ಪ್ರಚಲಿತ

ಮತ ಚಲಾಯಿಸುವಾಗ ಈ ಅಂಶಗಳನ್ನು ಮರೆಯದಿರಿ! ನಿಮ್ಮ ಮತ ದೇಶದ ಭವಿಷ್ಯ ರೂಪಿಸುವವನಿಗೆ ಇರಲಿ!

ಅಂತೂ ಕಳೆದ ಐದು ವರ್ಷಗಳಿಂದ ವಾದ ವಿವಾದ, ಪ್ರಶ್ನೆಗೆ ಉತ್ತರ, ಚರ್ಚೆಗಳು, ಗಲಾಟೆಗಳು…. ಹೀಗೆ ದಿನ ಕಳೆದಂತೆ ಒಂದಲ್ಲ ಒಂದು ವಿಚಾರಕ್ಕೆ ರಾಜಕೀಯವಾಗಿ ಸದ್ದು ಮಾಡುತ್ತಾ ಜನರ ಬಾಯಲ್ಲಿ ರಾಜಕೀಯದ ವಿಚಾರ ಚಾಲ್ತಿಯಲ್ಲಿರುವಂತೆ ಮಾಡಿದ ಚುನಾವಣೆ ಕೊನೆಗೂ ಬಂದೇ ಬಿಟ್ಟಿತು. ಐದು ವರ್ಷಗಳ ಹಿಂದೆ ಈ ದೇಶದ ಜನರು ಒಬ್ಬ ಸಮರ್ಥ ನಾಯಕನ ಕೈಗೆ ಈ ದೇಶದ ಚುಕ್ಕಾಣಿ ನೀಡಿದ್ದರು ಮತ್ತು ಆತನಿಂದ ಏನಾದರೊಂದು ಬದಲಾವಣೆ ಆಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದರು. ಜನರು ಇಟ್ಟ ನಂಬಿಕೆ ವಿಶ್ವಾಸ ಸುಳ್ಳಾಗಲಿಲ್ಲ, ಯಾವ ದೃಷ್ಟಿಕೋನ ಇಟ್ಟುಕೊಂಡು ಆತ ಅಧಿಕಾರ ವಹಿಸಿಕೊಂಡನೋ ಅದರಂತೆ ನಡೆದುಕೊಂಡು ಬಂದಿದ್ದಾನೆ ಮತ್ತು ಯಾರೂ ಊಹಿಸದ ರೀತಿಯಲ್ಲಿ ಬದಲಾವಣೆ ಮಾಡುತ್ತಾ ಸಾಗುತ್ತಿದ್ದಾನೆ. ಒಂದು ಕುಟುಂಬದ ಸದಸ್ಯರ ಆಡಳಿತದಿಂದ ನಲುಗಿ ಹೋಗಿದ್ದ ಈ ದೇಶವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡಿದ ಪ್ರಧಾನಸೇವಕನಿಗೆ ಇದೀಗ ಮತ್ತೊಂದು ಬಾರಿ ಅವಕಾಶ ನೀಡುವ ದಿನ ಬಂದೇ ಬಿಟ್ಟಿದೆ.!

ಹೌದು, ಶ್ರೀ ನರೇಂದ್ರ ಮೋದಿ ಎಂಬ ಹೆಸರಿನ ವ್ಯಕ್ತಿ ಯಾವಾಗ ಈ ದೇಶದ ಪ್ರಧಾನಮಂತ್ರಿ ಪಟ್ಟ ಅಲಂಕರಿಸಿದರೋ ಅಂದೇ ಈ ದೇಶದ ಚಿತ್ರಣ ಬದಲಾಯಿತು. ಒಬ್ಬ ಪ್ರಧಾನಿಯಾದವನು ಇಂತಹ ಕೆಲಸಗಳನ್ನೂ ಮಾಡುತ್ತಾನಾ? ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಮೂಡಿತ್ತು. ಯಾಕೆಂದರೆ ಅಧಿಕಾರ ಸಿಕ್ಕಿದೆ ಎಂಬ ಅಹಂಕಾರದಿಂದ‌ ಎಸಿ ರೂಂ ನಲ್ಲಿ ಕಾಲ ಕಳೆಯದೆ ಬೀದಿಯಲ್ಲಿ ನಿಂತು ಪೊರಕೆ ಹಿಡಿದು ಕಸ ಕಡ್ಡಿಗಳನ್ನು ಗುಡಿಸಿದ ಆ ದಿನಗಳು ಭಾರತದ ಇತಿಹಾಸ ಪುಟ ಸೇರಿಕೊಂಡಿವೆ ಎಂಬುದರಲ್ಲಿ ಸಂಶಯವಿಲ್ಲ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಕೇವಲ ೫ ವರ್ಷ ಮಾತ್ರ ಆಗಿದೆ, ಅದಾಗಲೇ ೬೦ ವರ್ಷ ಏನೂ‌ ಮಾಡದ ಪಕ್ಷದ ನಾಯಕರು “ಮೋದಿ ಏನು ಮಾಡಿದ್ದಾರೆ?” ಎಂದು ಪ್ರಶ್ನಿಸಲು ಆರಂಭಿಸಿದ್ದಾರೆ.

