ಪ್ರಚಲಿತ

ಯೋಗಿ ಆದಿತ್ಯನಾಥರು ನಕಲಿ ಮದರಸಾಗಳಿಗೆ ಬೀಗಮುದ್ರೆ ಜಡಿದ ಕಾರಣ ಮಹಾಗಂಡಾಂತರವೊಂದು ತಪ್ಪಿತು!! ಯೋಗಿಯನ್ನು ಮುಸ್ಲಿಂ ವಿರೋಧಿ ಎಂದು ಬಣ್ಣಿಸಿದ ಗಂಜಿಗಿರಾಕಿಗಳು ನಿಗೂಢ ನಾಪತ್ತೆ!!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಲೇ ದೇಶದ ಬುದ್ದಿಜೀವಿಗಳು ಅರಚಾಡಲು ಶುರು ಮಾಡಿಕೊಂಡಿದ್ದಂತೂ ಅಕ್ಷರಶಃ ನಿಜ. ಹಿಂದೂ ಸಂತನಿಗೆ ರಾಜಕೀಯ ಪಟ್ಟ ನೀಡಿದರೆ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂದು ಸುಳ್ಳು ಪ್ರಚಾರ ಮಾಡಿದ್ದವರಿಗೆ ಮೋದಿಯ ಒಂದೊಂದು ನಡೆಯೂ ಬುದ್ಧಿಜೀವಿಗಳು ಬಾಯಿ ಮುಚ್ಚಿ ಕೂರುವಂತೆ ಮಾಡಿತ್ತು!! ಆದರೆ ಉತ್ತರ ಪ್ರದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಯೋಗಿ ಆದಿತ್ಯನಾಥರು ತನ್ನ ಖಡಕ್ ಆದೇಶಗಳ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕಲು ರಣತಂತ್ರ ಹೆಣೆಯುತ್ತಲೇ ಇತ್ತ ನಕಲಿ ಮದರಸಾಗಳಿಗೆ ಬೀಗ ಜಡಿಯುವ ಮೂಲಕ ಮತ್ತೆ ಮುಸ್ಲಿಂ ವಿರೋಧಿ ಎನ್ನುವ ಪಟ್ಟವನ್ನು ರಾಜಕೀಯ ವಿರೋಧಿಗಳು ನೀಡಿಯೇ ಬಿಟ್ಟರು!!

ಈ ಹಿಂದೆ ರಾಜ್ಯದಲ್ಲಿ ಒಟ್ಟು 19,108 ಮದರಸಾಗಳಿಗೆ ರಾಜ್ಯ ಮದರಸಾ ಮಂಡಳಿ ಮಾನ್ಯತೆ ನೀಡಿದ್ದು, ಇವುಗಳಲ್ಲಿ 16,808 ಮದರಸಾಗಳನ್ನು ತಮ್ಮ ಮಾಹಿತಿ ವಿವರವನ್ನು ಮಂಡಳಿಯ ವೆಬ್‍ಸೈಟ್‍ಗೆ ನೀಡಿತ್ತು!! ಆದರೆ ಸುಮಾರು 2300 ಮದರಸಾಗಳು ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಇದ್ದುದರಿಂದ ಅವುಗಳನ್ನು ನಕಲಿ ಮಸೀದಿಗಳೆಂದು ಸರ್ಕಾರ ಘೋಷಿಸಿತ್ತು!! ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ತೆಗೆದುಕೊಂಡ ಪ್ರಮುಖ ಹಾಗೂ ದಿಟ್ಟ ನಿರ್ಧಾರದಿಂದಾಗಿ ನಕಲಿ ಮದರಸಾಗಳಿಗೆ ಬೀಗ ಹಾಕಿದ್ದರು!!

