ಪ್ರಚಲಿತ

ಮೋದಿಗಾಗಿ ಭಾರತಕ್ಕೆ ಎಷ್ಟು ಇಂಧನ ಬೇಕಾದರೂ ಕೊಡ್ತೇವೆಂದ ಸೌದಿ.! ಇಳಿಯಬಹುದಾ ಪೆಟ್ರೋಲ್ ಬೆಲೆ.?

ತೈಲ ಕಂಪನಿಗಳ ಬೆಲೆ ಏರಿಕೆ ಹಾಗೂ ಜಗತ್ತಿನಲ್ಲಿ ನಡೆಯುತ್ತಿರುವ ಆರ್ಥಿಕ ಯುದ್ಧಗಳಿಂದಾಗಿ ಭಾರತದಲ್ಲಿ ಗಗನಕ್ಕೇರಿರುವ ಇಂಧನ ಬೆಲೆಗಳು ಇನ್ನು ಇಳಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಭಾರತಕ್ಕೆ ಯಾವ ನೆರವನ್ನೂ ನೀಡಲು ತಮ್ಮ ರಾಷ್ಟ್ರ ಬದ್ಧವಾಗಿದೆ ಎಂದು ಈಗಾಗಲೇ ಇಂಧನ ರಫ್ತು ಮಾಡುವ ರಾಷ್ಟ್ರಗಳು ಘೋಷಿಸಿದ್ದು ಇದೀಗ ಮತ್ತೊಂದು ರಾಷ್ಟ್ರವೂ ಭಾರತದ ಬೆನ್ನಿಗೆ ನಿಂತಿದೆ.

ಇತ್ತೀಚೆಗೆ ಇರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಇದೀಗ ಮತ್ತೊಂದು ರಾಷ್ಟ್ರ ಬೆನ್ನಿಗೆ ನಿಂತಿದೆ. ತೈಲ ಉತ್ಪಾದಿಸುವ ರಾಷ್ಟ್ರವಾದ ಸೌದಿ ಅರೇಬಿಯಾ ಭಾರತದ ಬೆನ್ನಿಗೆ ನಿಂತಿದ್ದು ಭಾರತಕ್ಕೆ ತೈಲ ನೀಡಲು ಹಾಗೂ ಪ್ರಧಾನಿ ಮೋದಿಗೆ ಸಹಾಯ ಹಸ್ತ ಚಾಚಲು ನಾವು ಸಿದ್ಧ ಎಂದು ಸಾರಿದೆ.

Image result for ಎ. ಅಲ್-ಫಾಲಿಹ್

“ಜಗತ್ತಿನಲ್ಲಿ ತೈಲ ಬೆಲೆ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ನಮ್ಮ ದೇಶಕ್ಕೆ ತೈಲ ಬೇಡಿಕೆ ಹೆಚ್ಚಾಗಿದೆ. ಈ ವೇಳೆ ಭಾರತದೊಂದಿಗೆ ಸಂಬಂಧ ವೃದ್ಧಿಗೊಳಿಸುವುದೇ ಸೌದಿ ಅರೇಬಿಯಾದ ಪ್ರಧಾನ ಆದ್ಯತೆ” ಎಂದು ಸೌದಿ ಅರೇಬಿಯಾದ ಸಚಿವ ಎ. ಅಲ್-ಫಾಲಿಹ್ ತಿಳಿಸಿದ್ದಾರೆ. ಸೋಮವಾರ ನಡೆದಿದ್ದ ಭಾರತೀಯ ಇಂಧನ ವೇದಿಕೆಯಲ್ಲಿ ಮಾತನಾಡಿದ ಅವರು “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ನಮಗೆ ಆತ್ಮೀಯತೆ ಇದೆ. ರತ್ನಗಿರಿ ಶುದ್ಧೀಕರಣ ಘಟಕದಲ್ಲಿ ಸೌದಿ ಅರಮ್ಕೋ 44 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವುದು ಭಾರತದೊಂದಿಗಿನ ಆರಂಭದ ವ್ಯವಹಾರವಾಗಿದೆ. ಭಾರತದಲ್ಲಿ ಮತ್ತಷ್ಟು ಹೂಡಿಕೆ ಮಾಡುವ ಆಶಯವನ್ನು ಹೊಂದಿದ್ದೇವೆ. ಪ್ರಧಾನಿ ಮೋದಿ ಹಾಗೂ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗಿನ ಮಾತುಕತೆ ನಡೆಸಿದ ಬಳಿಕ ಭಾರತದ ಇಂಧನ ಬೇಡಿಕೆ ಈಡೇರಿಸುವುದು ಹಾಗೂ ಮುಂದುವರೆಸುವುದಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

“ಮೋದಿಯವರಿಂದಾಗಿ ನಮ್ಮ ದೇಶದಲ್ಲಿಯೂ ಹಣದುಬ್ಬರ ಇಳಿಕೆಯಾಗಿದೆ. ಮೋದಿಯಿಂದಾಗಿ ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೇ ಅಚ್ಛೇದಿನ್ ಬಂದಿದೆ. ಮೋದಿಯವರು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ” ಎಂದು ಇದೇ ವೇಳೆ ಹಾಡಿ ಹೊಗಳಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
Close