ಪ್ರಚಲಿತ

ಮದರಾಸಗಳಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಕಲಿಸುವಂತೆ ಸೂಚನೆ!! ಯೋಗಿ ಆದಿತ್ಯನಾಥರ ಸರಕಾರದಿಂದ ಮತ್ತೊಂದು ದಿಟ್ಟ ನಿರ್ಧಾರ!!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಆಡಳಿತದಿಂದಾಗಿ ಇಡೀ ಉತ್ತರಪ್ರದೇಶ ರಾಜ್ಯ ಅದೆಷ್ಟು ಬದಲಾಣೆಯನ್ನು ಕಂಡಿದೆ ಎಂದರೆ ಅಟ್ಟಹಾಸದಿಂದ ಬೀಗುತ್ತಿದ್ದ ರೌಡಿಗಳು ತಮ್ಮ ವರಸೆಯನ್ನೇ ಬದಲಾಯಿಸಿಕೊಂಡು ಮಾಮುಲಿ ಮನುಷ್ಯರಂತೆ ಬದುಕುತ್ತಿದ್ದಾರೆ ಎಂದರೆ ಯೋಗಿ ಆದಿತ್ಯನಾಥರ ಆಡಳಿತ ಅದೆಷ್ಟು ಸಮರ್ಥವಾಗಿದೆ ಎನ್ನುವುದನ್ನು ಗಮನಿಸಬಹುದು!! ಅಷ್ಟೇ ಅಲ್ಲದೇ ಫೈರ್ ಬ್ರ್ಯಾಂಡ್ ಖ್ಯಾತಿ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಲೇ ಕೆಲವರು ಅರಚಾಡಲು ಶುರು ಮಾಡಿದ್ದರು!! ಅವರು ಒಬ್ಬ  ಸನ್ಯಾಸಿ ಎಂದೆಲ್ಲಾ ಬಾಯಿಗೆ ಬಂದ ಹಾಗೆ ಮಾತನಾಡಿದವರು ಅದೆಷ್ಟೋ ಜನ!! ಹಿಂದೂ ಸಂತನಿಗೆ ರಾಜಕೀಯ ಪಟ್ಟ ನೀಡಿದರೆ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂದು ಸುಳ್ಳು ಪ್ರಚಾರ ಮಾಡಿದ್ದರು!! ಮೋದಿಯ ಒಂದೊಂದು ನಡೆಯೂ ಬುದ್ಧಿಜೀವಿಗಳು ಬಾಯಿ ಮುಚ್ಚಿ ಕೂರುವಂತೆ ಮಾಡಿತ್ತು!! ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇಡೀ ದೇಶವೇ ಇದೀಗ ಉತ್ತರ ಪ್ರದೇಶದತ್ತ ನೋಡುವ ಹಾಗೆ ಆಗಿದೆ!!

ಮದರಾಸಗಳಲ್ಲಿ ಇಂಗ್ಲಿಷ್ ಹಿಂದಿ ಬೋಧನೆ!!

ಅಷ್ಟೇ ಮದರಸಾಗಳು ಬರೀ ಧರ್ಮಬೋಧನೆಗಷ್ಟೇ ಸೀಮಿತವಾಗದೆ ಎನ್ ಸಿಇಆರ್ ಟಿ ಪಠ್ಯ ಬೋಧಿಸಬೇಕು ಎಂಬುದು ಸಹ ಯೋಗಿ ಆದಿತ್ಯನಾಥರು ತೆಗೆದುಕೊಂಡ ಪ್ರಮುಖ ನಿರ್ಧಾರವಾಗಿದೆ. ಇಂತಹ ದಿಟ್ಟ ಯೋಗಿ ಆದಿತ್ಯನಾಥರು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದು, ಮದರಸಾಗಳಲ್ಲಿ ಉರ್ದು ಜತೆಗೆ ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಅದರಲ್ಲೂ ಅರಬೀ-ಫಾರ್ಸಿ ಉರ್ದು ಮದರಸಾ ಬೋರ್ಡ್ ಕಳೆದ ಮೇ 15ರಂದು ನಡೆಸಿದ ಸಭೆಯಲ್ಲಿ ಎಲ್ಲ ಮದರಸಾಗಳೂ ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತಾಗಬೇಕು ಎಂದು ಸಲಹೆ ನೀಡಲಾಗಿತ್ತು. ಅದರಂತೆ ಉತ್ತರ ಪ್ರದೇಶ ಸಚಿವ ಸಂಪುಟ ಆದೇಶ ಹೊರಡಿಸಿದ್ದು, ಎಲ್ಲ ಮದರಸಾಗಳೂ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಶಿಕ್ಷಣ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ಮದರಸಾಗಳೂ ಕಡ್ಡಾಯವಾಗಿ ಎನ್ ಸಿಇಆರ್‍ಟಿ ಅನ್ವಯ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಜತೆಗೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾದಂತಹ ಮಾನವಿಕ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ವಿಷಯಗಳನ್ನು ಸಹ ಕಲಿಸಬೇಕು ಎಂದು ಸೂಚಿಸಲಾಗಿದೆ.

