ಪ್ರಚಲಿತ

ಯಡಿಯೂರಪ್ಪ ಇಲ್ಲದೆ ಮೈತ್ರಿ ಸರಕಾರ ಮುಂದುವರಿಯುವುದು ಅಸಾಧ್ಯ..! ಜೆಡಿಎಸ್‌ ಶಾಸಕನಿಂದಲೇ ಕುಮಾರಸ್ವಾಮಿಗೆ ಕಿವಿಮಾತು..!

ರಾಜಕೀಯದಲ್ಲಿ ಏನಾಗುತ್ತದೆ ಎಂಬುದು ಯಾರೂ ಊಹಿಸಲು ಅಸಾಧ್ಯ. ಯಾಕೆಂದರೆ ಇಂದು ಒಂದು ರೀತಿ ಇದ್ದವರು ನಾಳೆ ಇನ್ನೊಂದು ರೀತಿಯಲ್ಲಿ ವರ್ತಿಸುತ್ತಾರೆ ಎಂಬುದಕ್ಕೆ ಸದ್ಯದ ಕರ್ನಾಟಕದ ಸ್ಥಿತಿಯೇ ಸಾಕ್ಷಿ. ಮೈತ್ರಿ ಮಾಡಿಕೊಂಡು ಸಂಪೂರ್ಣವಾಗಿ ಐದು ವರ್ಷ ಆಡಳಿತ ನಡೆಸುವುದಾಗಿ ಹೇಳಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಮಧ್ಯೆ ಈಗಲೇ ಕಚ್ಚಾಟ ಆರಂಭವಾಗಿದೆ. ಚುನಾವಣೆಯ ಮೊದಲು ಬದ್ಧ ವೈರಿಗಳಂತೆ ಇದ್ದ ಕಾಂಗ್ರೆಸ್-ಜೆಡಿಎಸ್ ಕೇವಲ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದೆ‌. ಆದರೂ ಒಳಗಿಂದೊಳಗೆ ಶೀತಲ ಸಮರ ನಡೆಯುತ್ತಲೇ ಇದ್ದು ಯಾವ ಸಂದರ್ಭದಲ್ಲಿ ಮೈತ್ರಿ ಮುರಿದುಬೀಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.!

ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಜೆಡಿಎಸ್‌ ಶಾಸಕ..!

ಯಡಿಯೂರಪ್ಪನವರು ರಾಜಕೀಯ ಜೀವನದಲ್ಲಿ ಭಾರೀ ಅನುಭವಸ್ಥರು ಎಂಬುದು ಸ್ವತಃ ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರೇ ಒಪ್ಪಿಕೊಂಡಿರುವ ವಿಚಾರ. ಯಾಕೆಂದರೆ ಯಾವ ಸನ್ನಿವೇಶವನ್ನೂ ಎದುರಿಸುವ ಯಡಿಯೂರಪ್ಪನವರು ಎಂದರೆ ವಿರೋಧಿಗಳು ಒಂದು ಹೆಜ್ಹೆ ಹಿಂದಕ್ಕೆ ಹಾಕುವುದು ಖಂಡಿತ. ಅದೇ ರೀತಿ ಬಹುಮತ ಸಾಧಿಸಲು ಸಾಧ್ಯವಾಗದೇ ಇದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ನವರು ಕೊನೆಗೂ ಪಟ್ಟದಿಂದ ಕೆಳಗಿಳಿಯಬೇಕಾಯಿತು. ಇತ್ತ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಗೆ ಎಲ್ಲಿಲ್ಲದ ಸಂಭ್ರಮ. ಕುಮಾರಸ್ವಾಮಿ ಅವರು ಸದ್ಯ ಮುಖ್ಯಮಂತ್ರಿ ಆದರೂ ಕೂಡಾ ಯಡಿಯೂರಪ್ಪ ನವರ ಸಲಹೆ ಇಲ್ಲದೆ ಆಡಳಿತ ನಡೆಸುವುದು ಕಷ್ಟ ಎಂದು ಇದೀಗ ಸ್ವತಃ ಜೆಡಿಎಸ್‌ ಶಾಸಕರೇ ಹೇಳಿಕೊಂಡಿದ್ದಾರೆ..!

