ಪ್ರಚಲಿತ

ಬ್ಲಾಕ್ ಕ್ಯಾಟ್ಸ್ ಗಳಿಂದ ಭಯೋತ್ಪಾದಕರ ರುಂಡ ಇನ್ನು ಕೆಲವೇ ದಿನಗಳಲ್ಲಿ ಧರೆಗೆ!! ಅಷ್ಟಕ್ಕೂ ಯಾರು ಈ ಬ್ಲಾಕ್ ಕ್ಯಾಟ್ಸ್???

ಜಮ್ಮು-ಕಾಶ್ಮೀರಕ್ಕೆ ಕಂಟಕವಾಗಿರುವ ಭಯೋತ್ಪಾದಕರ ಹೆಡೆಮುರಿಕಟ್ಟಲು ಪ್ರಬಲ ಎನ್ ಎಸ್ ಜಿ ಕಮಾಂಡೋಗಳ ವಿಶೇಷ ತಂಡ ಕಣಿವೆ ರಾಜ್ಯವನ್ನು ತಲುಪಿರುವ ಮೂಲಕ ಉಗ್ರರನ್ನು ಮಟ್ಟ ಹಾಕಲು ಸಜ್ಜಾಗಿ ನಿಂತಿದ್ದಾರೆ!! ಈ ಮೂಲಕ ಭದ್ರತಾ ಪಡೆಗಳಿಗೆ ಹೆಚ್ಚಿನ ಹಾನಿಯಾಗದಂತೆ ಉಗ್ರರನ್ನು ಹೊಡೆದುರುಳಿಸುವ ಕಾರ್ಯವನ್ನು ಎನ್ ಎಸ್ ಜಿ ಕಮ್ಯಾಂಡೋಗಳು ನಿರ್ವಹಿಸುವ ಮೂಲಕ ಉಗ್ರರ ಎದೆಯಲ್ಲಿ ನಗಾರಿ ಬಾರಿಸಿದಂತಾಗಿದೆ!! ಅಷ್ಟಕ್ಕೂ ಈ ಬ್ಲಾಕ್ ಕ್ಯಾಟ್ಸ್ ಗಳೆಂದೇ ಕರೆಸಿಕೊಳ್ಳುವ ಎನ್ ಎಸ್ ಜಿ ಕಮಾಂಡೋಗಳಾದರೂ ಯಾರು ಗೊತ್ತೇ?? ಇವರು ಮಾಡುವ ಕೆಲಸಗಳು ನಿಜಕ್ಕೂ ಕೂಡ ಎದೆ ಝಲ್ ಎನಿಸುವಂತಹದ್ದು!!
1984ರ ಜೂನ್ 3ರಿಂದ 8ರವರೆಗೆ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!! ಪ್ರತ್ಯೇಕ ಖಲಿಸ್ತಾನಕ್ಕಾಗಿ ವಿಧ್ವಂಸಕ ಹಾದಿ ಹಿಡಿದಿದ್ದ ಬಂಡುಕೋರರ ನಾಯಕ ಭಿಂದ್ರನ್‍ವಾಲೆ, ಸಿಖ್ಖರ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಕ್ಷೇತ್ರವಾದ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಆಶ್ರಯತಾಣವಾಗಿ ಮಾಡಿಕೊಂಡಿದ್ದ. ಅಕ್ಷರಶಃ ಆತ ಅಲ್ಲಿಂದಲೇ ತನ್ನದೇ ಆದ ಸರಕಾರವನ್ನು ನಡೆಸುತ್ತಿದ್ದ!! ಪಾಕಿಸ್ತಾನದ ಕುಮ್ಮಕ್ಕಿನಿಂದ ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದ ಆತನನ್ನು ಹಿಮ್ಮೆಟ್ಟಿಸುವುದು ಸರಕಾರಕ್ಕೆ ಆಗಿನ ತುರ್ತು ಅಗತ್ಯವಾಗಿತ್ತು. ಅದರ ಫಲವಾಗಿಯೇ ನಡೆದಿದ್ದು ಈ ‘ಆಪರೇಷನ್ ಬ್ಲೂ ಸ್ಟಾರ್’.
