ಪ್ರಚಲಿತ

ಉತ್ತರ ಪ್ರದೇಶದಲ್ಲಿ ಉಗ್ರರ ದಮನಕ್ಕೆ ಮುಹೂರ್ತ ಫಿಕ್ಸ್!! ಸಿಡಿಲ ಸಂತ ಯೋಗಿ ಆದಿತ್ಯನಾಥರ ಮತ್ತೊಂದು ದಿಟ್ಟ ಹೆಜ್ಜೆ!! ಉಗ್ರರೇ… ಗೆಟ್ ಅಲರ್ಟ್!!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಆಡಳಿತದಿಂದಾಗಿ ಈಡೀ ಉತ್ತರಪ್ರದೇಶ ರಾಜ್ಯ ಅದೆಷ್ಟು ಬದಲಾಣೆಯನ್ನು ಕಂಡಿದೆ ಎಂದರೆ ಅಟ್ಟಹಾಸದಿಂದ ಬೀಗುತ್ತಿದ್ದ ರೌಡಿಗಳು ತಮ್ಮ ವರಸೆಯನ್ನೇ ಬದಲಾಯಿಸಿಕೊಂಡು ಮಾಮುಲಿ ಮನುಷ್ಯರಂತೆ ಬದುಕುತ್ತಿದ್ದಾರೆ ಎಂದರೆ ಯೋಗಿ ಆದಿತ್ಯನಾಥರ ಆಡಳಿತ ಅದೆಷ್ಟು ಸಮರ್ಥವಾಗಿದೆ ಎನ್ನುವುದನ್ನು ಗಮನಿಸಬಹುದು!! ಅಷ್ಟೇ ಅಲ್ಲದೇ ಫೈರ್ ಬ್ರ್ಯಾಂಡ್ ಖ್ಯಾತಿ ಯೋಗಿ ಆದಿತ್ಯನಾಥರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹೇಗೆ ಮನೆ ಮಾತಾಗಿವೆಯೋ, ಅವರು ಕೈಗೊಂಡ ಕಾನೂನು ಸುವ್ಯವಸ್ಥೆಯೂ ಪ್ರಸ್ತುತ ರಾಜ್ಯದ ಗಡಿದಾಟಿ ಸುದ್ದಿಯಾಗುತ್ತಿದೆ.

ಹೌದು… ಈಗಾಗಲೇ ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿದೆಯಲ್ಲದೇ, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿರುವ ಮೂಲಕ ಸುದ್ದಿಯಾಗಿರುವ ಯೋಗಿ ಆದಿತ್ಯನಾಥ್ ಸರ್ಕಾರವು ಬರೀ ರೌಡಿಗಳನ್ನು ಮಾತ್ರ ಮಟ್ಟ ಹಾಕುತ್ತಿಲ್ಲ!! ಬದಲಿಗೆ ಈಡೀ ರಾಜ್ಯವನ್ನೇ ನಡುಗಿಸುತ್ತಿರುವ ಉಗ್ರರ ಅಟ್ಟಹಾಸವನ್ನು ಮಟ್ಟಹಾಕಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ.

