ಪ್ರಚಲಿತ

ಹಿಂದೂ ಯುವತಿಯರಿಗೆ ಅನ್ಯ ಧರ್ಮೀಯ ಯುವಕರೇ ಅಚ್ಚುಮೆಚ್ಚು ಏಕೆ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆದ ಒಂದು ವಿಷಯ. ಯಾವುದೋ ವಾಹಿನಿಯೊಂದು ಹಿಂದೂ ಹೆಣ್ಣು ಮಕ್ಕಳು ಮತ್ತು ಅನ್ಯ ಧರ್ಮದ ಹೆಣ್ಣು ಮಕ್ಕಳಲ್ಲಿ ‘ನೀವು ಅನ್ಯ ಧರ್ಮದ ಯುವಕರನ್ನು ವರಿಸಲು ಇಷ್ಟ ಪಡುವಿರಾ’ ಎಂಬ ಪ್ರಶ್ನೆಯೊಂದಿಗೆ ಒಂದು ಸರ್ವೆ ನಡೆಸುತ್ತಾರೆ.

ಈ ಪ್ರಶ್ನೆ, ಈ ಸರ್ವೆ ನಿಮಗೆ ಹಾಸ್ಯಾಸ್ಪದ ಎನಿಸಬಹುದು. ಆದರೆ ನಿಮಗೆ ಗೊತ್ತಾ.. ಈ ಪ್ರಶ್ನೆಗೆ ಹಿಂದೂ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಮತ್ತು ಅನ್ಯ ಧರ್ಮದ ಹೆಣ್ಣು ಮಕ್ಕಳು ನೀಡಿದ ಉತ್ತರ ಹೇಗಿತ್ತು ಎಂದು..? ಈ ಉತ್ತರಗಳನ್ನು ಕೇಳಿದ ಮೇಲೆ ಹಿಂದೂ ಧರ್ಮಕ್ಕೆ ಹೊರಗಿನವರಿಂದ ಎಷ್ಟು ಅಪಾಯ ಇದೆಯೋ, ಅದಕ್ಕಿಂತಲೂ ಹೆಚ್ಚು ಅಪಾಯ ಕೆಲವು ದುರ್ಮತಿ ಹೊಂದಿರುವ, ಆಲೋಚನಾ ಮಟ್ಟವೇ ಬೆಳೆಯದ, ಒಟ್ಟಾರೆ ಹೇಳುವುದಾದರೆ, ಹುಟ್ಟಿದ ಧರ್ಮ‌ದ ಮೇಲೆಯೇ ಗೌರವ ಇರದ, ಪ್ರೀತಿ ಇರದವರಿಂದಲೇ ಇರುವುದು ಎಂಬುದು ನಂಬುವುದು ಅಸಾಧ್ಯ‌ವಾದರೂ ದುರಂತ ಸತ್ಯ.

ಅಂದ ಹಾಗೆ ಈ ಪ್ರಶ್ನೆ‌ಗೆ ಹಿಂದೂ ಹೆಣ್ಣು ಮಕ್ಕಳಲ್ಲಿ ಹಲವರು ನೀಡಿದ ಉತ್ತರ. ಹೌದು ಹುಡುಗ ಚೆನ್ನಾಗಿದ್ದರೆ ಅನ್ಯ ಧರ್ಮದ‌ವರನ್ನು ವರಿಸುತ್ತೇವೆ. ಅದರಲ್ಲಿ ತಪ್ಪೇನಿದೆ ಎಂದು. ನಿಮ್ಮ ಹೆತ್ತವರು ಇದಕ್ಕೆ ಸಮ್ಮತಿಸದೇ ಹೋದಲ್ಲಿ ಎಂಬ ಪ್ರಶ್ನೆಗೆ, ಹೆತ್ತವರ‌ನ್ನು ಒಪ್ಪಿಸುವ ಪ್ರಯತ್ನ ಮಾಡುತ್ತೇವೆ. ಧರ್ಮ ಮಾನವನ ಸೃಷ್ಟಿ‌ಯಲ್ಲವೆ. ಅದರಲ್ಲೇನಿದೆ. ಅನ್ಯ ಧರ್ಮದ‌ವರನ್ನು ಮದುವೆ ಆಗುವುದರಲ್ಲಿ ಏನಿದೆ? ಧರ್ಮ ಎಂಬುದು ವಿಷಯವೇ ಅಲ್ಲ. ನಾವು ಧರ್ಮ ನೋಡಿ ಪ್ರೀತಿಸುವುದಲ್ಲವಲ್ಲ ಎಂದು. ಪ್ರೀತಿ ಮತ ನೋಡಿ ಬರುವುದಿಲ್ಲ. ವ್ಯಕ್ತಿತ್ವ ನೋಡಿ ಪ್ರೀತಿಸುವುದು ಎನ್ನುತ್ತಾರೆ. ಜೊತೆಗೆ ಧರ್ಮದ ಅವಶ್ಯಕತೆ ಇಲ್ಲ. ನಮ್ಮೊಂದಿಗೆ ಚೆನ್ನಾಗಿದ್ದರಾಯಿತು ಎಂಬ ಉತ್ತರ ಬರುತ್ತದೆ. ಮತ ಸಮಾಜಕ್ಕಾಗಿ ಮಾತ್ರ ಇರುವ ವಿಚಾರ ಎನ್ನುತ್ತಾರೆ.

