ಅಂಕಣಪ್ರಚಲಿತ

ವಿಶ್ವದ ಹಲವು ಬಲಾಡ್ಯ ರಾಷ್ಟ್ರಗಳನ್ನೇ ಅಲುಗಾಡಿಸಿದ ಕೊರೊನಾ ಚೀನಾದ ನೆರೆ ರಾಷ್ಟ್ರಗಳಾದ ಭಾರತ-ರಷ್ಯಾವನ್ನು ಅಲುಗಾಡಿಸಿಲ್ಲ ಯಾಕೆ?

ಡೀ ಜಗತ್ತನ್ನೇ ಕೊರೊನಾದಿಂತ ತತ್ತರಿಸಿ ಸ್ತಬ್ದವಾಗಿದೆ. ಇಡೀ ಜಗತ್ತಲ್ಲಿ ಕೊರೊನಾ ಬಲಿಯಾದವರ ಸಂಖ್ಯೆ 6000ಕ್ಕೂ ಅಧಿಕ. ಕೊರೊನಾಗೆ ತುತ್ತಾದವರು 16 ಲಕ್ಷ. ಪ್ರತಿದಿನ ಸಾಯುವವರ ಸಂಖ್ಯೆ 300. ಪ್ರತಿ ದಿನ ಕೊರೊನಾಗೆ ತುತ್ತಾಗುವವರು 1000. ಕೊರೊನಾದಿಂದ ಚೀನಾ ಅಕ್ಷರಶಃ ತತ್ತರಿಸಿಹೋಗಿದ್ದರೆ ಆ ಬಳಿಕ ಇರಾನ್, ಇಟಲಿ ಬಲಿಯಾಗುತ್ತಿದೆ. ವಿಶ್ವದ ದೊಡ್ಡಣ್ಣ ಎಂದು ಬೀಗುವ ಅಮೆರಿಕವೂ ಕೊರೊನಾವನ್ನು ಎದುರಿಸಲಾಗದೆ ಬಸವಳಿದಿದೆ.
ಇನ್ನು ಜಗತ್ತಿನ ಅತ್ಯಾಧುನಿಕ ರಾಷ್ಟ್ರ ಎಂದು ಬೀಗುವ ಇಟಲಿಯಲ್ಲಿ 25 ಸಾವಿರ ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಬಲಿಷ್ಠ ರಾಷ್ಟ್ರ ಸ್ಪೈನ್‍ನಲ್ಲಿ 7700 ಮಂದಿಗೆ ಕೊರೊನಾ ಭಾದಿಸಿದೆ. ಇಡೀ ಜಗತ್ತಿನ 141 ರಾಷ್ಟ್ರಗಳು ಕೊರೊನಾಗೆ ತುತ್ತಾಗಿದೆ. ಆದರೆ ಚೀನಾದ ನೆರೆ ರಾಷ್ಟ್ರ ಭಾರತದಲ್ಲಿ ಕೊರೊನಾಗೆ ತುತ್ತಾದವರ ಸಂಖ್ಯೆ 110, ರಷ್ಯಾದಲ್ಲಿ ಇದುವರೆಗೆ 63 ಪ್ರಕರಣಗಳು ಕಂಡುಬಂದಿದೆ. ಕೊರೊನಾಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯಲು ವಿಶ್ವದ ಯಾವೊಂದು ರಾಷ್ಟ್ರಗಳಿಗೂ ಸಾಧ್ಯವಾಗಿಲ್ಲ.

ಚೀನಾದ ನೆರೆ ರಾಷ್ಟ್ರಗಳಾದ ರಷ್ಯ ಹಾಗೂ ಭಾರತದಲ್ಲಿ ಬೇರೆ ರಾಷ್ಟ್ರಗಳನ್ನು ಹೋಲಿಸಿದರೆ ಕೊರೊನದಿಂದ ಅಷ್ಟೊಂದು ದೊಡ್ಡ ಪರಿಣಾಮ ಉಂಡು ಮಾಡಿಲ್ಲ. ಇದೆಲ್ಲಾ ಇಡೀ ವಿಶ್ವವನ್ನೇ ಚಕಿತಗೊಳಿಸಿದೆ. ಇದಕ್ಕೆ ಭಾರತದ ಯಜ್ಞ, ಯಾಗ, ಹೋಮ, ಹವನ, ಅಗ್ನಿಹೋತ್ರದಂಥಾ ಭಾರತದ ಪ್ರಾಚೀನ ವೈದಿಕ ಕ್ರಮಗಳೇ ಕಾರಣವಿರಬಹುದೆಂದು ಚಿಂತನೆ ನಡೆಯುತ್ತಿದೆ.