ಕಳೆದ ವರ್ಷ ಆರಂಭದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 1,240 ಎನ್ ಕೌಂಟರ್ ಗಳು ನಡೆದಿದ್ದು, ಅದರಲ್ಲಿ 40 ಅಪರಾಧಿಗಳು ಎನ್ ಕೌಂಟರ್ ಗೆ ಬಲಿಯಾಗಿದ್ದರೆ 305 ಮಂದಿ ಗಾಯಗೊಂಡಿರುವ ವಿಚಾರ ತಿಳಿದೇ ಇದೆ!! ಇದಾದ ಬಳಿಕ ಮತ್ತೊಂದು ದಿಟ್ಟ ನಿರ್ಧಾರವನ್ನು ಕೈಗೊಂಡಿರುವ ಸಿಎಂ ಆದಿತ್ಯನಾಥ್ ಸರ್ಕಾರವು ರೌಡಿಗಳನ್ನು ಎನ್ ಕೌಂಟರ್ ಮಾಡಲು ಆದೇಶಿಸಿದ್ದು, ಶರಣಾಗಲು ಒಪ್ಪದವರನ್ನು ಸಹ ಎನ್ ಕೌಂಟರ್ ಮಾಡುವಂತೆ ದಿಟ್ಟ ಆದೇಶ ಹೊರಡಿಸಿದ್ದರು!! ಇದರಿಂದ ಪತರಗುಟ್ಟಿರುವ ಉತ್ತರ ಪ್ರದೇಶದ ರೌಡಿಗಳು ಹಿಂಡು ಹಿಂಡಾಗಿ ಬಂದು ಶರಣಾಗುತ್ತಿದ್ದು, ಅವರನ್ನು ಇಡಲು ಜೈಲಿನಲ್ಲಿ ಸ್ಥಳವೇ ಸಾಕಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು!! ತದನಂತರದಲ್ಲಿ ಜೈಲಿನಲ್ಲಿದ್ದ ರೌಡಿಗಳಿಗೆ ಜಾಮೀನೂ ಸಿಕ್ಕರೂ ಕೂಡ ಜೈಲು ಬಿಟ್ಟು ತೊಲಗುತ್ತಿಲ್ಲ, ಹಾಗಾಗಿ ಸುಮಾರು ಎಪ್ಪತ್ತೊಂದು ಮಂದಿ ಅಪರಾಧಿಗಳು ತಮಗೆ ಸಿಕ್ಕಿರುವ ಜಾಮೀನು ಬಾಂಡ್ ಗಳನ್ನೇ ಹರಿದು ಮತ್ತೆ ಜೈಲಿಗೆ ಹಿಂತಿರುಗುವ ಮೂಲಕ ಸುದ್ದಿಯಾಗಿದ್ದರು!!

ಆದರೆ ಇದೀಗ ಯೋಗಿ ಆದಿತ್ಯನಾಥ್ ಸರ್ಕಾರವು ರೌಡಿಗಳನ್ನು ಮಾತ್ರವಲ್ಲದೇ ಇದೀಗ ಉಗ್ರರನ್ನು ಮಟ್ಟ ಹಾಕಲು ಸಜ್ಜಾಗಿರುವುದನ್ನು ನೋಡಿದರೆ, ರಾಜ್ಯ ಸರ್ಕಾರವು ಕೈಗೊಂಡಿರುವ ದಿಟ್ಟ ನಿರ್ಧಾರ ಉಗ್ರರಿಗೆ ಭಯ ಹುಟ್ಟಿಸಿದ್ದಂತೂ ಅಕ್ಷರಶಃ ನಿಜ!!! ಇದಕ್ಕೆ ಸಾಕ್ಷಿಯಾಗಿ ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಭಾನುವಾರ ಬರೋಬ್ಬರಿ ಹತ್ತು ಜನರನ್ನು ಭಯೋತ್ಪಾದಕರ ನಿಗ್ರಹ ದಳ ಬಂಧಿಸಿದೆ.

ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯಿಂದ ಹಣ ಪಡೆದು, ಉಗ್ರ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ಲಖನೌ, ಪ್ರತಾಪ್ ಗಡ, ಮಧ್ಯಪ್ರದೇಶದ ರಿವಾನ್ ಸೇರಿ ಹಲವೆಡೆ ಹತ್ತು ಶಂಕಿತರನ್ನು ಬಂಧಿಸಲಾಗಿದೆ. ಇವರೆಲ್ಲರೂ ಪಾಕಿಸ್ತಾನಿ ಉಗ್ರ ಸಂಘಟನೆಯಿಂದ ಹಣ ಪಡೆದಿದ್ದಾರೆ ಎಂಬ ಶಂಕೆಯಿದೆ ಎಂದು ಭಯೋತ್ಪಾದಕರ ನಿಗ್ರ ದಳದ ಪೆÇಲೀಸ್ ಮಹಾ ನಿರ್ದೇಶಕ ಆಸಿಮ್ ಅರುಣ್ ಮಾಹಿತಿ ನೀಡಿದ್ದಾರೆ.

