ಪ್ರಚಲಿತ

ಕಾಂಗ್ರೆಸ್ ಸರ್ಕಾರವು ತನ್ನ ಹಲವಾರು ವಾಗ್ದಾನಗಳನ್ನು ಪೂರ್ತಿ ಮಾಡಿಲ್ಲ ಎನ್ನುವುದು ಖಚಿತ. ಹಾಗಾದರೆ ಬಿಜೆಪಿನೆ ಸರಿಯಾದ ಆಯ್ಕೆಯೇ? ಎರಡು ದಳಗಳ ಹೋಲಿಕೆಯನ್ನು ಇಲ್ಲಿ ನಾವು ವಿಸ್ತರಿಸಿದ್ದೇವೆ.

ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕವು ಮತದಾನ ಮಾಡುತ್ತೆ. ಅದಕ್ಕಿನ್ನ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನ್ನಡಿಗರನ್ನು ವಿಭಾಗಿಸುವಂತ ಭಾಷಣಗಳಿಂದ ದೂರ ಹೋಗಿ, ಅವರು ೨೦೧೩ ಅಲ್ಲಿ ಮಾಡಿದ್ದ ಚುನಾವಣಾ ಘೋಷಣೆಗಳನ್ನು ಎಷ್ಟರಮಟ್ಟಿಗೆ ಪೂರ್ತಿ ಅಥವಾ ಅಪೂರ್ತಿಗೊಳಿಸಿದ್ದಾರೆ ಎಂದು ತಿಳಿಯುವುದು ಮುಖ್ಯ!
ರೈತರಿಗೆ ೨೪ ಘಂಟೆ ವಿದ್ಯುತ್ ಸರಬರಾಜಾಗಿರಲಿ, ಸೋಲಾರ್ ಪಂಪುಗಳಿಗೆ ೭೫% ಸಹಾಯಧನವಾಗಿರಲಿ, ಪ್ರತಿ ಜಿಲ್ಲೆಗೂ “ಸೂಪರ್-ಸ್ಪೆಷಾಲಿಟಿ” ಆಸ್ಪತ್ರೆಯಾಗಿರಲಿ, ಪ್ರತಿ ತಾಲೂಕಿಗೂ ಒಂದು ಕ್ರೀಡಾಂಗಣವಾಗಿರಲಿ,ಪ್ರತಿ ಪಂಚಾಯತ್ತಿಗೂ ಪಶುವೈದ್ಯ ಆಸ್ಪತ್ರೆಯಾಗಿರಲಿ, ಕೃಷ್ಣ ಜಲಾನಯನದಲ್ಲಿ ೫೦,೦೦೦ ಕೋಟಿ ರೂಪಾಯಿಗಳ ನೀರಾವರಿ ಯೋಜನೆಗಳಾಗಲಿ,”ನಮ್ಮ ಹೊಲ, ನಮ್ಮ ರಸ್ತೆ” ಯೋಜನೆಯ ಮೂಲಕ ಪ್ರತಿ ಹೊಲವನ್ನು ಪಕ್ಕ ರಸ್ತೆಗೆ ಜೋಡಿಸುವುದಾಗಲಿ, ಪ್ರತಿ ಮಾರುಕಟ್ಟೆಯಲ್ಲೂ ಶೈತ್ಯೀಕೃತ ಸಂಗ್ರಹಣ ಕೊಠಡಿಯಾಗಲಿ, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಎಲ್ಲಾ ರೀತಿಯಿಂದಲೂ ವಿಫಲವಾಗಿದೆ!