ಗಾಳಿಯನ್ನು ಶುದ್ಧಗೊಳಿಸುವುದು ಹೇಗೆ?
ಪಂಚಭೂತಗಳಾದ ಪೃಥ್ವಿ, ನೀರು, ಬೆಂಕಿ, ವಾಯು ಹಾಗೂ ಆಕಾಶ ಇವುಗಳನ್ನು ಶುದ್ಧಗೊಳಿಸುವುದು ಹೇಗೆ ಎಂಬ ಬಗ್ಗೆ ಸಂಶೋಧನೆಗಿಳಿದ ರಷ್ಯಾ ಗಾಳಿಯನ್ನು ಶುದ್ಧಗೊಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿತು. ಭೂಮಿ, ನೀರನ್ನು ಸ್ವಚ್ಛಗೊಳಿಸಲು ಸಾಧ್ಯವಿದೆ. ಆದರೆ ಗಾಳಿಯನ್ನು ಸ್ವಚ್ಛಗೊಳಿಸುವುದು ಹೇಗೆ? ಈ ಪ್ರಶ್ನೆ ಅವರನ್ನು ಎಷ್ಟು ಚಿಂತೆಗೀಡು ಮಾಡಿತೆಂದರೆ ಅದಕ್ಕೆ ಅವರಿಗೆ ಉತ್ತರ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಈ ವೇಳೆ ಅವರ ಮನಸ್ಸಲ್ಲಿ ಮೂಡಿದ್ದು ಭಾರತ.

ಭಾರತದಲ್ಲಿ ಅನೇಕ ವರ್ಷಗಳಿಂದ ಯಜ್ಞ, ಯಾಗ, ಹೋಮ, ಹವನ, ಅಗ್ನಿಹೋತ್ರವನ್ನು ನಡೆಸಿಕೊಂಡು ಬರುತ್ತಿದೆ. ಇವುಗಳಿಂದ ಈ ಭೂಮಿಯ ಪಂಚಭೂತಗಳೂ ಸೇರಿ ಮುಖ್ಯವಾಗಿ ಗಾಳಿ ಶುದ್ಧಗೊಳ್ಳುವುದನ್ನು ಅರ್ಥ ಮಾಡಿಕೊಂಡರು.

ಅಗ್ನಿಹೋತ್ರ ಎಂದರೆ ಒಂದು ಹೋಮದ ಹೆಸರು. ಭಾರತದ ಯಜ್ಞ-ಯಾಗಗಳು ಸನಾತನ ಧರ್ಮದ ಪೊಳ್ಳುಗಳು ಎಂದು ಬುದ್ಧಿಜೀವಿಗಳು ಅಪ ಪ್ರಚಾರ ನಡೆಸಲಾರಂಭಿಸಿದ್ದರು. ಭಾರತದಲ್ಲೂ ಇದರ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳಲಾರಂಭಿಸಿದರು. ಆದರೆ 1984ರ ಡಿಸೆಂಬರ್‍ನಲ್ಲಿ ಭೋಪಾಲ್‍ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‍ನಿಂದ ಹೊರಬಂದ ಮಿಥೈಲ್ ಐಸೋಸೈನಯಡ್ ವಿಷಾನಿಲ ಸಾವಿರಾರು ಮಂದಿಯನ್ನು ಕೊಂದು ಹಾಕಿತು. ಹಲವರು ಅಂಗವಿಕಲರಾದರು.
ವಿಚಿತ್ರವೆಂದರೆ ಕಾರ್ಖಾನೆಯ ಕೆಲವು ಕಿ.ಮೀ ದೂರದಲ್ಲಿದ್ದ ಎರಡು ಮನೆಗಳ ನಿವಾಸಿಗಳಿಗೆ ಏನೂ ಹಾನಿಯಾಗಿರಲಿಲ್ಲ. ಇದಕ್ಕೆ ಕಾರಣ ಆ ಮನೆಗಳಲ್ಲಿ ದಿನನಿತ್ಯ ನಡೆಯುತ್ತಿದ್ದ ಅಗ್ನಿಹೋತ್ರವೇ ಕಾರಣ ಎಂದು ಸಾಬೀತಾಯಿತು.

