ಅಂಕಣಇತಿಹಾಸದೇಶಪ್ರಚಲಿತ

2500 ವರ್ಷಗಳ ಹಿಂದೆಯೇ ಪರಮಾಣು ಸಿದ್ಧಾಂತವನ್ನು ಪ್ರಸ್ತಾಪಿಸಿದ್ದ ಭಾರತೀಯ ವಿಜ್ಞಾನಿ ಯಾರು ಗೊತ್ತೇ?!

ಜಾನ್ ಡಾಲ್ಟನ್ ( 1766-1844) ಎಂಬ ವ್ಯಕ್ತಿಯು ಪರಮಾಣು ಸಿದ್ಧಾಂತ ಬಗ್ಗೆ ಚರ್ಚಿಸುವಾಗ ಈ ಸತ್ಯವನ್ನು ಮೆಲುಕು ಹಾಕಿದ್ದಾನೆ. ‘ಲಾ ಆಫ್ ಕನ್ಸರ್ವೇಶನ್‘ (Law of Conservation) ‘ಆಪ್ ಮಾಸ್ ಆ್ಯಂಡ್ ದಿ ಲಾ ಆಪ್ ಕಾನ್‍ಸ್ಟೆಂಟ್ ಕಂಪೊಸಿಶನ್’ ಡೆಲ್ಟಾನ್ ರವರು ಪ್ರತಿಪಾದಿಸಿದ ಸಿದ್ಧಾಂತವಾಗಿದೆ. 1803 ರಲ್ಲಿ ರಾಯಲ್ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು, ಹಾಗೂ ಈತ ಓರ್ವ ಇಂಗ್ಲೀಷ್ ರಾಸಾಯನಾಶಾಸ್ತ್ರಜ್ಞನಾಗಿದ್ದು ಇವರು ಪರಮಾಣು ಸಿದ್ಧಾಂತಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಹಾಗೂ ಪರಮಾಣುವಿನ ವಿವಿಧ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಅವುಗಳನ್ನು ಅದರ ತೂಕಗಳಿಗೆ ಅನುಗುಣವಾಗಿ ವರ್ಗಾಹಿಸಿದ್ದಾರೆ. ಈತನ ಸಿದ್ಧಾಂತದ ಆಧಾರಿತ ಕಲ್ಪನೆಗಳೆಂದರೆ ಎಲ್ಲಾ ವಿಚಾರಗಳು ನಿರ್ಮಾಣವಾಗುವುದು ಪರಮಾಣುವಿನಿಂದ .ಅವುಗಳನ್ನು ಉತ್ಪಾದಿಸಲು ಅಥವಾ ಅಳಿಸಲು ಸಾಧ್ಯವಿಲ್ಲ ಎಲ್ಲಾ ಪರಮಾಣುವಿನ ಅಂಶಗಳು ಒಂದೇ.. ಆದರೆ 2500 ವರ್ಷಗಳ ಹಿಂದೆಯೇ ಒಬ್ಬ ಭಾರತೀಯ ಸನ್ಯಾಸಿ ಮತ್ತು ತತ್ವಜ್ಞಾನಿ ಪರಮಾಣು ಸಿದ್ಧಾಂತವನ್ನು ರೂಪಿಸಿದ್ದರು ! ಆದರೆ, ಈ ವಿಷಯವನ್ನು ಅರಿತಿರುವುದು ಕೆಲವರಷ್ಟೇ .
