ಅಂಕಣ

ಮೋದಿಯನ್ನು ಯಾವುದೇ ತಾರೆಗಳು ಟೀಕಿಸಿದ ತಕ್ಷಣ ನಾವ್ಯಾಕೆ ಸಿಟ್ಟಾಗುತ್ತೇವೆ? ಹಾಗಾದರೆ ಮೋದಿ ಪ್ರಶ್ನಾತೀತರೇ?!

ನರೇಂದ್ರ ಮೋದಿ!!

ಜಗತ್ತಲ್ಲಿ ಇವರಷ್ಟು ಟೀಕೆಗೊಳಗಾದ ವ್ಯಕ್ತಿ ಬೇರೆ ಯಾರೂ ಇಲ್ಲ. ಮೋದಿ ಟೀಕಾಕಾರಿಗೆ ಯಾವುದೇ ಪ್ರತಿಕ್ರಿಯೆ ನೀಡುವುದೂ ಇಲ್ಲ. ಆದರೆ ನಾವೆಲ್ಲಾ ಮೋದಿಯ ಅಭಿಮಾನಿಗಳು. ಟೀಕಾಕಾರರು ಹೇಳುವಂತೆ ನಮ್ಮನ್ನು `ಮೋದಿ ಭಕ್ತರು’ ಎಂದು ಕರೆಯುತ್ತಾರೆ. ಮೋದಿಭಕ್ತರು ಎಂದು ಕರೆಸಿಕೊಳ್ಳುವುದಕ್ಕೆ ನಮಗೆ ನಿಜಕ್ಕೂ ಹೆಮ್ಮೆ ಇದೆ. ನಾವು ಮೋದಿ ಭಕ್ತರಾಗಲು ಕಾರಣವೇನು? ನಮಗೆ ಮೋದಿಯವರನ್ನು ಯಾರೂದರೂ ಟೀಕಿಸಿದರೆ ಅದ್ಯಾಕೆ ಅಷ್ಟೊಂದು ಸಿಟ್ಟು ಬರುತ್ತದೆ? ನಾವು ಯಾಕೆ ಮೋದಿಗೆ ಅಷ್ಟೊಂದು ಸಮರ್ಥನೆ ನೀಡುತ್ತೇವೆ? ಮೋದಿಯವರನ್ನು ಟೀಕಿಸಿದವರ ಜನ್ಮ ಜಾಲಾಡುವುದು ಯಾಕೆ? ಮೋದಿ ಟೀಕಾಕಾರರಿಂದ ನಾವ್ಯಾಕೆ ವಿರೋಧ ಕಟ್ಟಿಕೊಳ್ಳುತ್ತೇವೆ?

ಹೌದು ಇಂದು ನಾವು ಎಲ್ಲವನ್ನೂ ತಿಳಿಸುವ ಕಾಲ ಬಂದಿದೆ. ಮೋದಿಯವರನ್ನು ನಾವು ಹೊಗಳಿ ನಾವು ಅವರ ಭಕ್ತರೆಂದು ಕರೆಸಿಕೊಂಡಿದ್ದೇವೆ. ಅವರನ್ನು ಹೊಗಳಲು ನಮಗೆ ಯಾರೂ ಕೂಡಾ ಹಣ ಕೊಡುವುದೂ ಇಲ್ಲ, ನಿಜ ಹೇಳಬೇಕೆಂದರೆ ನಮಗೆ ವೈಯಕ್ತಿಕವಾಗಿ ಲಾಭವೂ ಇಲ್ಲ. ದೇಶದ ಹಿತದೃಷ್ಟಿಯಿಂದ ನಾವು ಮೋದಿ ಭಕ್ತರಾಗಿದ್ದೇವೆ. ಯಾರೂ ಕೂಡಾ ಮೋದಿ ಏನಾದರೂ ಅಂದರೆ ನಮ್ಮ ಸಿಟ್ಟು ನೆತ್ತಿಗೇರುತ್ತದೆ. ಮೋದಿ ಬಗ್ಗೆ ಅಪಪ್ರಚಾರ ಮಾಡಿದಾಗ ಅದು ತನ್ನ ತಂದೆಗೆ ಮಾಡಿದ ಅಪಪ್ರಚಾರದಂತೆ ಕೋಪ ಬರುತ್ತದೆ ಇದೆಲ್ಲಾ ಯಾಕೆ?

ಟೀಕಿಸುವುದಕ್ಕೂ ಒಂದು ಅರ್ಥ ಇರಬೇಕು. ಕಾರಣವಿಲ್ಲದೆ, ಸಮರ್ಥನೆ ಇಲ್ಲದೆ ಒಬ್ಬರನ್ನು ವೈಯಕಿಕವಾಗಿ ಟೀಕಿಸಿ ನಿಂದಿಸಿದಾಗ ಯಾರಿಗಾದರೂ ಸಿಟ್ಟು ಬರದೆ ಇರುತ್ತದೆಯೇ? ಅದೇ ರೀತಿ ಮೋದಿಯವರನ್ನು ಕಾರಣವಿಲ್ಲದೆ, ಆಧಾರರಹಿತವಾಗಿ, ವೈಯಕ್ತಿಕವಾಗಿ ನಿಂದಿಸಿದಾಗಲೂ ಸಿಟ್ಟು ಬರುತ್ತದೆ. ಇಂಥವರಿಗೆ ಮೋದಿಯವರು ಮಾಡಿದ ಜನಪರ ಕಾರ್ಯಗಳು ಯಾಕೆ ನೆನಪಿಗೆ ಬರುವುದಿಲ್ಲ ಎಂದು ಸಿಟ್ಟು ಬರುತ್ತದೆ…