ನಿಜವಾಗಿಯೂ ಮೋದಿ ಏನೂ ಮಾಡಿಲ್ಲ ಎಂಬ ಪ್ರಶ್ನೆಗೆ ಮೋದಿ ಏನು ಮಾಡಿದ್ದಾರೆ ಎಂದು ಈಗಾಗಲೇ ಉತ್ತರ ನೀಡಲಾಗಿದೆ ಮತ್ತು ನಾಯಿ ಬಾಲ ಡೊಂಕು ಎಂಬಂತೆ ವಿಪಕ್ಷಗಳು ವಿರೋಧಿಸುವುದನ್ನು ಕಡಿಮೆ ಮಾಡಲೇ ಇಲ್ಲ. ಅವೆಲ್ಲವನ್ನೂ ಪಕ್ಕಕ್ಕಿಟ್ಟು ಇದೀಗ ಮತದಾನ ಮಾಡುವ ಸಮಯ, ಅಂತೂ ಐದು ವರ್ಷದಲ್ಲಿ ಮೋದಿ ಮಾಡಿದ ಕೆಲಸಕ್ಕೆ ಫಲಿತಾಂಶ ನೀಡುವ ಸಮಯವಿದು. ಲೋಕಸಭಾ ಚುನಾವಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ, ಮತದಾನ ಮಾಡುವುದು ಪ್ರತಿಯೊಬ್ಬನ ಕರ್ತವ್ಯವಾದರೆ, ಸಮರ್ಥ ನಾಯಕನಿಗೆ ಬೆಂಬಲ ನೀಡುವುದು ಭಾರತೀಯರ ಜವಾಬ್ದಾರಿ ಕೂಡ ಹೌದು. ಹಾಗಾದರೆ ನಾಳೆ ಮತದಾನ ಮಾಡುವ ಮುನ್ನ ಈ ಅಂಶಗಳನ್ನೊಮ್ಮೆ‌ ನೆನಪಿಸಿಕೊಳ್ಳೋಣ….

