ಪ್ರಚಲಿತ

ಇಸ್ಲಾಂ ರಾಷ್ಟ್ರದಲ್ಲೇ ಬ್ಯಾನ್ ಮಾಡಲಾದ ಹಿಜಾಬ್‌ಗೆ ಭಾರತದಲ್ಲೇಕೆ ಪ್ರಾಮುಖ್ಯತೆ?

ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹಿಜಾಬ್, ಬುರ್ಖಾ‌ಗಳನ್ನು ಶಾಲೆಗಳಲ್ಲಿ, ಪರೀಕ್ಷಾ ಸಂದರ್ಭದಲ್ಲಿ ಧರಿಸದಂತೆ ಕಾನೂನುಗಳನ್ನು ತರುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಕೆಲವು ಮುಸ್ಲಿಂ ವಿದ್ಯಾರ್ಥಿ‌ಗಳು ಹಿಜಾಬ್ ಇಲ್ಲದ ಶಿಕ್ಷಣ ನಮಗೆ ಬೇಡವೇ ಬೇಡ ಎಂದು ಹಠ ಹಿಡಿದು ಕುಳಿತಿರುವುದು ನಮ್ಮೆಲ್ಲರಿಗೂ ತಿಳಿದ ಸಂಗತಿ.

ಹೌದು ಸೌದಿ ಅರೇಬಿಯಾವು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಬುರ್ಖಾ ಧರಿಸಬಾರದು ಎಂಬ ಹೊಸ ನಿಯಮವೊಂದನ್ನು ಹೊರಡಿಸುವ ಮೂಲಕ, ಇತರ ಮುಸ್ಲಿಂ ರಾಷ್ಟ್ರಗಳಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ಸೌದಿಯ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗವು, ಶಿಕ್ಷಣ ಸಚಿವಾಲಯ‌ದ ಜೊಯೆಗೆ, ಶೈಕ್ಷಣಿಕ ಹಾಗೂ ತರಬೇತಿ ವ್ಯವಸ್ಥೆ‌ಗೆ ಮಾನ್ಯತೆ ನೀಡುವ ಸಲುವಾಗಿ ಪರೀಕ್ಷಾ ಅವಧಿಯಲ್ಲಿ ಬುರ್ಖಾ ಧರಿಸುವಂತಿಲ್ಲ ಎಂಬ ನಿಲುವನ್ನು ಪ್ರಕಟಿಸಿದೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬುರ್ಖಾ ಧರಿಸಲು ಅವಕಾಶ ನೀಡಲಾಗದು ಎಂದು ಘೋಷಿಸಿದೆ. ಪರೀಕ್ಷಾ ಕೇಂದ್ರ‌ಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು. ಸಾರ್ವಜನಿಕ ಸಭ್ಯತೆ‌ಗೆ ಧಕ್ಕೆ ಬಾರದಂತೆ ಬಟ್ಟೆಗಳನ್ನು ಧರಿಸಬೇಕು ಎಂದು ಸೂಚಿಸಿದೆ.

