ಪ್ರಚಲಿತ

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

ಅಧ್ಯಾಯ 6: ಸುಳ್ಳೊಂದು ಕೇವಲ ವರ್ತಮಾನವನ್ನು ಸಂಭಾಳಿಸ ಬಹುದು, ಆದರೆ ಅದಕ್ಕೆ ಭವಿಷ್ಯವೆಂಬುದು ಇರುವುದಿಲ್ಲ.
ನಾಥೂರಾಮ ಗೋಡ್ಸೆ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದನು. ಇದು ಸತ್ಯ, ನಾಥುರಾಮನೇ ಕೋರ್ಟಿನಲ್ಲಿ ಒಪ್ಪಿಕೊಂಡ ಸತ್ಯ.ಆದರೆ ಪ್ರತಿ ವರ್ಷ ಜನವರಿ 30 ಸಮೀಪಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕರುಗಳು, ಆರೆಸ್ಸೆಸ್ ದ್ವೇಷಿ ಕಮ್ಯುನಿಸ್ಟರು, ಹಿಂದೂ ರಾಷ್ಟ್ರೀಯವಾದಿ ಸಂಘಟನೆಯ ಮೇಲೆ ಒಂದಿಲ್ಲೊಂದು ಆಪಾದನೆ, ಕುಹುಕದ ಪ್ರತಿಕ್ರಿಯೆಗಳನ್ನು ನೀಡಲಾರಂಭಿಸುತ್ತಾರೆ.
ಜನವರಿ 30, 1948ರಂದು ನಾಥೂರಾಮ ಗೋಡ್ಸೆ ಗಾಂಧೀಜಿಯ ಹತ್ಯೆಗೈದನು. ಗಾಂಧೀಜಿಯ ಸಾವಿನ ಕೆಲವು ತಿಂಗಳುಗಳ ಮೊದಲು ಭಾರತ ರಾಜಕೀಯ ಸ್ವಾತಂತ್ರ್ಯವನ್ನು ಪಡೆದುಕೊಂಡಿತ್ತು, ಸ್ವಾತಂತ್ರ್ಯ ಸಿಗುವ ಕೆಲವೇ ಗಂಟೆಗಳ ಮೊದಲು ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲಾಗಿತ್ತು.
ವಿಭಜನೆ ಆಗಿದ್ದಾದರೂ ಏಕೆ?
ಕಟ್ಟರ್ ಮುಸ್ಲಿಂ ಲೀಗ್ ತನ್ನ ಹರವನ್ನು ಬಿಡದೇ, ಕಾಂಗ್ರೆಸ್ ನ ದುರ್ಬಲ ನಾಯಕತ್ವದ ಮೇಲೆ ತನ್ನ ಪ್ರಭಾವ ಬೀರಿ, ಈ ದೇಶವನ್ನು ದುಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂಬ ನಿರ್ಧಾರಕ್ಕೆ ಅದಾಗಲೇ ಬಂದಿದ್ದ ಬ್ರಿಟಿಷರ ಸಹಾಯದಿಂದ ಈ ದೇಶದ ವಿಭಜನೆಯ ದುಷ್ಕೃತ್ಯಕ್ಕೆ ಕೈಹಾಕಿ. ಅದರ ಹಿಂದೆ  ಇದ್ದದ್ದು ಮಾತ್ರ ದಾರೂಲ್ ಇಸ್ಲಾಂ ಎಂಬ ಮುಸ್ಲಿಮರ ನಂಬಿಕೆ.
