ಪ್ರಚಲಿತ

ಸಿಎಂ ವಿರುದ್ಧ ಸಿಡಿದೆದ್ದ ರಾಕಿಂಗ್ ಸ್ಟಾರ್..! ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ನಡೆಯುತ್ತಾ ಯಶ್ ಮ್ಯಾಜಿಕ್..!

ದಿನೇ ದಿನೇ ರಂಗೇರುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ ಐದೇ ಐದು ದಿನ ಬಾಕಿ ಇದೆ ಅಷ್ಟೇ..! ಇತ್ತ ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿರುವ ರಾಜಕೀಯ ಪಕ್ಷಗಳು ಪರಸ್ಪರ ಪೈಪೋಟಿಗೆ ಇಳಿದಿದ್ದು, ಚಿತ್ರರಂಗದ ಸ್ಟಾರ್ಗಳ ದಂಡು ಕೂಡಾ ರಾಜಕೀಯ ಪ್ರವೇಶಿಸಿದೆ. ತಾವು ಬೆಂಬಲ ಸೂಚಿಸುವ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಈಗಾಗಲೇ ಆರಂಭಿಸಿದ್ದು, ಮೊದಲೇ ಕಾವೇರುತ್ತಿರುವ ಚುನಾವಣೆ ಇದೀಗ ಸಿನಿಮಾ ಸ್ಟಾರ್ ಗಳ ಎಂಟ್ರಿಯಿಂದಾಗಿ ಮತ್ತಷ್ಟು ಕುತೂಹಲ ಕೆರಳಿಸಿದೆ.!

ಸಿಎಂ ಸಿದ್ದರಾಮಯ್ಯನವರ ಪರ ನಟ ಕಿಚ್ಚ ಸುದೀಪ್ ಕ್ಯಾಂಪೇನ್ ನಡೆಸುವುದಾಗಿ ಪ್ರಚಾರ ಕಾರ್ಯ ಆರಂಭಿಸಿದ ದಿನದಂದೇ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿ, ಪ್ರಚಾರದಿಂದ ಹಿಂದೆ ಸರಿದಿದ್ದರು. ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯನವರು ಎರಡೂ ಕ್ಷೇತ್ರಗಳನ್ನು ಗೆಲ್ಲುವ ಸಲುವಾಗಿ ಸುದೀಪ್ ಅವರನ್ನು ತಮ್ಮ ಪರವಾಗಿ ಪ್ರಚಾರ ಮಾಡಲು ಬಳಸಿಕೊಂಡಿದ್ದರು. ಆದರೆ ಸುದೀಪ್‌ಗೆ ಹೋದಲ್ಲೆಲ್ಲಾ ಜನರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಪ್ರಚಾರದಿಂದ ಹಿಂದೆ ಸರಿದಿದ್ದರು. ಅದೇ ರೀತಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀ ರಾಮುಲು ಅವರ ಪರವಾಗಿ ರಾಕಿಂಗ್ ಸ್ಟಾರ್ ಯಶ್ ಕಣಕ್ಕಿಳಿದಿದ್ದರು. ಇದರಿಂದಾಗಿ ಇಡೀ ರಾಜಕೀಯ ಕ್ಷೇತ್ರವೇ ಆಗಿದೆ ರಣರಂಗದಂತಾಗಿತ್ತು. ಇದೀಗ ಸಿದ್ದರಾಮಯ್ಯನವರಿಗೆ ಯಶ್ ನೇರವಾಗಿ ಸವಾಲೆಸೆದಿದ್ದಾರೆ..!

ಸಿದ್ದರಾಮಯ್ಯನವರ ಪರ ಯಾವತ್ತೂ ಹೋಗಲಾರೆ..!

ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ಬಾದಾಮಿಯಲ್ಲಿ ಶ್ರೀ ರಾಮುಲು ಅವರು ಕಣಕ್ಕಿಳಿದಿರುವುದರಿಂದ ಈ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ನಾನು ಕ್ಯಾಂಪೇನ್ ನಡೆಸುವುದಿಲ್ಲ. ಈ ಕ್ಷೇತ್ರಗಳು ರಾಜಕೀಯವಾಗಿ ಸರಿಯಾಗಿಲ್ಲ. ಇಂತಹ ಕ್ಷೇತ್ರಗಳಲ್ಲಿ ರಾಜಕೀಯ ಅನುಭವಸ್ಥರೇ ಪ್ರಚಾರಕ್ಕಿಳಿಯಬೇಕು, ನಾನು ಹೋಗಿ ಏನೂ ಮಾಡುವಂತಿಲ್ಲ ಎಂದು ಯಶ್ ಸ್ಪಷ್ಟ ಪಡಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೆಲ ದಿನಗಳ ಹಿಂದೆಯೇ ಬಿಜೆಪಿ ಪರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದು, ಇದೀಗ ಶ್ರೀ ರಾಮುಲು ಪರವಾಗಿ ಬಾದಾಮಿಯಲ್ಲೂ ಪ್ರಚಾರ ನಡೆಸಲಿದ್ದಾರೆ. ಇದರಿಂದಾಗಿ ಈ ಕ್ಷೇತ್ರ ಮತ್ತಷ್ಟು ರಂಗೇರುತ್ತಿದ್ದು, ಬಾದಾಮಿ ಮತದಾರರು ಯಾರಿಗೆ ಒಲಿಯುತ್ತಾರೆ ಎಂಬುವುದನ್ನು ಕಾದು ನೋಡಬೇಕು..!

ಜನರೇ ತೀರ್ಮಾನಿಸುತ್ತಾರೆ..!

ಯಾರು ಯಾರ ಪರವಾಗಿ ಪ್ರಚಾರ ಮಾಡಿದರೂ ಕೂಡ ಜನರು ಯಾರನ್ನು ಬೆಂಬಲಿಸುತ್ತಾರೋ ಅವರೇ ಗೆಲ್ಲುತ್ತಾರೆ ವಿನಃ , ನಮ್ಮ ಪ್ರಚಾರ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ ಯಶ್. ಶ್ರೀ ರಾಮುಲು ನನ್ನ ಆತ್ಮೀಯರು, ಆದ್ದರಿಂದ ಅವರ ಪರವಾಗಿ ನಾನು ಮತಯಾಚನೆ ನಡೆಸುತ್ತಿದ್ದೇನೆ, ನನಗೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸಿಲ್ಲ ಎಂದಿದ್ದಾರೆ. ರಾಜಕೀಯವಾಗಿ ನಾನು ಇನ್ನೂ ಕಲಿಯಬೇಕಾದದ್ದು ಸಾಕಷ್ಟಿದೆ, ಆದ್ದರಿಂದ ನಾನು ಇಂತಹ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಿಲ್ಲ ಎಂದಿದ್ದಾರೆ.

ಈ ಮೊದಲೇ ಕುತೂಹಲ ಹೆಚ್ಚುಸುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ಚಿತ್ರರಂಗದ ಸ್ಟಾರ್‌ಗಳ ಪ್ರಚಾರದಿಂದ ಭಾರೀ ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯನವರಿಗೆ ಈ ಬಾರಿ ಸೋಲುವ ಭೀತಿ ಹೆಚ್ಚಿರುವುದರಿಂದ ಪ್ರಚಾರಕ್ಕಾಗಿ ಸ್ಟಾರ್‌ಗಳ ಸಹಾಯ ಯಾಚಿಸಿದ್ದು, ಇದೀಗ ಕೈ ಹಿಡಿದವರೂ ಕೈ ಕೊಡುತ್ತಿದ್ದಾರೆ..!

–ಅರ್ಜುನ್

Tags

Related Articles

Close