ಹೌದು!.. ಆಚಾರ್ಯ ಕಣಾದ ಎಂಬುವಾತ ಈ ಸಿದ್ಧಾಂತವನ್ನು ಪ್ರಸ್ತಾಪಿಸಿದ್ದಾರಂತೆ!! ಇದು ನಮಗೆ ಯಾರಿಗೂ ತಿಳಿದಿರದ ವಿಷಯವಾಗಿದೆ. ಆಚಾರ್ಯ ಕಣಾದ ಇವರ ಜನ್ಮನಾಮ ಕಶ್ಯಪ. ಈತನ ಕಾಲ ಕ್ರಿಸ್ತ ಪೂರ್ವ 600 ಅಥವಾ 800 ಎಂಬುವುದರಲ್ಲಿ ಸಂಶಯವಿದೆ. ಇವರು ಪ್ರಭಾಸ್ ಕ್ಷೇತ್ರದ ಹತ್ತಿರದ ದ್ವಾರಕ (ಈಗಿನ ಗುಜರಾತ್) ನಲ್ಲಿ ಎಂದು ಜನಿಸಿದರೆಂದು ಹೇಳಲಾಗಿದೆ ಈತನ ತಂದೆ ಉಲ್ಕಾ ಈತ ಕೂಡ ಓರ್ವತತ್ವಜ್ಞಾನಿಯಾಗಿದ್ದ.
ಕಶ್ಯಪ ಕಣಾದನಾದ ಬಗೆ ಹೇಗೆ ?
ಕಶ್ಯಪ ತನ್ನ ಬಾಲ್ಯದಲ್ಲಿ ಬಹಳ ಉತ್ಸಾಹದಿಂದ ಹಾಗೂ ಪ್ರಾಯೋಗಿಕವಾಗಿ ಎಲ್ಲವನ್ನು ಗಮನಿಸುತಿದ್ದ. ಒಂದು ದಿನ ಕಶ್ಯಪ ತನ್ನ ತಂದೆ ಜೊತೆಗೂಡಿ ಪ್ರಯಾಗಕ್ಕೆ ತೀರ್ಥಯಾತ್ರೆ ಹೋಗಿದ್ದ .ಅಲ್ಲಿ ದಾರಿಯು ಸಹಸ್ರಾರು ಯಾತ್ರಿಕರಿಂದ ತುಂಬಿತ್ತು ಮತ್ತು ದಾರಿಗೆ ಅಡ್ಡಲಾಗಿ ಹೂವುಗಳನ್ನು ಹರಡಿತ್ತು. ಆದರೆ ಕಶ್ಯಪ ನ ಕಣ್ಣು ದಾರಿಯಲ್ಲಿ ಚದುರಿದ ಅಕ್ಕಿ ಧಾನ್ಯವನ್ನು ನೋಡುತಿದ್ದ. ಆ ಅಕ್ಕಿಧಾನ್ಯವನ್ನು ಗಂಗಾ ನದಿತೀರದ ದೇವಸ್ಥಾನಗಳಿಗೆ ನೀಡಲಾಗಿತ್ತು. ಕಶ್ಯಪ ಸೂಕ್ಷ್ಮವಾಗಿ ಎಲ್ಲಾವನ್ನು ಸ್ತಬ್ದವಾಗಿ ಗಮನಿಸಿದ. ಹಾಗೇನೆ ಎಲ್ಲವನ್ನು ಮೊದಲಿಂದಲೇ ಗ್ರಹಿಸುತ್ತಾ ಹೋದ. ಬೇಗನೆ ಇತರ ಯಾತ್ರಿಕರು ಇದನ್ನು ಗುರುತಿಸಿದರು ಮತ್ತು ಅವರಿಗೆ ಇದು ಆಶ್ಚರ್ಯದಾಯಕವಾಗಿತ್ತು.