ಮೋದಿ ಟೀಕಾಕಾರರಿಗೆ ಇಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇನೆ. ನಿಮಗೆ ತಾಖತ್ ಇದ್ದರೆ ಪ್ರಾಮಾಣಿಕವಾಗಿ ಉತ್ತರಿಸಿ. ಆಮೇಲೆ ಬೇಕಾದರೆ ಮೋದಿಯವರ ಕಾರ್ಯ ಹಿಡಿಸದೇ ಇದ್ದರೆ ಅದಕ್ಕೆ ಸಕಾಲಿಕ ಕಾರಣವನ್ನೂ ನೀಡಿರಿ. ಅದರ ಜೊತೆಗೆ ಮೋದಿಯವರ ದೇಶಕ್ಕೆ ಆಗುವ ಹಿತಕಾರಿ ಯೋಜನೆಗಳ
ಬಗ್ಗೆಯೂ ಪ್ರಸ್ತಾಪಿಸಿ..

1. ಮೋದಿಯವರು ಸ್ಟಾಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಹೊಸ ಯೋಜನೆಗಳನ್ನು ತಂದರು. ಭಾರತದಲ್ಲೇ ಉತ್ಪನ್ನಗಳನ್ನು ತಯಾರಿಸಿ ಅದನ್ನು ಹೊರದೇಶಗಳಿಗೆ ರಫ್ತು ಮಾಡಿಕೊಂಡು ದೇಶವನ್ನು ಪ್ರಬಲ ಆರ್ಥಿಕ ಶಕ್ತಿಯನ್ನಾಗಿಸುವ ದೂರಗಾಮಿ ಯೋಚನೆಯನ್ನು ಹೊಂದಿದೆ. ಈ ಯೋಜನೆ ಇಂದು ಕಾರ್ಯರೂಪಕ್ಕೆ ಬರುತ್ತಿದ್ದು, ಕೋಟಿಕಟ್ಟಲೆ ಉದ್ಯೋಗ ತಯಾರಾಗಲಿದೆ. ಇನ್ನು ಐದು ವರ್ಷಗಳಲ್ಲಿ ಭಾರತ ಪ್ರಬಲ ರಫ್ತು ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮೋದಿ ಟೀಕಾಕಾರರೇ ಮೋದಿಯ ಈ ಯೋಜನೆಯ ಬಗ್ಗೆ ನಿಮಗೆ ಗೊತ್ತಿದೆಯಾ? ಕಳೆದ ಅರುವತ್ತು ವರ್ಷಗಳ ಕಾಲ ಕಾಂಗ್ರೆಸ್ ನಮ್ಮ ದೇಶವನ್ನು ಆಳಿತ್ತು. ಒಂದು ಪಿಸ್ತೂಲ್ ತಯಾರಿಸಲೂ ನಮ್ಮಿಂದಾಗಲಿಲ್ಲ. ಎಲ್ಲದಕ್ಕೂ ಹೊರದೇಶಕ್ಕೆ ಕೈಚಾಚಬೇಕಿತ್ತು. ಅಮೇರಿಕಾ, ಚೀನಾ, ಜರ್ಮನಿ, ಜಪಾನ್ ಮುಂತಾದ ರಾಷ್ಟ್ರಗಳು ಯುದ್ಧದಿಂದ ತತ್ತರಿಸಿದ್ದರೂ ಇಂದು ಪ್ರಬಲ ಆರ್ಥಿಕ ಶಕ್ತಿಯಾಗಿ ಮುಂದುವರಿದಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ದೇಶ ಯಾಕೆ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಲಿಲ್ಲ? ಟೀಕಾಕಾರರೇ ನೀವಿದರ ಬಗ್ಗೆ ಚಿಂತಿಸಿದ್ದೀರಾ? ಅದು ಬಿಡಿ ಮೋದಿಯವರ ನೂತನ ಯೋಜನೆಗಳಿಂದ ಮುಂದಿನ ಭಾವೀ ಭಾರತದ ಮೇಲೆ ಪರಿಣಾಮ ಹೇಗಿರಬಹುದೆಂದು ನೀವು ಯೋಚಿಸುವುದಿಲ್ಲ…

