್ಷಯವಾಗುತ್ತದೆಯೆ0ದು ಪರಿಗಣಿಸಲಾಗಿದೆ. ಆದರೆ, ಈ ಹಿ0ದೂ ಆಚರಣೆಯ ಹಿ0ದಿರುವ ದ0ತಕಥೆಯೇನೆ0ದರೆ, ಭಗವಾನ್ ಕುಬೇರನು ಈ ಶುಭದಿನದ0ದು ಸ0ಪತ್ತು ಹಾಗೂ ಅಭ್ಯುದಯದ ಅಧಿದೇವತೆಯಾದ ಮಾತೆ ಲಕ್ಷ್ಮೀದೇವಿಗೆ ಉಪದೇಶಿಸಿದನು ಎ0ದು ನ0ಬಲಾಗಿದೆ.

ಉತ್ತರ ಭಾರತದಲ್ಲಿ ಕೃಷಿಯನ್ನು ಅವಲಂಬಿಸಿದ ಪಂಗಡಗಳಲ್ಲಿ ಪ್ರಮುಖರಾದ ಜಾಟ್ ಸಮುದಾಯಕ್ಕೂ ಈ ದಿನ ಪವಿತ್ರವಾಗಿದೆ. ಈ ದಿನದ ಮುಂಜಾನೆ ಸಮುದಾಯದ ಪುರುಷರು ಗುದ್ದಲಿಯನ್ನು ತಮ್ಮ ಗದ್ದೆಗಳಿಗೆ ಕೊಂಡೊಯ್ಯುತ್ತಾರೆ. ದಾರಿಯಲ್ಲಿ ಸಿಕ್ಕ ಹಕ್ಕಿ ಮತ್ತು ಪ್ರಾಣಿಗಳು ಗುದ್ದಲಿಗೆ ಸಿಕ್ಕರೆ ಇವು ಮುಂದಿನ ಬೆಳೆಗೆ ಮತ್ತು ಮಳೆಗೆ ನೆರವಾಗುತ್ತದೆ ಮತ್ತು ಶುಭಶಕುನ ಎಂದು ಇವರು ನಂಬುತ್ತಾರೆ. ಈ ದಿನದಂದು ಗುಜರಾತಿನ ಪಾಲಿತಾನಾ ನಗರದಲ್ಲಿರುವ ಶೇತೃಂಜಯ ಪರ್ವತದ ಅಥವಾ ಪುಂಡರೀಕಗಿರಿಯ ನೆರಳಿನಲ್ಲಿ ಕಬ್ಬಿನ ಹಾಲನ್ನು ಸೇವಿಸುವ ಮೂಲಕ ಉಪವಸವನ್ನು ಸಂಪನ್ನಗೊಳಿಸಲಾಗುತ್ತದೆ.

ಗ0ಗಾನದಿಯು ಪ್ರವಹಿಸಿದ ಪ್ರಥಮ ದಿನವಾಗಿದೆ ಈ ದಿನದ0ದೇ ಗ0ಗಾನದಿಯು ಪ್ರಪ್ರಥಮವಾಗಿ ಧರೆಗಿಳಿಯಿತು ಎ0ದು ನ0ಬಲಾಗಿದೆ. ಗ0ಗಾನದಿಗೆ ಸ0ಬ0ಧಿಸಿದ ಕಥಾನಕದ ಪ್ರಕಾರ, ಗ0ಗಾನದಿಯು ಸಮಸ್ತ ಮಾನವಕೋಟಿಯ ಪಾಪಕರ್ಮಗಳನ್ನು ತೊಳೆದು ಅವರನ್ನು ಪವಿತ್ರರನ್ನಾಗಿಸುವುದಕ್ಕಾಗಿ ಈ ದಿನದ0ದು ಭುವಿಗಿಳಿದಳು ಎ0ದು ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಹಿ0ದೂ ಧಾರ್ಮಿಕ ವಿಧಿವಿಧಾನಗಳ ವಿಚಾರಕ್ಕೆ ಬ0ದಾಗ, ಗ0ಗಾನದಿಯು ಅತ್ಯ0ತ ಪವಿತ್ರವಾದ ನದಿಯಾಗಿರುತ್ತದೆ. ವಾಸ್ತವವಾಗಿ ಗ0ಗಾನದಿಗೆ ದೇವತೆಯೆ0ಬ ವ್ಯಕ್ತಿರೂಪವನ್ನು ಆರೋಪಿಸಲಾಗಿದ್ದು, ಈಕೆಯು ಭುವಿಗಿಳಿಯುವುದಕ್ಕೆ ಮು0ಚೆ ಸ್ವರ್ಗಲೋಕದಲ್ಲಿ ವಾಸಿಸುತ್ತಿದ್ದವಳು ಎ0ದು ಹೇಳಲಾಗುತ್ತದೆ!!

ಮಹಾಭಾರತದ ಕಥೆಯ ಪ್ರಕಾರ ಇದೇ ದಿನದಂದು ಧರ್ಮರಾಜನಿಗೆ ಸೂರ್ಯನಿಂದ ಅಕ್ಷಯಪಾತ್ರೆ ದೊರೆಯಿತು. ಶ್ರೀಕೃಷ್ಣನು ದ್ರೌಪದಿಗೆ ಅಕ್ಷ ಯಾಂಬರವನ್ನೂ ಕರುಣಿಸಿದ ದಿನವೇ ಅಕ್ಷಯ ತೃತೀಯ. ಶ್ರೀಕೃಷ್ಣ ಸುಧಾಮನಿಗೆ ಅಕ್ಷಯ ಸಂಪತ್ತನ್ನು ದಯಪಾಲಿಸಿದ ದಿನ. ಶಿವಪುರಾಣದ ಅನುಸಾರ ಕುಬೇರನು ಸಂಪತ್ತಿನ ನಿರ್ವಹಣೆಯ ಕೆಲಸವನ್ನು ಶ್ರೀಮಹಾಲಕ್ಷ್ಮಿಯೊಂದಿಗೆ ಪಡೆದ ದಿನ. ಅದಕ್ಕಾಗಿಯೇ ಕುಬೇರನನ್ನು ಮುಕ್ಕಣ್ಣ ಸಖ ಎಂತಲೂ ಕರೆಯುತ್ತಾರೆ. ಅವನನ್ನು ದಿಕ್ಪಾಲಕರಲ್ಲೊಬ್ಬನನ್ನಾಗಿಸಿದ್ದೂ ಇದೇ ಸಂದರ್ಭದಲ್ಲಿ (ಉತ್ತರ ದಿಕ್ಕು) ಅಧುನಿಕದಲ್ಲಿ ಶ್ರೀ ಶಂಕರಾಚಾರ್ಯರು ಭಿಕ್ಷೆನೀಡಲು ಅಸಹಾಯಕರಾಗಿದ್ದ ದಂಪತಿಗಳ ಸಲುವಾಗಿ ಕನಕಧಾರಾ ಸ್ತೋತ್ರವನ್ನು ರಚಿಸಿದ ದಿವನ್ನಾಗಿಯೂ ಶ್ರದ್ಧಾಳುಗಳು ನೆನಪಿಸಿಕೊಳ್ಳುತ್ತಾರೆ. ಈ ದಿನದಂದೇ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು ಜನಿಸಿದ್ದಾರೆ.

ಪವಿತ್ರ

Tags

Related Articles

Close