ದೇಶ

ಪ್ರಪಂಚದ ಎಲ್ಲಾ ದೇಶಗಳು ತಮ್ಮ ದೇಶದ ಸೈನಿಕರನ್ನು ಗೌರವದಿಂದ ಕಾಣುತ್ತಿದ್ದರೆ ನಮ್ಮಲ್ಲಿ ಸೇನೆಯ ಮೇಲೆ ಕಲ್ಲು ತೂರುತ್ತಾ, ಬಲಾತ್ಕಾರದ ಆರೋಪ ಹೊರಿಸುತ್ತಾ ಖಳನಾಯಕರಂತೆ ಬಿಂಬಿಸುತ್ತಾರೆ!!

“ವಾಪಾಸು ಬಂದೆ ಬರುತ್ತೇನೆ!! ಒಂದೋ ತ್ರಿವರ್ಣ ಧ್ವಜ ಹಾರಿಸಿ ಬರುತ್ತೇನೆ, ಇಲ್ಲ ತ್ರಿವರ್ಣ ಧ್ವಜದಲ್ಲಿ ಅಲಂಕೃತನಾಗಿ ಬರುತ್ತೇನೆ!!” ಇದು ಕಾರ್ಗಿಲ್ ಹೀರೋ ಕಾಪ್ಟನ್ ವಿಕ್ರಮ್ ಬತ್ರಾ ತನ್ನ ತಂದೆಗೆ ಹೇಳಿದ ಮಾತು. ಒಬ್ಬ ಸೈನಿಕ ಮಾತ್ರ ಹೀಗೆ ಹೇಳಬಲ್ಲ. ತನಗಿಂತಲೂ ತನ್ನ ದೇಶವನ್ನು, ದೇಶದ ಸ್ವಾಭಿಮಾನದ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಪ್ರೀತಿಸುವ ಭಾರತೀಯ ಸೇನೆಯ ಪ್ರತಿಯೊಬ್ಬ ಸೈನಿಕನೂ ಪೂಜಾರ್ಹ. ಆದರೆ ಈ ದೇಶದ ದುರ್ದೈವವೇನೋ ಇಲ್ಲಿ ಧರ್ಮ ಮತ್ತು ದೇಶಕ್ಕಾಗಿ ಹೋರಾಡಿ ಮಡಿದವರು ಮಹಾನಾಯಕರೆನ್ನುವ ಪಟ್ಟ ಪಡೆಯಲೆ ಇಲ್ಲ! ಪ್ರಂಪಚದ ಅಷ್ಟೂ ದೇಶಗಳ ನಾಗರಿಕರು ತಮ್ಮ ಸೈನಿಕರನ್ನು ಕಂಡರೆ ಎದ್ದು ನಿಂತು ಸೆಲ್ಯೂಟ್ ಹೊಡೆಯುತ್ತಾರೆ. ಅವರು ಸಾಗುವಾಗ ಚಪ್ಪಾಳೆ ಹೊಡೆದು ಅವರನ್ನು ಹುರಿದುಂಬಿಸುತ್ತಾರೆ. ಆದರೆ ಭಾರತದಲ್ಲಿ ಸೈನಿಕನಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ.

ದೇಶ ಕಾಯುವ ಧೀರನಿಗೆ ಎದ್ದು ನಿಂತು ಚಪ್ಪಾಳೆ ಹೊಡೆಯುವುದು ಬಿಡಿ, ದೇಶದ ಸೇನೆಯ ಮೇಲೆ ಕಲ್ಲು ತೂರುತ್ತಾರೆ. ಸೈನಿಕನ್ನು ಮನ ಬಂದತೆ ಥಳಿಸಿ ಕೊಲೆ ಮಾಡುತ್ತಾರೆ. ಆತ್ಮ ರಕ್ಷಣೆಗಾಗಿ ಬಂದೂಕು ಎತ್ತಿದರೆ ಸೇನೆಯನ್ನು ರಾಕ್ಷಸನಂತೆ ಬಿಂಬಿಸುತ್ತಾರೆ. ಸೈನಿಕರ ಮೇಲೆ ಬಲಾತ್ಕಾರದ ಅಪವಾದ ಹೊರಿಸುತ್ತಾರೆ. ತನ್ನ ಸರ್ವಸ್ವನ್ನೂ ತೊರೆದು ದೇಶದ ನಾಗರಿಕರ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಸೇನೆಗೆ ಇಲ್ಲಿನ ಜನರು ಕೊಡುವ ಗೌರವ ಶೂನ್ಯ. ಪ್ರಪಂಚದಲ್ಲಿ ಇತರ ದೇಶಗಳಲ್ಲಿ ಸೈನಿಕರನ್ನು ಹೀರೋಗಳಂತೆ ನೋಡುತ್ತಾರೆ. ನಮ್ಮಲ್ಲಿ ಮಾತ್ರ ಸೇನೆಯನ್ನೆ ಖಳನಾಯಕನಂತೆ ಬಿಂಬಿಸುತ್ತಾರೆ.