https://youtu.be/K8z04O3sSvg
ಭಾರತ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಭಿಂದ್ರನ್‍ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಅವರು ಅಂದು ಕೈಗೊಂಡ ಈ ನಿರ್ಧಾರ ಸರಿಯೋ, ತಪ್ಪೋ ಎಂದು ಮೂರು ದಶಕಗಳ ಬಳಿಕವೂ ಚರ್ಚೆಯಾಗುತ್ತಲೇ ಇದೆ. ಯಾಕೆಂದರೆ, 1977 ರಲ್ಲಿ ಪಂಜಾಬಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿತ್ತು, ಅಕಾಲಿ ದಳ ಪಕ್ಷದ ಪ್ರಕಾಶ್ ಸಿಂಗ್ ಬಾದಲ್ ಅವರ ಸರ್ಕಾರ ಪಂಜಾಬಿನ ಅಧಿಕಾರ ಗದ್ದುಗೆಯನ್ನ ಏರಿತ್ತು. ಇದರಿಂದ ತೀವ್ರ ಮುಖಭಂಗೊಂಡ ಇಂದಿರಾ ಗಾಂಧಿಯವರು ಪ್ರಕಾಶ್ ಸಿಂಗ್ ಬಾದಲ್ ರನ್ನ ಕಿತ್ತಿಸೆಯಲು ಇಂದಿರಾ ತಂತ್ರ ಹೂಡಿ ಅದಕ್ಕಾಗಿ ಒಬ್ಬ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದರು. ಆಗ ಆಕೆಗೆ ಸಿಕ್ಕಿದ್ದೇ ನಟೋರಿಯಸ್ “ಜರ್ನೈಲ್ ಸಿಂಗ್ ಭಿಂದ್ರೆವಾಲಾ”. ಈ ಮೂಲಕ ತನ್ನ ಕಾರ್ಯಗಳನ್ನು ನಡೆಸಿಕೊಂಡರು ಎಂದು ಕೆಲ ಮೂಲಗಳು ಹೇಳುತ್ತಿವೆ!!
ಅದೇನೇ ಇರಲಿ, ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಂತರ ಸ್ಥಾಪನೆಯಾದ ಇನ್ನೊಂದು ಭಾರತೀಯ ಪಡೆಯೇ ಎನ್.ಎಸ್.ಜಿ. ಕಮಾಂಡೋ!! ಹೌದು.. ಆಪರೇಷನ್ ಬ್ಲೂ ಸ್ಟಾರ್ ನಂತರ 1984 ರಲ್ಲಿ ಸ್ಥಾಪನೆಯಾದ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್.ಎಸ್.ಜಿ)  ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ವಿಶೇಷ ಪಡೆಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದ ಘಟಕವಾಗಿದೆ.
ವಾಸ್ತವವಾಗಿ ಜರ್ಮನಿಯ ಜಿ.ಎಸ್.ಜಿ-9 ರ ಮಾದರಿಯಂತೆ ರಚನೆಯಾಗಿದೆ ಎನ್.ಎಸ್.ಜಿ !!
ಜಿ.ಎಸ್.ಜಿ ವಿಶ್ವದ ಅತ್ಯಂತ ಪ್ರಬಲ ಉಗ್ರ ನಿಗ್ರಹ ಪಡೆಯಾಗಿದ್ದು, ಜರ್ಮನಿಯ ಹಿರಿಯ ಮಾಜಿ ಅಧಿಕಾರಿಯೊಬ್ಬರು ಹೇಳುವಂತೆ, ಜಿ.ಎಸ್.ಜಿ ಭಯೋತ್ಪಾದಕರನ್ನು ಬಗ್ಗುಬಡಿಯುವ ಏಕೈಕ ಗುರಿಯೊಂದಿಗೆ ಸ್ಥಾಪನೆಯಾಗಿದೆ. ಐದು ಜನರ ತಂಡವಾಗಿ ಕೆಲಸ ಮಾಡುವ ಜಿ.ಎಸ್.ಜಿ ಕಮಾಂಡೋಗಳು ಯಾವುದೇ ಗೊಂದಲಕ್ಕೀಡಾಗದೆ ಎದುರಾಳಿಗಳಿಗೆ ಏನಾಗುತ್ತಿದೆ ಎಂಬುದು ತಿಳಿಯುವ ಹೊತ್ತಿಗೆ ಕೆಲಸ ಮುಗಿಸಿರುತ್ತಾರೆ.