2. ನಮ್ಮ ದೇಶದಲ್ಲಿ ಇಂದಿಗೂ ಪೆಟ್ರೋಲಿಯಂನಿಂದಲೇ ವಾಹನಗಳು ಓಡಾಡುತ್ತದೆ. ಪೆಟ್ರೋಲಿಯಂಗಾಗಿ ಬಿಲಿಯನ್‍ಗಟ್ಟಲೆ ದುಡ್ಡನ್ನು ವಿದೇಶಗಳಿಗೆ ನೀಡಬೇಕು…ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ದೇಶವಾಳಿತು. ಪೆಟ್ರೋಲ್‍ರಹಿತ ಪರ್ಯಾಯ ಇಂಧನಗಳ ಬಗ್ಗೆ ದೇಶ ಯಾಕೆ ಅವರಿಗೆ ಯೋಚನೆ ಬರಲಿಲ್ಲ? ಟೀಕಾಕಾರರೇ ನಿಮಗೆ ಗೊತ್ತಿದೆಯೋ ಗೊತ್ತಿಲ್ಲವೋ ಮೋದಿ ಸರಕಾರ ಪೆಟ್ರೋಲಿಯಂ ರಹಿತ ಇತರ ಶಕ್ತಿಮೂಲಗಳಿಂದ ವಾಹನ ಚಲಿಸುವುದನ್ನು ಅನ್ವೇಷಿಸಲು
ಸೂಚಿಸಿದೆ. ಭವಿಷ್ಯದಲ್ಲಿ ಭಾರತ ಪೆಟ್ರೋಲಿಯಂರಹಿತವಾಗಿ ವಾಹನ ಓಡಲಿದೆ. ವಾಹನ ಕಂಪೆನಿಗಳು ಇದಕ್ಕಾಗಿ ಇಂದೇ ಸಜ್ಜಾಗಿರಿ ಎಂದು ನಿತಿನ್‍ ಗಡ್ಕರಿಯವರು ಸೂಚಿಸಿದ್ದು ಯಾಕೆ ನೆನಪಿಗೆ ಬರುತ್ತಿಲ್ಲ?

3. ಮೋದಿಯವರು ದೇಶದ ಹಲವು ಪ್ರಮುಖ ನಗರಗಳನ್ನು ಸ್ಮಾರ್ಟ್‍ಸಿಟಿಯನ್ನಾಗಿಸಲು ಮುಂದಾಗಿದ್ದಾರೆ. ಈ ಮುಂಚಿನ ಸರಕಾರಕ್ಕೆ ಸ್ಮಾರ್ಟ್ ಸಿಟಿ ಮಾಡಲು ಏನು ರೋಗವಿತ್ತು? ಮೋದಿ ಬರುವ ಮುಂಚೆ ಅದರ ಪರಿಕಲ್ಪನೆಯೇ ಇರಲಿಲ್ಲ. ಮೋದಿ ಟೀಕಿಸುವವರಿಗೆ ಸ್ಮಾರ್ಟ್ ಸಿಟಿ ಯಾಕೆ ಕಣ್ಣಿಗೆ ಕಾಣುವುದಿಲ್ಲ?

4. ನರೇಂದ್ರ ಮೋದಿ ಮೆಟ್ರೋ ರೈಲನ್ನು ಇಡೀ ದೇಶದಾದ್ಯಂತ ಬೆಸೆದುಕೊಳ್ಳಲು ಮುಂದಾಗಿದ್ದಾರೆ. ಉತ್ತಮ ದರ್ಜೆಯ ರೈಲಿನಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ದೇಶದ ಹಲವು ನಗರಗಳಿಗೆ ಕ್ಷಿಪ್ರ ಸಂಚಾರ ಮಾಡಬಹುದು. ಮೊದಲ ಹಂತದಲ್ಲಿ ದೇಶದ 50 ನಗರಗಳು ಮೆಟ್ರೋ ಸಾರಿಗೆ ವ್ಯವಸ್ಥೆಯಡಿಯಲ್ಲಿ ಬರಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮೆಟ್ರೋ ಜಾರಿಗೊಂಡಿದೆ. ಈ ಬಗ್ಗೆಯೂ ಟೀಕಾಕಾರರು ಮೋದಿಯನ್ನು ಟೀಕಿಸುವುದನ್ನು ಬಿಟ್ಟಿಲ್ಲ.

5. ನರೇಂದ್ರ ಮೋದಿ ವಿದೇಶಸಂಚಾರದಲ್ಲೇ ಕಾಲ ಕಳೆಯುತ್ತಾರೆ ಎಂದು ಹಲವಾರು ಮಂದಿ ಟೀಕಿಸುತ್ತಾರೆ. ಆದರೆ ಆ ರೀತಿ ಟೀಕಿಸುವವರಿಗೆ ಮೋದಿ ಯಾಕಾಗಿ ಸಂಚರಿಸುತ್ತಾರೆಂದು ತಿಳಿದಿದ್ದಾರೆಯೇ? ಮೋದಿ ಬೇರೆಯವರ ಹಾಗೆ ವಿದೇಶಕ್ಕೆ ಮೋಜುಮಸ್ತಿ ಮಾಡಲೆಂದು ತೆರಳಿದ್ದಲ್ಲ. ಇದರಿಂದ ಅನೇಕ ರಾಷ್ಟ್ರಗಳು ಭಾರತದೊಡನೆ ಸ್ನೇಹಹಸ್ತ ಚಾಚಿವೆ. ಭಾರತದ ವಿರುದ್ಧವಾಗಿದ್ದ ಬಲಾಢ್ಯ ರಾಷ್ಟ್ರ ಅಮೆರಿಕಾ ಭಾರತ ಪರಮಮಿತ್ರನಾಗಿ ಬದಲಾಗಿದೆ. ಜಪಾನ್, ಇಸ್ರೇಲ್, ರಷ್ಯಾದಂತಹ ಬಲಿಷ್ಠ ರಾಷ್ಟ್ರಗಳಿಂದ ಹಿಡಿದು ಭೂತಾನ್‍ನಂತಹ ಚಿಕ್ಕ ರಾಷ್ಟ್ರಗಳೂ ಭಾರತದ ಪರವಾಗಿದೆ. ಜೊತೆ ದೊಡ್ಡ ಮಟ್ಟದ ರಕ್ಷಣಾ ಒಪ್ಪಂದ, ತಂತ್ರಜ್ಞಾನ, ಬಾಹ್ಯಾಕಾಶ, ಕೈಗಾರಿಕೆ ಮುಂತಾದ ಒಪ್ಪಂದಗಳು ನಡೆದಿವೆ. ಹೇಳಲು ಹೋದರೆ ಇನ್ನೂ ಅನೇಕವಿದೆ. ಆದರೆ ಇದೆಲ್ಲದರ ಬಗ್ಗೆ ಟೀಕಾಕಾರಿಗೆ ಕಾಣುವುದಿಲ್ಲ?