ಯಾಕೆಂದರೆ, ಕಶ್ಯಪ ಒರ್ವ ಉತ್ತಮ ಕುಟುಂಬದ ಹುಡುಗನಂತೆ ಕಂಡನು. ಸೇರಿರುವ ಜನರು ಕುತೂಹಲದಿಂದ  ಆತನಲ್ಲಿ  ನೀನು ಯಾಕೆ ಈ ರೀತಿ ವರ್ತಿಸುತ್ತಿದ್ದಿಯಾ ಎಂದು ಕೇಳಿ ಹೇಳಿದರು. ” ಈ ಧಾನ್ಯವನ್ನು ಬಿಕ್ಷುಕರು ಕೂಡ ಮುಟ್ಟೋದಿಲ್ಲ ಎಂದಾಗ ಕಶ್ಯಪನ ಮರುತ್ತರ ಅಧ್ಭುತವಾಗಿತ್ತು. “ಒಂದು ಧಾನ್ಯವು ಬರೀ ಧಾನ್ಯದಂತೆ ಕಾಣಿಸುತ್ತದೆ ನಿಜ! ಆದರೆ ಈ ಧಾನ್ಯವನ್ನು ಕೂಡಿಟ್ಟರೆ ಅಂತಹ ನೂರಾರು ಧಾನ್ಯಗಳು ಒಬ್ಬ ವ್ಯಕ್ತಿಯ ಒಂದು ಹೊತ್ತಿನ ಊಟವಾಗುತ್ತದೆ. ಅಂತಹ  ಹಲವಾರು ಕೂಡುವಿಕೆ ಒಂದು ಕುಟುಂಬದ ಹೊಟ್ಟೆ ತುಂಬುವುದು.ಇದರಿಂದಾಗಿ ಎಲ್ಲಾ ಜೀವರಾಶಿಗಳ ಬೆಳವಣಿಯಾಗುತ್ತದೆ. ಮತ್ತು ಒಂದು ಅಗಳು ಧಾನ್ಯವು ವಿಶ್ವದ ಶ್ರೀಮಂತಿಕೆಗೆ ಕಾರಣವಾಗುತ್ತದೆ.”
 ಕಶ್ಯಪ ಇಡೀ ವಿಶ್ವವೇ ಒಂದು ‘ಕಣ’ ದಿಂದ ನಿರ್ಮಾಣವಾಗಿದೆ ಅದರ ಅರ್ಥವೇ ಪರಮಾಣು. ಈತ ಪರಮಾಣು ಸಿದ್ಧಾಂತವನ್ನು ಅಭ್ಯಸಿಸಿ ಪರಮಾಣು ಎಲ್ಲಾರಂತೆ ಪ್ರಚೋದಿಸುವುದು ಹಾಗು ಚಲಿಸುವುದು ಎಂದು ಹೇಳಿದ. ಆಗಿನಿಂದ ಆತನನ್ನು ಜನರು “ಆಚಾರ್ಯ ದಿ ಟೀಚರ್ (Acharya – The Teacher)”  ಕರೆದರು. ಆದ್ದರಿಂದ ಆಚಾರ್ಯ ಕಣಾದ ಎಂಬ ಹೆಸರು ಬಂತು.
ಕಣಾದ ಪತ್ತೆ ಮಾಡಿದ  ‘ಅಣು’ (ಪರಮಾಣು_) ಅತಿವಿನಾಶಿಯಾಗಿ ಪ್ರಾಯೋಗಿಕವಾದ ವಿಷಯವಾಗಿದೆ. ಆನಂತರ ಈತ ವೈಶೇಶಿಕ ಶಾಲೆಯನ್ನು ತೆರೆದನು. ಅಲ್ಲಿ ವಿಶ್ವದ ತತ್ವಜ್ಞಾನದ ಹಾಗೂ  ಪ್ರಾಯೋಗಿಕಗಳ ಬಗ್ಗೆ ವ್ಯಾಖ್ಯೆಗಳನ್ನು ನೀಡುತ್ತಾನೆ. ಈತನು ವೈಶೇಶಿಕ ಸೂತ್ರದ  ಬರಹಗಾರ. ಈ ಸೂತ್ರವು ಈತನ ಸಿದ್ಧಾಂತದ ಬಗ್ಗೆ ವಿವರ ನೀಡುತ್ತದೆ. ಹಾಗೇನೆ ಈತ  ಪರಮಾಣು ಶಾಶ್ವತವಾಗಿರುವುದು. ಯಾಕೆಂದರೆ, ಇವುಗಳು ಅಗೋಚರವಾಗಿರುವಂತದ್ದು .
