ಪ್ರಚಲಿತ

ವಿದೇಶಾಭಿಮುಖತೆ ಹೊಂದಿದ್ದ ಕಾಂಗ್ರೆಸ್ ಪಕ್ಷದ ನೀತಿಯಿಂದ ನಿಜವಾದ ಸ್ವಾತಂತ್ರ ಯಾರಿಗೆ ಯಾವಾಗ ದೊರಕಿದೆ ಗೊತ್ತೇ?

೧೯೪೭ ಆಗಸ್ಟ್ ೧೫ ರಂದು ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿತ್ತು ಎಂಬುದೇನೋ ನಿಜ ಆದರೆ ನಿಜವಾಗಿಯೂ ನಮಗೆ ಸಂಪೂರ್ಣ ಸ್ವಾತಂತ್ರ ಸಿಕ್ಕಿತ್ತೆ? ಇಂದು ನಮಗೆ ನಿಜವಾದ ಸ್ವಾತಂತ್ರ ದೊರಕಿದೆ.ಏಕೆ ಗೊತ್ತೇ ಹಲವಾರು ವರುಷಗಳಿಂದ ಅಲ್ಲಿಯೂ ಸಲ್ಲ ಇಲ್ಲಿಯೂ ಸಲ್ಲದವರಂತೆ ಬಾಳುತ್ತಿದ್ದ ಸಾವಿರಾರು ಜಮ್ಮು ಕಾಶ್ಮೀರಿ ಮತ್ತು ಲಢಾಕೀ ಭಾರತೀಯರು ಸಂಪೂರ್ಣವಾಗಿ ಭಾರತೀಯರೆಂದು ಘೋಷಿತರಾದರು.ಪಾಕಿಸ್ತಾನೀ ಪ್ರೇರಿತ ಭಯೋತ್ಪಾದಕರಿಂದಲೂ ಪಾರಂಪರಿಕ ಕುಟುಂಬ ಅಡಳಿತದಿಂದಲೂ ಶೋಷಿತಗೊಂಡಿದ್ದ ಅನೇಕ ಕುಟುಂಬಗಳು ಇಂದು ನೈಜ ಸ್ವಾತಂತ್ರವನ್ನು ಅನುಭವಿಸುತ್ತಿವೆ.ಅನೇಕ ವರ್ಷಗಳಿಂದ ಭಾರತೀಯ ಮುಸಲ್ಮಾನ ಹೆಣ್ಣುಮಕ್ಕಳು ತ್ರಿವಳಿ ತಲಾಖ್ ಎಂಬ ಬಲೆಯಲ್ಲಿ ಸಿಕ್ಕಿ ನರಳುತ್ತಿದ್ದರು. ಪತಿಯೊಬ್ಬ ಕಾನೂನಾತ್ಮಕವಾಗಿಯೇ ೩ ಪತ್ನಿಯ ರನ್ನು ಹೊಂದಬಹುದೆಂಬುದು ಒಂದು ಕಡೆಯಾದರೆ ತನಗೆ ಬೇಕೆಂದಾಗ ಮೂರು ಬಾರಿ ತಲಾಖ್ ಎಂದು ಹೇಳಿ ಪತ್ನಿಯನ್ನು ತನ್ನ ಜೀವನದಿಂದ ಹೊರಹಾಕಬಹುದಾಗಿತ್ತು.ಅದಕ್ಕೆ ಯಾವುದೇ ಕಾರಣವನ್ನು ನೀಡುವ ಅಗತ್ಯವೂ ಇರಲಿಲ್ಲ.ಸಾರಿಗೆ ಉಪ್ಪಿಲ್ಲ,ತನ್ನ ಮಾತು ಕೇಳಲಿಲ್ಲ ಎಂದೂ ವಿಚ್ಛೇದನ ನೀಡಿ ಪತ್ನಿಯನ್ನು ತವರಿಗೆ ಕಳುಹಿಸಿದ ಮತ್ತು ಫೋನ್ ಅಥವಾ ಈ ಮೇಲ್ ಮುಖಾಂತರವೇ ವಿಚ್ಛೇದನ ನೀಡಿದ ಉದಾಹರಣೆಗಳೂ ಸಾಕಷ್ಟಿವೆ.ಆದರೀಗ ಅಂತಹಾ ವಿಚ್ಛೇದನ ಕ್ರೌರ್ಯವೆಂದು ಗುರುತಿಸಲ್ಪಟ್ಟಿದೆ.ಹೌದು ಭಾರತೀಯ ಮುಸಲ್ಮಾನ ಮಹಿಳೆಯೂ ಈಗ ಸಂಪೂರ್ಣವಾಗಿ ಸ್ವತಂತ್ರಳಾಗಿದ್ದಾಳೆ.ಇದೆಲ್ಲಾ ಎರಡನೆಯ ವಿಚಾರಗಳು .. ೧೯೪೭ ರ ಸ್ವಾತಂತ್ರಾನಂತರ ನಿಜವಾಗಿ ನಡೆದದ್ದೇನೆಂದು ನೋಡೋಣ…

