ಪ್ರಚಲಿತ

ಯಹೀ ಸಮಯ್ ಹೆ, ಸಹೀ ಸಮಯ್ ಹೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯ ಕೋರ್ ಕಮಿಟಿ ರಾಷ್ಟ್ರೀಯ ಮಟ್ಟದ ಸಭೆ ನಡೆಯುತ್ತಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಪಕ್ಷ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬ ಮಾಹಿತಿ ನೀಡುತ್ತಿದ್ದಾರೆ.

ನಮ್ಮ ಪಕ್ಷದ ಸದಸ್ಯರು ನವೋತ್ಸಾಹ, ಹೊಸ ಶಕ್ತಿ, ಹೊಸ ಹುರುಪಿನ ‌ಜೊತೆಗೆ ಮುಂದಿನ ಚುನಾವಣೆಯನ್ನು ಎದುರಿಸಬೇಕಾಗಿದೆ. ಬಿಜೆಪಿ ಕಾರ್ಯಕರ್ತರು ಪ್ರತಿಯೋರ್ವ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬಿಜೆಪಿಯನ್ನು ಈ ಬಾರಿಯೂ ಕೇಂದ್ರದಲ್ಲಿ ಹೆಚ್ಚು ಶಕ್ತಿಯುತವಾಗಿ ಸರ್ಕಾರ ರಚನೆ ಮಾಡಬೇಕು. ಇದಕ್ಕಾಗಿ ಕಾರ್ಯಕರ್ತರು ಮುಂದಿನ ನೂರು ದಿನಗಳಲ್ಲಿ ಪ್ರತಿಯೋರ್ವ ಮತದಾರ, ಫಲಾನುಭವಿಗಳನ್ನು ತಲುಪಬೇಕು ಎಂದವರು ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಕಾಲ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಆಡಳಿತ ನಡೆಸಿದ್ದು, ಈ ಸಮಯ ಸಂಪೂರ್ಣ ಭ್ರಷ್ಟಾಚಾರ ರಹಿತವಾಗಿತ್ತು. ರಾಷ್ಟ್ರನೀತಿಗೆ ಬದ್ಧವಾದ ಆಡಳಿತ ನೀಡಿದ್ದೆವು. ಜೊತೆಗೆ ದೇಶದ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೆವು. ರಾಮ ಮಂದಿರ ನಿರ್ಮಾಣ ಭರವಸೆ ನನಸಾಗಿಸಿದ್ದೇವೆ. ಹಾಗೆಯೇ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು ಒಂದು ಕಂಡುಕೊಂಡಿದ್ದೇವೆ. ಹಾಗೆಯೇ, ಅವರಿಗೆ ಮಾತೃತ್ವದ ಯರು ತಿಂಗಳ ಕಾಲ ನೀಡುವ ಭರವಸೆಯನ್ನು ನೀಡುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗಾಗಿ ಹಗಲಿರುಳು ದುಡಿದು ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಹೆಚ್ಚು ಮತದಾರರನ್ನು ತಲುಪಿ, ಹೆಚ್ಚು ಸ್ಥಾನವನ್ನು ಗೆಲ್ಲುವಂತೆ ‌ಮಾಡಬೇಕು. ನಮ್ಮ ಗುರಿ ವಿಕಸಿತ ಭಾರತ. ಇದನ್ನು ಸಾಧಿಸಲು ನಾವೆಲ್ಲರೂ ಪ್ರಯತ್ನ ಮಾಡಬೇಕು. ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಜಯಿಸಿ ಇತಿಹಾಸ ನಿರ್ಮಾಣ ಮಾಡಬೇಕಿದೆ ಎಂದಿದ್ದಾರೆ.

ಪ್ರಸ್ತುತ ನಾವು ವಿಕಸಿತ ಭಾರತದತ್ತ ದೊಡ್ಡ ಹೆಜ್ಜೆ ನೆಟ್ಟಿದ್ದೇವೆ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಬೇಕಿದೆ. ದೇಶದ ಸ್ವಾತಂತ್ರ್ಯದ ನೂರನೇ ‌ವರ್ಷದಲ್ಲಿ ನಮ್ಮ ದೇಶ ವಿಕಸಿತ ಭಾರತವಾಗಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇತರ ವಿರೋಧಿಗಳು ಪ್ರಧಾನಿ ಮೋದಿ ವಿರುದ್ಧ ಇಲ್ಲ ಸಲ್ಲದ ಸುಳ್ಳುಗಳನ್ನು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಈ ಬುದ್ಧಿಯನ್ನು ಅದೇ ಪಕ್ಷದ ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ‌ಒಳಗೆಯೇ ಸಂಘರ್ಷ ನಡೆಯುತ್ತಿದೆ.’ಯಹೀ ಸಮಯ್ ಹೇ, ಸಹೀ‌ ಸಮಯ್ ಹೇ’ ಎಂದು ಪ್ರಧಾನಿ ತಿಳಿಸಿದ್ದಾರೆ.

Tags

Related Articles

Close