ಪ್ರಚಲಿತ

ಎಂತಹ ಪರಿಸ್ಥಿತಿಯಲ್ಲೂ ಸಂಘ ತನ್ನ ಅಸ್ಮಿತೆ ಹಾಗೂ ತಾಳ್ಮೆ ಕಳೆದುಕೊಂಡಿದ್ದಿಲ್ಲ: ಸಂಘಕ್ಕೆ ಸಂಘವೇ ಸಾಟಿ!

ಓದಲೇಬೇಕಾದ ವಿಷಯ

ಸಂಘ ಏಕೆ ಸುಮ್ಮನಿದೆ?

ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿ ವಿಶ್ರಾಂತಿಗೆಂದು ಕುಳಿತುಕೊಂಡಾಗ, ಸ್ವಲ್ಪ ದೂರದಲ್ಲಿ ಒಬ್ಬ ಸಂಘದ ನಿಕ್ಕರ್ ಹಾಕಿಕೊಂಡು ಹಿರಿಯ ಸ್ವಯಂಸೇವಕ (ಸ್ವಸೇ) ಮತ್ತು ಒಬ್ಬ ಹಿಂದು ಸಜ್ಜನರ (ಹಿಸ) ನಡುವಿನ ಸಂವಾದವನ್ನು ಕೇಳಿಸಿಕೊಂಡವರೊಬ್ಬರ ಬರಹ…

ದೇಶ – ವಿದೇಶಗಳ ಚರ್ಚೆಯಾಗುತ್ತ ವಿಷಯಗಳು ಕಾಶ್ಮೀರ, ಕೈರಾನ್, ಕೇರಳ, ಪಂ.ಬಂಗಾಲ ಪರಿಸ್ಥಿತಿಯತ್ತ ಹೊರಳಿದವು.

ಹಿಸ: ದೇಶದ ಅನೇಕ ಕಡೆ ಹಿಂದು ತೊಂದರೆಯಲ್ಲಿದ್ದಾರೆ. ಆದರೂ ಸಂಘ ಏಕೆ ಸುಮ್ಮನಿದೆ? ಈ ವಿಷಯಗಳಲ್ಲಿ ಸಂಘ ಏನು ಮಾಡುತ್ತಿದೆ?

ಸ್ವಸೇ: ಸಂಘ ಎಂದರೆ ಏನು?

ಹಿಸ; ಹಿಂದುಗಳ ಸಂಘಟನೆ

ಸ್ವಸೇ: ನೀವು ಹಿಂದು ಅಲ್ಲವೇ?

ಹಿಸ: ಎಂತಹ ಪ್ರಶ್ನೆ? ನಾನು ಕಟ್ಟಾ ಸನಾತನ ಹಿಂದು.

ಸ್ವಸೇ: ನೀವು ಸಂಘದೊಡನೆ ಜೋಡಿಸಿಕೊಂಡಿದ್ದೀರಾ?

ಹಿಸ: ಇಲ್ಲವಲ್ಲ!

ಸ್ವಸೇ: ನಿಮ್ಮ ಮಗ, ಮೊಮ್ಮಗ ಅಥವಾ ಕುಟುಂಬದ ಯಾವುದಾದರೂ ಸದಸ್ಯರು?

ಹಿಸ: ಯಾರೂ ಇಲ್ಲ. ಮಗ ನೌಕರಿ ಮಾಡುತ್ತಿದ್ದಾನೆ. ಅವನಿಗೆ ಕೆಲಸದಿಂದ ಪುರುಸೊತ್ತು ಇಲ್ಲ. ಮೊಮ್ಮಗ ವಿದೇಶದಲ್ಲಿ ನೌಕರಿ ಮಾಡಿಕೊಂಡು ಅಲ್ಲಿಯ ನಾಗರಿಕನಾಗಿದ್ದಾನೆ. ಸಂಬಂಧಿಕರೆಲ್ಲ ಬೇರೆ ಬೇರೆ ಉದ್ಯೋಗದಲ್ಲಿದ್ದಾರೆ. ಅವರೆಲ್ಲ ಅದರಲ್ಲಿಯೇ ತಲ್ಲೀನರಾಗಿದ್ದು ಸಮಯವೇ ಇಲ್ಲ. ಇನ್ನು ಕೆಲವರು ನಿವೃತ್ತರಾಗಿದ್ದು ಮನೆಯಲ್ಲಿಯೇ ಇರುತ್ತಾರೆ. ಅವರ ಮಕ್ಕಳು/ಮೊಮ್ಮಕ್ಕಳು ಓದುತ್ತಿದ್ದು ಶಾಲೆ/ಟ್ಯೂಶನ್ ಗಳಲ್ಲಿ ಸಮಯ ಹೋಗುತ್ತದೆ.

