ಪ್ರಚಲಿತ

ಉತ್ತರಪ್ರದೇಶದಲ್ಲಿ ಶ್ರೀರಾಮನ ರಾಜಧಾನಿ ಅಯೋಧ್ಯೆ ನಿರ್ಮಿಸಲು ಯೋಗಿ ಆದಿತ್ಯನಾಥ್ ಕೈಗೊಂಡ ನಿರ್ಧಾರವೇನು ಗೊತ್ತೆ??

ಸುಮಾರು ದಶಕಗಳಿಂದಲೂ ಅಯೋಧ್ಯೆಯ ವಿವಾದ ನಡೆಯುತ್ತಲೇ ಇದ್ದು ಇದಕ್ಕೆ ಕೊನೆಯೆಂದು ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಲೇ ಇವೆ!! ಈಗಾಗಲೇ ಅನೇಕ ಸರ್ಕಾರಗಳು ಬಂದು ಹೋದರು ಕೂಡ ರಾಮ ಮಂದಿರದ ವಿವಾದವನ್ನು ಬಗೆ ಹರಿಸಿಲ್ಲ, ಬದಲಿಗೆ ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಬಂದಿದ್ದರೂ ಕೂಡ ಅದು 2014ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ರಾಮ ಮಂದಿರದ ಕುರಿತಂತೆ ಭರವಸೆ ಜಾಸ್ತಿ ಆಗಿವೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ರಾಮಮಂದಿರ ನಿರ್ಮಾಣ ಕುರಿತಂತೆ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ!!

ಉತ್ತರ ಪ್ರದೇಶದ ಚುಕ್ಕಾಣಿಯನ್ನು ಯೋಗಿ ಆದಿತ್ಯನಾಥರಿಗೆ ವಹಿಸಿದ ನಂತರ ಹಿಂದುಗಳ ಭರವಸೆ ನೂರ್ಮಡಿಯಾದದ್ದಂತೂ ಅಕ್ಷರಶಃ ನಿಜ. ಮೊದಲಿನಿಂದಲೂ ಯೋಗಿ ಆದಿತ್ಯಾನಾಥರು ರಾಮ ಮಂದಿರದ ಕುರಿತಂತೆ ಸಾಕಷ್ಟು ಸುದ್ದಿಯಾಗಿದ್ದರಲ್ಲದೇ ಈ ಸಲ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಅಯೋಧ್ಯೆಯಲ್ಲಿಯೇ ಆಚರಿಸಿದ್ದರು. ಅಷ್ಟೇ ಅಲ್ಲದೇ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ರಾಮಜನ್ಮಭೂಮಿ ವಿಚಾರ ಮತ್ತಷ್ಟು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಇದೀಗ ಯೋಗಿ ಆದಿತ್ಯನಾಥ್ ಸರ್ಕಾರವು ನವ ಅಯೋಧ್ಯಾ ನಗರದ ನಿರ್ಮಾಣಕ್ಕೆ ಚಿಂತನೆ ನಡೆಸಿದೆ.

ಹೌದು…. ದೇಗುಲ ನಗರಿ ಅಯೋಧ್ಯಾದಲ್ಲಿ 100 ಮೀಟರ್ ಉದ್ದದ ರಾಮನ ಪ್ರತಿಮೆಯನ್ನು ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿರುವ ಉತ್ತರಪ್ರದೇಶ ಸರ್ಕಾರ, ಇದೀಗ ನವ ಅಯೋಧ್ಯಾ ನಗರದ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಅಯೋಧ್ಯೆಯ ಸರಯೂ ನದಿಯ ತೀರದಲ್ಲಿ 100 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣ ಮಾಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಜನೆ ರೂಪಿಸಿದ್ದಲ್ಲದೇ, ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು!!

ಅಷ್ಟೇ ಅಲ್ಲದೇ ನವ್ಯ ಅಯೋಧ್ಯೆ ಯೋಜನೆಯಡಿ ರಾಮನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಧಾನ ನಿರ್ದೇಶಕ ಅವನೀಶ್ ಅವಸ್ತಿ ತಿಳಿಸಿದ್ದು, ಈ ಯೋಜನೆಯ ವೆಚ್ಚ 330 ಕೋಟಿ ರೂಪಾಯಿಯಾಗಲಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಇದು ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ತಾಣವೂ ಆಗಲಿದೆ ಎಂದು ಅವಸ್ತಿ ಹೇಳಿದ್ದರು!! ಹಾಗಾಗಿ ರಾವಣ ಸಂಹಾರ ಹಾಗೂ ಲಂಕಾದಹನ ಮಾಡಿ ವಿಜಯಿಯಾಗಿ ರಾಮ ಬಂದಾಗ ಮಾಡಲಾದ ಪಟ್ಟಾಭಿಷೇಕದ ಮಾದರಿಯಲ್ಲಿಯೇ ರಾಮ್ ರಾಜ್ಯಾಭಿಷೇಕ ಯೋಜನೆಯನ್ನೂ ಜಾರಿಗೆ ತರಲು ಯೋಗಿ ಸರಕಾರ ಮುಂದಾಗಿತ್ತು!!