ಬೆಂಗಳೂರು ನಗರವು ಎಲ್ಲಾ ಪತ್ರಿಕೆಗಳಲ್ಲಿ, ನ್ಯೂಸ್ ಚ್ಯಾನೆಲ್ಗಳಲ್ಲಿ ತಪ್ಪಾದ ಕಾರಣಗಳಿಗೆ ಪ್ರಸಿದ್ಧಿ ಹೊಂದಿದೆ. ೧೪,೫೦೦ ಕಿ.ಮೇ. ರಸ್ತೆಗಳಲ್ಲಿ ೧೫,೯೩೫ ಗುಂಡಿಗಳು, ಬರೀ ೧೦% ಒಳಚರಂಡಿ ಕೊಳಚೆ ನೀರು ಸಂಸ್ಕರಣ, ಬೆಳಂದೂರು ಕೆರೆಯ ಸರ್ವನಾಶ, ನೀರಿಗೆ ತತ್ತಲಿಸುತ್ತಿರುವ ಜನತೆಯಲ್ಲಿ ಬರೀ ೫೬%-ಗೆ ನೀರು ಸರಬರಾಜು – ಇವು ಬೆಂಗಳೂರು ನಗರದ ಸಾವಿರಾರು ಸಮಸ್ಯೆಗಳಲ್ಲಿ ಕೆಲವು. ಬೆಂಗಳೂರು “ಗಾರ್ಡನ್ ಸಿಟಿ” ಇಂದ “ಗಾರ್ಬ್ಯೇಜ್ ಸಿಟಿ” ಆಗಿದೆ.

ದೇವನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿ-ಗೆ (೪೧ ಕೆ.ಮೀ.) ದೂರ ಹೋಗಲು ದೆಹಲಿಯಿಂದ ಬೆಂಗಳೂರಿಗೆ (೨೧೫೪ ಕೆ.ಮೀ.) ವಿಮಾನದಲ್ಲಿ ಹೋಗುವಷ್ಟು ಸಮಯವಾಗುತ್ತದೆ ಇಂದು. ಎಲ್ಲಿದೆ ಕಾಂಗ್ರೆಸ್ ಸರ್ಕಾರ?

ಸ್ವತಃ ಮುಖ್ಯಮಂತ್ರಿಗಳ ಜಿಲ್ಲೆಯ ಕಥೆಯಂತೂ ಹೇಳಿವುದಕ್ಕೆ ನಾಚಿಕೆಯಾಗುತ್ತೆ. ಮೈಸೂರಿನಲ್ಲಿ ಕಳೆದ ವರ್ಷ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಸಮುದಾಯಗಳ ಮಧ್ಯ ದ್ವೇಷವನ್ನು ಉಂಟು ಮಾಡುವುದರಲ್ಲಿ ವ್ಯಸ್ಥರಾಗಿದ್ದಾರೆ. ಉತ್ತರ ಭಾರತ ದಕ್ಷಿಣ ಭಾರತದ ಮಧ್ಯೆ, ಲಿಂಗಾಯತ್ ವೀರಶೈವರ ಮಧ್ಯೆ,ಲಿಂಗಾಯತ್ ಒಕ್ಕಲಿಗರ ಮಧ್ಯೆ, ಹಿಂದೂ ಮುಸ್ಸಲ್ಮಾನರ ಮಧ್ಯೆ, ದಲಿತ್ ಭ್ರಾಹ್ಮಣರ ಮಧ್ಯೆ, ಗೌಡ-ಒಕ್ಕಲಿಗ ಕುರುಬರ ಮಧ್ಯೆ, ಮೊದಲಿಯಾರ್ ಗೌನ್ಡರ್ಗಳ ಮಧ್ಯೆ, ಸಿದ್ದರಾಮಯ್ಯನವರು ದ್ವೇಷ ಉತ್ಪನ್ನ ಮಾಡುತ್ತಿರುವುದರಲ್ಲಿ ವ್ಯಸ್ಥರಾಗಿರೋದರಲ್ಲಿ ಕರ್ನಾಟಕವನ್ನು ಮರೆತಿದ್ದಾರೆ. ನಾಡು ಒಂದು ಇಕ್ಕಟ್ಟಿನಿಂದ ಇನ್ನೊಂದು ಇಕ್ಕಟ್ಟಿಗೆ ಹಾಯ್ದು ಹೋಗುತ್ತಿದೆ.

ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗೆ ನೀಡುವುದು ಬರಿ ಬಾಯಿಸೇವೆ. ಕಾಂಗ್ರೆಸ್ ದಳವು ನರೇಂದ್ರ ಮೋದಿ ಸರ್ಕಾರದ ಇತರ ಹಿಂದುಳಿದ ವರ್ಗ ಆಯೋಗಕ್ಕೆ ಸಾಂವಿಧಾನಿಕ ದರ್ಜೆಯನ್ನು ಕೊಡುವ ಪ್ರಸ್ತಾಪವನ್ನು ತಡೆದಿದೆ. “ಶಾದಿ ಭಾಗ್ಯ” ಯೋಜನೆಯ ಮೂಲಕ ಸಿದ್ದರಾಮಯ್ಯನವರು ಮುಸ್ಸಲ್ಮಾನ್ ವಧುಗಳಿಗೆ ೫೦೦೦೦ ರೂಪಾಯಿ ಹಣ ಕೊಡತ್ತೆ, ಅಲ್ಲೇ ಕಾಂಗ್ರೆಸ್ ದಳವು ಟ್ರಿಪಲ್ ತಲಾಕ್ ವಿಷಯದಲ್ಲಿ ರಾಜ್ಯ ಸಭೆಯಲ್ಲಿ ತಡೆ ಉಂಟು ಮಾಡಿದೆ.

ಮಧ್ಯ ಕರ್ನಾಟಕದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಪ್ರತಿ ದಿನ ತಡೆಗಳಿದ್ದರೂ ಕೂಡ, ಸಿದ್ದರಾಮಯ್ಯನವರು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಾಯು ಶಕ್ತಿ ವಿದ್ಯುತ್ ಉತ್ಪಾದಕರಂದ ವಿದ್ಯುತ್ ಖರೀದಾರಿಗೆ ಅಂತಿಮಗೊಳಿಸಿದ್ದ ರೂ. ೩.೭೪ ಪ್ರತಿ ಯುನಿಟ್ ಬದಲು ರೂ. ೪.೫೦ ಪ್ರತಿ ಯುನಿಟ್ ಶುಲ್ಕವನ್ನು ಖಚಿತಗೊಳಿಸಿದರು. ಇದು ಅವರ ಬೇಕಿಲ್ಲದ ಹಸ್ತಕ್ಷೇಪ ಮತ್ತು ದುಷ್ಕೃತ್ಯಗಳ ಒಂದು ಉದಾಹರಣೆ. ಈ ಕಾರ್ಯದಿಂದ ೫೯೯ ಮೆಗಾ ವಾಟ್ ವಾಯು ಶಕ್ತಿಯಿಂದ ಆಗಬೇಕಿದ್ದ ವಿದ್ಯುತ್ ಉತ್ಪಾದನೆ ನಿಲ್ಲಿಸ ಬೇಕಾಗಿ ಬಂದು ಅವರ ವಿಧಾನಸಭೆ ಕ್ಷೇತ್ರವಾದ ವರುಣವನ್ನೇ ಕಗ್ಗತ್ತಲೆಯಲ್ಲಿ ತಳ್ಳಿತು.

ಸಿದ್ದರಾಮಯ್ಯನವರ ಅಲಕ್ಷ್ಯತೆ ಎಷ್ಟರಮಟ್ಟಿಗೆ ಹೋಗಿದೆ ಅಂದ್ರೆ, ಕಳೆದ ವರ್ಷ ಅವರ ಸರ್ಕಾರವು ಬಜೆಟ್ ಮಾಡಿದ ಖರ್ಚಿನಲ್ಲಿ ಅರ್ಧ ಭಾಗದಷ್ಟು ಮಾತ್ರ ವ್ಯಯ ಮಾಡಿಡೆ! ೨೩ ವಿಭಾಗಗಳು ೫೦% ಕಿಂತ ಕಡಿಮೆ ಖರ್ಚು ಮಾಡಿವೆ. ಜನತೆಗೆ ಕೊಟ್ಟ ಮಾತೆಲ್ಲಿ, ಮಾಡಿದ ಕೆಲಸವೆಲ್ಲಿ? ಬಜೆಟಲ್ಲಿ ಕೊಟ್ಟಿದ್ದು ೧,೭೮,೩೮೫ ಕೋಟಿ, ಖರ್ಚು ಮಾಡಿದ್ದು ೯೯,೭೭೪ ಕೋಟಿ!

ಯುಪಿಎ ಮನ್ಮೋಹನ್ ಸರ್ಕಾರ ಶಾಸನದಲ್ಲಿದ್ದಾಗ ಹದಿಮೂರನೆಯ ಫೈನಾನ್ಸ್ ಕಮಿಷನ್ ಮೂಲಕ ೮೮,೫೮೩ ಕೋಟಿ ರೂಪಾಯಿಗಳು ಕೊಡಲಾಗಿತ್ತು. ಮೋದಿ ಸರ್ಕಾರವು ಅದನ್ನು ಹೆಚ್ಚಿಸಿ ೨೧೯,೫೦೬ ಕೋಟಿ ರೂಪಾಯಿಗಳನ್ನು ಕೊಟ್ಟಿತ್ತು. ಆದರೂ ಕೂಡ, ೩೯೦೦೦ ಕೋಟಿ ಮುದ್ರಾ ಯೋಜನೆಗಾಗಿ, ೯೬೦೦ ಕೋಟಿ ಸ್ಮಾರ್ಟ್ ಸಿಟಿ ಯೋಜನೆಗಾಗಿ, ೪೯೦೦ ಕೋಟಿ ಅಮೃತ್ ಯೋಜನೆಗಾಗಿ, ೨೧೦೦ ಕೋಟಿ ಶೌಚಾಲಯ ತಯಾರಿಕೆ ಯೋಜನೆಗಾಗಿ, ೧೬೦೦ ಕೋಟಿ ನಗರ ಅಡಿವ್ಯವಸ್ಥೆ ಯೋಜನೆಗಾಗಿ ಉಪಯೋಗಿಸದೆ ಹಾಗೆ ಖಾಜಾನೆಯಲ್ಲಿ ಕುಳಿತಿವೆ.

ಕಳೆದ ನಾಲಕ್ಕುವರೆ ವರ್ಷಗಳಲ್ಲಿ ಸಾಲ ಮನ್ನಾ ಹಣ ಬರದೆ ೩೭೮೧ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿರಾರು ರೈತರು, ಕಾಂಗ್ರೆಸ್ ಸರ್ಕಾರದ ನಿರಾಸಕ್ತಿಯಿಂದ ಹತಾಶೆಗೊಂಡು ನಿಂತ ಬೆಳೆಗಳನ್ನು ಬಿಟ್ಟು ಹೋಗಿದ್ದಾರೆ.

ಇದರಲ್ಲಿ ನಾಚಿಕೆ ಆಗುವಂತ ಮಾತೇನೆಂದರೆ, ಕರ್ನಾಟಕದ ಬರಗಾಲ ಕೇವಲ ಮಳೆ ಬರದೆ ಇರುವುದರಿಂದ ಅಲ್ಲ. ಅಕ್ರಮದಿಂದ ಮಾಡಿರುವ ಮರಳು ಗಣಿಗಾರಿಕೆಯಿಂದ ಬಂದ ಬರಗಾಲ. ಸರ್ಕಾರವು ಈ ವಿಷಯದಲ್ಲಿ ಯಾವುದೇ ಗಮನವನ್ನು ಕೊಟ್ಟಿಲ್ಲ. ನದಿಗಳು ನಾಶವಾಗಿ, ಸಮುದ್ರದಿಂದ ಉಪ್ಪು ನೀರು ಒಳನೀರಿನೊಳಗೆ ಬಂದು ಸೇರಿದೆ.

ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮಾತನಾಡದಿದ್ದರೆ ಒಳ್ಳೇದು. ಈ ‘ಸ್ಯಾನ್ಡ್ ಮಾಫಿಯಾ’-ವನ್ನು ವಿರೋಧಿಸಿದ ಉಡುಪಿಯ ಡೆಪ್ಯುಟಿ ಕಮಿಷನರ್ ಪ್ರಿಯಾಂಕಾ ಫ್ರಾನ್ಸಿಸ್ ಮತ್ತು ಅಸಿಸ್ಟೆಂಟ್ ಕಮಿಷನರ್ ಶಿಲ್ಪಿ ನಾಗ್ ಮೇಲೆ ಕಂಡಲೂರಿನಲ್ಲಿ ಏಪ್ರಿಲ್ ೨೦೧೭ ನಲ್ಲಿ ದಾಳಿ ಮಾಡಲಾಗಿತ್ತು.

ವರಿಷ್ಠ ಪೊಲೀಸ್ ಅಧಿಕಾರಿಗಳಾದ ಎಂ ಕೆ ಗಣಪತಿ ಹಾಗೂ ಕಲ್ಲಪ್ಪ ಹಂಡಿಬಾಗ ಅವರ ನಿಗೂಢ ಆತ್ಮಹತ್ಯೆ ಸೇರಿದಂತೆ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಸಂಶಯಾಸ್ಪದ ಸಾವು, ಡಿವೈಎಸ್ ಪಿ ಅನುಪಮಾ ಶೆಣೈ ಅವರ ಬಲವಂತದ ರಾಜೀನಾಮೆ, ಈ ಎಲ್ಲ ಉದಾಹರಣೆಗಳಿಂದ ಕಾಂಗ್ರೆಸ್ ಸರ್ಕಾರ ನಿಷ್ಠಾವಂತ ಅಧಿಕಾರಿಗಳ ಕೈಬಿಟ್ಟಿದ್ದು ಕಂಡುಬರುತ್ತದೆ. ಕನ್ನಡದ ಮತದಾರರು ಬರೀ ಸಿದ್ಧರಾಮಯ್ಯನವರನ್ನು ಅಷ್ಟೇ ಅಲ್ಲ ಕಾಂಗ್ರೆಸ್ ಆಡಳಿತವನ್ನು ತಿರಸ್ಕರಿಸಲು ಒಂದೇ ಕಾರಣ ಇದ್ದರೆ, ಏರುತ್ತಿರುವ ಅಪರಾಧಗಳ ಸಂಖ್ಯೆ ಒಂದೇ ಸಾಕು. ೨೦೧೬ರಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ತಯಾರಿಸಿದ ವರದಿಯ ಪ್ರಕಾರ ರಾಜ್ಯದಲ್ಲಿ ೧೪೧೩೧ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ನಡೆದಿವೆ. ಆದರೂ ಕೇವಲ ೪.೭ ಪ್ರತಿಶತ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಬೆಂಗಳೂರಿನಲ್ಲಂತೂ ೩.೫ ಪ್ರತಿಶತ, ೯೨೧ರಲ್ಲಿ ೩೨ ಪ್ರಕರಣಗಳಿಗೆ ಮಾತ್ರ ನ್ಯಾಯಾಂಗದ ತೀರ್ಮಾನ ಘೋಷಿಸಲಾಗಿದೆ.

ಹಿಂದುಳದ ವರ್ಗಳ ಮೇಲೆ ಎಸಗಿದ ಅಪರಾಧದ ಪ್ರಕರಣಗಳಲ್ಲಿ ಈ ಅದಕ್ಷತೆ ಇನ್ನೂ ಹೆಚ್ಚು. ರಾಜ್ಯದ ಜನಸಂಖ್ಯೆಯ ೧೮ ಪ್ರತಿಶತದಷ್ಟು ಪರಿಶಿಷ್ಟ ಜಾತಿಯವರು, ೭ ಪ್ರತಿಶತ ಪರಿಶಿಷ್ಟ ಪಂಗಡದವರು ಆಗಿದ್ದರೂ, ಇವರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತೀರ್ಪು ಸಿಕ್ಕಿರುವುದು ಪರಿಶಿಷ್ಟ ಜಾತಿಗೆ ಕೇವಲ ೨.೮ ಪ್ರ. ಮತ್ತು ಪರಿಶಿಷ್ಟ ಪಂಗಡಕ್ಕೆ ೦. ೨೦೧೬ರಲ್ಲಿ ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳ ಮೇಲೆ ನಡೆದ ೧೭೪೧ ಅಪರಾಧ ಪ್ರಕರಣಗಳಲ್ಲಿ ಶೇಕಡ ೩೦ ಪ್ರತಿಶತ ಕರ್ನಾಟಕದಲ್ಲಿ ನಡೆದವು. ಆದರೆ ಸಿದ್ಧರಾಮಯ್ಯನವರಿಗೆ ಈ ಅಂಕಗಳ ಚಿಂತೆಯೇ ಇಲ್ಲ. ದಲಿತರ ಮತಗಳನ್ನು ಲ್ಯಾಪ್ಟಾಪ್ ಹಂಚಿ ಕೊಂಡುಕೊಳ್ಳ ಬಹುದೆಂದು ಅವರ ದೃಢ ನಂಬಿಕೆ.

ರಾಜ್ಯದ ಹೀನಾಯ ಪರಿಸ್ಥಿತಿಯನ್ನು ನಾವು ಮಾನವ ಅಭಿವೃದ್ಧಿ ಸೂಚ್ಯಂಕದಿಂದ ಇನ್ನೂ ಸ್ಪಷ್ಟವಾಗಿ ತಿಳಿಯಬಹುದು. ಕಲ್ಬುರ್ಗಿ ಹಾಗು ಚಿಂಚೋಳಿಯಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕಗಳು ಇಡೀ ರಾಜ್ಯಕ್ಕೆ ನಾಚಿಕೆಯುಂಟುಮಾಡುವಂಥದ್ದು. ಚಿಂಚೋಳಿ ತಾಲೂಕಿನ ಮಾನವ ಅಭಿವೃದ್ಧಿ ಸೂಚ್ಯಂಕವು ೦.೨೫೨ ಆಗಿದ್ದು, ಮಕ್ಕಳ ಅಭಿವೃದ್ಧಿ ಸೂಚ್ಯಂಕ ೦.೩೮೬, ಲಿಂಗ ಅಸಮಾನತೆ ೦.೦೭೨, ಆಹಾರ ಸುರಕ್ಷತೆ ೦.೩೩೦, ಇವು ಆಫ್ರಿಕಾದ ಅತಿ ಬಡ ದೇಶಗಳಿಗಿಂತಲೂ ಕೀಳಾದ ಅಂಕಗಳು.

ಇದಲ್ಲದೆ, ರಾಜ್ಯದಲ್ಲಿ ಸ್ವಯಂಘೋಷಿತ ಬುದ್ಧಿಜೀವಿ ಕೆ ಎಸ್ ಭಗವಾನ್ ಅವರು ಬಹಿರಂಗವಾಗಿ ಪವಿತ್ರವಾದ ಭಗವದ್ಗೀತೆಯನ್ನು ಸುಟ್ಟು, ರಾಮ, ಕೃಷ್ಣ ಮತ್ತು ಆದಿ ಶಂಕರರನ್ನು ಹೀಯಾಳಿಸಿದಾಗ ಯಾವ ಪ್ರತಿಕ್ರಿಯೆಯನ್ನು ತೋರದ ಸ್ವಯಂಘೋಷಿತ ನಾಸ್ತಿಕರಾದ ಸಿದ್ಧರಾಮಯ್ಯರನ್ನು ಕನ್ನಡನಾಡಿನ ಹಿಂದೂಗಳು ಕ್ಷಮಿಸುತ್ತಾರೆಯೇ ಎಂದು ನೋಡಬೇಕಿದೆ. ನಾಡ ಹೆಮ್ಮೆಯಾದ ದಸರಾ ಉತ್ಸವಕ್ಕೆ ವೆಚ್ಚವಾಗುವ ನಿಧಿಯನ್ನು ಮಿತಗೊಳಿಸಿ, ಟೀಪು ಜಯಂತಿಯನ್ನು ಅದ್ಧೂರಿಯಾಗಿ ವಿಜೃಂಭಿಸಲು ಜನರ ತೆರಿಗೆ ಹಣವನ್ನು ಹೊಳೆಯಂತೆ ಹರಿಸಿದ ಸಿದ್ಧರಾಮಯ್ಯನವರ ಬೂಟಾಟಿಕೆಯನ್ನು ಜನರು ಗಮನಿಸದೇ ಇಲ್ಲ .

ಇದೆಲ್ಲವನ್ನೂ ಹಿಂದಿನ ಯಡಿಯೂರಪ್ಪನವರ ಆಡಳಿತಕ್ಕೆ ಹೋಲಿಸಿದರೆ ನಮಗೆ ಕಾಣುವ ಚಿತ್ರ ತದ್ವಿರುದ್ಧ, ಅಲ್ಲಿ ನಮಗೆ ಕಾಣುವುದು ಪ್ರಗತಿಯ ದಾರಿ. ಅವರ ಅವಧಿಯಲ್ಲಿ ೩೦,೭೩೫ ತೋಟ ನೀರಾವರಿಗೆ ಕೊಳಗಳನ್ನು ಕಟ್ಟಿಸಿ, ೩೦೦೦೦ ಮೀನುಗಾರರಿಗೆ ಆರ್ಥಿಕ ನೆರವನ್ನು ಒದಗಿಸಿ, ೧೧೦೦೦ ಮೀನುಗಾರರಿಗೆ ಮನೆಗಳನ್ನು ಕಟ್ಟಿಸಿ, ಕೊಡೇರಿ, ಹೊನ್ನಾವರ ಹಾಗು ಮಂಗಳೂರಿನಲ್ಲಿ ಮೀನುಗಾರಿಕೆ ಬಂದರುಗಳನ್ನು ಕಟ್ಟಿಸಲಾಯಿತು. ರಾಜ್ಯದ ಉದ್ದಕ್ಕೂ ೧೭೫೦ ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸಲಾಯಿತು. ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ರಾಜ್ಯದ ವಿದ್ಯುತ್ ಉತ್ಪತ್ತಿಯಲ್ಲಿ ಪ್ರಾಬಲ್ಯ ಕಂಡುಬಂದಿತು: ಬಿಜೆಪಿ ಸರ್ಕಾರವು ೭೮೦೦ ಮೆಗಾವಾಟ್ಟ್ ನಷ್ಟು ನವೀಕರಿಸಲಾಗುವ ಶಕ್ತಿ ಸಾಮರ್ಥ್ಯ ಬೆಳೆಸಿದಲ್ಲಿ, ಸಿದ್ಧರಾಮಯ್ಯನವರ ಸರ್ಕಾರ ೨೦೦೦ ಮೆಗಾವಾಟ್ಟ್ ನಷ್ಟನ್ನು ಮಾತ್ರ ಉತ್ಪತ್ತಿ ಮಾಡಿದೆ.

ಇಷ್ಟೇ ಅಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳಿಂದ ಕರ್ನಾಟಕಕ್ಕೆ ಆದ ಲಾಭವನ್ನು ತಪ್ಪಿಯೂ ಕಾಂಗ್ರೆಸ್ ಸರ್ಕಾರ ಒಪ್ಪಿಕೊಳ್ಳುವುದಿಲ್ಲ. ಪ್ರಧಾನ ಮಂತ್ರಿಯವರ ಮುದ್ರಾ ಯೋಜನೆಯಿಂದ ೨೭.೨೯ ಲಕ್ಷ ರೂ. ೨೪,೮೯೪ ಕೋಟಿ ಯಷ್ಟು ಮೊತ್ತ ವಿತರಿಸಲಾಗಿದೆ. ಜನ ಧನ ಯೋಜನೆಯಡಿಯಲ್ಲಿ ಒಂದು ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಪ್ರಧಾನ ಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆಯ ೧.೩ ಕೋಟಿ ಫಲಾನುಭವಿಗಳಲ್ಲಿ ೯ ಲಕ್ಷ ಕರ್ನಾಟಕದವರು. ಉಜ್ಜ್ವಲ ಯೋಜನೆಯಿಂದ ಬರೀ ಬೆಳಗಾವಿಯಲ್ಲೇ ೨.೨೫ ಲಕ್ಷ ಮನೆಗಳು ಎಲ್ಪಿಜಿ ಸೌಕರ್ಯ ಪಡೆದಿವೆ.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ: ಮೈಸೂರು-ಬೆಂಗಳೂರು ಹೆದ್ದಾರಿಯ ಆರು-ಪಥ ವಿಸ್ತರಣೆ, ಮೈಸೂರು-ಬೆಂಗಳೂರು ರೈಲ್ವೆ ಲೈನಿನ ವಿದ್ಯುತೀಕರಣ, ೧೬೦ ಕಿ.ಮೀ ಉದ್ದದ ಬೆಳಗಾವಿ-ಕಾಗವಾಡ ಹೆದ್ದಾರಿ ನಿರ್ಮಾಣ, ರಾಷ್ಟೀಯ ಹೆದ್ದಾರಿ ೪Aನ ಬೆಳಗಾವಿ-ಖಾನಾಪುರ ವಿಭಾಗದ ನಾಲ್ಕು-ಪಥ ವಿಸ್ತರಣೆ, ಇವು ಪ್ರಮುಖ.

ಇದಲ್ಲದೆ, ಬೆಳಿಕೇರಿಯಲ್ಲಿ ಹೊಸ ಬಂದರು ನಿರ್ಮಾಣವನ್ನು, ಹಾಸನ-ಬೆಂಗಳೂರನ್ನು ಮಂಗಳೂರಿಗೆ ಜೋಡಿಸುವ ರೂ. ೧೦೦೦೦ ಕೋಟಿ ವೆಚ್ಚದ ಶಿರಡಿ ಘಟ್ಟದ ೨೩.೬ ಕಿ.ಮೀ ಸುರಂಗ ಮಾರ್ಗದ ನಿರ್ಮಾಣವನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ. ಭಾರತಮಾಲ ಯೋಜನೆಯ ಅಡಿಯಲ್ಲಿ ಕೇಂದ್ರವು ರೂ. ೮೫೦೦೦ ಕೋಟಿ ವೆಚ್ಚದ ೩೭೨೬ ಕಿ.ಮೀ ಉದ್ದದ ೪೧ ಕಾರ್ಯಗಳನ್ನು ಎತ್ತಿಕೊಳ್ಳಲಿದೆ. ಇದೆಲ್ಲಕ್ಕೂ ಹೆಚ್ಚಾಗಿ ಕೇಂದ್ರ ಸರಕಾರ ೧.೪೫ ಲಕ್ಷ ಕೋಟಿಯಷ್ಟು ಹಣವನ್ನು ಕರ್ನಾಟಕದ ರಾಷ್ಟೀಯ ಹೆದ್ದಾರಿಗಳ ನಿರ್ಮಾಣಕ್ಕೆ ತೊಡಗಿಸಿದ್ದು, ಮೈಸೂರು-ಉದಯಪುರ ಹಮ್ಸಫರ್ ಎಕ್ಸ್ಪ್ರೆಸ್ ಟ್ರೈನ್ ಪ್ರಾರಂಭ, ಇವೆಲ್ಲವೂ ಸಮಗ್ರ ವಿಕಾಸದೆಡೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.

ಕನ್ನಡದವರನ್ನು ಕೈಬಿಟ್ಟ ಸಿದ್ಧರಾಮಯ್ಯನವರ ರಾಜಕಾರಣ ಮತದಾರರನ್ನು ವಿಭಜಿಸಿ, ಓಲೈಸಿ ಮತ ಯಾಚಿಸುವಂಥದ್ದಾದರೆ, ಮೋದಿ ಸರ್ಕಾರದ್ದು ನಾಗರಿಕರಿಗೆ ಬದ್ಧವಾಗಿ, ಅಭಿವೃದ್ಧಿಯ ಪಥದಲ್ಲಿ ನಾಗರಿಕರನ್ನು ಸಹಭಾಗಿಯಂತೆ ಕಂಡು ಜನರನ್ನು ಒಲಿಸಿಕೊಳ್ಳುವಂಥ ಬಗೆ. ಈ ಎರಡು ವಿಭಿನ್ನ ರೀತಿಯ ಪ್ರತಿಸ್ಪರ್ಧಿಗಳ ಮಧ್ಯೆ ಯೋಗ್ಯವಾದವರನ್ನು ಮೇ ಹನ್ನೆರಡರಂದು ಕರ್ನಾಟಕದ ಜನರೇ ಅಂತಿಮವಾಗಿ ನಿರ್ಣಯಿಸಲಿ.

  • ಲೇಖಕಿ: ಸಂಜು ವರ್ಮಾ, ಅರ್ಥಶಾಸ್ತ್ರಜ್ಞ ಹಾಗು ಬಿಜೆಪಿ ವಕ್ತಾರ
Tags

Related Articles

Close