ಇವನು ರಸವದಂ (Rasavadam) ಗೆ ಹೆಚ್ಚು ಒತ್ತು ನೀಡಿದ. ಇದನ್ನು ರಸವಿದೆ ಎಂದೂ ಕೂಡ ಕರೆಯಲಾಗುತ್ತದೆ. ಹಾಗೇನೆ ಎಲ್ಲ ಜೀವರಾಶಿಗಳು ಇದರ ಅಂಶಗಳಾದ ನೀರು, ಬೆಂಕಿ, ಭೂಮಿ, ಗಾಳಿ, ಈಥರ್ ಗಳಲ್ಲಿ ಒಳಗೊಂಡಿರುತ್ತದೆ. ಈತ ಭೂಮಿಯ ಗುರುತ್ವಾಕರ್ಷಣೆ ಬಗ್ಗೆಯು ಮಾಹಿತಿ ನೀಡಿದ್ದ ಎನ್ನಲಾಗುತ್ತದೆ. ಅಣು ಮತ್ತು ಪರಮಾಣು ಹಾಗೂ ಮರಣ ಪ್ರಾಯೋಜಿಸಲಾದ ವಿಷಯವಾಗಿದೆ. ಭಾರತೀಯ ಪರಮಾಣು ಸಿದ್ಧಾಂತವು ಆಧಾರಿತ ತರ್ಕ ಇದು ವೈಯಕ್ತಿಕ ಅಭಿವ್ಯಕ್ತಿ ಅಥವಾ ಪ್ರಯೋಗವಲ್ಲ.
ಎ.ಎಲ್.ಭಾಶಮ್ ಎಂಬ ಆಸ್ಟ್ರೇಲಿಯಾದ ಬರಹಗಾರ ಹೇಳುವ ಪ್ರಕಾರ ‘ ಕಶ್ಯಪ ಒರ್ವ ಅಧ್ಬುತ ಕಲ್ಪನಾತ್ಮಕ ವಿವರಣೆಯನ್ನು ವಿಶ್ವದ ಬಗ್ಗೆ ನೀಡಿದ್ದಾರೆ ಮತ್ತು ಈತ ಬೃಹತ್ ಭೌಗೋಳಿಕವಾದ ಆಧುನಿಕ ಭೌತಿಕ ವಿಷಯದ ಬಗ್ಗೆ ವಿವರಣೆ ನೀಡಿದ್ದಾರೆ. ಪಶ್ಚಿಮದಲ್ಲಿ ಪರಮಾಣು ಎಂಬುವುದು ಹೊರಬಿದ್ದದು 15 ನೇ ಶತಮಾನದಲ್ಲಿ ಪ್ರಾಚೀನ ಗ್ರೀಕರಾದ ಲ್ಯೂಸಿಪ್ಪಸ್ & ಡೆಮೋಕ್ರಿಟಿಕ್(Luciptus and Democritis)) ರಿಂದ ಯಾವಗ ಭಾರತೀಯ ಸಂಸ್ಕ್ರತಿ ಗ್ರೀಕರಿಗೆ ಪರಿಚಯವಾಯಿತೋ, ಆಗ ಈ ವಿಷಯ ಇತರರೊಂದಿಗೆ ಸ್ವತಂತ್ರ್ಯವಾಗಿ ಹಂಚಿಕೆಯಾಯಿತು. ಕಣಾದ ಎಂಬ ಪತ್ರಿಕೆಯು ನ್ಯಾಷನಲ್ ಆ್ಯರೋನ್ಯಾಟಿಕಲ್ ಲ್ಯಾಬೋರೆಟರಿ, ಬೆಂಗಳೂರಿನಲ್ಲಿ ಆಚಾರ್ಯ ಕಣಾದ ಇವರಿಗೆ ಸಮರ್ಪಣೆ ಮಾಡಲಾಗಿದೆ.
Postcard team
Tags

Related Articles

FOR DAILY ALERTS
Close