ಪ್ರಚಲಿತ

ಹಿಂದೂಗಳಿಗೆ ಸಿಹಿ ಸುದ್ದಿ!! ಶೀಘ್ರವೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಆಶ್ವಾಸನೆ ಇತ್ತ ಯೋಗಿ!! ಹಿಂದೂಗಳ ಬಹುಕಾಲದ ಕನಸು ನನಸಾಗುವುದೆ?

ಶತಮಾನಗಳಿಂದ ದೇಶದ ಕೋಟ್ಯಂತರ ಸನಾತನಿಗಳು ಕಾಯುತ್ತಿರುವ ರಾಮ ಮಂದಿರ ನಿರ್ಮಾಣದ ಕನಸು ನನಸಾಗಲಿದೆಯೆ? ಹೌದೆನ್ನುತ್ತಿದ್ದಾರೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ. ಅಯೋಧ್ಯೆಯಲ್ಲಿ ರಾಮ ಮಂದಿರ ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಹಿಂದೂ ಪುರೋಹಿತರಿಗೆ ಭರವಸೆ ನೀಡಿದ್ದಾರೆ ಎಂದು ANI ವರದಿ ಮಾಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದಿದ್ದಲ್ಲಿ ಮೋದಿ ಲೋಕಸಭಾ ಚುನಾವಣೆಗಳನ್ನು ಸೋಲಬೇಕಾಗುವುದು ಎನ್ನುವ ಮಾತು ಪದೇ ಪದೇ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ವೇಗ ಕೊಡಲು ಯೋಗಿ ಅವರು ಸಾಧು ಸಂತರೊಡನೆ ಭೇಟಿ ನಡೆಸಿರುತ್ತಾರೆ.

ಮಹಂತ್ ಸುರೇಶ್ ದಾಸ್ ಅವರು ಯೋಗಿ ಜೊತೆ ಭೇಟಿ ನಡೆಸಿ ಮಾತುಕತೆ ಆಡಿದ್ದಾರೆ. ನಾವು ಯೋಗಿ ಆದಿತ್ಯನಾಥರ ಜೊತೆ ಈ ಕುರಿತು ಚರ್ಚೆ ಮಾಡಿದ್ದೇವೆ ಮತ್ತು ಶೀಘ್ರವೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ಮಹಂತ್ ಹೇಳಿದ್ದಾರೆ ಎಂದು ವರದಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಮಾಡಲು ಬೇಕಾದ ಎಲ್ಲಾ ಸಾಮಾಗ್ರಿಗಳು ಸಿದ್ಧವಾಗಿದೆ. ಕೋಟ್ಯಂತರ ಹೃದಯಗಳು ರಾಮ ಮಂದಿರ ಕಟ್ಟುವ ಕಾರ್ಯದಲ್ಲಿ ಕೈ ಜೋಡಿಸಲು ತಯಾರಾಗಿವೆ. ಆದರೆ ರಾಮ ಮಂದಿರದ ವಿಷಯ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ತೀರ್ಪು ಬಂದ ಬಳಿಕವೆ ಕಾರ್ಯ ಕೈಗೊಳ್ಳಲು ಮೋದಿ ಸರಕಾರ ಕಾಯುತ್ತಿದೆ.

