ಪ್ರಚಲಿತ

ಯೋಗಿ ಸರ್ಕಾರದ ಮತ್ತೊಂದು ದಿಟ್ಟ ಹೆಜ್ಜೆ!! ಜನರ ಆರೋಗ್ಯಕ್ಕಾಗಿ ಗೋಮೂತ್ರದಲ್ಲಿ ವಿಶ್ವ ಸಾಧನೆ ಮಾಡಿದ ಯೋಗಿ ಇದೀಗ ಮಾಡಿದ್ದೇನು ಗೊತ್ತೇ??

ಗೋಮೂತ್ರ ಒಂದು ಉತ್ತಮ ಸಿದ್ಧರಸ, ಹೃದಯಕ್ಕೆ ಉತ್ತಮವಾದ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ ಶ್ರೇಷ್ಠ ಔಷಧಿ ಎನ್ನುವ ವಿಚಾರ ತಿಳಿದೇ ಇದೆ. ಅಷ್ಟೇ ಅಲ್ಲದೇ ಆಯಸ್ಸು ಹೆಚ್ಚಿಸುವ, ಪಿತ್ತವನ್ನು ಸಮತೋಲನದಲ್ಲಿರಿಸುವ, ಶ್ವಾಸ ಮತ್ತು ಮೂಗಿನೊಳಗಣ ಲೋಳೆಯನ್ನು ಉತ್ತಮವಾಗಿಸುವ, ಹೃದಯ ತೊಂದರೆಗಳನ್ನು ನಿವಾರಿಸುವ ಮತ್ತು ವಿಷದ ಪರಿಣಾಮವನ್ನು ಕಡಿಮೆಗೊಳಿಸುವ ಶಕ್ತಿಯುಳ್ಳದ್ದಾಗಿದೆ ಎನ್ನುವ ವಿಚಾರ ತಿಳಿದ್ದರೂ ಕೂಡ ಯಾವುದೇ ಸರ್ಕಾರ ತೆಗೆದುಕೊಳ್ಳದ ತೀರ್ಮಾನವನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದ್ದಲ್ಲದೇ ಗೋಮೂತ್ರವನ್ನು ಸರಬರಾಜು ಮಾಡುವ ಚಿಂತನೆಗೆ ಮುಂದಾಗುವ ಮೂಲಕ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಹೌದು… ಮನುಷ್ಯ ಕೃಷಿ ಕಾರ್ಯಗಳಲ್ಲಿ ತೊಡಗಿದಾಗ ತನಗೆ ನೆರವಾಗಲೆಂದು ಆಕಳನ್ನು ಸಾಕಲಾರಂಭಿಸಿದ!! ಆದರೆ ಇಂದು ಕೃಷಿ ಕೆಲಸಗಳು ಸಾಕಷ್ಟು
ಯಾಂತ್ರೀಕೃತ ಗೊಂಡಿರುವುದರಿಂದ ಸಾಕಲ್ಪಟ್ಟ ಮೂಲ ಉದ್ದೇಶಕ್ಕೆ ಈ ಪ್ರಾಣಿಗಳು ಅಪ್ರಸ್ತುತವೆನಿಸಿ ಬಿಟ್ಟಿವೆ. ಆದರೆ ಹಸುವಿನಿಂದ ಸಿಗುವ ಹಾಲು, ಮೊಸರು, ತುಪ್ಪ, ಸಗಣಿ, ಗೋಮೂತ್ರ ಎಲ್ಲವೂ ಉಪಯುಕ್ತವಾದುದು ಎನ್ನುವ ಬಗ್ಗೆ ತಿಳಿಯುವ ಗೋಜಿಗೂ ಹೋಗುವುದಿಲ್ಲ!!

ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿರುವ ವಿಚಾರ ಈಗಾಗಲೇ ತಿಳಿದೇ ಇದೆ!! ಆದರೆ ದೇಶದ ಹಲವು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸುತ್ತಿವೆಯಾದರೂ ಕೂಡ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ಮಾತ್ರ ಇದೇ ಮೊದಲು !! ಆದರೆ ಇದೀಗ ಗೋಮೂತ್ರವನ್ನು ಸರಬರಾಜು ಮಾಡುವ ಚಿಂತನೆಗೆ ಮುಂದಾಗಿರುವ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಅಧಿಕಾರಕ್ಕೆ ಬಂದ ಮೇಲೆ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ದೇಶವೇ ಉತ್ತರ ಪ್ರದೇಶದತ್ತ ನೋಡುವ ಹಾಗೆ ಮಾಡಿದ ಯೋಗಿ ಆದಿತ್ಯನಾಥರು ಈಗ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿರುವ ಮೂಲಕ ಎಲ್ಲೆಡೆ ಸುದ್ದಿಯಾಗಿದ್ದಾರೆ. ಹೌದು… ಜನರ ಆರೋಗ್ಯದ ದೃಷ್ಟಿಯಿಂದ ಕಡಿಮೆ ಬೆಲೆಗೆ ಬಾಟಲ್ ಗಳಲ್ಲಿ ಸಂಗ್ರಹಿಸಿ ಗೋಮೂತ್ರ ಸರಬರಾಜು ಮಾಡಲು ಚಿಂತನೆ ನಡೆಸಿರುವ ಯೋಗಿ ಆದಿತ್ಯನಾಥ್ ಸರ್ಕಾರವು ಈ ಮೂಲಕ ವಿಶ್ವ ಸಾಧನೆ ಮಾಡಿದ್ದಂತೂ ಅಕ್ಷರಶಃ ನಿಜ.

