ಪ್ರಚಲಿತ

justasking ಪ್ರಕಾಶ್ ರಾಜ್, ಸೋ ಕಾಲ್ಡ್ ಸಾಹಿತಿಗಳೇ ಈಗೆಲ್ಲಿದ್ದೀರಿ?

ಮೊನ್ನೆಯಷ್ಟೇ ನಮ್ಮ ದೇಶ ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಚಂದ್ರಯಾನದ ರಾಕೆಟ್ ಉಡಾವಣೆಯ ಸಮಯದಲ್ಲಿ ಇಸ್ರೋ ವಿಜ್ಞಾನಿಗಳು ಈ ಯೋಜನೆಯ ಯಶಸ್ಸಿಗಾಗಿ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದರು. ಇಸ್ರೋ ವಿಜ್ಞಾನಿಗಳ ಈ ನಡೆಯನ್ನು ವಿರೋಧಿಸಿ ಕೆಲವು ಲದ್ದಿಜೀವಿ ಸಾಹಿತಿಗಳು ಎನಿಸಿಕೊಂಡವರು ಉದ್ದುದ್ದ ಪತ್ರ ಬರೆದಿದ್ದನ್ನು, ಇದು ಮೂಢನಂಬಿಕೆ, ಇಸ್ರೋ ವಿಜ್ಞಾನಿಗಳಿಗೆ ತಮ್ಮ ಕಾರ್ಯದ ಮೇಲೆ ನಂಬಿಕೆ ಇಲ್ಲದ್ದಕ್ಕೆ, ದೇವಸ್ಥಾನಕ್ಕೆ ತೆರಳಿ ಜನರ ದಾರಿ ತಪ್ಪಿಸಲು ನೋಡುತ್ತಿದ್ದಾರೆ ಎಂದೆಲ್ಲಾ ಅರ್ಥ ಬರುವಂತೆ ವ್ಯರ್ಥ ಪ್ರಲಾಪ ಮಾಡಿದ್ದರು.

ಇನ್ನು ಜಸ್ಟ್ ಆಸ್ಕಿಂಗ್ ಹ್ಯಾಷ್‌ಟ್ಯಾಗ್ ಮೂಲಕ ಡಸ್ಟ್ ನಟ ಪ್ರಕಾಶ್ ರಾಜ್ ಚಂದ್ರಯಾನವನ್ನು ಟೀಕಿಸಿ, ಈಗಷ್ಟೇ ಚಂದ್ರಯಾನದ ರೋವರ್ ತೆಗೆದು ಕಳುಹಿಸಿದ ಫೋಟೋ ಎಂದು ಚಾಯ್ವಾಲಾ ಚಿತ್ರವೊಂದನ್ನು ಟ್ವೀಟ್ ಮಾಡಿದ್ದರು. ಪ್ರಧಾನಿ ಮೋದಿ ಮತ್ತು ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಅವರನ್ನು ಅಣಕಿಸುವ ಹಾಗೆ ಈ ಚಿತ್ರವನ್ನು ಪ್ರಕಾಶ್ ರಾಜ್ ಎಂಬ ಕ್ರಿಮಿ ಹಂಚಿಕೊಂಡು ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಪ್ರಧಾನಿ ಮೋದಿ ಮತ್ತು ಚಂದ್ರಯಾನದ ಯಶಸ್ಸನ್ನು, ದೇವರುಗಳನ್ನು ಅಣಕಿಸುವ ಮೂಲಕ ಈ ಲದ್ದಿಜೀವಿಗಳ ಗುಂಪು ವಿಕೃತ ಆನಂದ ಪಡೆದಿತ್ತು. ಈ ಘಟನೆಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ.

ಇಂದು ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುವ ಘೋಷಣೆ ಮಾಡಿತ್ತು. ಅದರಂತೆ ಇಂದು ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಮೈಸೂರಿನಲ್ಲಿ ಈ ಯೋಜನೆಯನ್ನು ಉದ್ಘಾಟಿಸಿದೆ. ಅದಕ್ಕೂ ಮುನ್ನ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ತಲಾ ಎರಡು ಸಾವಿರ ರೂ. ಕಾಣಿಕೆ ಸಮರ್ಪಣೆ ಮಾಡಿ ಸಿ ಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