ಅರ್ನಾಲ್ಡ್ ಟಾಯ್ನ್ಬೀ, ಎಂಬ ಬ್ರಿಟಿಷ್ ಇತಿಹಾಸಕಾರ ಹೀಗೆಂದು ಬರೆಯುತ್ತಾನೆ,
“ಪಾಕಿಸ್ತಾನ ಎಂದರೆ ಏನು? ಇಡೀ ಭರತ ಖಂಡವನ್ನು ಅಧೀನಕ್ಕೆ ತೆಗೆದುಕೊಂಡು ಆಳಬೇಕೆಂಬ, ಮುಸ್ಲಿಮರ 1200 ವರ್ಷಗಳ ಕನಸು ನನಸು ಮಾಡುವಲ್ಲಿ ಸಿಕ್ಕ ಮೊದಲ ಜಯವೇ ಪಾಕಿಸ್ತಾನ”
ಭಾರತದ ವಿಭಜನೆಯ ನೋವು ಮಾಸುವ ಮೊದಲೇ, ಬರ್ಬರವಾದ ಮಾರಣಹೋಮಕ್ಕೆ ಪಾಕಿಸ್ತಾನ ನಾಂದಿ ಇಟ್ಟಿತು. ಕಾಂಗ್ರೆಸ್ ಪಕ್ಷಕ್ಕೆ, ದೇಶದ ಪ್ರಜೆಗಳ ವಿನಿಮಯ ಬೇಕಾಗಿರಲಿಲ್ಲ, ಆದರೂ ಅದು ನಡೆದು ಹೋಯಿತು. ಹಿಂದೂಗಳು ಭಾರತವನ್ನು ಸೇರಬೇಕೆಂಬ ಹಂಬಲ ತೋರಿದಾಗ ಅವರನ್ನು ಕ್ರೂರಾತಿಕ್ರೂರ ರೀತಿಯಲ್ಲಿ ಕೊಲ್ಲಲಾಯಿತು, ಅವರ ಸಂಪತ್ತನ್ನು ದೋಚಲಾಯಿತು, ಹೆಣ್ಣು ಮಕ್ಕಳ ಪಾಡಂತೂ ಕೇಳುವುದೇ ಬೇಡ, ಅವರಿಗೆ ಸಾವು ಸುಲಭವಾಗಿ ಬರಲಿಲ್ಲ!!
ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ವಲಸೆ ನಡೆಯುತ್ತಿದ್ದಾಗ, ರಾಜಧಾನಿಯಲ್ಲಿ ಬೇರೆಯದೇ ರೀತಿಯ ಸಮಸ್ಯೆ ತಲೆದೋರಿತ್ತು.
ದೆಹಲಿಯ ನಾಲ್ಕರಲ್ಲಿ ಒಂದು ಎಂಬಂತೆ ಜನ ಪಾಕಿಸ್ತಾನದಿಂದ ಬಂದ ಹಿಂದೂ ಹಾಗೂ ಸಿಖ್ ನಿರಾಶ್ರಿತರ  ಲೆಕ್ಕವಿತ್ತು. ಕಾಂಗ್ರೆಸ್ ನಾಯಕತ್ವದ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದ್ದು ಆಗಲೇ ಮೊದಲು. ಇಂತಹ ಕಠಿಣ ಸಮಯದಲ್ಲಿ ನೂರಾರು ಸಂಸ್ಥೆಗಳು ನಿರಾಶ್ರಿತರ ನರವಿಗೆ ನಿಂತರು.
ಗುರೂಜಿ ಗೊಳ್ವಾಲ್ಕರ್ ಅಣತಿಯಂತೆ ಆರೆಸ್ಸೆಸ್. ನ ಸ್ವಯಂಸೇವಕರು ಪಾಕಿಸ್ತಾನದಿಂದ ಪ್ರತಿಯೊಬ್ಬ ಹಿಂದೂ ಸುರಕ್ಷಿತವಾಗಿ ಭಾರತದ ಒಳ ಬರದೆ ವಿರಮಿಸುವುದಿಲ್ಲ ಎಂಬ ಪಣತೊಟ್ಟು ಕಾರ್ಯಾಚರಣೆಗೆ ಇಳಿದರು. ದೇಶದ ಪ್ರಜೆಗಳ ಸುರಕ್ಷತೆಗೆ ಅಂದು ಸಾವಿರಾರು ಸ್ವಯಂಸೇವಕರು ಪ್ರಾಣ ತೆರಬೇಕಾಯಿತು. ಈ ಘಟನೆಯ ಪೂರ್ಣ ಮಾಹಿತಿ “ಜ್ಯೋತಿ ಜಲಾ ನಿಜ ಪ್ರಾಣ್ ಕೀ” ಎಂಬ ಪುಸ್ತಕದಲ್ಲಿ ಲಭ್ಯವಿದೆ.