Image result for yogi adityanath

ನಿಜಕ್ಕೂ ಯೋಗಿ ಆದಿತ್ಯನಾಥ್ ಅವರ ಈ ಆದೇಶಕ್ಕೆ ಮುಸ್ಲಿಂ ಮೂಲಭೂತವಾದಿಗಳು ಪತರಗುಟ್ಟಿರುವುದಂತೂ ನಿಜ!! ಯಾಕೆಂದರೆ ಅದರಲ್ಲಿ ಕೆಲವೊಂದು ಕುತೂಹಲಕಾರಿ ವಿಷಯಗಳಿವೆ. ಅದೇನೆಂದರೆ ಮದರಸಾಗಳಲ್ಲಿ ಮುಖ್ಯವಾಗಿ ಅರೆಬಿಕ್ ಹಾಗೂ ಖುರಾನ್ ಕಲಿಸುತ್ತಾರೆ. ಆದರೆ ಇಂಗ್ಲೀಷ್ ಕಲಿಸುವುದೇ ಇಲ್ಲ. ಇದು ಮುಸ್ಲಿಂ ಮಕ್ಕಳು ಬೆಳೆದಾಗ ಅವರಿಗೆ ಇಂಗ್ಲಿಷ್ ಅನಿವಾರ್ಯವಾಗಿರುವುದರಿಂದ ಇದರಿಂದ ಮುಸ್ಲಿಂ ಮಕ್ಕಳು ಹಿನ್ನಡೆ ಅನುಭವಿಸುತ್ತಿದ್ದರು. ಇಂದು ಜಗತ್ತು ಇಂಗ್ಲಿಷ್‍ನೊಂದಿಗೆ ತೆರದುಕೊಳ್ಳುವುದರಿಂದ ಮಾಹಿತಿಗಳು ಅದರಲ್ಲೇ ಹೆಚ್ಚಾಗಿ ಸಿಗುವುದರಿಂದ ಮುಸ್ಲಿಂ ಮಕ್ಕಳು ವಿಶಾಲ ಜಗತ್ತಿಗೆ ತೆರೆದುಕೊಳ್ಳುವುದರ ಜೊತೆಗೆ ವ್ಯಾಪಕತ್ವ ಪಡೆಯುತ್ತಾರೆ. ಇನ್ನು ಅಲ್ಲಿ ಕಲಿಸುವ ಅರಬಿಕ್ ವಿಷಯಗಳು ಕೇವಲ ಮುಸ್ಲಿಂ ರೀತಿನೀತಿಗಳನ್ನು ಭೋದಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಈ ರೀತಿ ಕಲಿಸುವ ಭೋದನೆ ಯಾವ ರೀತಿ ಇರುತ್ತದೆ ಎಂದು ಆಲೋಚಿಸಲೂ ಕೂಡಾ ಸಾಧ್ಯವಾಗುವುದಿಲ್ಲ!! ಅದಲ್ಲದೆ ಮದರಾಸಗಳಲ್ಲಿ ಇಂಗ್ಲಿಷ್ ಅಲ್ಲದೆ ವಿಜ್ಞಾನವನ್ನು ಬೋಧನೆ ಮಾಡಲು ಆದೇಶ ಹೊರಡಿಸಿದ್ದು ವಿಜ್ಞಾನ ಎಂದರೆ  ಮುಸಲ್ಮಾನರಿಗೆ ಆಗಿ ಬರುವುದಿಲ್ಲ!! ಯಾಕೆಂದರೆ ವಿಜ್ಞಾನವನ್ನು ಅವರು ನಂಬುವುದಿಲ್ಲ ವಿಜ್ಞಾನಕ್ಕಿಂತ ತಮ್ಮ ಖುರಾನೇ ಶ್ರೇಷ್ಟ ಎಂದು ನಂಬುಕೊಂಡು ಬಂದವರು ಇವರು!! ಹಾಗಾಗಿ ಈ ಬಾರಿಯ ಯೋಗೀಜೀಯ ನಿರ್ಧಾರ ಮಾತ್ರ ಮುಸ್ಲಿಮರನ್ನು ಪತರುಗಟ್ಟುವಂತೆ ಮಾಡುವುದಂತೂ ಅಷ್ಟೇ ಸತ್ಯ!!

ಈ ಮೊದಲು ಆದೇ ಎಲ್ಲಾ ಮದರಸಾಗಳ ಹೆಸರುಗಳನ್ನು ಸ್ಪಷ್ಟವಾಗಿ ಹಿಂದಿಯಲ್ಲಿ ಬರೆಯಬೇಕು, ಮದರಸಾಗಳನ್ನು ತೆರೆಯುವ ಸಮಯ, ಮುಚ್ಚುವ ಸಮಯಗಳನ್ನು ಸ್ಪಷ್ಟವಾಗಿ ಫಲಕಗಳಲ್ಲಿ ಬರೆಯಬೇಕು ಎಂದು ಯೋಗಿ ಸರಕಾರ ಆದೇಶಿಸಿದೆ!!.. ಎಲ್ಲಾ ನೋಂದಾಯಿತ ಮದರಸಾಗಳಲ್ಲಿ ಆಗಸ್ಟ್ 15ರಂದು ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡಬೇಕು ಅಂದಿನ ದಿನ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡಬೇಕೆಂದು ಕೂಡಾ ಆದೇಶಿಸಿದ್ದರು!!

Image result for madrasa

ಸಿಸಿಟಿವಿ ಅಳವಡಿಸಿದ್ದಕ್ಕಾಗಿ 45000 ಮಕ್ಕಳು ಪರೀಕ್ಷಾ ಕೇಂದ್ರದಿಂದಾನೇ ನಾಪತ್ತೆಯಾಗಿದ್ದರೆಂದರೆ ಯೋಗಿ ಆದಿತ್ಯನಾಥರ ಆಡಳಿತ ಎಷ್ಟ ಮಟ್ಟಿಗೆ ಪ್ರಭಾವ ಬೀರಿದೆ ಎಂದು ಈ ಮೊದಲೇ ಎಲ್ಲರಿಗೂ ಅರ್ಥವಾಗಿರಬಹುದು!! ಯೋಗಿ ಸರಕಾರ ನಕಲು ಮಾಡುವುದಕ್ಕೆ ನಿಷೇಧ ಹೇರಿದ್ದು ಶಿಕ್ಷಣ ಕ್ಷೇತ್ರದಲ್ಲಿ ಅಭೂತ ಪೂರ್ವ ಇತಿಹಾಸವನ್ನೇ ಸೃಷ್ಠಿ ಮಾಡಿದ್ದಾರೆ!! ತನ್ನ ಕ್ರಮಗಳ ಮೂಲಕವೇ ಹಿಂದಿದ್ದ ಸರಕಾರದ ಆಡಳಿತ ವ್ಯವಸ್ಥೆಗೆ ಪೂರ್ಣವಿರಾಮವನ್ನೇ ಹಾಕಿದ್ದಾರೆ!! ಶಿಕ್ಷಣ ವ್ಯವಸ್ಥೆ ಮತ್ತು ಭವಿಷ್ಯದ ಪೀಳಿಗೆಯೊಂದಿಗೆ ಯಾರಿಗೂ ಸಹ ಆಟವಾಡಲು ಅನುಮತಿ ಕೊಡುವುದಿಲ್ಲ ಎಂದು ಜನತೆಗೆ ಈಗಾಗಲೇ ಯೋಗೀಜೀ ತನ್ನ ಖಡಕ್ ನಿರ್ಧಾರದ ಜೊತೆಗೆ ಸ್ಪಷ್ಟಪಡಿಸಿದ್ದಾರೆ!! ಆದರೆ ಈ ವಿಷಯದಲ್ಲಿ ಅವರು ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳನ್ನು ಅವರು ತೆಗೆದುಕೊಳ್ಳುತ್ತಾರೆ ಎಂದಿರುವ ಯೋಗಿ ಸರಕಾರ, ಯುಪಿ ಬೋರ್ಡ್ ಮತ್ತು ಮದರಸಾಗಳಲ್ಲಿ, ನಕಲಿ ಮತ್ತು ಶಿಕ್ಷಣ ಮಾಫಿಯಾ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮವನ್ನೇ ಜರುಗಿಸಿದ್ದರ ಪರಿಣಾಮ, ಪರೀಕ್ಷೆಯ ಸಮಯದಲ್ಲಿ ಚಾಲ್ತಿಯಲ್ಲಿರುವ ಮುಕ್ತ ವಂಚನೆಯನ್ನು ಅಂತಿಮವಾಗಿಸಿದ್ದರು!!

ಮದರಸಾಗಳು ಎಂದರೆ ಬರೀ ಉರ್ದು ಮಾಧ್ಯಮದಲ್ಲಿ ಶಿಕ್ಷಣ ನೀಡುವ ಹಾಗೂ ಬರೀ ಧರ್ಮಬೋಧನೆಯನ್ನೇ ಮಾಡುವ ಸಂಸ್ಥೆಗಳು ಎನ್ನಲಾಗುತ್ತಿತ್ತು. ಆದರೆ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಮದರಸಾಗಳ ಚಹರೆಯನ್ನೇ ಬದಲಿಸುತ್ತಿದ್ದು, ಮಕ್ಕಳ ಭವಿಷ್ಯವೇ ಬದಲಾಗಿದೆ!! ಪ್ರಸ್ತುತ ಮಕ್ಕಳಿಗೆ ಯಾವ ರೀತಿಯ ಬೋಧನೆ ಅಗತ್ಯವೋ, ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುವ ಹಾಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ಬೋಧನೆಗೆ ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯವಾಗಿದೆ!! ಹೀಗೆ ಯೋಗೀಯಂತಹ ಒಬ್ಬ ಮುಖ್ಯಮಂತ್ರಿ ರಾಜ್ಯ ರಾಜ್ಯಗಳಲ್ಲಿ ಹುಟ್ಟಿಕೊಂಡರೆ…. ಇಮ್ಯಾಜೀನ್ ಮಾಡೋಕೇ ಒಂಥರ ಖುಷಿ!!

source: news18.com

  • ಪವಿತ್ರ
Tags

Related Articles

Close