ಪ್ರಚಲಿತ

ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಕ್ರಿಮಿನಲ್ ಪ್ರಕರಣವಿದ್ದರೂ ನಾನು ಮತ ಹಾಕುತ್ತೇನೆ. ಯಾಕೆಂದರೆ..!

ರಾಮಾಯಣ ಕಥೆ ಕೇಳಿಲ್ವಾ.! ಅಧರ್ಮವನ್ನು ಮೆರೆಯುತ್ತಿದ್ದ ದಶಶಿರಗಳನ್ನು ಹೊತ್ತ ಅಹಂಕಾರಿ ರಾವಣನನ್ನು ಶ್ರೀರಾಮಚಂದ್ರ ಸಂಹಾರ ಮಾಡುತ್ತಾನೆ…
ಮಹಾಭಾರತದಲ್ಲಿ ಅಧರ್ಮದ ಹಾದಿ ತುಳಿದು ಸುರರಿಗೆ ಪಾಶವಾಗುತ್ತಿದ್ದ ರಕ್ಕಸ ಕಂಸನನ್ನು ಕೊಂದು ಶಿಷ್ಟರಕ್ಷಕನಾಗುತ್ತಾನೆ…
ಹಾಗಾದರೆ ಇವರೂ ಕ್ರಿಮಿನಲ್ ಹಿನ್ನೆಲೆಯುಳ್ಳವರೇ ಅಲ್ವಾ? ಆದರೆ ಇಲ್ಲಿ ಮುಖ್ಯವಾದುದು ಯಾರ ಪಾಲಿಗೆ ಇವರು ಕ್ರಿಮಿನಲ್’ಗಳು ಎಂದು. ಯಾರು ರಾವಣ ಪ್ರಿಯರು ಇದ್ದಾರೆಯೋ, ಎಲ್ಲಿ ಕಂಸವಂಶಸ್ಥರು ಇದ್ದಾರೆಯೋ ಅವರಿಗೆಲ್ಲಾ ಶ್ರೀರಾಮ-ಶ್ರೀಕೃಷ್ಣ ಕ್ರಿಮಿನಲ್’ಗಳಂತೆಯೇ ಕಾಣುತ್ತಾರೆ ಅಲ್ವಾ..?

ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು. ಮತ್ತೆ ಸಂಸದ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ದೊರೆತ ಕೂಡಲೇ ವಿರೋಧಿಗಳಿಂದ ಹೂಡಲ್ಪಟ್ಟ ಮಿಂಚಿನಂತಿರುವ ಬಾಣ ಯಾವುದೆಂದರೆ “ಸಂಸದ ನಳಿನ್ ಕುಮಾರ್ ಕಟೀಲು ಅವರ ಮೇಲೆ ಕ್ರಿಮಿನಲ್ ಆರೋಪ ಇದೆ” ಎಂದು. ಖಂಡಿತವಾಗಿಯೂ ಭಾಜಪಾ ಕ್ರಿಮಿನಲ್ ಆರೋಪ ಹೊಂದಿರುವ ವ್ಯಕ್ತಿಯನ್ನು ಸಹಿಸುವುದಿಲ್ಲ. ಆದರೆ ನಳಿನ್ ಕುಮಾರ್ ಕಟೀಲು ಯಾವ ವಿಷಯದಲ್ಲಿ ಕ್ರಿಮಿನಲ್ ಆರೋಪವನ್ನು ಹೊತ್ತುಕೊಂಡಿದ್ದಾರೆ ಅನ್ನುವುದೂ ಮುಖ್ಯ ಅಲ್ವೇ?

*ಕರಾವಳಿ ಜನರ ಮೇಲೆ ದಬ್ಬಾಳಿಕೆ ನಡೆಸಿ, ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದು, ನೇತ್ರಾವತಿಯನ್ನು ಬರಡು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದ ಸರ್ಕಾರದ ವಿರುದ್ಧ ಹೋರಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೇಲೆ ಕೇಸ್ ಬಿದ್ದಿದೆ. ಇದು ಯಾರಿಗಾಗಿ?

*ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕರಾವಳಿ ಭಾಗದ ಅನೇಕ ಹಿಂದೂ ಕಾರ್ಯಕರ್ತರನ್ನು ಮತಾಂಧರು ಹತ್ಯೆಗೈಯ್ಯುತ್ತಿದ್ದದ್ದನ್ನು ಹಾಗೂ ಈ ಹತ್ಯೆಗಳಿಗೆ ನೇರವಾಗಿ ಕಾಂಗ್ರೆಸ್ ನಾಯಕರೇ ಸಹಕರಿಸುತ್ತಿದ್ದದ್ದನ್ನು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ನಳಿನ್ ಕುಮಾರ್ ಕಟೀಲ್ ಮೇಲೆ ಕೇಸ್ ಬಿದ್ದಿತ್ತು. ಇದು ಯಾರಿಗಾಗಿ?

*ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಕಾಂಗ್ರೆಸ್-ಕಮ್ಯುನಿಸ್ಟ್ ಮುಖವಾಡ ಹೊತ್ತುಕೊಂಡಿದ್ದ ಪೇಟಾ ನಿಷೇಧ ಮಾಡಲು ಮುಂದಾದಾಗ ತುಳುವರನ್ನು ಒಗ್ಗೂಡಿಸಿ ಕಂಬಳದ ಪರವಾಗಿ ಧ್ವನಿ ಎತ್ತಿ ಯಾವುದೇ ಕಾರಣಕ್ಕೂ ಕಂಬಳ ನಿಷೇಧ ಮಾಡು ಬಿಡೋದಿಲ್ಲ ಎಂದು ಬೀದಿಗಿಳಿದು ಹೋರಾಡಿದ್ದರು. ಇದಕ್ಕಾಗಿ ಸರ್ಕಾರ ನಳಿನ್ ಮೇಲೆ ಕೇಸ್ ದಾಖಲಿಸಿತ್ತು. ಇದು ಯಾರಿಗಾಗಿ?

* ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದನ್ನು ವಿರೋಧಿಸಿ ಡಿಕೇರಿಯಿಂದ ಮಂಗಳೂರಿಗೆ ಯಾತ್ರೆ ನಡೆಸಿ ಮಂಗಳೂರು ಚಲೋ ಆಂದೋಲನ ನಡೆಸಿದ್ದ ನಳಿನ್ ಮೇಲೆ ಕೇಸ್ ಹಾಕಿತ್ತು ಅಂದಿನ ಕಾಂಗ್ರೆಸ್ ಸರ್ಕಾರ. ಇದು ಯಾರಿಗಾಗಿ?

* ಅನಾವಶ್ಯಕವಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಒಂದು ಕೊಠಡಿಯಲ್ಲಿ ಕೂಡಿಟ್ಟು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಹಿಂದೂ ಕಾರ್ಯಕರ್ತರ ಪರವಾಗಿ ಪ್ರಶ್ನೆ ಮಾಡಿದ್ದಕ್ಕೆ ಅವರ ನಳಿನ್ ಕೇಸ್ ಬಿದ್ದಿತ್ತು. ಇದು ಯಾರಿಗಾಗಿ?

*ಶಬರಿಮಲೆಯ ಪಾವಿತ್ರತೆಯನ್ನು ಕಾಪಾಡಲು ಲಕ್ಷಾಂತರ ಭಕ್ತರ ಪರವಾಗಿ ಬೀದಿಗಿಳಿದು ಹೋರಾಟ ನಡೆಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೇಲೆ ರಾಜ್ಯ ಸರ್ಕಾರ ಕೇಸ್ ದಾಖಲಿಸಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿತ್ತು. ಇದು ಯಾರಿಗಾಗಿ?

*ಹಿಂದೂಗಳ ಮೇಲೆ ಅನ್ಯಾಯವಾದಾಗ, ಸುಳ್ಯ ಪೊಲೀಸ್ ಠಾಣೆಗೆ ದುಷ್ಟರು ಕಲ್ಲು ತೂರಿದಾಗ ಕಾನೂನಿನ ಪರವಾಗಿ ನಿಂತು ಸುಳ್ಯದಲ್ಲಿ ಭಾಷಣ ಮಾಡಿದ ಮಾತ್ರಕ್ಕೇ ನಳಿನ್ ಮೇಲೆ ಕೇಸ್ ದಾಖಲಾಗಿತ್ತು. ಇದು ಯಾರಿಗಾಗಿ?

Related image

ಮೊದಲೇ ಹೇಳಿದಂತೆ, “ಅಹಿಂಸೋ ಪರಮೋ ಧರ್ಮಃ, ಧರ್ಮಹಿಂಸಾ ತತೈವಚಾ”… ಅಹಿಂಸೆ ಎನ್ನುವುದು ನಾವು ಪಾಲಿಸಲೇಬೇಕಾದ ಧರ್ಮ, ಆದರೆ ಎಲ್ಲಿ ಅಧರ್ಮ ನಡೆಯುತ್ತೋ ಅಲ್ಲಿ ಕೆರಳಬೇಕಾದ ಅನಿವಾರ್ಯತೆ ಎದುರಾಗಬೇಕಾಗುತ್ತದೆ. ಇಲ್ಲಿ ಆಗಿದ್ದೂ ಅಷ್ಟೇ…
ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗ ಬಾಯಿ ಮುಚ್ಚಿಕೊಂಡು ಸುಮ್ಮನೆ ಕೂರಬೇಕಿತ್ತಾ?
ಕಂಬಳ ನಿಷೇಧಿಸಲು ಹೊರಟಾಗ-ನೇತ್ರಾವತಿ ತಿರುಗಿಸಲು ಹೊರಟಾಗ ಸಂಸದನಾಗಿ ಸುಮ್ಮನನಿದ್ದಿರಬೇಕಿತ್ತಾ?
ಅಮಾಯಕ ಹಿಂದೂ ಕಾರ್ಯಕರ್ತರನ್ನು ಖಾಸಗಿ ಕೊಠಡಿಯಲ್ಲಿ ಕೂಡಿಟ್ಟಾಗ ಸೈಲೆಂಟ್ ಆಗ್ಬೇಕಿತ್ತಾ?

ಕ್ರಿಮಿನಲ್ ಕೇಸ್ ಹೊಂದಿರುವ ಸಂಸದ ಎಂದು ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಆರೋಪಿಸಿ ಮತಗುಂಚಕ್ಕೆ ಕೈಹಾಕಲು ವ್ಯರ್ಥ ಪ್ರಯತ್ನ ಪಡುತ್ತಿರುವ ವಿರೋಧಿಗಳ ಮಾತನ್ನು ನಂಬುವ ಮೊದಲು ಈ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ನಳಿನ್ ನನಗಾಗಿ ಕೇಸ್ ಹಾಕಿಕೊಂಡಿದ್ದಾರೆಂದರೆ ನಾನೇಕೆ ಅವರನ್ನು ಬೆಂಬಲಿಸಲು ಹಿಂಜರಿಯಬೇಕು?
ನಳಿನ್ ಕುಮಾರ್ ಕಟೀಲು ಹಾಕಿಸಿಕೊಂಡಿರುವ ಕೇಸ್’ಗಳು ಧರ್ಮ ವಿರೋಧಿ, ದೇಶವಿರೋಧಿ,ಜನವಿರೋಧಿಯಾಗಿದ್ದರೆ ಅವರಿಗೆ ಮತ ಹಾಕಬೇಡಿ… ನಳಿನ್ ಕುಮಾರ್ ಕಟೀಲು ನಮಗಾಗಿ, ನಮ್ಮ ನಾಡಿಗಾಗಿ, ನೆಲ-ಜಲಕ್ಕಾಗಿ, ಹಿಂದೂ ಕಾರ್ಯಕರ್ತರಿಗಾಗಿ ಕೇಸು ಹಾಕಿಸಿಕೊಂಡಿದ್ದಾರೆ ಎಂದಾದರೆ ನಿಮ್ಮ ಮತವನ್ನು ಖಂಡಿತವಾಗಿಯೂ ವ್ಯರ್ಥ ಮಾಡಿಕೊಳ್ಳಬೇಡಿ.

ತದನಂತರ: ನಳಿನ್ ಮೇಲಿನ ಪ್ರಕರಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮೇಲಿನ ಪ್ರಕರಣಕ್ಕೂ ತಾಳೆ ಹಾಕಿ ನೋಡಿ. ದೇಶಕ್ಕಾಗಿ ಧರ್ಮಕ್ಕಾಗಿ ಕೇಸು ಹಾಕಿಸಿಕೊಂಡಿದ್ದವರಿಗೆ ಕಣ್ಣು ಮುಚ್ಚಿ ಮತನೀಡಿ…

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close