ಸ್ವಸೇ:
ಅಂದರೆ, ಇದರ ಅರ್ಥ ಸಂಘ ನಿಮ್ಮ/ನಿಮ್ಮ ಪರಿವಾರ/ಕುಟುಂಬದ ಸದಸ್ಯರನ್ನು ಹೊರತು ಪಡಿಸಿ ಉಳಿದ ಹಿಂದುಗಳ ಸಂಘಟನೆ ಮಾಡುತ್ತಿದೆ ಎಂದಾಯಿತಲ್ಲವೇ?

ಹಿಸ: ಇಂದು ನಿಮಗೇನಾಗಿದೆ? ಏಕೆ ಅಲ್ಲಸಲ್ಲದ ಮಾತುಗಳನ್ನಾಡುತ್ತಿದ್ದೀರಿ? ಈ ಸ್ಥಿತಿ ನನ್ನೊಬ್ಬನಿಗೆ ಅಲ್ಲ. ೯೦% ಜನರಿಗೂ ಇದೇ ರೀತಿ ಕೆಲಸದಿಂದ ಪುರುಸೊತ್ತು ಸಿಗುವುದಿಲ್ಲ. ಆದರೆ ನೀವು ನನ್ನೊಬ್ಬನಿಗೆ ಮಾತ್ರ ಬೆಟ್ಟು ಮಾಡಿ ತೋರಿಸುತ್ತಿದ್ದೀರಿ. ಕೆಲಸವೆಂದರೆ ಪೂಜೆ ಅಲ್ಲವೇ? ಕೆಲಸ ಮಾಡದಿದ್ದರೆ ದೇಶ ಹೇಗೆ ನಡೆಯಬೇಕು?

ಸ್ವಸೇ: ನಿಮ್ಮ ಮಾತಿನ ಪ್ರಕಾರ ಸಂಘದೊಡನೆ ಕೇವಲ ೧೦% ಜನ ಮಾತ್ರ ತೊಡಗಿಸಿಕೊಂಡಿದ್ದಾರೆ?

ಹಿಸ: ಇಲ್ಲ. ನನ್ನ ವಾರ್ಡಿನಲ್ಲಿರುವವರೆಲ್ಲರೂ ಹಿಂದುಗಳೇ. ಒಟ್ಟು ಸುಮಾರು ೧೦,೦೦೦ ಹಿಂದುಗಳಿರಬಹುದು . ಆದರೆ ಬೆಳಿಗ್ಗೆ ಸಂಘ ಶಾಖೆಗಳಲ್ಲಿ ೧೦-೧೫ ಜನ ಮಾತ್ರ ಕಂಡುಬರುತ್ತಾರೆ. ಇನ್ನು ಕೆಲವರು ಸಂಘದ ಉತ್ಸವಗಳಲ್ಲಿ ಮಾತ್ರ ಬರುತ್ತಾರಂತೆ.

ಸ್ವಸೇ: ನೀವು ಯಾವುದಾದರೂ ಸಂದರ್ಭದಲ್ಲಿ ಸಂಘದವರನ್ನು ಭೇಟಿಯಾಗಿದ್ದೀರಾ?

ಹಿಸ: ಇಲ್ಲ

ಸ್ವಸೇ: ಎಂದಾದರೂ ಅವರಿಗೆ ಸಹಾಯ ಮಾಡಿದ್ದೀರಾ?

ಹಿಸ: ಇಲ್ಲ

ಸ್ವಸೇ: ಅವರ ಉತ್ಸವಗಳಲ್ಲಿ ಭಾಗವಹಿಸಿದ್ದೀರಾ?

ಹಿಸ: ಇಲ್ಲ.

ಸ್ವಸೇ: ಹಾಗಿದ್ದರೆ ಸಂಘದಿಂದ ಎಲ್ಲ ರೀತಿಯ ನಿರೀಕ್ಷೆಗಳನ್ನು ಏಕೆ ಇಟ್ಟುಕೊಂಡಿದ್ದೀರಿ?
ಮುಂದುವರೆಸುತ್ತಾ…………