6. ದೋಕಲಂ ಗಡಿ ವಿಚಾರದಲ್ಲಿ ಚೀನಾ ಭಾರತದ ವಿರುದ್ಧ ಕಾಲ್ಕೆರೆದು ಯುದ್ಧಕ್ಕೆ ಬಂದಿತು. ಈ ವೇಳೆ ಮೋದಿಯವರನ್ನು ಟೀಕಿಸುತ್ತಾ, ಫಕೀರಾ ಈ ದೇಶವನ್ನು ಯಾವ ಗಂಡಾತರಕ್ಕೆ ಸಿಲುಕಿಸಿದ ಎಂದು ಬೊಬ್ಬೆ ಹೊಡೆದದ್ದೇ ಹೊಡೆದದ್ದು. ಆದರೆ ಮೋದಿ ಮಾತ್ರ ಯಾವುದಕ್ಕೂ ಕ್ಯಾರ್ ಎನ್ನದೇ ಚೀನಾದ ಜೊತೆ ಯುದ್ಧವಾದರೆ ಯುದ್ಧ ಎಂದು ತೊಡೆತಟ್ಟಿಯೇ ಬಿಟ್ಟಿದ್ದರು. ಅತ್ತ ಭಾರತದ ಪರಮಾಪ್ತ ರಾಷ್ಟ್ರಗಳು ಭಾರತಕ್ಕೆ ಬಂಬಲಕ್ಕೆ ನಿಂತಿತು. ಅತ್ತ ಅಪಾಯದ ಅರಿವಾದೊಡನೆ ಚೀನಾ ಬಾಲಮಡಚಿಕೊಂಡು ಜಾಗ ಖಾಲಿ ಮಾಡಿತು. ಒಂದು ವೇಳೆ ಇದೇ ಸಂದರ್ಭ ಕಾಂಗ್ರೆಸ್ ಇದ್ದಿದ್ದರೆ ಭಾರತದ ಪರಿಸ್ಥಿತಿ ಹೇಗಿರಬಹುದಿತ್ತು? ಈ ಬಗ್ಗೆ ಇಟಲಿಯ ಗುಲಾಮರಿಗೆ ಅರ್ಥವಾಗುವುದಿಲ್ಲ?

7. ಕಾಂಗ್ರೆಸ್‍ನ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಎಷ್ಟೋ ಮಂದಿ ಸೈನಿಕರು ಮೃತಪಟ್ಟಿದ್ದರು. ಕಾಶ್ಮೀರ ಭಯೋತ್ಪಾದಕರ ಸ್ವರ್ಗವಾಗಿತ್ತು. ಒಂದು ಗುಂಡುಹೊಡೆಯಬೇಕಿದ್ದರೂ ಸರಕಾರದ ಅನುಮನತಿ ಕೇಳಬೇಕಿತ್ತು…. ಆದರೆ ಇಂದು ನಾಯಿಗಳಂತೆ ಭಯೋತ್ಪಾದಕರು ಸಾಯುತ್ತಿದ್ದಾರೆ. ಟಾಪ್‍ಮೋಸ್ಟ್ ಟೆರರ್ ಕಮಾಂಡರ್‍ಗಳ ಹೆಣ ಉರುಳಿದೆ. ಇದೆಲ್ಲಾ ಟೀಕಾಕಾರರ ಕಣ್ಣಿಗೆ ಕಾಣುವುದೇ ಇಲ್ಲ.

7. ನೋಟು ನಿಷೇಧದ ಬಗ್ಗೆ ಅಜ್ಞಾನಿಗಳಂತೆ ಟೀಕಿಸುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಬಿಲಿಯನ್‍ಗಟ್ಟಲೆ ಭಾರತದ ಕರೆನ್ಸಿಗಳನ್ನು ಪ್ರಿಂಟ್ ಮಾಡಿದ
ಪಾಕಿಸ್ತಾನ ಅದನ್ನು ಭಾರತಕ್ಕೆ ಕಳಿಸುವ ಹುನ್ನಾರ ನಡೆಸಿತ್ತು. ನಕಲಿ ನೋಟು ಜಾಲ ಸಾಕಷ್ಟಿತ್ತು. ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ ನೋಟು ನಿಷೇಧಿಸದ ಹೊರತು ಭಾರತಕ್ಕೆ ಉಳಿಗಾಲವೇ ಇರಲಿಲ್ಲ. ಈ ವಿಷಯ ಟೀಕಾಕಾರರಿಗೂ ಖಂಡಿತಾ ಗೊತ್ತಿದೆ. ಆದರೂ ಕೂಡಾ ಮೋದಿಯನ್ನು ಟೀಕಿಸುತ್ತಾರೆ.