Image result for yeddyurappa

ಮಂಡ್ಯ ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್ ಅವರು ಇಂದು ಮಂಡ್ಯದಲ್ಲಿ ಮಾತನಾಡುತ್ತಾ, ಕುಮಾರಸ್ವಾಮಿ ಅವರು ಯಾವುದೇ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬಲ್ಲರು, ಆದರೆ ಅದಕ್ಕೆ ಯಡಿಯೂರಪ್ಪ ನವರ ಮಾರ್ಗದರ್ಶನ ಮತ್ತು ಸಲಹೆ ಅತ್ಯಗತ್ಯ ಎಂದಿದ್ದಾರೆ. ಯಡಿಯೂರಪ್ಪ ನವರು ರಾಜಕೀಯದಲ್ಲಿ ಒಳ್ಳೆಯ ಅನುಭವಸ್ಥರು , ಆದ್ದರಿಂದ ಅವರ ಸಲಹೆ ಪಡೆದರೆ ಮೈತ್ರಿ ಸರಕಾರ ಐದು ವರ್ಷ ಪೂರ್ಣಗೊಳಿಸಬಹುದು ಎಂದು ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ..!

ಗೊಂದಲದಲ್ಲಿ ಕುಮಾರಸ್ವಾಮಿ..!

ಚುನಾವಣೆಗೂ ಮೊದಲು ಪರಸ್ಪರ ಕಿತ್ತಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ಮೈತ್ರಿ ಮಾಡಿಕೊಂಡರೂ ಇನ್ನೂ ಇಬ್ಬರ ಒಳಗೊಳಗಿನ ವೈಮನಸ್ಸು ಮಾತ್ರ ಕಡಿಮೆಯಾಗಿಲ್ಲ. ಯಾಕೆಂದರೆ ಜೆಡಿಎಸ್‌ ಕಾಂಗ್ರೆಸ್ ಜೊತೆ ಸೇರಿಕೊಂಡಿರುವುದಕ್ಕೆ ಸ್ವತಃ ಜೆಡಿಎಸ್‌ ಶಾಸಕರೇ ಅಸಮಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ ಕುಮಾರಸ್ವಾಮಿ ಅವರು ಸದ್ಯ ಗೊಂದಲದಲ್ಲಿದ್ದು , ತಮ್ಮ ಶಾಸಕರನ್ನೂ ಬಿಡುವಂತಿಲ್ಲ ಮತ್ತು ಕೈಹಿಡಿದ ಕಾಂಗ್ರೆಸನ್ನು ಕೂಡಾ ದೂರ ಮಾಡುವಂತಿಲ್ಲ ಎಂಬಂತಾಗಿದೆ ಕುಮಾರಸ್ವಾಮಿ ಅವರ ಸ್ಥಿತಿ. ಒಂದೆಡೆ ಹಳೇ ಹೇಳಿಕೆಗಳೇ ಇದೀಗ ತಿರುಗುಬಾಣವಾಗುತ್ತಿದ್ದು , ಕುಮಾರಸ್ವಾಮಿ ಅವರ ಮುಂದೆ ಸಾವಿರಾರು ಗೊಂದಲಗಳು ತಾಂಡವವಾಡುತ್ತಿದೆ..!

Image result for kumaraswamy in tension

ಇತ್ತ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ರಾಜ್ಯದ ಜನರ ಬೆಂಬಲ ಹೆಚ್ಚಿರುವುದರಿಂದ ಕುಮಾರಸ್ವಾಮಿ ಅವರಿಗೆ ನುಂಗಲಾರದ ತುತ್ತು ಎಂಬಂತಾಗಿದೆ ರಾಜ್ಯದ ಪರಿಸ್ಥಿತಿ.! ಇತ್ತ ಕಾಂಗ್ರೆಸ್ ಕೂಡಾ ಖಾತೆ ಹಂಚಿಕೆ ವಿಚಾರದಲ್ಲಿ ಒತ್ತಡ ಹೇರುತ್ತಿದ್ದು , ಕುಮಾರಸ್ವಾಮಿ ಅವರಿಗೆ ಏನೂ ಮಾಡಲಾಗದ ಸ್ಥಿತಿ ಬಂದಿದೆ ಎಂದರೆ ತಪ್ಪಾಗದು..!

–ಅರ್ಜುನ್

Tags

Related Articles

Close