ಸರ್ಕಾರಿ ಆಯುರ್ವೇದಿಕ್ ಫಾರ್ಮಸಿ ಈ ಜವಾಬ್ದಾರಿ ಹೊತ್ತಿದ್ದು, ಗೋಮೂತ್ರ ಸಂಗ್ರಹಿಸಿ, ಪರಿಷ್ಕರಿಸಿ, ಮಾರಾಟ ಮಾಡುವ ಕುರಿತು ಸರ್ಕಾರದ ಎದುರು
ಪ್ರಸ್ತಾಪವಿಟ್ಟಿದ್ದು, ಅನುಮೋದನೆ ಸಿಕ್ಕ ಕೂಡಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಕುರಿತು ಪಿಲಿಬಿಟ್ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಧಾನ ಮೇಲ್ವಿಚಾರಕರಾಗಿರುವ ಡಾ.ಪ್ರಕಾಶ್ ಚಂದ್ರ ಸಕ್ಸೇನಾ ಮಾತನಾಡಿದ್ದು, ಇದು ಕೇವಲ ವೈದ್ಯಕೀಯ ದೃಷ್ಟಿಯಿಂದ ಅಲ್ಲ, ಜನರ ಆರೋಗ್ಯದ ದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಗೋಮೂತ್ರದಲ್ಲಿರುವ ವಿಶೇಷ ಗುಣದ ಕಾರಣದಿಂದಾಗಿ ಗೋಮೂತ್ರವನ್ನು ಕುಡಿದರೆ ಒಳ್ಳೆಯದು ಎನ್ನಲಾಗುತ್ತದೆ. ಗೋಮೂತ್ರ ಕಹಿ, ಖಾರ ಹಾಗೂ
ಬಿಸಿಯಾಗಿರುತ್ತದೆ. ಇದು ಗ್ಯಾಸ್ಟಿಕ್ ಹಾಗೂ ಆ್ಯಸಿಡಿಟಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆಯಲ್ಲದೇ ಶರೀರದಲ್ಲಿನ ವಾತ, ಪಿತ್ತವನ್ನು ಬ್ಯಾಲೆನ್ಸ್ ಮಾಡುತ್ತದೆ. ಇದರಲ್ಲಿರುವ ಪೆÇಟಾಷಿಯಂ, ಕ್ಯಾಲ್ಸಿಯಂ, ಕೊಲೊರೈಡ್, ಅಮೋನಿಯಾ ಮುಂತಾದ ಗುಣಗಳಿರುವ ಕಾರಣಗಳಿಂದಾಗಿ ಉಸಿರಾಟದ ತೊಂದರೆಗೆ, ಹಳದಿ ರೋಗಕ್ಕೂ ಗೋಮೂತ್ರ ಉಪಕಾರಿಯಾಗಿದೆ. ಅಷ್ಟೇ ಅಲ್ಲದೆ ಗೋ ಮೂತ್ರದಲ್ಲಿರುವ ಆ್ಯಸಿಡ್, ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ. ಹಾಗಾಗಿ ಮನೆಯಲ್ಲೂ ಗೋ ಮೂತ್ರವನ್ನು ಸಿಂಪಡಿಸುತ್ತಾರೆ!!

ಆದರೆ ಯೋಗಿ ಆದಿತ್ಯನಾಥ್ ಸರ್ಕಾರವು ಜನರ ಆರೋಗ್ಯದ ದೃಷ್ಟಿಯಿಂದ ಕಡಿಮೆ ಬೆಲೆಗೆ ಬಾಟಲ್ ಗಳಲ್ಲಿ ಸಂಗ್ರಹಿಸಿ ಗೋಮೂತ್ರ ಸರಬರಾಜು ಮಾಡಲು ಚಿಂತನೆ ನಡೆಸಿದ್ದು, ಪ್ರತಿದಿನ 10ರಿಂದ 20 ಮಿಲಿ ಲೀಟರ್ ಗೋಮೂತ್ರ ಸೇವನೆ ಮಾಡುವುದರಿಂದ ಆಯಾ ಕಾಲಮಾನಕ್ಕೆ ಬರುವ ನೆಗಡಿ, ಕೆಮ್ಮು, ಜ್ವರ ಹಾಗೂ ಹೊಟ್ಟೆಗೆ ಸಂಬಂಧಿಸಿದಂತಹ ರೋಗ ತಡೆಯಬಹುದಾಗಿದೆ. ಹಾಗಾಗಿಯೇ ಸರ್ಕಾರ ಗೋಮೂತ್ರ ಸರಬರಾಜಿಗೆ ಮುಂದಾಗಿದೆ ಎಂದು ಪಿಲಿಬಿಟ್ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಧಾನ ಮೇಲ್ವಿಚಾರಕರಾಗಿರುವ ಡಾ.ಪ್ರಕಾಶ್ ಚಂದ್ರ ಸಕ್ಸೇನಾ ವಿವರಿಸಿದ್ದಾರೆ.

ಪ್ರಸ್ತುತ ಯೋಗಿ ಆದಿತ್ಯನಾಥರ ಸರ್ಕಾರ 7 ಜಿಲ್ಲೆಗಳು ಹಾಗೂ 16 ನಗರಗಳಲ್ಲಿ 1000 ಗೋವುಗಳನ್ನು ಸಾಕಬಹುದಾದಂತಹ ಗೋಶಾಲೆ ತೆರೆಯಲು ಒಪ್ಪಿಗೆ ಸೂಚಿಸಿದ್ದು, ಇವುಗಳಿಂದ ರಾಜ್ಯದ ಜನರಿಗೆ ಅಗತ್ಯವಾಗುವ ಗೋಮೂತ್ರ ಸಂಗ್ರಹಿಸಲಾಗುತ್ತದೆ. ಅಲ್ಲದೆ, ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಗೋಶಾಲೆಗಳಿಂದಲೂ ಗೋಮೂತ್ರ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ನಿರ್ಧರಿಸಿದ್ದ ಸಂದರ್ಭದಲ್ಲಿ, ಈ ಬಗ್ಗೆ ಆಯುಷ್ ಇಲಾಖೆ ನಿರ್ದೇಶಕ ಡಾ. ಆರ್.ಆರ್. ಚೌಧರಿ ಮಾತಾಡಿ, ಆರಂಭದಲ್ಲಿ ಗೋಮೂತ್ರದಿಂದ ಸ್ವಚ್ಛತೆ ಮಾಡುವ ವಸ್ತುಗಳನ್ನು ತಯಾರಿಸುವ ಪ್ರಸ್ತಾವನೆ ಹೊಂದಲಾಗಿತ್ತು. ಆದರೆ ನಂತರ ಔಷಧಗಳನ್ನು ಸಿದ್ಧಡಿಸಲು ಮುಂದಾಗಿದೆ ಎಂದು ತಿಳಿಸಿದ್ದರು!! ಅಷ್ಟೇ ಅಲ್ಲದೇ ಆಯುರ್ವೇದ ಇಲಾಖೆಯು ಲಖನೌ ಮತ್ತು ಪಿಲಿಭಿತ್‍ನಲ್ಲಿರುವ ಎರಡು ಸರ್ಕಾರಿ ಫಾರ್ಮಸಿ ಮತ್ತು ಖಾಸಗಿ ಘಟಕಗಳ ಸಹಯೋಗದಲ್ಲಿ ಔಷಧಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದರು.

ಅಷ್ಟೇ ಅಲ್ಲದೇ ಈ ಬಗ್ಗೆ ಬಾಂಡಾ, ಝಾನ್ಸಿ, ಮುಜಫ್ಫರ್ ನಗರ, ಅಲಹಾಬಾದ್, ವಾರಾಣಸಿ, ಬರೇಲಿ, ಲಖನೌ ಮತ್ತು ಪಿಲಿಭಿತ್‍ಗಳಲ್ಲಿರುವ ಎಂಟು ಮೆಡಿಕಲ್ ಕಾಲೇಜುಗಳಲ್ಲಿ ಆಯುರ್ವೇದ ಕೋರ್ಸ್ ಆರಂಭಿಸಲಾಗಿದ್ದು, ಇಲ್ಲಿಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಬರುತ್ತಾರೆ. ಲೌಖನೌ ಆಸ್ಪತ್ರೆಯಗೆ ನಿತ್ಯ 700 ಜನರು ಔಷಧ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದರು. ಆದರೆ ಇದೀಗ ಜನರ ಆರೋಗ್ಯದ ದೃಷ್ಟಿಯಿಂದ ಕಡಿಮೆ ಬೆಲೆಗೆ ಬಾಟಲ್ ಗಳಲ್ಲಿ ಸಂಗ್ರಹಿಸಿ ಗೋಮೂತ್ರ ಸರಬರಾಜು ಮಾಡಲು ಚಿಂತನೆಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ನಡೆಸಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!

“ಶುಶ್ರುತ ಸಂಹಿತೆ” ಮತ್ತು “ಅಷ್ಟಾಂಗ ಸಂಗ್ರಹ”ದಲ್ಲಿ ಗೋಮೂತ್ರದ ಔಷಧೀಯ ಗುಣಗಳ ಬಣ್ಣನೆ ಬಹಳಷ್ಟು ಸಿಗುತ್ತದೆ. ಆದರೆ ಈಗಾಗಲೇ ಗೋಮೂತ್ರದ ವೈಜ್ಞಾನಿಕ ಮಹತ್ವ ಸಾಬೀತಾಗಿದ್ದು ನಮ್ಮ ಪರಂಪರಾಗತ ಔಷಧ ