ಪ್ರಚಲಿತ

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

ಅಧ್ಯಾಯ 17: ಸೇವಾ, ಸಂಸ್ಕಾರ, ಸಮರಸತಾ

8 ಏಪ್ರಿಲ್ 1979,ಸಮಾಜ ಸೇವೆಯಲ್ಲಿ ತನ್ನ ಇಡೀ ಜೀವನವನ್ನೇ ತೇಯ್ದ ಅಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ರಾಗಿದ್ದ ಶ್ರೀ ಬಾಳಾಸಾಹೇಬ ದಿಯೋರಸ್ ನವದೆಹಲಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನೆರೆದಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸ್ವಯಂಸೇವಕರಿಗೆ ಹಿಂದುಳಿದ ಹಾಗೂ ದಮನಿತ ವರ್ಗದ ಜನರಿಗೆ ಆಸರೆಯಾಗುವಂತೆ, ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಯೂ, ಸ್ವಾಭಿಮಾನದಿಂದ ಬದುಕಲು ನೆರವಾಗಬೇಕು, ಅದ ನಿಟ್ಟಿನಲ್ಲಿ ಅವರಿಗೆ ಬೇಕಾದ ಯಾವುದೇ ರೀತಿಯ ಸಹಾಯಕ್ಕೆ ಸ್ವಯಂಸೇವಕರು ಸಜ್ಜಾಗಿರ ಬೇಕೆಂದು ಕರೆ ಕೊಟ್ಟರು.ಸೇವಾ ಭಾರತಿ ಎಂಬ ಹೆಮ್ಮರ ಚಿಗುರೊಡೆದದ್ದು ಹಾಗೇ!

ಸೇವಾ ಭಾರತಿ ವಿಶ್ವದ ಅತೀ ದೊಡ್ಡ ಸರ್ಕಾರೇತರ ಸಂಘ ಸಂಸ್ಥೆ. ತನ್ನ ಕಾರ್ಯ ಕ್ಷೇತ್ರವಾಗಿ ಸೇವಾ ಭಾರತಿ ಆಯ್ದುಕೊಂಡಿರುವುದು, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು. ನಗರ ಪ್ರದೇಶಗಳ ಕೊಳೆಗೇರಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸೇವಾ ಭಾರತೀಯ ಮತ್ತೊಂದು ಗುರಿ. ಹಲವಾರು ಅಭಿವೃದ್ಧಿ ಯೋಜನೆಗಳು, ಉಚಿತ ಶಿಕ್ಷಣ, ಉಚಿತ ವೈದ್ಯಕೀಯ ಶಿಬಿರ ಗಳನ್ನು ಕೈಗೊಳ್ಳುತ್ತಾ ಇಂದು ಸೇವಾ ಭಾರತಿ ವರ್ಷ ಒಂದರಲ್ಲಿ ಸುಮಾರು 1,60,000 ಕಾರ್ಯ ಚಟುವಟಿಕೆಗಳನ್ನು ಸುಮಾರು 602 ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿದೆ.ಹಲವಾರು ಬಾರಿ ಸೇವಾ ಭಾರತೀಯ ಕೆಲಸಗಳು ಮಾಧ್ಯಮಗಳ ಗಮನಕ್ಕೆ ಬಾರದೇ ಹೋದರು, 2001 ರ ಗುಜರಾತ್ ನಲ್ಲಿ ಸಂಭವಿಸಿದ ಭೂಕಂಪ, 2008 ರ ಬಿಹಾರದ ಪ್ರವಾಹ, ಹಾಗೂ 2004 ರ ಸುನಾಮಿ ಸಮಯದಲ್ಲಿ ನಡೆಸಿದ ಪರಿಹಾರ ಕಾರ್ಯಾಚರಣೆ ದೇಶವಿಡೀ ಸೇವಾ ಭಾರತೀಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿತು.ಸೇವಾ ಭಾರತಿ ಇಂದು ಸುಮಾರು 13,786 ಶೈಕ್ಷಣಿಕ, 10,908 ವೈದ್ಯಕೀಯ, 17,560 ಸಾಮಾಜಿಕ, ಹಾಗೂ 7,452 ಸ್ವ ಉದ್ಯೋಗ ತರಬೇತಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ದುಬಾರಿ ಶುಲ್ಕ ತೆತ್ತು ಪ್ರತಿಷ್ಠಿತ ಶಾಲೆಗೆ ಹೋಗಲು ಸಾಧ್ಯವಿಲ್ಲದ, ಮನೆಪಾಠಕ್ಕೆ ಹೋಗಲು ಆರ್ಥಿಕ ಚೈತನ್ಯವಿಲ್ಲದ ಬಡ ಮಕ್ಕಳಿಗಾಗಿ ಸಮಾನಾಸಕ್ತ ಗೆಳೆಯರ ಬಳಗ ಬೆಂಗಳೂರಿನಲ್ಲಿ ಆರಂಭಿಸಿದ ಸೇವಾ ಭಾರತಿಯ ಉಚಿತ ತರಗತಿಗಳಿಗೆ ಈಗ 25ರ ಸಂಭ್ರಮ.ಈ 25 ವರ್ಷಗಳಲ್ಲಿ ನಗರದ ದೇವಯ್ಯ ಪಾರ್ಕ್, ಶ್ರೀರಾಮಪುರ, ಶೇಷಾದ್ರಿಪುರಗಳ ಸಾವಿರಾರು ವಿದ್ಯಾರ್ಥಿಗಳು `ಸೇವಾ ಭಾರತಿಯ ಉಚಿತ ತರಗತಿಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಮನೆಗೆಲಸದವರು, ಗಾರೆಯವರು, ಪ್ಲಂಬರ್‌ಗಳ ಮಕ್ಕಳೆಲ್ಲ ಈ ತರಗತಿಗಳಲ್ಲಿ ಓದಿ ಮುಂದೆ ಬಂದಿದ್ದಾರೆ. ಎಂಜಿನಿಯರ್‌ಗಳಾಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರಾಗಿ ನೂರಾರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಉಚಿತ ತರಗತಿಗಳ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ದೂರದ ಪೀಣ್ಯ, ಜಾಲಹಳ್ಳಿಯಿಂದಲೂ ಉಚಿತ ಪಾಠ ಹೇಳಿಸಿಕೊಳ್ಳಲು ವಿದ್ಯಾರ್ಥಿಗಳು ಬರುತ್ತಿದ್ದಾರೆ.

ಸೇವಾ ಭಾರತಿಯ ಉಚಿತ ಪುನರ್ಮನನ ತರಗತಿಗಳು ಜುಲೈ 31ರಿಂದ ಆರಂಭವಾಗತ್ತವೆ. 9,10ನೇ ತರಗತಿ ಮತ್ತು 2ನೇ ಪಿಯುಸಿ ವಾಣಿಜ್ಯ, ವಿಜ್ಞಾನ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ತರಗತಿಗಳು ನಿರಂತರವಾಗಿ ನಡೆಯುತ್ತವೆ. ಕೇರಳದಲ್ಲಿ ಮಳೆಯ ರುದ್ರ ನರ್ತನಕ್ಕೆ ಸಿಲುಕಿ ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿರುವ ಸಂತ್ರಸ್ತ ರಿಗೆ ನೆರವಾಗಲು ಸೇವಾ ಭಾರತಿಯ 50 ಸಾವಿರ ಸ್ವಯಂ ಸೇವಕರು ಶ್ರಮಿಸಿದರು.
ತರಬೇತಿ ಪಡೆದ ಮತ್ಸ ಕಾರ್ಮಿಕರೂ ತಂಡದಲ್ಲಿದ್ದು, 50 ದೋಣಿಗಳನ್ನು ರಕ್ಷಣಾ ಕಾರ್ಯದಲ್ಲಿ ಬಳಸಿಕೊಂಡು ನಿರಂತರ ಪರಿಹಾರ ಕಾರ್ಯದಲ್ಲಿ ತೊಡಗಿಸಿ ಕೊಂಡರು. ಸರಕಾರದ ವತಿಯಿಂದ ನಡೆಯುವ ಕಾರ್ಯಾಚರ ಣೆಗೂ ತಮ್ಮ ದೋಣಿಗಳನ್ನು ನೀಡಿ ಸ್ವಯಂಸೇವಕರು, ಸೇವೆಗೆ ಯಾವುದೇ ತತ್ವ ಸಿದ್ಧಾಂತ ಸಂಕೋಲೆ ಇಲ್ಲ ಎಂದು ನಿರೂಪಿಸಿದರು.

ಸುಮಾರು 50ರಷ್ಟು ಶಿಬಿರಗಳನ್ನು ಸೇವಾ ಭಾರತಿಯೇ ನಡೆಸಿ ಇದರ ಹೊರತಾಗಿ ಸರಕಾರ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ನಿರಾಶ್ರಿತರ ಶಿಬಿರಗಳಲ್ಲಿ ಸೇವಾ ಭಾರತಿಯ ಕಾರ್ಯಕರ್ತರು ಅವಿರತ ಕಾರ್ಯ ನಿರ್ವಹಿಸಿದ್ದು ಅವರ ಕಾರ್ಯ ಕ್ಷಮತೆಯ ಉದಾಹರಣೆ.ನನ್ನ ತಂದೆಯ ಸ್ಮರಣಾರ್ಥ ಏನಾದರು ಮಾಡಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ನಮ್ಮ ಪೂರ್ವಜರ ಮನೆ ಅನೇಕ ವರ್ಷಗಳಿಂದ ಯಾರೂ ವಾಸ ಮಾಡದೇ ಹಾಗೇ ಖಾಲಿ ಇತ್ತು. ಸೇವಾಭಾರತಿ ಸಂಸ್ಥೆ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಆಸ್ತಿಯನ್ನು ಅವರಿಗೆ ನೀಡಿದ್ದೇನೆ. ಇದು ಸಂಘದ ಜೊತೆಗೆ ಬಹು ಕಾಲ ಸಂಬಂಧವಿರಿಸಿಕೊಂಡ ವ್ಯಕ್ತಿಯೋರ್ವರ ಹೇಳಿಕೆಯಲ್ಲ.

ಸಮಾಜವಾದಿ ಪಕ್ಷದ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಮರ್ ಸಿಂಗ್, ತಮ್ಮ ಪೂರ್ವಿಕರಿಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಸೇವಾ ಭಾರತಿ ಸಂಘಟನೆಗೆ ದೇಣಿಗೆ ನೀಡುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದರು.ಹೌದು, ಅಮರ್ ಸಿಂಗ್ ಸದಾ ಕಾಲ ಸಂಘವನ್ನು ನಿಂದಿಸುತ್ತಲೇ ಬಂದವರು. ಆಜಮ್ ಗಡ್ ಜಿಲ್ಲೆಯಲ್ಲಿರುವ ಸುಮಾರು 15 ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಆಸ್ತಿಯನ್ನು ಸೇವಾ ಭಾರತಿಗೆ ದಾನ ನೀಡಿದ್ದನ್ನು ಅವರ ವಿರೋಧಿಗಳು ಪ್ರಚಾರದ ಹಪಾಹಪಿ ಎಂದು ಆರೋಪ ಮಾಡಿದಾಗ, ಅಮರ್ ಸಿಂಗ್ ಪ್ರತಿಕ್ರಿಯೆ ನೀಡುತ್ತಾ, ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಆರೆಸ್ಸೆಸ್ ಮತ್ತು ಅದರ ಸಹ ಸಂಘಟನೆಗಳಿಗೆ ಬೆಂಬಲವಾಗಿ ತಾವು ಸಣ್ಣ ಸಹಾಯ ಮಾಡಿರುವುದಾಗಿ ಹೇಳಿದ್ದರು.

ಇಂಗ್ಲಿಷ್ ಭಾಷೆಯಲ್ಲಿ ಒಂದು ಮಾತಿದೆ, Never judge a book by its cover ,ಮುಖ ಪುಟ ನೋಡಿ, ಎಂದಿಗೂ ಪುಸ್ತಕವೊಂದನ್ನು ಅಳೆಯಬಾರದು ಎಂದು.ಹಾಗೇ ಯಾವಾಗಲೂ ಹಿಂದುತ್ವ ವನ್ನು ಮಾತ್ರ ಚರ್ಚಿಸುತ್ತಾ ಸಂಘ ಕೈಗೊಳ್ಳುತ್ತಿರುವ ಸೇವಾ ಕಾರ್ಯಗಳನ್ನು ಅಲಕ್ಷಿಸುವುದು ಸರಿ ಅಲ್ಲ. ಯಾಕೆಂದರೆ ಸಮಾಜ ಸೇವೆ ಸುಲಭದ ಮಾತಲ್ಲ. ಪ್ರತಿಯೊಬ್ಬ ಸ್ವಯಂಸೇವಕರು, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದೇ ಬದುಕುತ್ತಾರೆ. ಹೊಗಳಿಕೆ ಅಲ್ಲದಿದ್ದರೂ ಅವರ ನಿಷ್ಠೆ, ಸೇವೆಯ ತೆಗಳಿಕೆ ನಡೆಯದಿರಲಿ

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

-Dr.Sindhu Prashanth

Tags

Related Articles

FOR DAILY ALERTS
Close