ಇನ್ನು ಜರ್ಮನಿಯ ಜಿ.ಎಸ್.ಜಿ.9 ಮಾದರಿಯಲ್ಲಿಯೇ ದೇಶದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್.ಎಸ್.ಜಿ) ಸ್ಥಾಪಿಸಲಾಗಿದ್ದು, ಭಾರತೀಯ ಸೇನೆ ಮತ್ತು ಕೇಂದ್ರೀಯ ಪೊಲೀಸ್ ಸಿಬ್ಬಂದಿಗಳನ್ನೇ ಈ ಎನ್.ಎಸ್.ಜಿ. ಪಡೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಎನ್.ಎಸ್.ಜಿ ಯು 26/11 ಮುಂಬಯಿ ದಾಳಿಯಲ್ಲಿ ಆಪರೇಷನ್ ಬ್ಲಾಕ್ ಟೊರ್ನಾಡೊ ಮತ್ತು ಆಪರೇಷನ್ ಸೈಕ್ಲೋನ್ ಗಳ ಮೂಲಕ ಎನ್.ಎಸ್.ಜಿ ಒಂಬತ್ತು ಉಗ್ರರನ್ನು ಕೊಂದು 900ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ರಕ್ಷಿಸಿತ್ತು. ಅದೇ ರೀತಿ 2016 ರಲ್ಲಿ ನಡೆದ ಪಠಾಣ್ ಕೋಟ್ ಉಗ್ರರ ದಾಳಿ ವೇಳೆ 4 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಎಲ್ಲಾ ಆರು ಉಗ್ರರನ್ನು ಹುಡುಕಿ ಕೊಂದಿತ್ತು.
ಎನ್.ಎಸ್.ಜಿ ರಚನೆ ಮುಖ್ಯ ಗುರಿಗಳು ಏನು ಗೊತ್ತೇ??
ವಿಶ್ವದ 5 ವಿಶೇಷ ಅತ್ಯುತ್ತಮ ಪಡೆಗಳಲ್ಲಿ ಒಂದಾಗಿರುವ ಎನ್.ಎಸ್.ಜಿ ಕಮಾಂಡೋ ಪಡೆಯು ಭಾರತೀಯ ವಿಶೇಷ ಪಡೆಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದ ಘಟಕ. ಇದರಲ್ಲಿ,  ಉಗ್ರ ನಿಗ್ರಹ ಕಾರ್ಯಾಚರಣೆ, ಒತ್ತೆಯಾಳುಗಳನ್ನು ಬಿಡಿಸುವುದು, ಹೈಜಾಕ್ ಸಂದರ್ಭಗಳು ಹಾಗೂ ಅತಿ ಗಣ್ಯ ವ್ಯಕ್ತಿಗಳ ರಕ್ಷಣೆ ಹಾಗೂ ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವುದೇ ಇದರ ಮುಖ್ಯ ಗುರಿಯಾಗಿದೆ!!
ಇನ್ನು, ಈ ಎನ್.ಎಸ್.ಜಿ ಕಮಾಂಡೋಗಳನ್ನು ಸ್ಪೆಷಲ್ ಆಕ್ಷನ್ ಗ್ರೂಪ್ (ಎಸ್.ಎ.ಜಿ) ಮತ್ತು ಸ್ಪೆಷಲ್ ರೇಂಜರ್ಸ್ ಗ್ರೂಪ್(ಎಸ್.ಆರ್.ಜಿ) ಎಂದು ಎರಡು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ. ಭಾರತೀಯ ಸೇನೆಯಿಂದ ಆಯ್ದ ಸೈನಿಕರನ್ನು ಹೊಂದಿರುವ ಈ ಆಕ್ರಮಣಕಾರಿ ವಿಭಾಗವು ಪಡೆಯ ಶೇ.54 ರಷ್ಟು ಶಕ್ತಿಯನ್ನು ಹೊಂದಿರುತ್ತದೆ.  ಅಷ್ಟೇ ಅಲ್ಲದೇ, ಎಸ್.ಆರ್.ಜಿ ಯಲ್ಲಿ ಸಿ.ಆರ್.ಪಿ.ಎಫ್, ಬಿಎಸ್‍ಎಫ್, ಇಂಟೋ ಟಿಬೆಟನ್ ಬಾರ್ಡರ್ ಲೀಸ್(ಐಟಿಬಿಪಿ) ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ ಗಳಿಂದ ಬಂದಿದ್ದವರಾಗಿರುತ್ತಾರೆ. ಇದರ ಮುಖ್ಯ ಉದ್ದೇಶವೇ ಎಸ್.ಎ.ಎಫ್ ಗೆ ಸಹಕರಿಸುವುದಾಗಿದೆ!!