8. ಜಿಎಸ್‍ಟಿ ಎನ್ನುವ ಏಕರೂಪಿ ತೆರಿಗೆಯಿಂದ ದೇಶ ಅಮೂಲಾಗ್ರ ಬದಲಾವಣೆಯಾಗುತ್ತದೆ. ಈ ಪದ್ಧತಿಯಿಂದ ಹಲವಾರು ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿದೆ. ತೆರಿಗೆ ವಂಚಕರಿಗೆ ಖಂಡಿತಾ ಜಿಎಸ್‍ಟಿ ಹೊರೆಯಾಗಿದೆ. ಜಿಎಸ್‍ಟಿ ಇದ್ದರೂ ಕೆಲವು ಠಕ್ಕ ವ್ಯಾಪಾರಿಗಳು ಸಿಜಿಎಸ್‍ಟಿ, ಎಸ್‍ಜಿಎಸ್‍ಟಿ ಸೇರಿ ಹಲವನ್ನು ಹೇರಿ ಜನರಿಂದ ಹಣ ಕೀಳುತ್ತಿದೆ. ಇವೆಲ್ಲಾ ವಿರೋಧಿಗಳಿಗೂ ಗೊತ್ತಿದೆ. ಆದರೂ ಕಾರಣವಿಲ್ಲದೆ ಮೋದಿಯನ್ನು ವಿರೋಧಿಸಲಾಗುತ್ತಿದೆ.

9. ಇಂದು ಭಾರತದ ಸೈನ್ಯ ವಿಶ್ವದಲ್ಲೇ ನಾಲ್ಕನೇ ಬಲಾಢ್ಯ ರಾಷ್ಟ್ರವೆಂದು ಹೆಸರು ಪಡೆದಿದೆ. ಭಾರತದ ಸೇನಾಪಡೆಯೂ ಅತ್ಯಂತ ಪ್ರಬಲವಾಗಿದೆ.
ಸೇನಾತಂತ್ರಜ್ಞಾನ ಆಧುನೀಕರಣಗೊಂಡಿದೆ. ಭಾರತದ ರಕ್ಷಣೆಗೆ ಬಜೆಟ್‍ನಲ್ಲಿ ಕೋಟಿಗಟ್ಟಲೆ ಹಣ ಮೀಸಲಿಟ್ಟಿದ್ದು, ಇಂದು ದೇಶೀಯವಾಗಿ ಅನೇಕ ಯುದ್ದೋಪರಕರಣ, ಕ್ಷಿಪಣಿ, ಅಣುತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಭಾರತದ ಸೈನ್ಯ ಇಂದು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸುವ ಸಾಮಥ್ರ್ಯವನ್ನು ಪಡೆದಿದೆ. ಆದರೂ ಮೋದಿಯ ಬಗ್ಗೆ ಟೀಕಿಸುತ್ತೀರಲ್ಲಾ ನಮಗೆ ಕೋಪ ಬಾರದೆ ಇರುತ್ತದೆಯೇ?

10. ಮೋದಿ ಸರಕಾರ ಬಂದು ಮೂರೂವರೆ ವರ್ಷ ಆಗಿದೆ. ಭ್ರಷ್ಟಾಚಾರ ರಹಿತ, ಕಳಂಕರಹಿತ ಆಡಳಿತ ನಡೆಸಲು ಯಾರಿಗೆ ಸಾಧ್ಯವಾಗಿದೆ? ಆದರೂ ಮೋದಿ ಅಂದ್ರೆ ಯಾಕೆ ಅಲರ್ಜಿ?

11. ಒಂದೇ ಒಂದು ದಿನ ರಜೆ ಹಾಕದೆ, ದಿನದ 18 ದಿನಗಳ ಕಾಲ ದುಡಿಯುವ ಮೋದಿಯವರನ್ನು ಸುಖಾಸುಮ್ಮನೆ ಟೀಕಿಸುವಾಗ ನಮಗೆ ಸಿಟ್ಟಾಗದೆ ಇರುತ್ತದೆಯೇ? ಇಷ್ಟೊಂದು ದೀರ್ಘ ಅವಧಿ ಯಾರು ಕೆಲಸ ಮಾಡಿದ್ದಾರೆ?

12. ಪರಿಶಿಷ್ಟ ಜಾತಿ ಮತ್ತು ಪ0ಗಡಗಳು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸ್ಟ್ಯಾಂಡಪ್ ಇಂಡಿಯಾ ಯೋಜನೆ ತಂದಿದ್ದಾರೆ. ಯಾವಾಗಲೂ ದಲಿತ, ಅಲ್ಪಸಂಖ್ಯಾತ ಎಂದು ಹೇಳುವ ಟೀಕಾಕಾರರಿಗೆ ಈ ಯೋಜನೆ ಯಾಕೆ ಕಣ್ಣಿಗೆ ಕಾಣುವುದಿಲ್ಲ?