ಇದನ್ನು ಗಮನಿಸಿ, ಅನ್ಯ ಮತದವರ ಧರ್ಮ ಪ್ರೇಮ. ಹಿಂದೂ ಹುಡುಗಿಯರೇ, ಆಲೋಚಿಸಿ. ಅವರಿಗೂ ಶಿಕ್ಷಣ ಇದೆ ನಮ್ಮಂತೆಯೇ. ಆದರೆ ಅವರ ಸಂಸ್ಕೃತಿ ಸಂಸ್ಕಾರಗಳು ಇಂದಿಗೂ ಜೀವಂತವಾಗಿದೆ. ಆಲರೆ ನಮ್ಮ ಸಂಸ್ಕೃತಿ ಎಲ್ಲಿ ಹೋಗಿದೆ. ನಾವು ಹೇಗೆ ದಾರಿ ತಪ್ಪುತ್ತಿದ್ದೇವೆ ಎಂಬುದನ್ನು ಆಲೋಚಿಸಿ.

ಇದೇ ಪ್ರಶ್ನೆ ಮುಸ್ಲಿಂ, ಕ್ರೈಸ್ತ ಹಿಂದೂ ಮಕ್ಕಳಲ್ಲಿ ಕೇಳಿದಾಗ ಅವರಿಂದ ಬಂದ ಉತ್ತರ, ಬೇರೆ ಧರ್ಮ‌ದವರನ್ನು ನಾವು ಮದುವೆಯಾಗುವುದಿಲ್ಲ. ಹೆತ್ತವರು ನೋಡಿದವರನ್ನೇ ವಿವಾಹವಾಗುವುದು ಸೂಕ್ತ. ಕುಟುಂಬ ಜೀವನಕ್ಕೆ ಸ್ವ ಮತವೇ ಹಿತ. ಕೌಟುಂಬಿಕ ಸಮಸ್ಯೆ‌ಗಳು ಬಂದಾಗಲೂ ಇದರಿಂದ ಸಹಾಯವಾಗುತ್ತದೆ. ನಮಗೆ ನಮ್ಮ ಮತದ, ಧರ್ಮದ‌ವರನ್ನೇ ವಿವಾಹವಾಗಲು ಇಷ್ಟ. ಅನ್ಯ ಧರ್ಮದ ವಿವಾಹ ಭವಿಷ್ಯ‌ಕ್ಕೆ ಬಾಧಕವಾಗಬಹುದು. ಹಾಗಾಗಿ, ನಮ್ಮ ಮತದವರನ್ನೇ ವರಿಸುವುದು ಸೂಕ್ತವಲ್ಲವೇ. ಪ್ರೀತಿ ಮುಖ್ಯವೇ. ಹಾಗೆಂದು ಮುಂದಿನ ಭವಿಷ್ಯ‌ವನ್ನು ಯೋಚಿಸದೆ ಮದುವೆಯಾಗುವುದು ತೊಂದರೆಗೆ ಆಹ್ವಾನ ನೀಡಿದಂತೆ. ಕೌಟುಂಬಿಕ ಸಮಸ್ಯೆಗೆ ಕಾರಣವಾಗಬಹುದು. ನಾವು ಹುಟ್ಟಿದಾಗಿಂದ ಪಾಲನೆ ಮಾಡುತ್ತಿರುವ ಸಂಸ್ಕಾರಗಳ ಪಾಲನೆಗೆ ನಮ್ಮ ಧರ್ಮ‌ದವರನ್ನೇ ಮದುವೆ ಆಗುವುದು ಸೂಕ್ತ ಎಂದು ಉತ್ತರ ನೀಡುತ್ತಾರೆ.