* ಕುಟುಂಬವನ್ನೇ ತ್ಯಜಿಸಿ ದೇಶಕ್ಕಾಗಿ ಶ್ರಮಿಸುವ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಅಧಿಕಾರ ವಹಿಸಿಕೊಂಡ ಕೂಡಲೇ ನಾನು ಈ ದೇಶದ ಪ್ರಧಾನಸೇವಕ ಎಂದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ದೇಶದ ಆಂತರಿಕ ವಿಚಾರದಲ್ಲಿ ಯಾವ ಅನ್ಯ ರಾಷ್ಟ್ರ ಕೂಡ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಗಡಿಯಲ್ಲಿ ಸೈನಿಕರನ್ನು ಹತ್ಯೆ ಮಾಡುತ್ತಿದ್ದ ಪಾಕಿಸ್ತಾನದ ಮೇಲೆ ದಾಳಿ ಮಾಡಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಭಾರತದ ವಿರುದ್ಧ ಪಿತೂರಿ ಹೂಡುತ್ತಿದ್ದ ಚೈನಾ ಕೂಡ ಸುಮ್ಮನಾಗುವಂತೆ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಭ್ರಷ್ಟಾಚಾರಿಗಳನ್ನು ಹೆಡೆಮುರಿಕಟ್ಟುವ ಸಲುವಾಗಿ ನೋಟ್ ಬ್ಯಾನ್‌ನಂತಹ ಕಠಿಣ ನಿರ್ಧಾರ ತೆಗೆದುಕೊಂಡ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಅದೆಷ್ಟೋ ವರ್ಷಗಳಿಂದ ಸ್ಥಗಿತಗೊಂಡಿದ್ದ ಯೋಜನೆಗಳನ್ನು ಪೂರ್ಣಗೊಳಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ೧೭ ಕೋಟಿ ಜನರಿಗೆ ಮುದ್ರಾ ಯೋಜನೆಯ ಮೂಲಕ ಸ್ವಂತ ಉದ್ಯೋಗ ಆರಂಭಿಸುವಂತೆ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ದೇಶಕಾಯೋ ಸೈನಿಕರ ರಕ್ಷಣೆಗೆ ಬುಲೆಟ್ ಪ್ರೂಫ್ ಜಾಕೆಟ್ ಒದಗಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಬಡವರಿಗೆ ೧.೫ ಕೋಟಿಯಷ್ಟು ಮನೆ ನಿರ್ಮಿಸಿ ಕೊಟ್ಟ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ೯ ಕೋಟಿಗೂ ಅಧಿಕ ಶೌಚಾಲಯ ನಿರ್ಮಿಸುವಂತೆ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಅದೆಷ್ಟೋ ಕೋಟಿ ಬಡವರ ಮನೆಗೆ ಗ್ಯಾಸ್ ಸಂಪರ್ಕ ನೀಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ರೈತರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಆಗುವಂತೆ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ದೇಶದ ಸಂಪತ್ತನ್ನು ತಾನೂ ತಿನ್ನುವುದಿಲ್ಲ, ಇತರರಿಗೂ ತಿನ್ನಲು ಬಿಡುವುದಿಲ್ಲ ಎಂದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಭಾರತದ ಶಕ್ತಿ ಸಾಮಾರ್ಥ್ಯ ಕಂಡು ಸ್ವತಃ ಅಮೇರಿಕವೇ ತಲೆಬಾಗುವಂತೆ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಆಕಾಶದಲ್ಲೂ ಭಾರತದ ಮೇಲೆ ದಾಳಿ ಆಗದಂತೆ ಹೊಸ ತಂತ್ರಜ್ಞಾನ ಬಳಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ವಿದೇಶಕ್ಕೆ ಕೆಲಸಕ್ಕೆಂದು ಹೋಗಿ ಭಾರತಕ್ಕೆ ವಾಪಾಸ್ ಬರಲಾಗದೆ ಪರದಾಡುತ್ತಿದ್ದ ಅದೆಷ್ಟೋ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಬರುವಂತೆ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಒಬ್ಬ ಬಡವ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ೫ ಲಕ್ಷದವರೆಗಿನ ಉಚಿತ ಚಿಕಿತ್ಸೆ ಪಡೆಯುವಂತೆ ಆಯುಷ್ಮಾನ್ ಭಾರತ ಯೋಜನೆ ರೂಪಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ವಿದ್ಯುತ್ ಕಾಣದ ೧೮,೦೦೦ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ದೇಶದ ಕಟ್ಟ ಕಡೆಯ ಹಳ್ಳಿಗೂ ವಿದ್ಯುತ್ ಒದಗಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಚೀನಾದ ಬೆದರಿಕೆಗೂ ಜಗ್ಗದೆ ಸೈನಿಕರಿಗೆ ಉಪಯೋಗವಾಗುವಂತೆ ರಸ್ತೆ ನಿರ್ಮಾಣ ಮಾಡಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ದೇಶದ ಅಭಿವೃದ್ಧಿ ಒಂದೇ ಮಂತ್ರ – ಒಂದೇ ಗುರಿ ಎಂದು ಹೇಳಿದ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ
* ಜಾತಿ ಧರ್ಮದ ಹೆಸರು ಹೇಳದೆ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಮಂತ್ರ ಜಪಿಸುತ್ತಾ ಅಧಿಕಾರ ನಡೆಸುತ್ತಿರುವ ವ್ಯಕ್ತಿಯನ್ನು ನೆನಪಿಸಿಕೊಳ್ಳೋಣ

ಇಂತಹ ನೂರಾರು ಯೋಜನೆಗಳು ಕಳೆದ ೫ ವರ್ಷದಲ್ಲಿ ಜಾರಿಯಾಗಿದೆ, ದೇಶದ ಮೂಲೆ ಮೂಲೆಗಳಲ್ಲಿ ಜನರು ಯೋಜನೆಗಳ ಫಲ ಪಡೆಯುತ್ತಿದ್ದಾರೆ. ನರೇಂದ್ರ ಮೋದಿ ಎಂಬ ವ್ಯಕ್ತಿ ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರ ಮನದಲ್ಲೂ ಬೆರೆತಿದ್ದಾರೆ ಎಂದರೆ ಆತ ಕೇವಲ ಒಬ್ಬ ರಾಜಕೀಯ ವ್ಯಕ್ತಿ ಮಾತ್ರ ಅಲ್ಲ, ದೇಶದ ಚಿತ್ರಣವನ್ನೇ ಬದಲಾಯಿಸಲು ಬಂದ ಚೌಕಿದಾರ ಎಂಬುದು ಅಕ್ಷರಶಃ ಸತ್ಯ. ಅದೇನೇ ಇರಲಿ ನಾಳಿನ ದಿನ ನೀವು ನೀಡುವ ಒಂದೊಂದು ಮತ ಕೂಡ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುವವನಿಗೆ ಇರಲಿ ಹೊರತು ಭಾರತವನ್ನು ತುಂಡು ತುಂಡಾಗಿ ಮಾಡುತ್ತೇನೆ ಎಂದವರಿಗಲ್ಲ…!

ಮೇರ ಭಾರತ್ ಮಹಾನ್

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
Close