ಸ್ವಭಾವತಃ ಕಾಂಗ್ರೆಸ್ ಸ್ವಾತಂತ್ರ ಪೂರ್ವದಲ್ಲೂ ವಿದೇಶಾಭಿಮುಖತೆಯನ್ನು ಹೊಂದಿತ್ತು..ಅಂದರೆ ವಿದೇಶದಿಂದ ಬಂದದ್ದೆಲ್ಲವೂ ಶ್ರೇಷ್ಠ..ಭಾರತೀಯರು ನಿಜವಾಗಿಯೂ ಮೂಢನಂಬಿಕೆಗಳನ್ನು ಹೊಂದಿದ್ದ ಅನಾಗರೀಕ ದೇಶವೆಂಬುದನ್ನು ಬ್ರಿಟೀಶರಿಗಿಂತ ಹೆಚ್ಚಾಗಿ ಕಾಂಗ್ರೆಸ್ಸಿಗರು ನಂಬಿದ್ದರು.ಅವರ ಈ ವಿದೇಶಾಭಿಮುಖತೆ ಸ್ವಾತಂತ್ರಾನಂತರವೂ ಮುಂದುವರೆಯಿತು.ಇಂಗ್ಲೆಂಡ್ ನ ರಾಜಪರಿವಾರಕ್ಕೆ ಸೇರಿದ್ದ ಲೂಯೀ ಮೌಂಟ್ಬ್ಯಾಟನ್ ಗವರ್ನರ್-ಜನರಲ್ ಆಗಿ ಮುಂದುವರೆಯುವಂತೆ ಜವಾಹರ್ಲಾಲ್ ನೆಹರೂ ಕೋರಿಕೊಂಡಿದ್ದರು!! ಜನರಲ್ ತಿಮ್ಮಯ್ಯ,ಜನರಲ್ ಎಲ್.ಪಿ.ಸೇನ್ ಮುಂತಾದ ಉನ್ನತ ಸೇನಾಧಿಕಾರಿಗಳ ಸಲಹೆಯನ್ನು ತಿರಸ್ಕರಿಸಿದ್ದ ನೆಹರೂ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆ(ಇಂಗ್ಲೆಂಡ್,ಅಮೇರಿಕ)ಬಾಗಿಲಿಗೆ ಕೊಂಡೊಯ್ದ್ದರು.ಕಾಶ್ಮೀರದಂತೆ ಹೈದರಾಬಾದನ್ನೂ ದೊಡ್ಡ ಸಮಸ್ಯೆಯಾಗಿ ಉಳಿಸಬೇಕೆಂಬ ಹವಣಿಕೆ ಮೌಂಟ್ ಬ್ಯಾಟನ್ ನಲ್ಲಿತ್ತು.ಅದಕ್ಕಾಗಿ ಅವನು ಸೈನಿಕ ಕಾರ್ಯಾಚರಣೆಯನ್ನು ಮುಂದೂಡುವಂತೆ ನೆಹರೂಗೆ ಉಪದೇಶ ಮಾಡುತ್ತಲೇ ಇದ್ದ.ಆದರೆ ಹೊಸ ಗವರ್ನರ್- ಜನರಲ್ ರಾಜಾಜಿಯವರು ಗೃಹಮಂತ್ರಿ ಸರ್ದಾರ್ ಪಟೇಲರನ್ನು ಬೆಂಬಲಿಸಿದ ಕಾರಣ ಹೈದರಾಬಾದ್ನಲ್ಲಿ ಸೈನಿಕ ಕಾರ್ಯಾಚರಣೆ ನಡೆದು ಸಮಸ್ಯೆ ಶಾಶ್ವತವಾಗಿ ಪರಿಹಾರವಾಯಿತು.ಪೂರ್ವಾಂಚಲ ರಾಜ್ಯಗಳಲ್ಲಿ ವೆರಿಯರ್ ಎಲ್ವಿನ್ ಮುಂತಾದವರ ತಾಳಕ್ಕೆ ಕುಣಿದ ನೆಹರೂ ಆ ಭಾಗದಲ್ಲಿ ಮಿಷನರಿ ಬೆಳವಣಿಗೆಗೆ ಕಾರಣರಾದರು.

ಆರ್ಥಿಕನೀತಿ ಹೀಗೆ ಯಾವ ವಿಷಯದಲ್ಲೂ ಸ್ವಂತಿಕೆಯನ್ನು ಹೊಂದಿರದಿದ್ದ ನೆಹರೂ ಯುರೋಪ್ ಮತ್ತು ಸೋವಿಯತ್ ರಷ್ಯಾದ ನಮೂನೆಗಳನ್ನು ಅನುಸರಿಸತೊಡಗಿದ್ದರು.ಇದರಿಂದಾಗಿ ಆಹಾರ ಮತ್ತು ಗ್ರಾಮೀಣಾಭಿವೃದ್ಧಿಗೆ ನೀಡಬೇಕಾಗಿದ್ದ ಪ್ರೇರಣೆಯನ್ನು ಉದ್ಯಮ ಮತ್ತು ಕೈಗಾರಿಕೆಗಳಿಗೆ ನೀಡಲಾಯಿತು.ಒಬ್ಬ ರಷ್ಯನ್ ಮಾಡುವ ಕೆಲಸಕ್ಕೆ ಪರ್ಯಾಯವಾಗಿ ಮೂವರು ಭಾರತೀಯರು ಬೇಕೆಂಬ ರಷ್ಯನ್ನರ ಅಭಿಪ್ರಾಯವನ್ನೇ ಹೇರಿಕೊಂಡಿದ್ದ ನೆಹರೂ ಸರಕಾರೀ ಕಾರ್ಖಾನೆಗಳಲ್ಲಿ ಅಗತ್ಯಕ್ಕೂ ಹೆಚ್ಚಿನ ಸಿಬ್ಬಂದಿ ತುಂಬಿಕೊಂಡರು.ನೆಹರೂರವರ ಇಂತಹಾ ಅನುಕರಣಾ ಪ್ರವೃತ್ತಿಯಿಂದಾಗಿ ಭಾರತಕ್ಕೆ ಬಹಳದ್ತು ನಷ್ಟಉಂಟಾಯಿತೆಂಬುದು ನಮಗೆ ಅರಿಯದ ವಿಷಯವೇನಲ್ಲ.ಹಾಗೆ ನೋಡಿದರೆ ಕಾಂಗೆಸ್ಸ್ ನ ರಾಜಕೀಯ ನೀತಿಯೂ ಅನುಕರಣೆಯ ಧೋರಣೆಯನ್ನೇ ಹೊಂದಿದೆ.ಸೆಕ್ಯುಲರ್ ಎಂದು ಹೇಳಿಕೊಳ್ಳುತ್ತಾ ಹಿಂದೂ ಸಂಸ್ಥೆಗಳಿಗೆ ನಿರಾಕರಿಸಿದ ಸವಲತ್ತುಗಳನ್ನು ಕ್ರೈಸ್ತರಿಗೂ ಮುಸಲ್ಮಾನರಿಗೂ ನೀಡುವುದು ಕೂಡಾ ವಿದೇಶಿ ಪ್ರಭುತ್ವದ ಅನುಕರಣೆಯನ್ನೇ ತೋರುತ್ತವೆ.ಬ್ರಿಟಿಷ್ ಪ್ರಭುತ್ವವು ಭಾರತೀಯ ಉದ್ಯಮಗಳನ್ನು ಹದಗೆಡಿಸಿ ಇಂಗ್ಲೆಂಡ್ ನ ಉತ್ಪನ್ನಗಳಿಗೆ ಸುಂಕ ರಿಯಾಯಿತಿ ನೀಡಿದಂತೆ ಕಾಂಗೆಸ್ಸ್ ಸರಕಾರಗಳು ಹಲವಾರು ವರುಷಗಳ ಕಾಲ ವ್ಯಾಟಿಕನ್,ಇಂಟರ್ನ್ಯಾಷನಲ್ ಇವಾಂಜೆಲಿಕಲ್ ಕೇಂದ್ರಗಳ ನಿಯಂತ್ರಣದಲ್ಲಿರುವ ವಿದೇಶೀ ಸಂಸ್ಥೆಗಳಿಗೆ ವಿಶೇಷ ಸಾಲವತ್ತುಗಳನ್ನು ನೀಡಿ ಸಲಹಿದ್ದರೆ ,ಹಿಂದೂ ಸಂಸ್ಥೆಗಳಿಂದ ಸುಂಕವಸೂಲಾತಿಯನ್ನು ನಡೆಸುತ್ತಿತ್ತು.