ಈ ಬಂಧಿತರನ್ನು ನಸೀಮ್ ಅಹ್ಮದ್, ನಹೀಮ್ ಅರ್ಷಾದ್, ಸಂಜಯ್ ಸರೋಜ್, ನೀರಜ್ ಮಿಶ್ರಾ, ಸುಹಿಲ್ ಮಿಸಿಹ್, ಉಮಾ ಪ್ರತಾಪ್ ಸಿಂಗ್, ಮುಕೇಶ್ ಪ್ರಸಾದ್, ಮುಷರ್ರಫ್ ಅನ್ಸಾರಿ, ಅಂಕುರ್ ರೈ ಹಾಗೂ ದಯಾನಂದ್ ಯಾದವ್ ಎಂದು ಗುರುತಿಸಲಾಗಿದೆ. ಈಗಾಗಲೇ ಉತ್ತರ ಪ್ರದೇಶದ ಗಲಭೆ ಪೀಡಿತ ಮುಸ್ಲಿಂ ಬಾಹುಳ್ಯದ ಖೈರಾನ್ ದಲ್ಲಿ ಮೂಲಭೂತವಾದಿಗಳ ಕಿರುಕುಳಕ್ಕೆ ಊರು ಬಿಟ್ಟಿದ್ದ ಹಿಂದೂ ಕುಟುಂಬಗಳು ಇದೀಗ ಮರಳಿ ಗೂಡು ಸೇರುತ್ತಿದ್ದಾರೆ ಎಂದರೆ ಇದೂ ಕೂಡ ಯೋಗಿ ಆದಿತ್ಯನಾಥ್ ಸರ್ಕಾರದ ದಿಟ್ಟ ಹೆಜ್ಜೆಗಳಲ್ಲೊಂದು!!! ಮುಸ್ಲಿಂ ಮೂಲಭೂತವಾದಿಗಳಿಂದ ನಿತ್ಯ ಆತಂಕದಿಂದ ಖೈರಾನ್ ಬಿಟ್ಟು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದು, ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾನೂನು ಸುವ್ಯವಸ್ಥೆ ಕುರಿತು ಕೈಗೊಂಡ ಕಠಿಣ ಕ್ರಮಗಳು, ದಿಟ್ಟ ನಿಲುವುಗಳಿಂದ ಹಿಂದೂಗಳಿಗೆ ಸೂಕ್ತ ಭದ್ರತೆ ದೊರಕಿಸಿ ಕೊಟ್ಟಿದ್ದಾರೆ.

ಕಳೆದ ಕೆಲ ದಿನಗಳಲ್ಲಿ ಆದಿತ್ಯನಾಥ ಸರ್ಕಾರವು ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ತೀವ್ರವಾದ ಬೆಂಬಲ ಮಾಡಿದ್ದರೂ, ಅವರ ಅಧಿಕಾರಾವಧಿ ಆರಂಭದಿಂದಲೇ ಭ್ರಷ್ಟಾಚಾರ ಮುಕ್ತ ಉತ್ತರ ಪ್ರದೇಶ ಅಭಿಯಾನಕ್ಕೆ ನಿರಂತರವಾದ ಚಾಲನೆ ನೀಡಲಾಗಿದೆ. ಬಿಜೆಪಿ ವಕ್ತಾರ ಶಲಾಭಮಾನಿ ತ್ರಿಪಾಠಿ ಅವರ ಪ್ರಕಾರ, “ಕಳೆದ ವರ್ಷದಲ್ಲಿ 192 ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಲಾಗಿದೆ ಮತ್ತು 415 ನೌಕರರು ವಿಚಾರಣೆ ಎದುರಿಸುತ್ತಿದ್ದಾರೆ. ಈ ನೌಕರರಲ್ಲಿ ಕೆಲವರನ್ನು ಈಗಾಗಲೇ ಭ್ರಷ್ಟಾಚಾರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ”.