ಗಾಂಧಿ ಹತ್ಯೆ ಮತ್ತು ಅದರ ಪರಿಣಾಮ:
ಭಾರತದ ಇಂತಹ ದುಸ್ಥಿತಿಗೆ ಮಹಾತ್ಮ ಗಾಂಧಿಯೇ ನೇರ ಹೊಣೆ ಎಂದು ಭಾವಿಸಿದ ನಾಥೂರಾಮ್, ಜನವರಿ 30ರ ದುರ್ದಿನ, ಗಾಂಧೀಜಿ ತಮ್ಮ ಸಂಜೆಯ ಪ್ರಾರ್ಥನೆ ಕಳೆದು ಹೊರನಡೆಯುವಾಗ ಅವರೆಡೆಗೆ ಗುಂಡಿಕ್ಕಿದ. ತಾನೇ ಪೊಲೀಸ್ ಎಂದು ಕೂಗಿ ಕರೆದು ಶರಣಾಗತನಾದ.
“ಮೇ ಇಟ್ ಪ್ಲೀಸ್ ಯುವರ್ ಹಾನರ್” ಎಂಬ ತನ್ನ ಪುಸ್ತಕದಲ್ಲಿ ಕೋರ್ಟಿನಲ್ಲಿ ತನ್ನ ವಾದವನ್ನು ತಾನೇ ಮಂಡಿಸಿದ ಕುರಿತಾಗಿ ಪ್ರತಿಯೊಂದು ವಿಷಯವನ್ನು ನಾಥೂರಾಮ್ ಉಲ್ಲೇಖಿಸುತ್ತಾ ಹೋಗುತ್ತಾನೆ.
ಇವೆಲ್ಲಾ ಸಂಗತಿ, ಎಲ್ಲರಿಗೂ ತಿಳಿದಿರುವ ವಿಚಾರ, ಕೆಲವೊಂದು ಪ್ರಶ್ನೆಗಳನ್ನು ಇತಿಹಾಸದ ಭೂಗರ್ಭದಲ್ಲಿ ಹುದುಗಿಸಿ ಇಡಲಾಗಿದೆ. ಗಾಂಧೀಜಿಗೆ ಗುಂಡು ತಗುಲಿದ ಕೂಡಲೇ ಅವರನ್ನು ಬಿರ್ಲಾ ಹೌಸ್ ನ ಒಳಗೆ ಎತ್ತಿಕೊಂಡು ಹೋದ ಉದ್ದೇಶವಾದರೂ ಏನು? ಆಸ್ಪತ್ರೆಗೆ ಕೊಂಡೊಯ್ಯಬೇಕು ಎಂಬ ಆಲೋಚನೆ ಯಾರ ಮನಸ್ಸಿನಲ್ಲೂ ಮೂಡದ್ದಾದರೂ ಹೇಗೆ?
ಆರೆಸ್ಸೆಸ್ ನ ಬಗ್ಗೆ ಕಾಂಗ್ರೆಸ್ ಪಕ್ಷದ ಅಪಪ್ರಚಾರ:
ಸರಿ, ನಾಥೂರಾಮ ಗೋಡ್ಸೆ ಗಾಂಧಿ ಹತ್ಯೆಯ ಹಲವು ವರ್ಷಗಳ ಮೊದಲು ರಾಷ್ಟ್ರೀಯ ಸ್ವಯಂಸೇವಕರು ಸಂಘದಲ್ಲಿದ್ದ. ಆತ ಸಂಘವನ್ನು ತ್ಯಜಿಸಿ ಹೋದದ್ದು ಸಹ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ. ಎಂದೋ ಆತನ ಒಡನಾಟ ಆರೆಸ್ಸೆಸ್ ಒಂದಿಗೆ ಇತ್ತು ಎಂಬ ಕಾರಣಕ್ಕೆ, ಸಂಘವನ್ನು ಗಾಂಧಿ ಹತ್ಯೆಯ ರೂವಾರಿಗಳು ಎಂಬ ಅಪಪ್ರಚಾರಕ್ಕೆ ಗುರಿ ಮಾಡುವುದಾದರೆ,
ಸಂಘ ಸೇರುವ ಮೊದಲು ಅದೇ ನಾಥೂರಾಮ್ ಗೋಡ್ಸೆ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದ ಮಾಹಿತಿಯಿದೆ, ಕಾಂಗ್ರೆಸ್  ತಪ್ಪಿತಸ್ಥರ ಸ್ಥಾನದಲ್ಲಿ ಎಂದಿಗೂ ನಿಲ್ಲಲಿಲ್ಲ ಏಕೆ?
ಆರೆಸ್ಸೆಸ್ ವಿರುದ್ಧವಾಗಿ ಒಂದೇ ಒಂದು ಆಪಾದನೆ ಸಾಬೀತು ಆಗದೇ ಹೋದರು, ತಮ್ಮ ರಾಜಕೀಯ ದುರುದ್ದೇಶ ಈಡೇರಿಸಿಕೊಳ್ಳಲು ನೆಹರೂ ಸಂಘವನ್ನು ಪ್ರಥಮ ಬಾರಿಗೆ ನಿಷೇಧಿಸಿದರು. ಪಟೇಲ್ ಹಾಗೂ ನೆಹರೂ ನಡುವಿನ ವಿಚಾರ ವಿನಿಮಯದಲ್ಲಿ ಒಂದು ಮಾತಂತೂ ಸ್ಪಷ್ಟ, ಪಟೇಲರ ಸಲಹೆಯ ವಿರುದ್ಧವಾಗಿ ನೆಹರೂ ಕೈಗೊಂಡ ಕ್ರಮ ಅದಾಗಿತ್ತು.
ಗಾಂಧಿ ಹತ್ಯೆಯಲ್ಲಿ ಆರೆಸ್ಸೆಸ್ ನಂಟು ಏನೆಂಬುದನ್ನು ವಿವರಿಸಿ ಎಂದು ಪ್ರಧಾನ ಮಂತ್ರಿಗಳು ಬರೆದ ಪತ್ರಕ್ಕೆ, ಪಟೇಲರು ಹೀಗೆ ಉತ್ತರಿಸುತ್ತಾರೆ,
“ಪೂಜ್ಯ ಗಾಂಧೀಜಿಯವರ ಹತ್ಯೆಯ ತನಿಖೆಯನ್ನು ನಾನು ದಿನಂಪ್ರತಿ ಗಮನಿಸುತ್ತಿದ್ದೇನೆ. ಕೊಳೆಯ ಆಪಾಡಿತರು ಕೂಡ ತಮ್ಮ ಹೇಳಿಕೆಗಳನ್ನು ಕೋರ್ಟಿನಲ್ಲಿ ನೀಡಿರುತ್ತಾರೆ. ಅವರ ಹೇಳಿಕೆ ಹಾಗೂ ತನಿಖೆಯಲ್ಲಿ ಒದಗಿ ಬಂದ ಸಾಕ್ಷಿಗಳ ಆಧಾರದ ಮೇಲೆ ಆರೆಸ್ಸೆಸ್ ಯಾವುದೇ ರೀತಿಯಲ್ಲಿ ಈ ಹತ್ಯೆಯ ಹಿಂದೆ ಇಲ್ಲ ಎಂಬುದು ಸಾಬೀತಾಗುತ್ತದೆ.”