ಇನ್ನು, ಈ ಎನ್.ಎಸ್.ಜಿ ಗೆ ಸೇರ್ಪಡೆಯಾಗಬೇಕಾದರೇ ಎದುರಿಸುವ ಕಠಿಣ ಸವಾಲುಗಳು!!
ಎನ್.ಎಸ್.ಜಿ ಒಟ್ಟು 14,500 ಸಿಬ್ಬಂದಿಯ ಸಾಮರ್ಥ್ಯವನ್ನು ಹೊಂದಿದ್ದು, ಇವರಲ್ಲಿ ಅರ್ಧದಷ್ಟು ಕಮಾಂಡೋಗಳು ಭಾರತೀಯ ಸೇನೆಯಿಂದ ಆಯ್ಕೆಯಾಗಿರುತ್ತಾರೆ. ಅವರು ಧರಿಸುವ ಕಪ್ಪು ಬಣ್ಣದ ಸಮವಸ್ತ್ರ ಮತ್ತು ಅವುಗಳ ಮೇಲಿರುವ ಕಪ್ಪು ಬೆಕ್ಕಿನ ಚಿಹ್ನೆಯಿಂದಾಗಿ ಇವರನ್ನು ಬ್ಲಾಕ್ ಕ್ಯಾಟ್ಸ್ ಎಂದು ಕರೆಯುತ್ತಾರೆ. ಇನ್ನು, ಈ ಎನ್.ಎಸ್.ಜಿ ತರಬೇತಿ ಕೇಂದ್ರದಲ್ಲಿ ನಡೆಯುವ ಮೊದಲ ತರಬೇತಿ 90 ದಿನಗಳು ನಡೆಯುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರು ಮಾತ್ರ ಎನ್.ಎಸ್.ಜಿ ಗೆ ಸೇರ್ಪಡೆಯಾಗಿ, ನಂತರ 9 ತಿಂಗಳ ಸುಧಾರಿತ ತರಬೇತಿ ಪಡೆಯುತ್ತಾರೆ.
ಎನ್.ಎಸ್.ಜಿ ಯಲ್ಲಿ ಸೇರ್ಪಡೆಯಾಗುವ ಮುನ್ನ 90 ದಿನಗಳ ಕಠಿಣ ತರಬೇತಿ ಇರುತ್ತದೆ. ಒತ್ತಡದ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ತಿಳಿಯಲು ಸಹಿಷ್ಣುತೆ ಪರೀಕ್ಷೆ ನಡೆಸುತ್ತಾರೆ. ಫಿಲಿಫೈನ್ಸ್ ಸಮರ ಕಲೆಗಳ ಒಂದು ರೂಪವಾದ ಪಾರ್ಕಾರ್ ಮತ್ತು ಪೆಕಿಟಿ-ಟಿರ್ಸಿಯಾ ಕಾಲಿಗಳಲ್ಲಿ ತರಬೇತಿ ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರು ಮಾತ್ರ ಮುಂದಿನ ಹಂತದ ತರಬೇತಿಗೆ ಅರ್ಹರಾಗುತ್ತಾರೆ. ಪ್ರೊಬೆಷನರಿ ಪೀರಿಯಡ್ ನಲ್ಲಿನ ಕಠಿಣ ನಿಯಮಗಳಿಂದಾಗಿ ಈ ಅವಧಿಯಲ್ಲಿ ಶೇ.50-70% ಅಭ್ಯರ್ಥಿಗಳು ಫೇಲಾಗುತ್ತಾರೆ.