ಈ ಬಗ್ಗೆ ಆಳವಾದ ಸಂಶೋಧನೆಗಿಳಿದ ರಷ್ಯಾ ಹೋಮ ಹವನದ ಅಗ್ನಿಯ ಮೂಲಕ ವಾತಾವರಣ ಶುದ್ಧೀಕರಣಗೊಳ್ಳುತ್ತದೆ ಎಂದು ಅರ್ಥ ಮಾಡಿಕೊಂಡಿತು.
ಹೋಮ ಹವನ ಅಗ್ನಿಹೋತ್ರಗಳಲ್ಲಿ ಮುಖ್ಯವಾಗಿ ಹಸುವಿನ ಬೆರಣಿ, ತುಪ್ಪ, ಅಕ್ಕಿ ಮುಂತಾದ ಗೋಮೂಲದ ಸಾತ್ವಿಕ ವಸ್ತುಗಳನ್ನು ಬಳಸಲಾಗುತ್ತಿದೆ. ತಾಮ್ರ ಹಾಗೂ ಚಿನ್ನದಿಂದ ಮಾಡಿದ ಕುಂಡಗಳಿರುತ್ತದೆ. ಇದರಲ್ಲಿ ಅಗ್ನಿ ಪ್ರಜ್ವಲಿಸಿ ಕೆಲವು ಮಂತ್ರಗಳನ್ನು ಪಠನ ಮಾಡಲಾಗುತ್ತದೆ.

ಕೊರೊನಾದ ಬಳಿಕ ಅಗ್ನಿಹೋತ್ರ ಹೋಮ-ಹವನಕ್ಕೆ ಮತ್ತೆ ಬೇಡಿಕೆ
ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಣೆಯಾಗುತ್ತಿದ್ದಂತೆ ಅಗ್ನಿಹೋತ್ರ-ಹೋಮ ಹವನಕ್ಕೆ ಮತ್ತೆ ಬೇಡಿಕೆ ಬಂದಿದೆ. ಇದರಿಂದ ಹುಟ್ಟುವ ಧೂಮ, ಅಗ್ನಿ, ಪರಿಮಳ, ತರಂಗ, ಸುತ್ತಲಿನ ವಾತಾವರಣ ಶುದ್ಧಗೊಳಿಸುತ್ತದೆ.
ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಿದ ರಷ್ಯಾ ಅನೇಕ ಪ್ರಬಂಧಗಳನ್ನು ಮಂಡಿಸಿ, ಹೋಮಗಳನ್ನು ನಡೆಸಲಾರಂಭಿಸಿದ್ದಾರೆ. ಇವರೊಂದಿಗೆ ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳು ಸಾಮೂಹಿಕ ಅಗ್ನಿಹೋತ್ರ ನಡೆಸುತ್ತಿದೆ. ಇದರ ಭಸ್ಮವನ್ನು ಔಷಧಿಯಾಗಿ ಬಳಸುತ್ತಿದ್ದಾರೆ.
ಮಾನಸಿಕ ಹಾಗೂ ದೈಹಿಕ ರೋಗಗಳಿಗೆ ಮದ್ದಾಗಿ ಸಾತ್ವಿಕ ಪರಮಾನಂದ ನೀಡುವ ಅಗ್ನಿ ಹೋತ್ರ ಪರಿಸರದ ಸೂಕ್ಷ್ಮ ವಿಷಕಾರಿ ವೈರಾಣುಗಳನ್ನು ನಿಧಾನವಾಗಿ ನಾಶ ಮಾಡುತ್ತದೆ. ಪ್ರಕೃತಿಯ ಸಮತೋಲನವನ್ನು ಕಾಪಾಡಿ, ಕಾಲಕೆ ತಕ್ಕಂತೆ ಮಳೆಯಾಗುವಂತೆ ನೋಡುತ್ತದೆ ಎಂದು ರಷ್ಯಾ ತನ್ನ ಅಧ್ಯಯನದಲ್ಲಿ ಹೇಳಿದೆ.