13. ಜೀವನದಿಯಾಗಿರುವ ಗಂಗಾ ಸೇರಿದಂತೆ ಸುಮಾರು 60 ನದಿಗಳನ್ನು ಜೋಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಆಸಕ್ತಿ ವಹಿಸಿ ಮೊದಲ ಹಂತದ ಯೋಜನೆಗೆ ಅನುಮತಿ ನೀಡಿದ್ದಾರೆ. ಇದರ ಜೊತೆಗೆ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ಇಷ್ಟಾದರೂ ಮೋದಿಯವರನ್ನು ಟೀಕಿಸುತ್ತಲೇ ಇರಿ….

14. 2018ರೊಳಗೆ ದೇಶದ ನಾಲ್ಕು ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸೌಭಾಗ್ಯ ಯೋಜನೆಯನ್ನು ಮೋದಿ ಜಾರಿಗೊಳಿಸಿದರೂ ಮತ್ತೆ ಕೂಡಾ ಮೋದಿಯನ್ನು ಟೀಕಿಸುತ್ತೀರಿ ಅಂದರೆ ಸಿಟ್ಟು ಬರದಿರುತ್ತದೆಯೇ?

15. ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಮೋದಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೇ ಅಶ್ರಯದಡಿಯಲ್ಲಿ ಈ
ಯೋಜನೆಯನ್ನು ಜಾರಿಗೆ ತರಲಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಯವಾಗುವದು ಈ ಯೋಜನೆ ಉದ್ದೇಶ. ಟೀಕಾಕಾರರು ಈ ಬಗ್ಗೆಯೂ ಚೂರು ಮಾತಾಡಲಿ.

16. ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರಬೇಕೆಂಬ ಮಹಾನ್ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯಾಗಿದೆ. ಈ ಯೋಜನೆಯಡಿ ಸುಮಾರು 10 ಕೋಟಿಗೂ ಹೆಚ್ಚು ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ.

18. ಗ್ಯಾಸ್ ಹಾಗೂ ಇನ್ನಿತರ ಸಬ್ಸಿಡಿಗಳನ್ನು ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲದೆ ನೇರ ನಗದು ವರ್ಗಾವಣೆ ಯೋಜನೆಯನ್ನು ಪ್ರಧಾನಿ ಮೋದಿ ಸರ್ಕಾರ ಮರುಜಾರಿ ಮಾಡಿತು. ಬ್ಯಾಂಕ್ ಖಾತೆ ಮತ್ತು ಗ್ಯಾಸ್ ನಂಬರನ್ನು ಸಂಯೋಜಿಸಿದರೆ ಸಾಕು ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಈ ಬಗ್ಗೆ ಟೀಕಾಕಾರರಿಗೆ ಗೊತ್ತೇನು?

19. ಅಪಘಾತ ವಿಮೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೆ ತಂದಿತು. ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲ ಗ್ರಾಹಕರಿಗೂ ಈ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯ ಲಭಿಸಲಿದೆ.

20. ಜೀವನಜ್ಯೋತಿ ವಿಮೆ ಯೋಜನೆ ಅಡಿಯಲ್ಲಿ ವಾರ್ಷಿಕ 330 ರು. ಕಂತು ಪಾವತಿಸುವ 18 ರಿಂದ 50 ವರ್ಷದೊಳಗಿನ ವ್ಯಕ್ತಿಗಳು ಯಾವುದೇ ರೀತಿಯ ಸಾವಿಗೆ ತುತ್ತಾದರೂ ಅವರ ಕುಟುಂಬದವರಿಗೆ 2 ಲಕ್ಷ ರು ವಿಮೆ ನೀಡುವ ಯೋಜನೆ ಇದಾಗಿದೆ.

21. ಪ್ರಧಾನಿ ನರೇಂದ್ರ ಮೋದಿ ಅವರ ಬಹು ಮಹಾತ್ವಕಾಂಕ್ಷೆಯ ಚಿನ್ನ ನಗದೀಕರಣ ಯೋಜನೆಯನ್ನು 2015ರ ಅಕ್ಟೋಬರ್ 22ರಂದು ಜಾರಿಗೆ ತರಲಾಯಿತು. ಗೋಲ್ಡ್ ಬಾಂಡ್ ಮತ್ತು ಗೋಲ್ಡ್ ಡೆಪಾಸಿಟ್ ಎಂಬ ಎರಡು ವಿಧದ ಯೋಜನೆಗಳಾಗಿವೆ.

22. ಗಂಗಾ ನದಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ. ಈ ನದಿಯನ್ನು ಸ್ವಚ್ಛಗೊಳಿಸಲು ಬೇರೆ ಯಾರಿಗೆ ಮನಸ್ಸಿತ್ತು?

23. ಲಿಂಗಾನುಪಾತದಲ್ಲಿ ಅಸಮಾನತೆ, ಹೆಣ್ಣು ಭ್ರೂಣಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಹೆಣ್ಣುಮಕ್ಕಳನ್ನು ರಕ್ಷಿಸಲು ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆ ಘೋಷಣೆಯಾದ ಬಳಿಕ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಮಾಣದಲ್ಲಿ
ಇಳಿಕೆಯಾಗಿದೆ. ಟೀಕಾಕಾರರಿಗೆ ಇದು ಗೊತ್ತಿದೆಯೇ?