ಬಿಜೆಪಿ ಅಥವಾ ಬಲಪಂಥೀಯರು ಯಾವುದೇ ಕೆಲಸವನ್ನು ಆರಂಭ ಮಾಡುವ ಮುನ್ನ ದೇವಾಲಯಗಳಿಗೆ ಭೇಟಿ ನೀಡಿದರೆ, ಪೂಜೆ ಸಲ್ಲಿಸಿದರೆ ವ್ಯಂಗ್ಯವಾಡುವ, ಟೀಕಿಸುವ ಸೋ ಕಾಲ್ಡ್ ಡಸ್ಟ್ ಕಿಂಗ್‌‌ಗಳು, ಲದ್ದಿ ಜೀವಿಗಳು ಕಾಂಗ್ರೆಸ್ ಅಥವಾ ಎಡಪಂಥೀಯ ವಿಚಾರಧಾರೆಯ ಜನರು ದೇವರಿಗೆ ಪೂಜೆ ಸಲ್ಲಿಸಿದರೆ ಸೊಲ್ಲೆತ್ತದೇ ಇರುವುದು ವಿಪರ್ಯಾಸವೇ ಸರಿ. ತಮಗೆ ಗಂಜಿ ದೊರೆಯುವ ಉದ್ದೇಶದಿಂದಲೇ ಇಂತಹ ಡಸ್ಟ್ ಆಸ್ಕಿಂಗ್‌ಗಳು ಇಂತಹ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತಿವೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ದೈವ ದೇವರುಗಳನ್ನು ಅಂಕ ಮಾಡುವ, ದೇಶದ ಕೋಟ್ಯಂತರ ಜನರ ಭಾವನೆಗಳನ್ನು ಕೆಣಕುವ ಜಸ್ಟ್ ಆಸ್ಕಿಂಗ್ ಲದ್ದಿಜೀವಿಗಳು ಕಾಂಗ್ರೆಸ್, ಎಡಪಂಥೀಯರು ದೇವಾಲಯಗಳಿಗೆ ತೆರಳಿ ಇಂತಹ ಯೋಜನೆಗಳನ್ನು ದೇವಾಲಯಕ್ಕೆ ತೆರಳಿ ಆರಂಭಿಸಿದಾಗ ನೋ ಸೌಂಡ್ ಎಂಬಂತಿರುವುದು, ಕಂಡೂ ಕೂಡಾ ಕಾಣದ ಹಾಗೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.

ಇಂತಹ ಕೆಲಸವೇನಾದರೂ ಪ್ರಧಾನಿ ಮೋದಿ ಅವರೋ, ಇತರ ಹಿಂದೂ ನಾಯಕರೋ, ಬಿಜೆಪಿ ಪಕ್ಷದವರೋ ಮಾಡಿದ್ದರೆ ಪ್ರಕಾಶ್ ರಾಜ್‌ನಂತಹವರು ಈಗಾಗಲೇ ವಿರೋಧಿಸಿ, ಪ್ರಶ್ನೆ ಮಾಡಿ, ಅರಚಾಡಿ, ಕಿರುಚಾಡಿ, ಪಂಪ ರಾಮಾಯಣ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು ಎಂಬುದು ಸತ್ಯ. ಈಗ ಕಾಂಗ್ರೆಸ್ ಸರ್ಕಾರ ದೇವರ ಮೊರೆ ಹೋಗಿದ್ದರೂ ಇವರೆಲ್ಲರೂ ಸೈಲೆಂಟ್ ಆಗಿದ್ದಾರೆ ಎಂದರೆ, ಇವರಿಗೂ ಕಾಂಗ್ರೆಸ್ ಪಕ್ಷಕ್ಕೂ ನಡುವೆ ಏನೋ ಒಂದು ಒಪ್ಪಂದ ಇದೆ ಎನ್ನುವ ಸಂದೇಹ ಎಲ್ಲರಿಗೂ ಬಂದೇ ಬರುತ್ತದೆ.

ಒಟ್ಟಿನಲ್ಲಿ ತಮ್ಮ ಗಂಜಿ ಹುಟ್ಟಿಸಿಕೊಳ್ಳಲು ಬೊಗಳುವ, ಕೇವಲ ಕೆಲವು ವ್ಯಕ್ತಿ, ಪಕ್ಷ, ವಿಚಾರಧಾರೆಗಳ ವಿರುದ್ಧ ಮಾತ್ರವೇ ಕಿಡಿ ಕಾರುವ ಇಂತಹ ನಾಮರ್ಧರ ನಿಜ ರೂಪ ಹೊರಬರಲು ಗೃಹ ಲಕ್ಷ್ಮಿ ಉದ್ಘಾಟನೆ ನೆಪವಾಯ್ತು ಎನ್ನುವುದು ಸ್ಪಷ್ಟ. ಇವರು ನಿಜವಾದ ಪ್ರಗತಿಪರರೇ ಆಗಿದ್ದರೆ ಕಾಂಗ್ರೆಸ್ ಅನ್ನು ಟೀಕಿಸಿ, ಅವರಿಂದಲೂ ರಾಜೀನಾಮೆ ಕೇಳುವ ಮೂಲಕ ತಮ್ಮ ನೈತಿಕತೆ ಪ್ರದರ್ಶಿಸುವ ಧೈರ್ಯ ಮಾಡಲಿ ಎಂಬುದು ನಮ್ಮ ನೇರ ಸವಾಲು.

Tags

Related Articles

Close