ಹಾಗಾಗಿ ಯೋಗಿ ಆದಿತ್ಯನಾಥ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದು ಮೊದಲನೆಯದಾಗಿ ಸಾರ್ವಜನಿಕ ವರ್ಕ್ಸ್ ಇಲಾಖೆ (ಪಿಡಬ್ಲ್ಯೂಡಿ) !! ಮೂಲಗಳ ಪ್ರಕಾರ, ಇಲಾಖೆಯ 22 ಎಂಜಿನಿಯರ್ ಗಳನ್ನು ಭ್ರಷ್ಟಾಚಾರ ಎಸಗಿದ್ದಕ್ಕಾಗಿ ಅಮಾನತುಗೊಳಿಸಲಾಗಿದ್ದು, ಈವರೆಗೆ 273 ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದ್ದಾರೆ!! ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಾನಂದ್ ಉಲ್ಲೇಖಿಸಿರುವ ವರದಿಯ ಪ್ರಕಾರ, 550 ಪಿಡಬ್ಲ್ಯೂಡಿ ಇಲಾಖೆಯ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ, ಪ್ರಾಥಮಿಕ ಶಿಕ್ಷಣ ಇಲಾಖೆಯ ಎಂಟು ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಮೀಷನರ್ ಮತ್ತು ಹೆಚ್ಚುವರಿ ಕಮೀಷನರ್ ನ ಐದು ಅಧಿಕಾರಿಗಳು ಮತ್ತು ಉತ್ತರ ಪ್ರದೇಶ ಪೆÇೀಲಿಸರನ್ನು ಮೂರು ವೃತ್ತ ಅಧಿಕಾರಿಗಳನ್ನು ಸಹ ಅಸಮರ್ಥತೆ ಮತ್ತು ಭ್ರಷ್ಟಾಚಾರದ ಆರೋಪದಡಿ ಕಡ್ಡಾಯ ನಿವೃತ್ತಿ ನೀಡಲಾಗಿದೆ.

ಯೋಗಿ ಆದಿತ್ಯನಾಥ್ ರ ನ್ಯಾಯಕ್ಕೆ ಸ್ವತಃ ಹಿರಿಯ ಆಡಳಿತಾಧಿಕಾರಿಗಳು ಕೂಡ ಬೆಲೆ ತೆತ್ತಿದ್ದಂತೂ ಅಕ್ಷರಶಃ ನಿಜ!! ಹೆಚ್ಚುವರಿ ಕಮಿಷನರ್ ಮೀರತ್ ರಂಧೀರ್ ಸಿಂಗ್ ಡುಹಾನ್ ಮತ್ತು ಗೌತಮ್ ಬುದ್ಧನಗರ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಘನ್ಶ್ಯಾಮ್ ಸಿಂಗ್ ಅವರನ್ನು ಭ್ರಷ್ಟಾಚಾರದ ಅಪರಾಧವೆಂದು ಪರಿಗಣಿಸಿದ ಬಳಿಕ ಸೇವೆಯಿಂದ ವಜಾ ಗೊಳಿಸಲಾಗಿದೆ!! ಅಷ್ಟೇ ಅಲ್ಲದೇ, ದೀರ್ಘಕಾಲದ ನಂತರ ಉನ್ನತ ಸ್ಥಾನಗಳಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿರುವುದಿಲ್ಲದೇ, ಮೊದಲ ಬಾರಿ ಭ್ರಷ್ಟಾಚಾರ ಎಸಗಿದ್ದ ಉನ್ನತ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು!! ಆದರೆ ಈಗಾಗಲೇ ಯೋಗಿ ರಾಜ್ಯದಲ್ಲಿ ಪತರಗುಟ್ಟಿದ್ದ ರೌಡಿಗಳನ್ನು ಮಟ್ಟ ಹಾಕಿದ್ದರ ಬೆನ್ನಲೇ ಉಗ್ರರನ್ನು ನಿಗ್ರಹಿಸಲು ಸಜ್ಜಾಗಿದೆ ಎಂದರೆ ಇನ್ನು ಮುಂದೆ ಉಗ್ರರಿಗೆ ಉತ್ತರಪ್ರದೇಶದಲ್ಲಿ ಶಿಕ್ಷೆ ಗಟ್ಟಿಟ್ಟ ಬುತ್ತಿ!!

– ಅಲೋಖಾ

Tags

Related Articles

Close