ಕೊರೊನಾ ಬಳಿಕ ಅಗ್ನಿಹೋತ್ರಕ್ಕೆ ಮತ್ತೆ ಬೇಡಿಕೆ

ಇಡೀ ಜಗತ್ತನ್ನು ಕೊರೊನಾ ಮಹಾಮಾರಿ ವ್ಯಾಪಿಸುತ್ತಿದ್ದಂತೆ ಅಗ್ನಿಹೋತ್ರಾದಿ ಹೋಮ ಹವನಗಳಿಗೆ ಭಾರೀ ಬೇಡಿಕೆ ಬಂದಿದೆ. ರಷ್ಯನ್ನರು ಹೋಮ ತೆರಪಿ ಎಂದೇ ಹಲವು ರೋಗಗಳಿಗೆ ಚಿಕಿತ್ಸೆ ಕಂಡುಹಿಡಿದಿದ್ದಾರೆ.
ಹೋಮ ತೆರಪಿಯಲ್ಲಿ ಹೀಲಿಂಗ್ ನಡೆಸಿ ಮನೋರೋಗವನ್ನೂ ಶಮನಗೊಳಿಸಲಾಗುತ್ತಿದೆ. ಅಗ್ನಿಹೋತ್ರದ ಭಸ್ಮವನ್ನು ಗೊಬ್ಬರವಾಗಿ ಬಳಸುತ್ತಿದೆ. ಕಾಡು-ಗುಡ್ಡಗಳ ಮಧ್ಯೆ ಹೋಮಗಳನ್ನು ನಡೆಸಿ ಪ್ರಕೃತಿ ಸಮತೋಲನ ಉಂಟು ಮಾಡುತ್ತಿದೆ. ವಾಹನ-ಕಾರ್ಖಾನೆಗಳ ಹೊಗೆಯಿಂದ ವಾಯು ಕಲುಷಿತಗೊಂಡರೂ ಹೋಮವೇ ಪರಿಹಾರ. ಆಸ್ಪತ್ರೆಗಳಲ್ಲಿಯೂ ಮಾಡಲಾಗುತ್ತಿದೆ. ಹೋಮಗಳಿಂದ ಯಾವ ರೀತಿ ಪರಿಣಾಮ ಆಗಿದೆ, ಇದರ ಸಂಪೂರ್ಣ ಪರಿಣಾಮಗಳ ಬಗ್ಗೆ ಹೋಮತೆರಪಿ ಡಾಟ್ ಆರ್ಗ್ ಮೂಲಕ ವಿಸ್ತøತವಾಗಿ ವಿವರಿಸಲಾಗಿದೆ.

ಕೊರೊನದ ವೈರಾಣು ವ್ಯಾಪಿಸದಂತೆ ತಡೆಯುತ್ತದೆ ಅಗ್ನಿಹೋತ್ರ
ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡ ನೋವೆಲ್ ಕೊರೋನಾ ವೈರಸ್ ಇಂದು ಇಡೀ ಜಗತ್ತನ್ನೇ ವ್ಯಾಪಿಸಿದೆ. ಅದೆಷ್ಟೋ ಮೈಲು ದೂರದಲ್ಲಿರುವ ಅತ್ಯಾಧುನಿಕ ರಾಷ್ಟ್ರ ಸಮೆರಿಕ ಕೂಡಾ ಕೊರೊನಾದಿಂದ ತುರ್ತು ಪರಿಸ್ಥಿತಿ ಘೋಷಿಸಿದೆ. ಇರಾನ್, ಇಟಲಿಯನ್ನು ಹೈರಾಣಾಗಿಸಿದೆ. ಆದರೆ ಚೀನಾದ ನೆರೆ ರಾಷ್ಟ್ರಗಳಾದ ಭಾರತ ಹಾಗೂ ರಷ್ಯಾಗಳಲ್ಲಿ ಅಷ್ಟೊಂದು ಭೀಕರ ಪರಿಣಾಮ ಉಂಟು ಮಾಡಲಿಲ್ಲ. ಇದಕ್ಕೆ ಕಾರಣ ಭಾರತ ಹಾಗೂ ರಷ್ಯಾಗಳಲ್ಲಿ ನಡೆಯುತ್ತಿರುವ ಹೋಮ-ಹವನಾದಿ ಅಗ್ನಿಹೋತ್ರಗಳೇ ಕಾರಣ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರಷ್ಯಾ ಕೊರೊನಾ ಕಾಣಿಸಿದ ನಗರಗಳಲ್ಲಿ ಸಾಮೂಹಿಕ ಅಗ್ನಿಹೋತ್ರ- ಹೋಮ ಹವನಗಳನ್ನು ನಡೆಸಲು ಮುಂದೆ ಬಂದಿದೆ.

ಗಿರೀಶ್

Tags

Related Articles

FOR DAILY ALERTS
Close