ಹೆಚ್. ವಿ. ಆರ್. ಅಯ್ಯಂಗಾರ್ ಅಂದಿನ ಗೃಹ ಕಾರ್ಯದರ್ಶಿಗಳು, ಹಿಂಗೊಂದು ಆದೇಶವನ್ನು ಹೊರಡಿಸುತ್ತಾರೆ. ಆರೆಸ್ಸೆಸ್ ಒಂದಿಗೆ ಸಂಬಂಧ ಇರುವ ಯಾರೇ ಆಗಿರಲಿ ಅವರನ್ನು ತತ್ಕ್ಷಣ ಸೇವೆಯಿಂದ ವಜಾಗೊಳಿಸಿ.. ಯಾರಾದರೂ ಆರೆಸ್ಸೆಸ್ ಸ್ವಯಂಸೇವಕರ ಪಥಸಂಚಲನವನ್ನು ನೋಡುತ್ತಿದ್ದರೆ ಅವರನ್ನು ಬಂಧಿಸಿ.ಇದರಿಂದಲೇ ಅರ್ಥವಾಗುವುದಿಲ್ಲವೇ ಆರೆಸ್ಸೆಸ್ ನ ನಿಷೇಧದ ಹಿಂದೆ ಇದ್ದದ್ದು ನೆಹರುವಿನ ದುರುದ್ದೇಶ ಮಾತ್ರ. ಗುರೂಜಿಯವರ ವರ್ಚಸ್ಸು, ಅದಾಗಲೇ ನೆಹರುವನ್ನು ಕಾಡತೊಡಗಿತ್ತು.  ನೆಹರೂಗೆ ಗುರೂಜಿ ಒಬ್ಬ ಎದುರಾಳಿಯ ಹಾಗೆ ಕಂಡದ್ದು ಸುಳ್ಳಲ್ಲ.ಗುರೂಜಿಯ ಬಗ್ಗೆ ಬಿಬಿಸಿ ರೇಡಿಯೋ ಹೀಗೊಂದು ವರದಿ ಪ್ರಸಾರ ಮಾಡಿತ್ತು, ಗೊಳ್ವಾಲ್ಕರ್ ಭಾರತದ ರಾಜಕೀಯದಲ್ಲಿ ಉದಯಿಸುತ್ತಿರುವ ಹೊಸ ನಕ್ಷತ್ರ. ಅವರನ್ನು ಬಿಟ್ಟರೆ ಇಡೀ ದೇಶದಲ್ಲಿ ಜನ ಸಮೂಹವನ್ನು ಆಕರ್ಷಿಸುವ ಶಕ್ತಿ ಇರುವುದು ನೆಹರೂಗೆ ಮಾತ್ರ.
ಗಾಂಧಿ ಹತ್ಯೆಯ ಕೇವಲ ಒಂದು ದಿನ ಮೊದಲು, ನೆಹರೂ ಆರೆಸ್ಸೆಸ್ ಅನ್ನು ಸಂಪೂರ್ಣವಾಗಿ ಹೊಸಕಿ ಹಾಕಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು ಎಂಬ ಮಾಹಿತಿ ಇದೆ.
ಆರೆಸ್ಸೆಸ್ ಮೇಲಿನ ನಿಷೇಧವನ್ನು ಬೇಷರತ್ತಾಗಿ ಹಿಂಪಡೆಯಲಾಗಿತ್ತು:
ಕಾಂಗ್ರೆಸ್ ಹೇಳುವ ಮತ್ತೊಂದು ತಥಾಕತಿತ ಸುಳ್ಳು ಎಂದರೆ, ಗುರೂಜಿಯ ಬೇಡಿಕೆಯ ಹಿನ್ನಲೆಯಲ್ಲಿ, ಅವರಿಂದ ಮುಂದೆಂದೂ ಸಂಘಟನೆಯ ಕಾರ್ಯದಲ್ಲಿ ತೊಡಗುವುದಿಲ್ಲ ಎಂಬ ಮುಚ್ಚಳಿಕೆ ಬರೆಸಿಕೊಂಡು ನಿಷೇಧವನ್ನು ಹಿಂಪಡೆಯಲಾಯಿತು.
ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ,
ಸೆಪ್ಟೆಂಬರ್ 14, 1949 ರಂದು ಸಂಸತ್ತಿನ ಅಧಿವೇಶನದಲ್ಲಿ ಮೊರಾರ್ಜಿ ದೇಸಾಯಿಯವರು, ಆರೆಸ್ಸೆಸ್ ನ ಮೇಲಿನ ನಿಷೇಧವನ್ನು ಮುಂದುವರಿಸ ಬೇಕಾದ ಯಾವುದೇ ಕಾರಣ ಇಲ್ಲವಾದದ್ದರಿಂದ, ಬೇಷರತ್ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಘೋಷಿಸುತ್ತಾರೆ.
1966 ರಾಲ್ಲಿ, ಕಪೂರ್ ಕಮಿಷನ್ ಕೈಗೊಂಡ ತನಿಖೆಯಲ್ಲಿ, ಗಾಂಧಿ ಹತ್ಯೆಯ ಸಮಯದಲ್ಲಿ ಗೃಹ ಕಾರ್ಯದರ್ಶಿಗಳಾಗಿ ದ್ದ ಆರ್. ಎನ್. ಬ್ಯಾನರ್ಜಿ ಅವರನ್ನು ಸಾಕ್ಷಿ ನೀಡುವಂತೆ ಆದೇಶ ನೀಡಲಾಯಿತು. ಬ್ಯಾನರ್ಜಿ ನೀಡಿದ ಹೇಳಿಕೆ ಆಧಾರದ ಮೇಲೆ ಸಂಘ ಯಾವುದೇ ರೀತಿಯಲ್ಲಿ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂದು ಕಮಿಷನ್ ತನ್ನ ವರದಿ ನೀಡಿತು.
ಒಂದು ರಹಸ್ಯ ದಾಖಲೆ (ನಂ. ಎಫ್. 74(1)- ಪಿ/48) ಪ್ರಕಾರ, ಪ್ರತಿಯೊಬ್ಬ ಸರ್ಕಾರಿ ನೌಕರರನ್ನು ಆರೆಸ್ಸೆಸ್ ಜೊತೆಗೆ ನಂಟಿನ ಸಂಶಯದ ಮೇಲೆ ಕೆಲಸದಿಂದ ಅಮಾನತ್ತು ಮಾಡಲಾಗಿತ್ತು. ಎಲ್ಲಾ ಸಂಘದ ಸದಸ್ಯರ ಮೇಲೆ ಗೂಢಚಾರಿಕೆ ನಡೆಸಲಾಗಿತ್ತು.ಇದೊಂದು ರಾಜಕೀಯ ಪ್ರೇರಿತ ಕ್ರಮವೆಂದು ಅನ್ನಿಸುವುದಿಲ್ಲವೇ?!
ಕಗ್ಗಂಟನ್ನು ಬಿಡಿಸಿ, ವಿಷಯವನ್ನು ಸರಳವಾಗಿಸಿ ನೋಡೋಣ:
ಪಟೇಲರ ಎದುರು ಕುಬ್ಜರಾಗಿದ್ದ ನೆಹರೂ, ಗಾಂಧೀಜಿಯ ಸಹಾಯದಿಂದ ಪ್ರಧಾನ ಪದವಿಗೇರಿದರು. ಗಾಂಧೀಜಿ ನೆಹರೂ ಪಟೇಲರ ಅಧೀನರಾಗಿ ಕೆಲಸ ಮಾಡಲಾರರು ಹಾಗಾಗಿ ಅವರನ್ನೇ ಪ್ರಧಾನಿ ಪಟ್ಟಕ್ಕೆ ಏರಿಸಿದರು. ನೆಹರೂ ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಗಾಂಧೀಜಿ ಸಾರ್ವಜನಿಕವಾಗಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ನೆಹರೂ ಕಂಡ ಅಧಿಕಾರದ ಮಹತ್ ಕನಸ್ಸೊಂದು  ಮುರಿದು ಬೀಳುವ ಸಂಭಾವ್ಯ ಎದುರಾಯಿತು.
