ಪ್ರಚಲಿತ

ಕೊರೊನಾ ನಿಯಂತ್ರಿಸಲು ಭಾರತ ಮಾಡಿದ ಪ್ಲಾನ್ ಬಗ್ಗೆ ಸ್ವತಃ‌ ವಿಶ್ವ ಆರೋಗ್ಯ ಸಂಸ್ಥೆ(WHO) ಮೆಚ್ಚಿಕೊಂಡಿದ್ದು ಯಾಕೆ?

ಭಾರತ ಒಂದು ಜನನಿಬಿಡ‌ ಪ್ರದೇಶವಾಗಿದ್ದು, ಇಲ್ಲಿ ಕೊರೊನಾದಂತಹಾ ಸಾಂಕ್ರಾಮಿಕ ವೈರಸ್ ಕಾಣಿಸಿದರೆ ಅದನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ… ಯಾಕೆಂದರೆ ಇಲ್ಲಿನ ಜನ ಸಂಖ್ಯೆ ಅತಿಯಾಗಿದ್ದು, ಇಲ್ಲಿನ ಜನರನ್ನು ಅಷ್ಟು ಸುಲಭದಲ್ಲಿ ಕಟ್ಟಿ ಹಾಕಲೂ ಸಾಧ್ಯವಿಲ್ಲ… 
ಇಡೀ ಜಗತ್ತಿನ ‌೧೦೦ಕ್ಕೂ ಹೆಚ್ಚು ದೇಶಕ್ಕೆ ವ್ಯಾಪಿಸಿರುವ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇತರ ದೇಶಗಳಿಗೆ ಸರಾಸರಿ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. 
ಹಾಗೆ ನೋಡಿದರೆ ಭಾರತ ಕೊರೊನಾ ನಿಯಂತ್ರಿಸಲು ಭಾರತ ತೆಗೆದುಕೊಂಡ‌ ಕ್ರಮಗಳೇನು? ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಮೆಚ್ಚಲು ಕಾರಣವೇನು?-ಭಾರತದ ಕುಟುಂಬ ಕಲ್ಯಾಣ‌ ಇಲಾಖೆಯು ವಿದೇಶದಿಂದ‌ ಬರುವವರ ಸಂಚರಿಸಿದ ಸ್ಥಳಗಳ‌ ಮಾಹಿತಿ ಪಡೆದುಕೊಂಡಿತು. ವಿಮಾನ ಯಾನಿಗಳಿಗೂ ಕೆಲವೊಂದು‌ ಮಾರ್ಗಸೂಚಿಗಳನ್ನು ಕಲ್ಪಿಸಿತು.
-ವಿದೇಶದಲ್ಲಿ ವಿಸಾ ಅವಧಿ‌ ಮುಗಿದ ಭಾರತೀಯರನ್ನು ಎಪ್ರಿಲ್ ೨೦ರವರೆಗೆ ಅಲ್ಲೇ ಉಳಿದುಕೊಳ್ಳುವಂತೆ ಭಾರತ ವ್ಯವಸ್ಥೆ ಕಲ್ಪಿಸಿದ್ದು.
-OCI ಕಾರ್ಡ್ ಇರುವವರನ್ನು ವಿಸಾ ಭಾರತದಲ್ಲೇ ಅವರಿಗೆ ಇಷ್ಟಬಂದಷ್ಟು ದಿನ ಉಳಿದುಕೊಳ್ಳುವಂತೆ ಮಾಡಿರುವುದು.
-ರಾಜತಾಂತ್ರಿಕ ವಿಸಾ ಹೊರತುಪಡಿಸಿ ವಿದೇಶಿ ಉದ್ಯೋಗಿಗಳ ವಿಸಾ ಅಮಾನತ್ತಲ್ಲಿಟ್ಟಿರುವುದು.
-ವಿದೇಶದಲ್ಲಿರುವ ಶಂಕಿತ‌ ಕೊರೊನಾ ಪೀಡಿತರಿಗೆ ಭಾರತೀಯ ವೈದ್ಯರಿಂದ‌ ಚಿಕಿತ್ಸೆ ಕೊಡಿಸಿ, ಭಾರತದ ಐಸೋಲೇಷನ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಿರುವುದು.
ವಿಸಾ ಫ್ರೀ ಟ್ರಾವೆಲ್ ಹೊಂದಿರವರ ಸಂಚಾರ ಸೌಲಭ್ಯ‌ ಎ.೧೫ರವರೆಗೆ ಅಮಾನತ್ ನಲ್ಲಿ ಇಟ್ಟಿರುವುದು.
 ಈಗಾಗಲೇ ಭಾರತದಲ್ಲಿರುವ ಎಲ್ಲಾ ವಿದೇಶಿಯರ ವೀಸಾಗಳು ಮಾನ್ಯವಾಗಿರುತ್ತವೆ ಮತ್ತು ಅವರ ವಿಸಾ ವಿಸ್ತರಣೆಗೆ ಸ್ಥಳೀಯ ವಿಸಾ ಕೇಂದ್ರಗಳಲ್ಲಿ ಅವಕಾಶ ಕೊಟ್ಟಿರುವುದು.
ಭಾರತಕ್ಕೆ ಅನಿವಾರ್ಯವಾಗಿ ಆಗಮಿಸಬೇಕಾದ ಭಾರತೀಯರಿಗೆ ಇಂಡಿಯನ್ ಮಿಸನ್ಸ್ ಸಂಪರ್ಕಿಸಿ ಕಾರಣ ತಿಳಿಸುವಂತೆ ಕಡ್ಡಾಯ ವ್ಯವಸ್ಥೆ‌ ಮಾಡಿರುವುದು.
ಕೊರೊನಾ ಪೀಡಿತ ದೇಶಗಳಾದ ಇಟಲಿ, ಕೊರಿಯಾ ಮುಂತಾದ ದೇಶಗಳಿಂದ ಭಾರತಕ್ಕೆ ಆಗಮಿಸುವವರು ಕೋವಿದ್ ನೆಗೆಟಿವ್ ಸರ್ಟಿಫಿಕೆಟ್ ಇದ್ದರೆ ಮಾತ್ರ ಅವಕಾಶ ಕಲ್ಪಿಸಿರುವುದು.
ಕೊರೊನಾ ಪೀಡಿತ ಚೀನಾದ ವುಹಾನ್ ನಗರದಿಂದ ಭಾರತೀಯರನ್ನು ಹಾಗೂ ಇರಾನ್‌ನಲ್ಲಿ ಸಿಲುಕಿದ ಭಾರತೀಯರನ್ನು ಪ್ರತ್ಯೇಕ ವಿಮಾನದಲ್ಲಿ ಕರೆಸಿರುವುದು.