ಹಿಂದೂ ಹೆಣ್ಮಕ್ಕಳೇ ಆಲೋಚಿಸಿ, ನಿಮ್ಮ ಹಾಗೆಯೇ ಶಿಕ್ಷಣ ಪಡೆದವರು, ಅವರ ಧರ್ಮ‌ದ ಬಗ್ಗೆ ಎಷ್ಟು ಕಾಳಜಿ, ಪ್ರೀತಿ ಹೊಂದಿದ್ದಾರೆ ಎಂದು. ಅವರಿಗೆ ಅವರ ಧರ್ಮ‌ಕ್ಕಿಂತ, ಹೆತ್ತವರಿಗಿಂತ ಮುಖ್ಯ ಯಾವುದೂ ಅಲ್ಲ. ಅವರ ಸಂಸ್ಕಾರ‌ಕ್ಕಿಂತ ಹೆಚ್ಚು ಏನೂ ಇಲ್ಲ. ಆದರೆ ನಮ್ಮಲ್ಲಿ ಮಾತ್ರ ಇಂತಹ ಧರ್ಮ ಪ್ರೀತಿ, ಹೆತ್ತವರ ಪ್ರೀತಿ ಇಲ್ಲದಿರುವುದು ದುರಂತ. ಯೋಚಿಸಿ, ನಾವು ಧರ್ಮಾತೀತರು ಎಂದು ಬಿಂಬಿಸಿಕಚಳ್ಳುವ ಭರದಲ್ಲಿ ಸ್ವ ಧರ್ಮ, ಸ್ವ ಜನರಿಗೆ ದ್ರೋಹ ಬಗೆಯುವುದು ಮಾತ್ರವಲ್ಲ, ನಮ್ಮ ಬದುಕಿಗೆ ನಾವೇ ಕೊಳ್ಳಿ ಇಟ್ಟುಕೊಳ್ಳುತ್ತಿದ್ದೇವೆ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡಲ್ಲಿ ಉತ್ತಮ.

ಅನ್ಯ ಧರ್ಮದ ಹೆಣ್ಣು ಮಕ್ಕಳಿಗೆ ಅವರ ಧರ್ಮ ಹೆಮ್ಮೆ. ಅವರಿಗೆ ತಾವು ಧರ್ಮ ಬಿಟ್ಟು ಹೋದರೆ ಭವಿಷ್ಯ‌ದಲ್ಲಿ ಅಪಾಯ ನಿಶ್ಚಿತ ಎನ್ನುವುದರ ಅರಿವಿದೆ. ಆದರೆ ಅನ್ಯ ಮತದವರ ಜೊತೆ ಹೋಗಿ ಹತ್ಯೆಯಾದ, ಸಂಕೊಲೆಯೊಳಗೆ ಬಂಧಿಯಾದ ಹಲವು ಹಿಂದೂ ಹೆಣ್ಮಕ್ಕಳ ಕಥೆ ಕೇಳಿದ ಮೇಲೆಯೂ, ನಮಗೆ ಬುದ್ದಿ ಬಾರದಿರುವುದು, ಭವಿಷ್ಯ‌ದ ಬಗ್ಗೆ ಆಲೋಚಿಸದೆ ಇರುವುದು ದುರಂತವಲ್ಲದೆ ಬೇರೇನು.

ನಮ್ಮ ಕಳಕಳಿ ಇಷ್ಟೇ. ಹಿಂದೂ ಧರ್ಮದ ಯಾರನ್ನಾದರೂ ಆರಿಸಿಕೊಳ್ಳಿ. ಚೆನ್ನಾಗಿರಿ. ಆದರೆ ಅನ್ಯ ಮತದ ಯುವಕರ ಬಲೆಗೆ ಬಿದ್ದು ಬಾಳು ಕೊನೆಗೊಳಿಸದಿರಿ ಅಷ್ಟೇ.

Tags

Related Articles

Close