ಸ್ವಾತಂತ್ರ ದೊರಕುವಾಗಲೇ ಮುಸಲ್ಮಾನರು ಧರ್ಮಾಧಾರಿತ ರಾಷ್ಟ್ರಕ್ಕಾಗಿ ಬೇಡಿಕೆಯನ್ನಿಟ್ಟು ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡಿದ್ದಾರೆ. ಮುಂದುವರೆದು ಅದೇ ಮುಸಲ್ಮಾನರು ಬಾಂಗ್ಲಾದೇಶವಾಗಿ ಬದಲಾದರು.ಆದರೆ ಹಿಂದೂ,ಜೈನ,ಬೌದ್ಧ ಮತ್ತು ಸಿಖ್ ಮತ್ತು ಕ್ರಿಶ್ಚಿಯನ್ನರು ಭಾರತೀಯರಾಗಿ ಉಳಿದುಕೊಂಡರು.ಅದರ ಅರ್ಥವೇನೆಂದರೆ ಅಲ್ಲಿಯ ( ಪಾಕ್ ಮತ್ತು ಬಾಂಗ್ಲಾ)ದೇಶ ಮುಸ್ಲಿಮರ ದೇಶವೇ ಆಗಿದ್ದು ಇತರ ಧರ್ಮೀಯರು ಅಲ್ಲಿ ಒಲ್ಲದ ಅತಿಥಿಗಳಾಗಿ ಜೀವಿಸಿದ್ದಾರೆ,ವರ್ಷಗಳಿಂದ ಇಳಿಯುತ್ತಿರುವ ಧಾರ್ಮಿಕ ಅನುಪಾತಗಳು,ಧಾರ್ಮಿಕ ಹಿಂಸೆ ಮತ್ತು ಅತ್ಯಾಚಾರಗಳೂ ಇವಕ್ಕೆ ಸಾಕ್ಷಿಯಾಗಿವೆ.ಹೀಗಿರುವಾಗ ಅವರೆಲ್ಲ ತವರಾದ ಭಾರತಕ್ಕೆ ಬಾರದೆ ಇನ್ನೆಲ್ಲಿ ಹೋಗಬೇಕು?? ತಮ್ಮ ಇಚ್ಛೆಯಂತೆ ಧರ್ಮದ ಆಧಾರದಲ್ಲಿ ಎರಡೆರಡು ದೇಶಗಳನ್ನು ಪಡೆದುಕೊಂಡ ಮೇಲೂ ಅಲ್ಲಿಯ ಮುಸ್ಲಿಮರಿಯಾಕೆ ಭಾರತಕ್ಕೆ ಬರಬೇಕು?.? ಅವರ ಸ್ವಂತ ನೆಲೆಯಲ್ಲಿ ಅವರಿಗೇಕೆ ಭಯ..ಇಷ್ಟಕ್ಕೂ ಮೋದಿಯ ಆಳ್ವಿಕೆಯಲ್ಲಿ ಭಾರತೀಯ ಮುಸಲ್ಮಾನರಿಗೆ ಭದ್ರತೆಯಿಲ್ಲ,ಭಯವಿದೆ ಎಂದೆಲ್ಲಾ ಅರಚಾಡುತ್ತಿರುವಾಗ ಅಭದ್ರತೆ ಇರುವ ದೇಶಕ್ಕೆ ಬರುವ ಬದಲಾಗಿ ಅವರು ಸುಭದ್ರರಾಗಿ ಅಲ್ಲೇ ಇರಬಹುದಲ್ಲ??

ಯಾರೇನೇ ಹೇಳಲಿ ಇಂದೀಗ ೧೯೪೭ ರಲ್ಲಿ ಸ್ವಾತಂತ್ರ ದೊರೆತೂ ದಬ್ಬಾಳಿಕೆಯಲ್ಲಿ ನಲುಗಿದ್ದ,ಧಾರ್ಮಿಕ ದ್ವೇಷದಿಂದಾಗಿ ತಮ್ಮದೆನ್ನುವ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿ ತವರು ನೆಲಕ್ಕೆ ಬಂದಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಹಿಂದೂ,ಜೈನ,ಬೌದ್ಧ,ಸಿಖ್ ಮತ್ತು ಕ್ರಿಶ್ಚಿಯನ್ ಸಹೋದರ ಸಹೋದರಿಯರು ಇನ್ನೀಗ ತಲೆಯೆತ್ತಿ ಹೆಮ್ಮೆಯಿಂದ ಭಾರತೀಯ ನಾಗರೀಕರಾಗಿ ಬಾಳಬಹುದು..ಹಲವಾರು ವರ್ಷಗಳಿಂದ ಕಾಂಗ್ರೆಸ್ ಸರಕಾರವು ವಿದೇಶೀಯರನ್ನು ಅನುಕರಿಸಿ ಮಾಡಿದ್ದ ನೀತಿಯ ಅನ್ಯಾಯಕ್ಕೆ ಬಲಿಯಾಗಿದ್ದ ಸಾವಿರಾರು ಅಮಾಯಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು..ನಿಜವಾಗಿ ಹೇಳಬೇಕೆಂದರೆ ಸಾವಿರಾರು ಜನರಿಗೆ ಸ್ವಾತಂತ್ರ ದೊರಕಿದ್ದು ನಿನ್ನೆ ಮಧ್ಯ ರಾತ್ರೆ..ಇದರ ಕ್ರೆಡಿಟ್ ಖಂಡಿತಾ ಕಾಂಗ್ರೆಸ್ ಎಂಬ ಪಕ್ಷ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.

-Deepashree M

Tags

Related Articles

FOR DAILY ALERTS
Close