ಪ್ರಚಲಿತ

ಸಿಎಂ ಪರ ಪ್ರಚಾರ ನಡೆಸಿದ್ದೇ ತಪ್ಪಾಯ್ತಾ.? ರಾಜಕೀಯದಿಂದ ಬೇಸತ್ತು ಹಿಂದೆ ಸರಿದ ಕಿಚ್ಚ..! ನಿರ್ಧಾರವನ್ನು ಪ್ರಕಟಿಸಿದ ಸುದೀಪ್…

ರಾಜಕೀಯ ಅನ್ನೋದೇ ಹಾಗೆ. ಅದೊಂದು ಸಾಗರ ಇದ್ದ ಹಾಗೆ. ಈ ಸಾಗರದಲ್ಲಿ ಇಳಿದ ಮೇಲೆಯೇ ಅದರ ಆಳ ಅಗಲ ಗೊತ್ತಾಗೋದು. ಒಮ್ಮೆ ಜಿಗಿದರೆ ಈಜಿಕೊಂಡೇ ಇರಬೇಕೇ ಹೊರತು ದಡ ಸೇರುವುದು ತುಂಬಾನೇ ಕಷ್ಟ. ಇದು ಈಗ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್‌ಗೆ ಗೊತ್ತಾದಂತಿದೆ.

ಆರಂಭದಲ್ಲಿ ಕಿಚ್ಚ ಎಲ್ಲವೂ ತನ್ನದೇ ಕಿಚ್ಚು ಎಂದುಕೊಂಡು ಚುನಾವಣಾ ಅಖಾಡಕ್ಕೆ ಇಳಿದೇ ಬಿಟ್ಟರು. ಆದರೆ ಅದರ ತೀವ್ರತೆ ಸುದೀಪ್ ಗೆ ಗೊತ್ತಾಗಲು ಹೆಚ್ಚು ಸಮಯ ಬೇಕಾಗಿ ಇರಲಿಲ್ಲ. ಅದ್ಯಾವಾಗ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ನಡೆಸಲು ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸಿದರೋ ಅಂದು ಅವರಿಗೆ ಶನಿ ದೆಸೆ ಆರಂಭ ಆಗಿತ್ತು.

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ನಡೆಸಿದರೆ ನಾವು ಸುಮ್ಮನಿರೋಲ್ಲ ಎಂದು ಜನತೆ ಕಿಚ್ಚನ ವಿರುದ್ಧ ಕಿಚ್ಚು ಹಚ್ಚಿಸಿ ಬಿಟ್ಟರು. ಇದು ನಟ ಸುದೀಪ್ ಗೆ ಆರಂಭಿಕ ಆಘಾತವನ್ನೇ ತಂದಿಟ್ಟಿತ್ತು. ನಂತರ ಇನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡೋದಿಲ್ಲ ಎಂದು ಹೇಳಿಬಿಟ್ಟು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಆರಂಭಿಸಿದರು.

ತನ್ನ ಆತ್ಮೀಯ ಸ್ನೇಹಿತ ಬಳ್ಳಾರಿ ಸಂಸದ ಹಾಗೂ ಮೊಳಕಾಲ್ಮೂರು ಮತ್ತು ಬಾದಾಮಿಯ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀ ರಾಮುಲು ಪರವಾಗಿ ಪ್ರಚಾರಕ್ಕಾಗಿ ನಡೆಸಲು ಮುಂದಾದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮೂಲಕ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದ ಸುದೀಪ್ ಬಳ್ಳಾರಿಯಲ್ಲೂ ತನ್ನ ಪ್ರಚಾರದ ಅಬ್ಬರವನ್ನು ಮುಂದುವರೆಸಿದ್ದರು. ಬಳ್ಳಾರಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜೂಗೌಡ ಪರವಾಗಿ ಪ್ರಚಾರ ನಡೆಸಿದರು.

ಕಣದಿಂದ ಹಿಂದೆ ಸರಿದ ಮಾಣಿಕ್ಯ..!

ಇದೀಗ ಈ ರಾಜಕೀಯ ಜಂಜಾಟಗಳು ಕಿಚ್ಚ ಸುದೀಪ್ ಗೆ ಸಾಕಾದಂತಿದೆ. ಕಿಚ್ಚ ಸುದೀಪ್ ಗೆ ಅಕ್ಷರಷಃ ರಾಜಕೀಯ ಜಿಜ್ನಾಸೆ ಕಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ನಡೆಸಲು ಬಂದಿದ್ದೇ ತಪ್ಪು ಎಂದು ಕಿಚ್ಚ ಸುದೀಪ್ ಗೆ ಮನದಟ್ಟಾದಂತಿದೆ. ಹೀಗಾಗಿ ತಾನು ಇನ್ನು ಮುಂದೆ ತಾನು ಯಾವ ಚುನಾವಣಾ ಪ್ರಚಾರದಲ್ಲೂ ಭಾಗವಹಿಸುವುದಿಲ್ಲ ಎಂದಿದ್ದಾರೆ.

“ನಾನು ನನ್ನ ಕೆಲ ಆತ್ಮೀಯ ಸ್ನೇಹಿತರ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ ಅಷ್ಟೇ. ಅವರು ನನ್ನ ಕಠಿಣ ಸಂದರ್ಭದಲ್ಲಿ ಸಹಾಯದ ಹಸ್ತವನ್ನು ಚಾಚಿದವರು. ಹೀಗಾಗಿ ಅವರ ಚುನಾವಣಾ ಸಂದರ್ಭದಲ್ಲಿ ನಾನು ಅವರ ಪರ ನಿಲ್ಲೋದೂ ಮಾನವೀಯತೆಯ ದೃಷ್ಟಿಯಿಂದ ಉತ್ತಮ. ಹೀಗಾಗಿ ನಾನು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಆದರೆ ಇನ್ನು ಮುಂದೆ ನಾನು ಯಾವುದೇ ಚುನಾವಣಾ ಪ್ರಚಾರ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುದಿಲ್ಲ” ಎಂದು ಹೇಳಿದರು. ಈ ಬಗ್ಗೆ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ ಕಿಚ್ಚ ತನ್ನ ಅಭಿಮಾನಿಗಳಿಗೆ ನೀಡುತ್ತಿರುವ ಸಂದೇಶ ಎಂದಿದ್ದಾರೆ.

ಏನೇ ಇರಲಿ, ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ನಡೆಸಿದಾಗಿನಿಂದ ಬೆಂಕಿ ಉಂಡೆಯಂತಾಗಿರುವ ಅಭಿಮಾನಿಗಳು ಬಿಜೆಪಿ ಪರ ಪ್ರಚಾರ ನಡೆಸಿದ ನಂತರ ತಣ್ಣಗಾಗಿದ್ದರೂ ಕಿಚ್ಚನಿಗೆ ಮಾತ್ರ ರಾಜಕೀಯ ಜಿಜ್ಞಾಸೆ ಕಾಡುತ್ತಿರುವುದಂತು ಸುಳ್ಳಲ್ಲ…

-ಸುನಿಲ್ ಪಣಪಿಲ

Tags

Related Articles

Close