ನಿಮ್ಮಂತಹ ಹಿಂದುಗಳ ಜವಾಬ್ದಾರಿಯನ್ನು ಸಂಘ ಗುತ್ತಿಗೆ ಪಡೆದಿದೆಯಾ? ಸಂಘಕ್ಕೆ ಬರುವವರೆಲ್ಲಾ ನಿರುದ್ಯೋಗಿಗಳು ಎಂದು ಭಾವಿಸಿದ್ದೀರಾ? ಅವರಿಗೆ ಕೆಲಸವಿಲ್ಲ ಅಥವಾ ಕುಟುಂಬವಿಲ್ಲ ಎಂದು ತಿಳಿದಿದ್ದೀರಾ? ನೀವು ನಿಮ್ಮ ಉದ್ಯೋಗ ಮತ್ತು ಕುಟುಂಬದ ಮಾತ್ರ ಚಿಂತೆ ಮಾಡಿರಿ. ಸಂಘದ ಸ್ವಯಂಸೇವಕರು ಅವರ ಉದ್ಯೋಗ/ಪರಿವಾರದ ಗಮನ ಹರಿಸುತ್ತಾ, ನಿಮ್ಮಂತಹ ಕರ್ತವ್ಯರಹಿತ , ಏಕಾಂಗಿ, ಆತ್ಮಕೇಂದ್ರಿತ ಹಿಂದುಗಳ ಕುರಿತು ಚಿಂತೆ ಮಾಡಬೇಕೆ? ಇದನ್ನು ಕೇವಲ ಸಂಘದವರಿಂದ ಮಾತ್ರ ಏಕೆ ಅಪೇಕ್ಷೆ ಪಡುತ್ತೀರಿ?
ಏಕೆಂದರೆ, ಅವರು ಭಾರತ ಮಾತಾ ಕೀ ಜಯ್, ವಂದೇ ಮಾತರಂ ಎಂದು ಹೇಳುತ್ತಾ ದೇಶವನ್ನು ಪ್ರೀತಿಸುತ್ತಾರೆಂದೇ? ಈ ರೀತಿ ಮಾಡುವುದೂ ತಪ್ಪೇ?

ಇದನ್ನು ಮಾಡಿದ್ದಕ್ಕಾಗಿ ‘ಜಜಿಯಾ’ ರೂಪದ ತೆರಿಗೆಯನ್ನು ಅವರಿಂದ ವಸೂಲಿ ಮಾಡಬೇಕೆಂದು ಬಯಸುತ್ತೀರಾ?

ದೇಶ/ಸಮಾಜದ ಪ್ರತಿಯೊಂದು ಸಂಕಟ/ಆಪತ್ಕಾಲದಲ್ಲಿ ಅವರು ಮಾತ್ರ ತಮ್ಮ ಶ್ರಮ/ಧನ/ಜೀವನವನ್ನು ಬಲಿದಾನ ಕೊಡಬೇಕೇ? ಅವರಿಗೆ ನಿಮ್ಮಂತೆ ಮೂಕರಾಗಿ/ತಟಸ್ಥರಾಗಿ ಇರುವ ಅಧಿಕಾರವಿಲ್ಲವೇ? ಏಕೆ ಅವರು ಮಾತ್ರ ತಮ್ಮ ಮನೆ/ಮಠ ಎಲ್ಲವನ್ನೂ ಬಿಟ್ಟು ಕೇವಲ ನಿಮ್ಮಂತವರಿಗಾಗಿ ಜೀವಿಸಬೇಕು?

ಅವರಿಂದ ಎಲ್ಲವನ್ನೂ ಅಪೇಕ್ಷಿಸುವ ನೀವು, ಎಂದಾದರೂ ಅವರಿಗೆ ಬಲ ಕೊಡುವ/ಸಾಂಗತ್ಯ ಕೊಡುವ/ಸಮರ್ಥನೆ ಮಾಡುವ ಬಗ್ಗೆ ಯೋಚಿಸಿದ್ದಿರಾ? ಏಕೆ ಅವರನ್ನು ಕೇವಲ ೧೦%ಕ್ಕೆ ಸೀಮಿತಗೊಳಿಸುತ್ತಿರಿ?

ನಿಮ್ಮಂತವರು ಅವರನ್ನು ಅಪ್ರಯೋಜಕರು/ಕೆಲಸಕ್ಕೆ ಬಾರದವರು/ಹುಚ್ಚರು ಎಂದು ಸಂಬೋಧಿಸಿ ಅವರನ್ನು ಉಪೇಕ್ಷೆ ಮಾಡುತ್ತಿರಿ. ಅವರನ್ನು ಮೂಲಭೂತವಾದಿಗಳು ಎಂದು ದೂಷಿಸುತ್ತಿರಿ. ನೀವು ಮಾತ್ರ ಜಾತ್ಯಾತೀತವಾದಿಗಳು (ಸೆಕ್ಯೂಲರ್) ಎಂದು ಭಾವಿಸಿ, ಕೇವಲ ತಮ್ಮ ಮನೆ , ಪರಿವಾರ, ಉದ್ಯೋಗಕ್ಕೆ ಮಾತ್ರ ಆದ್ಯತೆ ನೀಡಿ, ನಿಮ್ಮ ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುತ್ತೀರಿ.