ಕಾನೂನು ರೀತ್ಯಾ ಮಂದಿರ ನಿರ್ಮಾಣ ಕೈಗೊಳ್ಳದಿದ್ದರೆ ದೇಶದಲ್ಲಿ ಮುಸ್ಲಿಮರು ದಂಗೆ ಏಳಬಹುದಾದ ಸಂಭಾವನೆಗಳಿವೆ. ಈ ದಂಗೆಗಳ ಹಿಂದೆ ಯಾರ “ಕೈ”ಗಳಿರುತ್ತವೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಕಾನೂನಿನ ಪ್ರಕಾರ ಹಿಂದೂಗಳ ಪರವಾಗಿ ತೀರ್ಪು ಬಂದರೆ ಆಗ ದೇಶಾದ್ಯಂತ ಹೈ ಅಲರ್ಟ್ ಘೋಷಿಸಿ, ಅಯೋಧ್ಯೆಯ ಸುತ್ತ ಮುತ್ತ ಬಿಗಿ ಭದ್ರತೆ ಒದಗಿಸಿ, ಮಂದಿರ ನಿರ್ಮಾಣ ಕೆಲಸ ಪೂರ್ಣಗೊಳಿಸಬಹುದು. ಒಂದು ವೇಳೆ ಮಂದಿರ ನಿರ್ಮಾಣ ಕಾರ್ಯದಲ್ಲಿ ಯಾರಾದರೂ ಬಾಧೆ ಒಡ್ಡಿದರೆ ಅವರ ಮೇಲೆ ‘ನ್ಯಾಯಾಂಗ ನಿಂದನೆ’ಯ ಕೇಸ್ ಹಾಕಿ ಜೈಲಿನೊಳಗೆ ತಳ್ಳಬಹುದು. ಈ ಕಾರಣಕ್ಕೇ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯುತ್ತಿರಬಹುದು. ಅಯೋಧ್ಯೆಯ ತೀರ್ಪು ಬಹುತೇಕ ರಾಮ ಭಕ್ತರ ಪರವಾಗಿಯೆ ಬರಲಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ದ ಕೆಂಡ ಕಾರುತ್ತಿದ್ದ ಸಾಧು-ಸಂತರು ಯೋಗಿ ಅವರ ಭರವಸೆಯಿಂದ ಖುಶಿಯಾಗಿರುವಂತೆ ಕಂಡುಬಂದಿದೆ ಎನ್ನಲಾಗುತ್ತಿದೆ. ಯೋಗಿ ಅವರು ನ್ಯಾಯಾಲಯದ ತೀರ್ಪು ಬರುವವರೆಗೆ ತಾಳೆಯಿಂದಿರಲು ಸಾಧುಗಳಿಗೆ ಸೂಚಿಸಿದ್ದಾರೆ ಮತ್ತು ಅವರು ಕಾಯಲು ತಯಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಮಹತ್ವಪೂರ್ಣ ಬೆಳವಣಿಗೆ ಏನೆಂದರೆ, ಉತ್ತರ ಪ್ರದೇಶದ ಕೇಂದ್ರ ವಕ್ಫ್ ಬೋರ್ಡ್ ಮತ್ತು ಹಿಂದೂ ಬೆಂಬಲಿಗ ಗುಂಪುಗಳ ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇವಾಲಯದ ನಿರ್ಮಾಣದ ಸಭೆನಡೆಸಲು ಬಯಸಿದ್ದಾರೆ ಎಂದು ಅಮರ್ ಉಜಾಲ ವರದಿ ಮಾಡಿದೆ. ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ವಸೀಮ್ ರಿಜ್ವಿ ಅವರು ರಾಮ ಮಂದಿರ ಅಯೋಧ್ಯೆಯಲ್ಲೆ ನಿರ್ಮಾಣ ಮಾಡುವ ಮೂಲಕ ನೂರು ಕೋಟಿ ಹಿಂದೂಗಳ ಭಾವನೆಗೆ ಸಾಂತ್ವನ ಒದಗಿಸಬೇಕೆಂದು ಹೇಳಿ ಮೋದಿಗೆ ಪತ್ರ ಬರೆದಿದ್ದಾರೆ. ಲಕ್ನೋವಿನಲ್ಲಿ ‘ಅಮನ್ ಮಸ್ಜಿದ್’ ನಿರ್ಮಾಣ ಮಾಡಲು ಹಿಂದೂಗಳ ಮತ್ತು ಶಿಯಾ ಮುಸ್ಲಿಮರ ನಡುವೆ ಈಗಾಗಲೆ ಒಪ್ಪಂದ ಏರ್ಪಟ್ಟಿದೆ ಎಂದೂ ಅವರು ತಿಳಿಸಿದರು.

ಮಂದಿರದ ವಿಷಯದಲ್ಲಿ ನ್ಯಾಯಾಲಯವು ಇದುವರೆಗೂ ಒಟ್ಟು 32 ಹಸ್ತಕ್ಷೇಪ ಅರ್ಜಿಗಳನ್ನು ವಜಾ ಮಾಡಿದೆ, ಇದರಲ್ಲಿ ಚಲನಚಿತ್ರ ನಿರ್ಮಾಪಕರ ಶ್ಯಾಮ್ ಬೆನೆಗಲ್, ಅಪರ್ಣಾ ಸೇನ್ ಮತ್ತು ಪತ್ರಕರ್ತೆ ತೀಸ್ತಾ ಸೆತಲ್ವಾಡ್ ಅವರ ಅರ್ಜಿಗಳೂ ಇದ್ದವು. ನ್ಯಾಯಾಲಯದ ಬೇಸಿಗೆ ರಜೆ ಮುಗಿದ ಬಳಿಕ ದೀಪಕ್ ಮಿಶ್ರಾ ಬೆಂಚ್ ಈ ಕೇಸಿಗೆ ತಾರ್ಕಿಕ ಅಂತ್ಯ ಘೋಷಿಸಲಿದೆ ಎಂದೆ ಹೇಳಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ವಿರುದ್ದವಾಗಿರುವುದು ಕಾಂಗ್ರೆಸ್-ಕಮೂನಿಷ್ಟ್ ಮತ್ತು ಸುನ್ನಿ ಮುಸ್ಲಿಮರೆ ಹೊರತು ಶಿಯಾ ಮುಸ್ಲಿಮರಲ್ಲ. ಇದೀಗ ಮೋದಿ ವಿರೋಧ ಮಾಡುವ ಏಕೈಕ ಉದ್ದೇಶದಿಂದ ತೃತೀಯ ರಂಗದ ಸದಸ್ಯರೂ ಕೂಡಾ ಕೈ ಕಮಾಂಡಿನ ರಾಗವನ್ನೆ ಹಾಡುತ್ತಿದ್ದಾರೆ. ಯಾರು ಯಾವ ರಾಗ ಹಾಡಿದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗೇ ಆಗುತ್ತದೆ. ಮೋದಿ ಮತ್ತು ಯೋಗಿ ಜೋಡಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡೇ ಮಾಡುತ್ತಾರೆ ಎನ್ನುವ ಭರವಸೆ ಹಿಂದೂಗಳಿಗಿದೆ. ರಾಮನ ಜನ್ಮ ಭೂಮಿಯಲ್ಲಿ ರಾಮನಿಗೆ ಮಂದಿರ ಕಟ್ಟಿಯೆ ತೀರುತ್ತಾರೆ ರಾಮ ಭಕ್ತ ಮೋದಿ ಇದು ಸತ್ಯ… ಜೈ ಶ್ರೀರಾಮ್…

-ಶಾರ್ವರಿ

Tags

Related Articles

Close