ಆದರೆ ಇದೀಗ ನವ ಅಯೋಧ್ಯಾ ನಗರವನ್ನು ನಿರ್ಮಾಣ ಮಾಡಲು ಹೊರಟಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವ ಅಯೋಧ್ಯಾ ನಗರ 500 ಎಕರೆ ಪ್ರದೇಶದಲ್ಲಿ ಅಂದಾಜು ರೂಪಾಯಿ 3.5 ಬಿಲಿಯನ್ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಎನ್ನುವ ವಿಚಾರವೂ ಕೇಳಿ ಬಂದಿದೆ!! ಅಷ್ಟೇ ಅಲ್ಲದೇ, ಸರಯು ನದಿಯ ಬಲಭಾಗದಲ್ಲಿ ಈ ನವ ಅಯೋಧ್ಯಾ ನಗರ ತಲೆ ಎತ್ತಲಿದೆ. ಹಾಗಾಗಿ, ಅಯೋಧ್ಯಾ ಫೈಝಾಬಾದ್ ಡೆವಲಪ್ ಮೆಂಟ್ ಅಥಾರಿಟಿ ಪ್ರಸ್ತಾವಣೆಯನ್ನು ಸಿದ್ಧಪಡಿಸಿ ನೋಡಲ್ ಏಜೆನ್ಸಿಯ ಅನುಮೋದನೆ ಪಡೆದ ಬಳಿಕ ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ ಎನ್ನುವ ವಿಚಾರ ತಿಳಿದು ಬಂದಿದೆ!!

ಈಗಾಗಲೇ ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರವು ಇದೀಗ ಹುಸಿಯಾಗಿದೆ. ಯಾಕೆಂದರೆ ರಾಮ ಮಂದಿರದ ಮರುನಿರ್ಮಾಣಕ್ಕೆ ಮುಸಲ್ಮಾನ ಸ್ನೇಹಿತರೇ ಮುಂದಾಗಿರುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲು ಸಜ್ಜಾಗಿದ್ದಾರೆ!! ಇದರಿಂದಾಗಿ ರಾಜಕೀಯವಾಗಿ ರಾಮ ಮಂದಿರದ ವಿಚಾರದಲ್ಲಿ ಭಾಷಣ ಬಿಗಿಯುತ್ತಿದ್ದ ಜಾತ್ಯಾತೀತವಾದಿಗಳ ಬಾಯಿಗೆ ಬೀಗ ಜಡಿದಂತಾಗಿದೆ. ವಿಪರ್ಯಾಸವೇನೆಂದರೆ ಮರುನಿರ್ಮಾಣಕ್ಕೆ ಸಾಥ್ ನೀಡಿರುವ ಮುಸಲ್ಮಾನ ಸ್ನೇಹಿತರ ಬಗೆಗೆ ಮುಖ್ಯವಾಹಿನಿ ಮಾಧ್ಯಮಗಳು ಯಾವುದೇ ರೀತಿಯ ಮಾಹಿತಿಯನ್ನು ಹೊರಹಾಕಿಲ್ಲ. ಒಂದೆರಡು ಮಾಧ್ಯಮಗಳನ್ನು ಬಿಟ್ಟರೇ ಈ ಬಗೆಗೆ ಯಾವುದೇ ರೀತಿಯ ವಿಷಯವನ್ನು ಯಾವುದೇ ಮಾಧ್ಯಮಗಳು ವ್ಯಕ್ತಪಡಿಸಿಲ್ಲ ಅನ್ನೋದೇ ಬೇಸರದ ವಿಚಾರ!!

ಯೋಗಿ ಆದಿತ್ಯನಾಥ್ ರಂತಹ ಮುಖ್ಯಮಂತ್ರಿ ಪ್ರತಿಯೊಂದು ರಾಜ್ಯದಲ್ಲಿ ಏಕೆ ಇಲ್ಲ ಎನ್ನುವ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮನೆಮಾತಾಗಿದ್ದವು. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳು ಯೋಗಿ ಆದಿತ್ಯನಾಥರ ಕಾನೂನಿಗೆ ನಲುಗಿ ಹೋಗಿ ಎನ್ ಕೌಂಟರ್ ಗೆ ಹೆದರಿ ಶರಣಾಗಲು ಮುಂದಾಗಿದ್ದಲ್ಲದೇ ಅದೆಷ್ಟೋ ರೌಡಿಗಳು ರೌಡಿ ಜೀವನಕ್ಕೆ ಗುಡ್ ಬೈ ಹೇಳಿ ತಮ್ಮ ನಿತ್ಯದ ಕಾರ್ಯಕಲಾಪದಲ್ಲಿ ತೊಡಗಿ ಸುದ್ದಿಯಾಗಿದ್ದರು.

ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯೊಂದು ವರ್ಷಾಂತ್ಯಕ್ಕೆ ಪ್ರತಿಷ್ಠಾಪನೆಗೊಳ್ಳಲಿದ್ದು, ಈಗಾಗಲೇ ಇದರ ಎಲ್ಲಾ ತಯಾರಿಯೂ ಭರ್ಜರಿಯಾಗಿಯೇ ನಡೆದಿದೆ. ಅಷ್ಟಧಾತುವಿನಿಂದ ನಿರ್ಮಾಣವಾಗಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅಂತಾರಾಷ್ಟ್ರೀಯ ಯುವ ಕಲಾವಿದ ವಾಜಿದ್ ಖಾನ್ ನಿರ್ಮಿಸಲಿದ್ದಾರೆ ಎನ್ನುವ ವಿಚಾರ ಈಗಾಗಲೇ ತಿಳಿದೇ ಇದೆ. ಆದರೆ ಇದೀಗ ದೇಗುಲ ನಗರಿ ಅಯೋಧ್ಯಾದಲ್ಲಿ ಇದೀಗ ನವ ಅಯೋಧ್ಯಾ ನಗರವನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ ಎಂದರೆ ಮತ್ತೆ ಶ್ರೀರಾಮನ ನಾಡಿನಲ್ಲಿ ಹಿಂದೂ ಕಹಳೆ ಮತ್ತೊಮ್ಮೆ ಮೊಳಗಲಿರುವುದು ಖಚಿತ ಎಂದನಿಸುತ್ತಿದೆ!!

ಮೂಲ: http://news13.in/archives/100153

– ಅಲೋಖಾ

Tags

Related Articles

Close