24. ಅಸಂಘಟಿತ ವಲಯದ ಉದ್ಯೋಗಿಗಳ ವಿಮೆ ಮತ್ತು ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. 1 ಸಾವಿರದಿಂದ 5 ಸಾವಿರದವರೆಗೂ ಕನಿಷ್ಠ ನಿಶ್ಚಿತ ಪಿಂಚಣಿ ನೀಡುವ ಯೋಜನೆ ಇದಾಗಿದೆ. 60ನೇ ವಯಸ್ಸಿನಿಂದ ಪಿಂಚಣಿ ಆರಂಭವಾಗಲಿದೆ. ವೃದ್ಧಾಪ್ಯದಲ್ಲಿ ನೆರವಾಗುವ ಈ ಯೋಜನೆಯ ಬಗ್ಗೆ ಟೀಕಾಕಾರರಿಗೆ ಗೊತ್ತಿದೆಯೇ?

25. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಯೋಜನೆಯಡಿಯಲ್ಲಿ ಇಡೀ ಸಮಗ್ರ ದೇಶ ವಿಕಾಸವಾಗುತ್ತಿದೆ. ಹೆದ್ದಾರಿ ಅಗಲೀಕರಣಗೊಳ್ಳುತ್ತಿದೆ. ಗಡಿಭಾಗ ಬಲಿಷ್ಠವಾಗುತ್ತಿದೆ. ಪ್ರತಿಯೊಂದೂ ಕ್ಷೇತ್ರವೂ ಸಮಗ್ರವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಆದರೂ ಮೋದಿಯವರನ್ನು ಟೀಕಿಸುತ್ತಾರೆಂದು ನಮಗೆ ಉರಿಯದೆ ಇರುತ್ತದೆಯೇ?

26. ಹಿಂದೆ ಗ್ಯಾಸ್ ಎಂದರೆ ಅದೊಂದು ಹಣ ಮಾಡುವ ದಂಧೆಯಾಗಿತ್ತು. ಗ್ಯಾಸ್ ಪೂರೈಕೆಯಾಗುವುದೇ ಸಮಸ್ಯೆಯಾಗಿತ್ತು. ಆದರೆ ನರೇಂದ್ರಮೋದಿ ಉಜ್ವಲ
ಯೋಜನೆಯಡಿಯಲ್ಲಿ ಬಡವರಿಗೆ ಉಚಿತ ಗ್ಯಾಸ್ ಪೂರೈಕೆ ಮಾಡುತ್ತಿದ್ದಾರೆ. ಒಲೆಯನ್ನು ಊದುತ್ತಾ ಉಬ್ಬಸ, ಕ್ಯಾನ್ಸರ್‍ಗೆ ಕಾರಣವಾಗುತ್ತಿದ್ದ ಮಹಿಳೆಯರ ಆರೋಗ್ಯ ಸುಧಾರಣೆಯಾಗುತ್ತಿರುವುದು ಟೀಕಾಕಾರರಿಗೆ ಸಹಿಸಲಾಗುತ್ತಿಲ್ಲ..

27. ವಿದ್ಯುತ್ ಉಳಿತಾಯಕ್ಕಾಗಿ ಎಲ್‍ಇಡಿ ಬಲ್ಬ್ ವಿತರಣೆ, ಅಡಿಗೆ ಅನಿಲ ಸಂಪರ್ಕ, ಛೆ ಒಂದೇ ಎರಡೇ?

28. ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿರುವುದು, ಗೋವು ತಳಿಗಳನ್ನು ಬೆಳೆಸಲು, ದೇಶೀಯ ತಳಿಗಳ ಉತ್ಪಾದನೆಯನ್ನು ಹೆಚ್ಚಿಸಲು, `ರಾಷ್ಟ್ರೀಯ ಗೋಕುಲ್ ಮಿಷನ್’, ಪಶುಗಳ ಆರೋಗ್ಯದ ಕಾಳಜಿಗಾಗಿ, ಪಶುಗಳಿಗೂ ಆರೋಗ್ಯ ಕಾರ್ಡ್ ವಿತರಿಸುವ ಸಲುವಾಗಿ, `ಪಶುಧನ್ ಯೋಜನೆ’ ಈ ಬಗ್ಗೆಯೂ ಟೀಕಾಕಾರರಿಗೆ ಗೊತ್ತಿದೆಯೇ?

29. ಕೃಷಿಗೆ 24 ಗಂಟೆಯೂ ನೀರು ಪೂರೈಸಲು, ಮನೆಮನೆಗಳಿಗೆ ವಿದ್ಯುತ್ ನೀಡಲು, `ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜೆ’ ಇದರ ಬಗ್ಗೆ ಯಾಕೆ
ಮಾತಾಡುತ್ತಿಲ್ಲ? ವಿದ್ಯುತ್ ಸರಬರಾಜು ಹೆಚ್ಚಿಸಲು `ಒಂದೇ ಜಾಲ ಒಂದೇ ತರಂಗ ಯೋಜನೆ’ ಬಗ್ಗೆ ಎಷ್ಟು ಮಂದಿಗೆ ಗೊತ್ತಿದೆ?