ಶೂಟಿಂಗ್ ತರಬೇತಿ ಸಂದರ್ಭದಲ್ಲಿ ಶೂಟ್ ಮಾಡಬೇಕಿರುವ ಗುರಿಯ ಪಕ್ಕದಲ್ಲೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ ಅಭ್ಯರ್ಥಿ ನಿಲ್ಲಬೇಕಿರುತ್ತದೆ. ಶೂಟ್ ಮಾಡುವ ವ್ಯಕ್ತಿ ಗುರಿಯ ಪಕ್ಕ ನಿಂತಿರುವ ವ್ಯಕ್ತಿಗೆ ತಾಕದಂತೆ ಗುರಿಯತ್ತ ಶೂಟ್ ಮಾಡಬೇಕಿರುತ್ತದೆ. ಎಲ್ಲಕಿಂತ ಮುಖ್ಯವಾಗಿ ಎನ್.ಎಸ್.ಜಿ ಕಮಾಂಡೋಗಳಿಗೆ ಹೆಡ್ ಶಾಟ್ ಗಳ ಕುರಿತ ತರಬೇತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ.
ಶೂಟಿಂಗ್ ತರಬೇತಿಯ ಕೇವಲ ಎರಡು ತಿಂಗಳ ಅವಧಿಯಲ್ಲಿ ಒಬ್ಬ ಕಮಾಂಡೋ 14 ಸಾವಿರಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸುತ್ತಾನೆ. ಎನ್.ಎಸ್.ಜಿ ಯಲ್ಲಿ ಉಳಿಯಬೇಕೆಂದರೆ ಕಮಾಂಡೋಗೆ ಕನಿಷ್ಠ ಶೇ.85 ರಷ್ಟು ಸ್ಟ್ರೈಕ್ ರೇಟ್ ಇರಬೇಕಾಗುತ್ತದೆ. ಅಷ್ಟೇ ಅಲ್ಲದೇ, ಕಠಿಣ ತರಬೇತಿ ಪಡೆದಿರುವ ಕಮಾಂಡೋಗಳು ಜರ್ಮನ್ ಹೆಕ್ಲರ್ ಮತ್ತು ಕೋಚ್ ಎಂ.ಪಿ-5 ಸಬ್ ಮಷೀನ್ ಗನ್, ಕೋಚ್ ಪಿ.ಎಸ್.ಜಿ1 ಸ್ನಿಪರ್ ರೈಫಲ್, ಆಸ್ಟ್ರಿಯಾದ ಗ್ಲೋಕ್-17 ಪಿಸ್ತೂಲ್ ಮತ್ತು ಸ್ವಿಸ್ ಎಸ್.ಐ.ಜಿ ಎಸ್ಜಿ 551 ಅಸಾಲ್ಟ್ ರೈಫಲ್ ಗಳನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೇ, ಅವರ ಶೂಟಿಂಗ್ ಗುರಿ ನಿಖರವಾಗಿರುವುದರೊಂದಿಗೆ ತುರ್ತು ಸಂದರ್ಭ ನಿಭಾಯಿಸಲು ಈ ಪಡೆ ಸದಾ ಸಿದ್ಧವಾಗಿರುತ್ತಾರೆ!!
ಒಟ್ಟಿನಲ್ಲಿ, ವಿಶ್ವದ 5 ವಿಶೇಷ ಅತ್ಯುತ್ತಮ ಪಡೆಗಳಲ್ಲಿ ಒಂದಾಗಿರುವ ಎನ್.ಎಸ್.ಜಿ ಕಮಾಂಡೋ ಪಡೆಯು ಭಾರತೀಯ ವಿಶೇಷ ಪಡೆಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ. ಇನ್ನು, ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದಲ್ಲಿ ಆರಂಭವಾಗಿರುವ ಉಗ್ರರನ್ನು ನಿಗ್ರಹಿಸಲು ಇದೇ ಎನ್ ಎಸ್ ಜಿಯ ಬ್ಲ್ಯಾಕ್ ಕ್ಯಾಟ್ ಕಾಮ್ಯಾಂಡೋಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರೆ ಉಗ್ರರ ರುಂಡವನ್ನು ಚೆಂಡಾವುದು ಗ್ಯಾರೆಂಟಿ!!
– ಅಲೋಖಾ
Tags

Related Articles

Close