ಪ್ರಚಲಿತ

ಮುಸಲ್ಮಾನ ರಾಷ್ಟ್ರಗಳೇ ಯೋಗವನ್ನು ಬೆಂಬಲಿಸುತ್ತಿರುವಾಗ, ಭಾರತೀಯ ಮುಸಲ್ಮಾನರು ಮಾತ್ರ ಹೀಗೇಕಾಡುತ್ತಾರೆ???

ಇತ್ತೀಚೆಗಷ್ಟೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಮಾತ್ರವಲ್ಲದೇ ವಿಶ್ವದ್ಯಾಂತ ಯೋಗ ದಿನದ ಸಂಭ್ರಮವೇ ಹೆಚ್ಚಿದ್ದರೆ, ಯಾವುದೇ ದೇಶದ ಮುಸಲ್ಮಾನರಿಗೆ ಅಡ್ಡಿಯಾಗದ ಯೋಗ ಭಾರತೀಯ ಮುಸಲ್ಮಾನರಿಗೆ ಮಾತ್ರ ಯೋಗ ಅಡ್ಡಿಯಾಗಿದೆ. ಅಷ್ಟೇ ಅಲ್ಲದೇ ಯೋಗ ಎನ್ನುವುದು ಧರ್ಮಕ್ಕೆ ಬಾಹಿರಾದ ಸಂಗತಿಯೆಂದು ಬೊಬ್ಬಿಡುತ್ತಿರುವುದನ್ನು ನೋಡಿದರೆ ಇವರಿಗೆ ಅದೇನೂ ಹೇಳಬೇಕೋ ನಾ ಕಾಣೆ!!

ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡಲು ಯೋಗ ಸಹಾಕಾರಿಯಾಗುತ್ತೆ ಎನ್ನುವ ವಿಚಾರ ಗೊತ್ತೇ ಇದೆ. ಹಾಗಾಗಿ ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆಯಲ್ಲದೇ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

ಹೀಗಿರಬೇಕಾದರೆ ಯೋಗ ಧರ್ಮಕ್ಕೆ ಬಾಹಿರ ಎಂದರೆ ಅದು ಹೇಗೆ ಸಾಧ್ಯ ಎನ್ನುವುದೇ ತಿಳಿಯುತ್ತಿಲ್ಲ!! ಹೌದು..‌.. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ 2015ರ ಜೂನ್ 21ರಂದು ಮೊದಲ ಬಾರಿಗೆ ವಿಶ್ವ ಯೋಗ ದಿನ ಆಚರಿಸಲಾಯಿತು. ಸುಮಾರು 47 ರಾಷ್ಟ್ರಗಳು ಯೋಗದಿನಕ್ಕೆ ಬೆಂಬಲ ಸೂಚಿಸಿದವು. ಈ ಬಾರಿಯೂ ಪಾಕಿಸ್ತಾನ, ಬಾಂಗ್ಲಾದೇಶ, ಸೌದಿ ಅರೇಬಿಯಾ ಸೇರಿ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಯೋಗ ದಿನ ಆಚರಿಸಲಾಯಿತು. ಲಕ್ಷಾಂತರ ಜನ ಯೋಗ ಮಾಡುವ ಮೂಲಕ ಬೆಂಬಲ ಸೂಚಿಸಿದರು.

ಆದರೆ ಭಾರತದಲ್ಲಿರುವ ಮುಸ್ಲಿಂ ಮೂಲಭೂತವಾದಿಗಳು ಮಾತ್ರ ಯೋಗ ಮಾಡಲು ವಿರೋಧಿಸುತ್ತಿದ್ದಾರೆ. ಮುಸ್ಲಿಮರು ಯೋಗ ಮಾಡುವುದು ಇಸ್ಲಾಮೇತರ ಎಂಬ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ. ಆ ಮೂಲಕ ಮುಸ್ಲಿಮರು ಆರೋಗ್ಯವಂತ ಜೀವನ ಸಾಗಿಸಲು ಅಡ್ಡಗಾಲು ಹಾಕುತ್ತಿದ್ದಾರಲ್ಲದೇ ಮೌಢ್ಯ ಮೆರೆಯುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎನ್ನುವಂತೆ,  ವಿಶ್ವ ಯೋಗ ದಿನದ ಅಂಗವಾಗಿ ನಟಿ ಹೀನಾ ಖಾನ್ ಯೋಗ ಮಾಡುತ್ತಿರುವ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಅಲ್ಲದೆ ಹೀಗೆ ಯೋಗ ಮಾಡುವುದರಿಂದ ಮನಸ್ಸಿನಲ್ಲಿ ಆವರಿಸುವ ಶಾಂತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಒಕ್ಕಣೆಯನ್ನೂ ಸಹ ಬರೆದಿದ್ದರು

.

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೇ ಹಲವು ಮುಸ್ಲಿಂ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿರುವುದು ಬಾರಿ ಸುದ್ದಿಯಾಗಿದೆ. ಹೌದು… ಹೀನಾ ಖಾನ್ ಮುಸ್ಲಿಮಳೇ ಅಲ್ಲ, ಅವರು ಮುಸ್ಲಿಮರಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ, ಹೀಗೆ ಯೋಗ ಮಾಡುವ ಬದಲು ಐದು ಬಾರಿ ನಮಾಜು ಮಾಡಬೇಕಿತ್ತು, ನಮಾಜೇ ಮುಸ್ಲಿಮರಿಗೆ ಯೋಗ ಎಂಬಂತಹ ಹಲವು ಟೀಕೆಗಳ ಸುರಿಮಳೆಯೇ ಹರಿದು ಬಂದಿದೆ.

ವಿಪರ್ಯಾಸವೆಂದರೆ, ಮುಸ್ಲಿಂ ರಾಷ್ಟ್ರಗಳೂ ಆರೋಗ್ಯದ ಹಿತದೃಷ್ಟಿಯಿಂದ ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿರಬೇಕಾದರೆ ಭಾರತದಲ್ಲಿರುವ ಮುಸಲ್ಮಾನರಿಗೆ ಯೋಗ ಎಂದರೆ ಅದು ಹಿಂದೂ ಧರ್ಮಕ್ಕೆ ಮಾತ್ರ ಮೀಸಲು ಎನ್ನುವಂತೆ ಆಡುತ್ತಿನ್ನೆಲ್ಲಾ ನೋಡಿದಾಗ ಇವರ ಮಂದಮತಿಗೆ ಅದೇನು ಹೇಳಬೇಕೋ ನಾ ಕಾಣೆ!!!

ಮೂಲ:

https://tulunadunews.com/?p=13704

– ಅಲೋಖಾ

Tags

Related Articles

Close