ಅವರು ಹಿಂದು ಸಂಘಟನೆಯವರಾದರೆ, ನೀವು ಎಲ್ಲರೂ ಹಿಂದುಗಳಲ್ಲವೇ? ಯಾವುದು ಅವರ ಕರ್ತವ್ಯವೋ, ಅದು ನಿಮ್ಮ ಕರ್ತವ್ಯ ಏಕೆ ಆಗಿರುವುದಿಲ್ಲ? ಕೇವಲ ಅವರು ಮಾತ್ರ ಹಿಂದುಗಳು ಮತ್ತು ನೀವು ಹಿಂದುಗಳಲ್ಲ ಎಂದು ಸ್ಪಷ್ಟವಾಗ ಬೇಕಲ್ಲವೇ?

ನೆನಪಿರಲಿ, ನಿಮ್ಮಂತಹ ೯೦% ಹಿಂದುಗಳು ನಮಗೇನಾಗುವುದಿದೆ ಎಂದುಕೊಂಡು ಮಲಗಿದ್ದರಿಂದ, ಆತ್ಮಕೇಂದ್ರಿತರಾಗಿ ಜೀವನ ಮಾಡಿದ್ದರಿಂದ ನಮ್ಮ ಸ್ವಾತಂತ್ರ್ಯ ಹೋಗಿದ್ದು!!
ಅದನ್ನು ಮರಳಿ ಪಡೆಯಲು ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳು ಗಲ್ಲಿಗೇರಿದ್ದು ಮತ್ತು ಚಂದ್ರಶೇಖರ ಆಜಾದ್ ರಂತವರು ಏಕಾಂಗಿಯಾಗಿ ಹೋರಾಡಿ ಬಲಿದಾನಗೈದಿದ್ದು!!

ಒಂದು ವೇಳೆ ಈ ೯೦% ಭಾರತೀಯರು ಒಗ್ಗಟ್ಟಾಗಿದ್ದರೆ, ಬಹಿರಂಗವಾಗಿ ಕ್ರಾಂತಿಕಾರಿಗಳ ಬೆಂಬಲಕ್ಕೆ ನಿಂತಿದ್ದರೆ, ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಅಥವಾ ಶಿಕ್ಷಿಸುವ ಧೈರ್ಯ/ಸಾಮರ್ಥ್ಯ ವಿದೇಶಿಯರಿಗೆ ಇರಲಿಲ್ಲ.

ಸ್ಮರಣೆ ಮಾಡಿ, ಪ್ಲಾಸಿ ಕದನ ನಡೆಯುವಾಗ, ಯುದ್ಧದಲ್ಲಿ ಭಾಗವಹಿಸಿದವರಿಗಿಂತ ನೋಡುತ್ತಿದ್ದ ಪ್ರೇಕ್ಷಕರ ಸಂಖ್ಯೆ ಹೆಚ್ಚಿತ್ತು!

ಸಮಸ್ತ ಹಿಂದುಗಳು ಒಗ್ಗಟ್ಟಿನಿಂದ ಒಂದು ವೇಳೆ ಅಯೋಧ್ಯೆಯಲ್ಲಿ ಸೇರಿ,”ಜೈ ಶ್ರೀರಾಮ” ಎಂದು ಘೋಷಣೆ ಮಾಡಿದ್ದಲ್ಲಿ, ರಾಮ ಮಂದಿರ ಎಂದಿಗೋ ಕಟ್ಟಿ ಆಗಿರುತ್ತಿತ್ತು.

ಹಿಂದುಗಳಲ್ಲಿ ಒಂದಿಷ್ಟು ಮರ್ಯಾದೆ ಇರುತ್ತಿದ್ದರೆ, ಕೆಲವೇ ಲಕ್ಷದಷ್ಟಿರುವ ದೇಶ ವಿರೋಧಿಗಳು, ವಂದೇ ಮಾತರಂ/ಭಾರತ ಮಾತಾ ಕೀ ಜಯ್ ಗೆ ವಿರೋಧ ವ್ಯಕ್ತಪಡಿಸುವ ಸಾಹಸ ಮಾಡುತ್ತಿರಲಿಲ್ಲ.

ಇದು, ಇಂದು ಬೆಳಿಗ್ಗೆ ಎರಡು ಸಜ್ಜನರ ನಡುವೆ ನಡೆದ ವಾರ್ತಾಲಾಪ. ಕಂಡಿದ್ದು & ಕೇಳಿದ್ದನ್ನು ನಿಮ್ಮ ಮುಂದೆ ಯಥಾವತ್ ಪ್ರಸ್ತುತಪಡಿಸಿದ್ದೇವೆ.


(WhatsApp ಕೃಪೆಯಿಂದ ದೊರೆತಿರುವುದು. ಜನಜಾಗೃತಿ ದೃಷ್ಟಿಯಿಂದ)

Tags

Related Articles

Close