ಫ್ರಾನ್ಸ್: ಎರಡನೆ ವಿಶ್ವ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ನೆನೆಪಿಗಾಗಿ ಹನ್ನೊಂದನೆ ತಿಂಗಳ ಹನ್ನೊಂದನೆ ತಾರೀಕಿನಂದು ಬೆಳಗ್ಗೆ ಹನ್ನೊಂದು ಗಂಟೆ ಹನ್ನೊಂದು ನಿಮಿಷ ಆಗುತ್ತಲೆ ಎದ್ದು ನಿಂತು ಮೌನವಾಗಿ ಅವರಿಗೆ ಶೃದ್ದಾಂಜಲಿ ಅರ್ಪಿಸಿ ಅವರ ಬಲಿದಾನಗಳನ್ನು ಸ್ಮರಿಸುತ್ತಾರೆ! ಇಡಿಯ ಫ್ರಾನ್ಸ್ ದೇಶವೆ ಆ ದಿನ ತನ್ನ ಸೈನಿಕರನ್ನು ನೆನಪಿಸಿಕೊಳ್ಳುತ್ತದೆ.

ಉತ್ತರ ಕೊರಿಯಾ: ಸರ್ವಾಧಿಕಾರಿ ಕಿಮ್ ನ ಉತ್ತರ ಕೊರಿಯಾದಲ್ಲಿ 65 ಲಕ್ಷ ನಾಗರಿಕರಿಗೆ ಸೈನ್ಯ ತರಬೇತಿ ನೀಡಲಾಗಿದೆ. ಇದರಲ್ಲಿ ಹತ್ತು ಲಕ್ಷ ಸಕ್ರಿಯ ಸೈನಿಕರಿದ್ದರೆ ತುರ್ತು ಸಂಧರ್ಭದಲ್ಲಿ ಉಪಯೋಗಿಸಲು ಐವತ್ತು ಲಕ್ಷ ಸೈನಿಕರನ್ನು ಮೀಸಲಿಡಲಾಗಿದೆ. ತಮ್ಮ ದೈನಂದಿನ ಕೆಲಸಗಳನ್ನು ಇತರರಂತೆಯೆ ಮಾಡುವ ಇವರು ಅಗತ್ಯ ಸಂಧರ್ಭದಲ್ಲಿ ದೇಶ ರಕ್ಷಣೆಗೆ ಧಾವಿಸುತ್ತಾರೆ.

ಇಸ್ರೇಲ್: ಹದಿನೆಂಟು ವರ್ಷ ವಯಸ್ಸಾದ ಪ್ರತಿಯೊಬ್ಬ ಇಸ್ರೇಲಿಯೂ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಕೆಲವು ವಿಶೇಷ ಕಾರಣಗಳನ್ನು ಹೊರತು ಪಡಿಸಿ ಇಲ್ಲಿ ವಯಸ್ಕ ಪುರುಷ ಮತ್ತು ಮಹಿಳೆಯರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ದೇಶ ಕಾಯುವುದು ಒಂದು ತುಚ್ಚ ಕೆಲಸ ಎಂದು ಅಲ್ಲಿನವರಿಗೆ ಅನಿಸುವುದೆ ಇಲ್ಲ.

ಅಮೇರಿಕಾ: ಅಮೇರಿಕಾದಲ್ಲಿ ಹುತಾತ್ಮರಾದ ಸೈನಿಕರ ಸಮಾಧಿಗಳನ್ನು ದತ್ತು ತೆಗೆದುಕೊಳ್ಳುವ ಹೊಸ ಯೋಜನೆಯೊಂದನ್ನು ಕೈಗೊಳ್ಳುತ್ತಿದ್ದಾರೆ. ಕನಿಷ್ಟ ಒಬ್ಬ ವ್ಯಕ್ತಿ ಒಂದು ಸಮಾಧಿಯನ್ನು ದತ್ತು ತೆಗೆದುಕೊಂಡು ಸೈನಿಕರಿಗೆ ಜೀವನ ಪರ್ಯಂತ ಗೌರವ ಸಲ್ಲಿಸುವ ಈ ಯೋಜನೆ ಅಲ್ಲಿನವರು ಸೈನಿಕರನ್ನು ಯಾವ ರೀತಿ ನೋಡುತ್ತಾರೆ ಎನ್ನುವುದನ್ನು ತೋರಿಸುತ್ತದೆ.