ಕೆಲ ಸಮಯದ ಹಿಂದೆ ನಮ್ಮದೇ ಕರ್ನಾಟಕ‌ದ ಉಡುಪಿಯಲ್ಲಿ ಶಿಕ್ಷಣ ಸಂಸ್ಥೆ‌ಗಳಿಗೆ ಹಿಜಾಬ್ ಧರಿಸದಂತೆ ನಿಯಮ ಆರಂಭವಾದಾಗ, ಇದನ್ನು ಪ್ರಶ್ನೆ ಮಾಡಿ, ನಮಗೆ ಶಿಕ್ಷಣ‌ಕ್ಕಿಂತ ಹಿಜಾಬ್ ಮುಖ್ಯ ಎಂದು ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಸಮುದಿಯದ ವಿದ್ಯಾರ್ಥಿಗಳಿಗೆ ಸದಾಯ ಇಸ್ಲಾಂ ರಾಷ್ಟ್ರ ಸೌದಿ ಅರೇಬಿಯಾ ಜಿರಿಗೆ ತಂದಿರುವ ಈ ನೀತಿ ಮುಖಕ್ಕೆ ಹೊಡೆದಂತಾಗಿದೆ ಎನ್ನಬಹುದು. ಕುರಾನ್‌ನಲ್ಲಿ ಪರ್ದಾ, ಹಿಜಾಬ್, ಬುರ್ಖಾ ಧರಿಸುವುದು ಕಡ್ಡಾಯ ಎಂಬ ನಿಯಮವಿದ್ದು, ನಾವಿದನ್ನು ಪಾಲಿಸಿಯೇ ತೀರುತ್ತೇವೆ. ನಮಗೆ ಶಿಕ್ಷಣ ಪಡೆಯಲು ತರಗತಿಗಳಿಗೆ ಹಾಜರಾಗಬೇಕಾದರೆ, ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು, ಇಡೀ ದೇಶವನ್ನೇ ಅಂತರಾಷ್ಟ್ರೀಯ ಮಟ್ಟದಲ್ಲಿ ನಕಾರಾತ್ಮಕ‌ವಾಗಿ ಸುದ್ದಿಯಾಗುವಂತೆ ಮಾಡಿದ, ನ್ಯಾಯದ ಹೆಸರು ಹೇಳಿ ಕೋರ್ಟ್‌ಗೆ ಹತ್ತಿದ ಮುಸ್ಲಿಂ ಮೂಲಭೂತ‌ವಾದಿಗಳಿಗೂ ಸೌದಿ ಅರೇಬಿಯಾದ ‘ಪರೀಕ್ಷಾ ಕೇಂದ್ರ‌ಗಳಲ್ಲಿ ಬುರ್ಖಾ ಬ್ಯಾನ್’ ನಡೆ ಆರಗಿಸಲಾಗದ ತುತ್ತಾಗಿ ಪರಿಣಮಿಸಿದೆ ಎಂದೆನ್ನಬಹುದು.

ಅಂದ ಹಾಗೆ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ಆ ದೇಶದ ಈ ಹೊಸ ನಿಯಮವನ್ನು ಒಪ್ಪಿಕೊಂಡು, ನಮಗೆ ಬುರ್ಖಾ‌ಗಿಂತ ಶಿಕ್ಷಣ‌ವೇ ಮುಖ್ಯ ಎಂದು ಸಾರಿದ್ದಾರೆ. ಆದರೆ ಭಾರತದ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಮಾತ್ರ ನಮಗೆ ಶಿಕ್ಷಣ ದೊರೆಯದಿದ್ದರೂ ಪರವಾಗಿಲ್ಲ, ನಾವಂತೂ ಹಿಜಾಬ್ ಹಾಕೇ ಹಾಕುತ್ತೇವೆ. ಹಿಜಾಬ್ ಹಾಕುವ ಅವಕಾಶ ನೀಡಿದರೆ ಮಾತ್ರ ಶಿಕ್ಷಣ ಸಾಕು. ತರಗತಿಗಳಿಗೆ ತೆರಳುತ್ತೇವೆ ಎಂದು ಗದ್ದಲ ಎಬ್ಬಿಸಿ, ತಮ್ಮ ಬದುಕಿಗೆ ತಾವೇ ಬೆಂಕಿ ಇರಿಸಿಕೊಂಡಿದ್ದಾರೆ.

ಇಸ್ಲಾಂ ರಾಷ್ಟ್ರಗಳೇ ಇಷ್ಟೊಂದು ಮುಂದುವರೆದಿರುವಾಗ, ಭಾರತದ ಮುಸ್ಲಿಮರಲ್ಲಿ ಕೆಲವರು ಇನ್ನೂ ಭವಿಷ್ಯದ ಬಗ್ಗೆ ಆಲೋಚನೆ ಮಾಡದಿರುವುದು ದುರಂತ. ಈ ಮುಸ್ಲಿಂ ರಾಷ್ಟ್ರಗಳನ್ನು ನೋಡಿಯಾದರೂ ಭಾರತದ ಮೂಲಭೂತ‌ವಾದಿ ಮುಸಲ್ಮಾನ‌ರಲ್ಲಿ ಬದಲಾವಣೆಯಾಗಲಿ. ಹಿಜಾಬ್‌ಗಿಂತ ಶಿಕ್ಷಣ ಮುಖ್ಯ ಎನ್ನುವ ಅಂಶದ ಅರಿವಾಗಲಿ ಎನ್ನುವುದು ನಮ್ಮ ಆಶಯ. ಆ ಮೂಲಕ ಭಾರತದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಹ ಉತ್ತಮ, ಸದ್ವಿಚಾರದ ಶಿಕ್ಷಣ ದೊರೆಯಲಿ ಎಂಬುದು ನಮ್ಮ ಹಾರೈಕೆ.

Tags

Related Articles

Close