30. 31. ಪ್ರಧಾನಮಂತ್ರಿ ಜನೌಷಧ ಯೋಜನೆ, ಆಂಜಿಯೋಗ್ರಾಮ್ ಸೇರಿ ಶಶ್ತ್ರಚಿಕಿತ್ಸೆಗಳ ಬೆಲೆಯಲ್ಲಿ ಅಮೋಘ ಇಳಕೆ, ವಾಜಪೇಯಿ ಆರೋಗ್ಯ ಶ್ರೀ ಇವೆಲ್ಲಾ ಬಡವರ ಆರೋಗ್ಯಕ್ಕಾಗಿ ಮೋದಿ ಸರಕಾರ ಮಾಡಿದ ಯೋಜನೆಗಳು..

31. ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ, ಬೆಲೆ ನಿಯಂತ್ರಣ ನಿಧಿ, ರಾಷ್ಟ್ರೀಯ ಕೃಷಿ ಮಾರುಕಟ್ಟೆ, ಇ-ಮಾರುಕಟ್ಟೆ, ಡಿಜಿಟಲೈಸೇಷನ್, ತ್ವರಿತ ನೀರಾವರಿ ಯೋಜನೆ, ಉದ್ಯೋಗ ಖಾತ್ರಿ, ಆಧಾರ್ ಯೋಜನೆಯ ವಿಸ್ತರಣೆ, ಮುದ್ರಾ ಸಾಲ ಯೋಜನೆ, ಸ್ವಚ್ಛಭಾರತ ಯೋಜನೆ ಹೀಗೆ ಹೇಳಿದರೆ ನೂರಾರು ಯೋಜನೆಗಳು ಜಾರಿಗೊಂಡಿದ್ದು, ಯಶಸ್ವಿಯಾಗುತ್ತಿದೆ. ಇವಿಷ್ಟೇ ಅಲ್ಲ, ಇನ್ನೂ ಅನೇಕ ಯೋಜನೆಗಳು ಮೋದಿಯವರ ತಲೆಯಲ್ಲಿದೆ. ಆದರೂ ಮೋದಿಯವರನ್ನು ಟೀಕಿಸುತ್ತೀರಿ…

ಟೀಕಾಕಾರರೇ ನೀವು ಮೋದಿಯವರನ್ನು ಅರಿಯದೆ, ಅವರ ಯೋಜನೆಗಳ ಬಗ್ಗೆ ಗೊತ್ತಿಲ್ಲದೆ ಮಾಡುವ ಟೀಕೆಗಳನ್ನು ನೋಡಿದಾಗ ನಮಗೆ ಖಂಡಿತಾ ಸಿಟ್ಟು ಬರುತ್ತದೆ. ಮೋದಿಯನ್ನು ಟೀಕಿಸಬೇಡಿ ಎನ್ನುತ್ತಿಲ್ಲ. ಪ್ರಶ್ನಿಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಖಂಡಿತಾ ಇದೆ ಎಂದು ವೈಯಕ್ತಿಕವಾಗಿ ಟೀಕಿಸಿದರೆ ನಮಗೆ ಸಿಟ್ಟು ಬಾರದೇ ಇರುತ್ತದೆಯೇ? ಟೀಕಿಸುವವರು ಮೋದಿಯ ಯೋಜನೆಗಳ ಬಗ್ಗೆ, ದೇಶದ ಬಗ್ಗೆ ಅವರು ಮಾಡಿರುವ ಅಭಿವೃದ್ಧಿಕಾರ್ಯಗಳ ಬಗ್ಗೆಯೂ ವಿವರಿಸಲಿ. ಅದು ಬಿಟ್ಟು ಇಟಲಿಯ ಗುಲಾಮರಾಗಿದ್ದುಕೊಂಡು, ಯಾರ್ಯಾರ ಎಂಜಲು ನೆಕ್ಕುತ್ತಾ ಗಂಜಿಗಿರಾಕಿಗಳಂತೆ ವರ್ತಿಸಬೇಡಿ ತಿಳಿಯಿತೇ?

ತನ್ನ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಮೋದಿಯವರ ಭಕ್ತರು ನಾವು. ಜೊತೆಗೆ ಅವರಿಗೆ ದೇಶಭಕ್ತಿ ಇದೆ, ಸಂಸ್ಕಾರವಿದೆ. ಆದರ್ಶ ವ್ಯಕ್ತಿತ್ವವಿದೆ. ಜೊತೆಗೆ ಅವರು ಆರ್‍ಎಸ್‍ಎಸ್‍ನಿಂದ ಬಂದವರೆಂಬ ಹೆಮ್ಮೆ ಇದೆ. ಇವರ ಭಕ್ತರಾಗುವುದರಲ್ಲಿ ಏನು ತಪ್ಪು ಇದೆ ಸ್ವಾಮಿ? ಮುಂದೆಯೂ ಭಕ್ತರಾಗಿಯೇ ಇರುತ್ತೇವೆ. ಮೋದಿಯವರನ್ನು ನಿಂದಿಸುವವರ, ವೈಯಕ್ತಿಕ ಟೀಕೆ ಮಾಡುವವರ ಜನ್ಮವನ್ನು ಜಾಲಾಡುತ್ತಲೇ ಇರುತ್ತೇವೆ. ತಾಖತ್ ಇದ್ದರೆ ತಡೆಯಿರಿ ನೋಡೋಣ…

-ಚೇಕಿತಾನ

Tags

Related Articles

Close