ಕೊರೊನಾ ಪೀಡಿತ ದೇಶಗಳಿಂದ ಭಾರತಕ್ಕೆ ಆಗಮಿಸಲಿರುಚ ಭಾರತೀಯರನ್ನು ೧೪ ದಿನಗಳಲ್ಲಿ ಐಸೋಲೇಟೆಡ್ ವಾರ್ಡ್‌ನಲ್ಲಿರಿಸಿ ಕೊರೊನಾ ಇಲ್ಲದಿದ್ದರೆ ಮಾತ್ರ ಭಾರತಕ್ಕೆ ಬರಲು ಅವಕಾಶ ಕಲ್ಪಿಸಿರುವುದು..
ವಿದೇಶದಿಂದ ಬಂದ ಭಾರತೀಯರಿಗೆ ೧೪ ದಿನ ಮನೆಯಲ್ಲೇ ಇರುವಂತೆ ಸೂಚಿಸಿದ್ದು.
ವಿದೇಶಿಯರ ಟ್ರಾವೆಲ್‌ ಹಿಸ್ಟರಿ ಪಡೆದುಕೊಂಡಿರುವುದು.
ಕೊರೊನಾ ಪೀಡಿತ ಚಿನಾ,‌ಇಟಲಿ, ಕೊರಿಯಾ, ಜರ್ಮನಿ ಮುಂತಾದ ದೇಶಗಳ ವಿಮಾನ ಯಾನ ರದ್ದುಗೊಳಿಸಿರುವುದು.
ವಿದೇಶದಿಂದ ಬಂದ ಮತ್ತು ತೆರಳಿದ ಯಾತ್ರಿಗಳಿಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ಮನದಟ್ಟು‌ಮಾಡಿಸಿದ್ದು.
ವಿದೇಶದಿಂದ ಬಂದ ಪ್ರಯಾಣಿಕರು ತಮಗೆ ಕೊರೋನ ಇಲ್ಲ ಎಂದು ಪ್ರಮಾಣ ಪತ್ರ ತೋರಿಸುವಂತೆ ಮಾಡಿರುವುದು..

ಯಾವುದೇ ಅನುಮಾಗಳಿದ್ದರೂ‌ ಮಾಹಿತಿ‌ಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ೨೪*೭ ವ್ಯವಸ್ಥೆ ಕಲ್ಪಿಸಿರುವುದು…

ಈ ಎಲ್ಲ ಕ್ರಮಗಳನ್ನು ಭಾರತ ಚೀನಾದಲ್ಲಿ ಕೊರೊನಾ ಕಾಣಿಸಿದಂದಿನಿಂದಲೇ ಮಾಡಿತ್ತು… ಚೀನಾ ಆರಂಭದಲ್ಲೇ ಕೊರೊನಾ ಬಗ್ಗೆ ಮಾಹಿತಿ‌ ನೀಡಿದ್ದರೆ ಕೊರೊನಾ outbreak ಆಗುವುದನ್ನು ತಪ್ಪಿಸಬಹುದಿತ್ತು… 
ಭಾರತ‌‌ ಮಾಡಿದ ತುರ್ತು ಕ್ರಮಗಳನ್ನು ಇತರ ಯಾವ ರಾಷ್ಟ್ರಗಳೂ‌ ಮಾಡಿರಲಿಲ್ಲ. ಭಾರತದ ಎಲ್ಲ ಕ್ರಮಗಳನ್ನು ಕಂಡು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚಿಕೊಂಡಿದೆ..


Girish Malali

Tags

Related Articles

FOR DAILY ALERTS
Close