ನಮ್ಮಲ್ಲಿ ಸತ್ತ ಮೇಲೆ ಸಮಾಧಿ ದತ್ತು ತೆಗೆದುಕೊಳ್ಳುವುದು ಬಿಡಿ ಬದುಕಿದ್ದಾಗಲೆ ಸೈನಿಕನನ್ನು ಕರೆದು ಕೇಳುವವರಿಲ್ಲ. ಕರ್ತವ್ಯ ನಿರತರಾದ ಸೈನಿಕರ ಮೇಲೆ ಜನರೇ ಕಲ್ಲು ತೂರುವುದು ಕೇವಲ ಮತ್ತು ಕೇವಲ ಭಾರತದಲ್ಲಿ ಮಾತ್ರ. ಪ್ರಂಪಚದ ಯಾವುದೇ ದೇಶವೂ ತನ್ನದೇ ದೇಶದ ಸೈನಿಕರನ್ನು ಈ ರೀತಿ ಕೀಳಾಗಿ ಕಾಣುವ ಉದಾಹರಣೆ ಇಲ್ಲ. ಈ ದೇಶದಲ್ಲಿ ತಿರುಬೋಕಿ ಸಿನಿಮಾ ನಟ-ನಟಿಯರನ್ನು ಮಹಾ ನಾಯಕರಂತೆ ಕಾಣಲಾಗುತ್ತದೆ. ಕ್ರಿಕೆಟ್ ಪಟುಗಳನ್ನು ದೇವರಂತೆ ನೋಡಲಾಗುತ್ತದೆ. ಆದರೆ ದೇಶದ ನಿಜವಾದ ನಾಯಕರನ್ನು ಮೂಲೆಗುಂಪಾಗಿಸಿ ಅವಮಾನ ಮಾಡಲಾಗುತ್ತದೆ. ನಾವೇಕೆ ಹೀಗೆ?

ನಾವಿವತ್ತು ನಮ್ಮ ಮನೆಯಲ್ಲಿ ಸುರಕ್ಷಿತರಾಗಿ ನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆಂದರೆ ಅದಕ್ಕೆ ಹಗಲು ರಾತ್ರಿ ನಿದ್ದೆ ಬಿಟ್ಟು ನಮ್ಮನ್ನು ಕಾಯುವ ಸೇನೆಯ ಸಹೋದರ-ಸಹೋದರಿಯರೆ ಕಾರಣ. ಅವರ ಬಲಿದಾನಗಳನ್ನು ಅಪಮಾನ ಮಾಡಬೇಡಿ. ಜೀವನದಲ್ಲಿ ಎಲ್ಲಿಯಾದರೂ ಒಬ್ಬ ಸೈನಿಕನ ಜೊತೆ ಮುಖಾ ಮುಖಿಯಾದರೆ ಆತನಿಗೊಂದು ಸೆಲ್ಯೂಟ್ ಹೊಡೆಯಿರಿ. ಆತನ ಕೈ ಕುಲುಕಿ ಧನ್ಯವಾದ ಸಮರ್ಪಿಸಿ. ವಿಶ್ವದಲ್ಲೆ ನಾಲ್ಕನೆ ಸ್ಥಾನದಲ್ಲಿ ನಮ್ಮ ಭಾರತೀಯ ಸೇನೆ ಇದೆ ಎನ್ನುವುದನ್ನು ನೆನಪಿಡಿ. ಪ್ರಪಂಚವೆ ಥರಗುಟ್ಟುವ ಮಾರ್ಕೋಸ್ ಮತ್ತು ಗೋರ್ಖಾಗಳು ನಮ್ಮಲ್ಲಿದ್ದಾರೆ ಮರೆಯದಿರಿ. ಪ್ರತಿ ಫಲಗಳ ಅಪೇಕ್ಷೆ ಇಲ್ಲದೆ ಭಾರತವನ್ನು ಅದಮ್ಯವಾಗಿ ಪ್ರೀತಿಸುವ ಸೈನಿಕರನ್ನು ಪ್ರೀತಿಸಿ….

ಜೈ ಜವಾನ್…. ಜೈ ಹಿಂದ್

-ಶಾರ್ವರಿ

Tags

Related Articles

Close