ನೇತಾಜಿ ಕಾಣೆಯಾಗಿದ್ದಾರೆ, ಗಾಂಧೀಜಿ ಹತರಾದರು, ಸಾವರ್ಕರ್ ಎಂಬ ದೇಶಭಕ್ತ ಇನ್ನಿಲ್ಲದಂತೆ ಆರೋಪ ಎದುರಿಸಬೇಕಾಯಿತು, ಗುರೂಜಿ ಗೊಳ್ವಾಲ್ಕರ್ ಮೇಲೂ ನಿಷೇಧ ಹೇರಿ ಆಗಿತ್ತು, ಇನ್ನೂ ನೆಹರುವನ್ನೂ ಕಟ್ಟಿ ಹಿಡಿಯುವವರು ಯಾರೂ ಇಲ್ಲದಂತಾಯಿತು.
1953 ರಲ್ಲಿ ಪ್ರಭಾವಿ ನಾಯಕರಾಗಿ ಹೊಮ್ಮಿದ ಶ್ಯಾಮ ಪ್ರಸಾದ್ ಮುಖರ್ಜಿ ಕೂಡ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಘಟಿಸಿತು. ಒಂದು ದೇಶದ ಇತಿಹಾಸದಲ್ಲಿ ಇಷ್ಟು ಆಕಸ್ಮಿಕ ಘಟನೆಗಳು ನಡೆದ ಇತಿಹಾಸವೇ ಇಲ್ಲ.
ನೆಹರೂ 17 ವರ್ಷಗಳ ಕಾಲ ಪ್ರಧಾನಿ ಪಟ್ಟ ಬಿಡಬೇಕಾದ ಪರಿಸ್ಥಿತಿ ಬರಲೇ ಇಲ್ಲ. ಮಹಾತ್ಮರ ಜೊತೆಗೆ ಅವರು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅನ್ನು ವಿಲೀನಗೊಳಿಸುವ ಅವರ ಕನಸು ಕೊನೆಗೊಂಡಿತು. ನೆಹರೂ ಮತ್ತು ಅವರ ವಂಶ ಗಾಂಧೀಜಿಯ ಹೆಸರಿನಲ್ಲಿ ಮೆರೆದರು.
ನೆಹರೂ ಅಷ್ಟು ತರಾತುರಿಯಲ್ಲಿ ಗಾಂಧಿ ಹತ್ಯೆಯ ಹಿಂದಿರುವ ಸಂಘಟನೆ ಯಾವುದೆಂದು ಕಂಡು ಹಿಡಿಯುವ ಪ್ರಯತ್ನ ಮಾಡಿದ್ದಾದರೂ ಏತಕ್ಕಾಗಿ? ಗೋಡ್ಸೆ ತಾನೊಬ್ಬನೇ ತನ್ನ ಕೃತ್ಯಕ್ಕೆ  ಜವಾಬ್ದಾರ ಎಂದು ಹೇಳಿದ ಮತ್ತೆಯೂ, ನೆಹರೂ ಸಾವರ್ಕರ್ ಹಾಗೂ ಗುರೂಜಿ ಯವರನ್ನು ಆಪಾದನೆಗೆ ಗುರಿ ಮಾಡಿದರು.
ರಾಜಕೀಯ ಸಿದ್ಧಾಂತದ ವೈರುಧ್ಯ ಇದ್ದಲ್ಲಿ, ಭಿನ್ನಾಭಿಪ್ರಾಯ ಸಹಜ, ಸಹಜವಲ್ಲದ್ದು ದ್ವೇಷದ ರಾಜಕಾರಣ.
ಕಾಂಗ್ರೆಸ್ ತನ್ನ ಆಳ್ವಿಕೆಯಲ್ಲಿ ಮಾಡಿದ್ದೂ ಇದನ್ನೇ.. ಎಷ್ಟಾದರೂ ನೆಹರೂ ಅವರಿಗೆ ಅತ್ಯಂತ ಪ್ರಿಯ ಆದರ್ಶವಲ್ಲವೇ ?

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

-Dr.Sindhu Prashanth

Tags

Related Articles

FOR DAILY ALERTS
Close