ಆದರೆ ನಕಲಿ ಮದರಸಾಗಳಿಗೆ ಬೀಗ ಜಡಿದ ನಂತರದಿಂದ ಯೋಗಿ ಆದಿತ್ಯನಾಥರನ್ನು ಮುಸ್ಲಿಂ ವಿರೋಧಿ ಎನ್ನುವ ಪಟ್ಟವನ್ನು ಕಟ್ಟಿ ಬಿಟ್ಟರಲ್ಲದೇ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂಬಿತ್ಯಾದಿ ಸುಳ್ಳು ಮಾಹಿತಿಗಳು ಹಬ್ಬುವಂತೆ ಮಾಡಿದೆ!! ಆದರೆ ಉತ್ತರ ಪ್ರದೇಶದಲ್ಲಿ ಕೆಲವು ಮದರಸಾಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಸ್ಪಷ್ಟ ನಿದರ್ಶನವೊಂದು ಸಿಕ್ಕಿದ್ದು, ಉಗ್ರರ ಜತೆ ನಂಟು ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜಾಮಿಯಾ ಅರೇಬಿಯಾ ಮದರಸಾದಲ್ಲಿ ಓದುತ್ತಿದ್ದ 7 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಈ ಏಳೂ ವಿದ್ಯಾರ್ಥಿಗಳು ಕಾಶ್ಮೀರದವರಾಗಿದ್ದು, ಇವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಅಷ್ಟೇ ಅಲ್ಲದೇ, ಏಳೂ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಕಳೆದ ಮೂರು ತಿಂಗಳ ಹಿಂದಷ್ಟೇ ತೌಸೀಫ್ ಮಲಿಕ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಉಗ್ರನ ಜತೆ ನಂಟು ಹೊಂದಿದ್ದಾನೆ ಎಂಬ ಪ್ರಕರಣದಲ್ಲಿ ಎನ್ ಐ ಎ ತನಿಖೆ ನಡೆಸುತ್ತಿದೆ. ಆದರೆ ಈತನೂ ಇದೇ ಮದರಸಾದಲ್ಲಿ ಕಲಿತಿದ್ದ ಎಂಬ ಕಾರಣಕ್ಕಾಗಿ ಕಳೆದ ಮಾರ್ಚ್ ನಲ್ಲಿ ಎನ್ ಐ ಎ ಅಧಿಕಾರಿಗಳು ಈ ಮದರಸಾದಲ್ಲಿ ಪರಿಶೀಲನೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ, ಏಳು ಜನ ಕಾಶ್ಮೀರಿಗಳ ಬಂಧನದ ಕುರಿತು ಯಾವುದೇ ಮಾಹಿತಿ ನೀಡಿಲ್ಲವಾದರೂ, ಮದರಸಾ ಮೂಲಗಳ ಪ್ರಕಾರ ಕಳೆದ ಬುಧವಾರ ಅಧಿಕಾರಿಗಳು ಮದರಸಾಕ್ಕೆ ತೆರಳಿ ಏಳು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈವರೆಗೆ ನಕಲಿ ಮದ್ರಾಸಗಳ ಹೆಸರಿನಲ್ಲಿ ಸರ್ಕಾರದ ಹಣ ಪಡೆಯುತ್ತಿದ್ದ ಎಲ್ಲಾ ಮದರಾಸಗಳಿಗೂ ಬೀಗ ಹಾಕಿದ ಯುಪಿ ಸರ್ಕಾರ, ಪೆÇೀಲಾಗುತ್ತಿದ್ದ ಸುಮಾರು 100 ಕೋಟಿ ಹಣವನ್ನು ಉಳಿತಾಯ ಮಾಡಿತ್ತು!!

Image result for yogi adityanath

ಅಷ್ಟೇ ಅಲ್ಲದೇ ಈ ಹಿಂದೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಾಸಗಳ ನೋಂದಣಿಯನ್ನು ಯುಪಿ ಸರ್ಕಾರ ಕಡ್ಡಾಯಗೊಳಿಸಿತ್ತು. ಈ ನಿರ್ಧಾರದಿಂದ ಸುಮಾರು 2200 ಕ್ಕೂ ಹೆಚ್ಚು ನಕಲಿ ಮದರಾಸಗಳು ಬೆಳಕಿಗೆ ಬಂದಿವೆ. ಈ ಎಲ್ಲಾ ಮದರಾಸಗಳು ಸರ್ಕಾರದ ವತಿಯಿಂದಲೇ 100 ಕೋಟಿ ಅನುದಾನ ಕೂಡ ಪಡೆಯುತ್ತಿದ್ದವು.
ಕೇವಲ ದಾಖಲಾತಿಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದ ಈ ಮದರಾಸಗಳು ಜನರ ತೆರಿಗೆ ಹಣವನ್ನು ತಮ್ಮ ಸ್ವಂತ ಉಪಯೋಗಕ್ಕೆ ಬಳಸುತ್ತಿದ್ದು, ಸರ್ಕಾರಕ್ಕೆ ಪ್ರತಿ ವರ್ಷ ಸುಮಾರು 100 ಕೋಟಿಗೂ ಅಧಿಕ ಹಣವನ್ನು ಮೋಸ ಮಾಡುತ್ತಿದ್ದವು. ಹೀಗಾಗಿ ಕಠಿಣ ನಿರ್ಧಾರ ಕೈಗೊಂಡ ಯೋಗಿ ಸರ್ಕಾರವು ಮುಸ್ಲಿಂ ವಿರೋಧಿಯೆಂದು ಜನಮನ್ನಣೆಯನ್ನು ಪಡೆದಿದ್ದರು!!

ಆದರೆ ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರನ್ನೂ ಒಂದೇ ರೀತಿಯಲ್ಲಿ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತಿರುವ ಯೋಗಿ, ಯುಪಿ ಯ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದಲ್ಲದೇ ಇದೀಗ ಉಗ್ರರ ಜತೆ ನಂಟು ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜಾಮಿಯಾ ಅರೇಬಿಯಾ ಮದರಸಾದಲ್ಲಿ ಓದುತ್ತಿದ್ದ 7 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬಂಧಿಸುವ ಮೂಲಕ ಮದರಸಾದ ಅಸಲಿ ಮುಖವನ್ನು ಈ ಮೂಲಕ ಬಯಲಿಗೆಳೆದಿದ್ದಾರೆ!!

ಮೂಲ: https://tulunadunews.com/tnn11796
– ಅಲೋಖಾ

Tags

Related Articles

Close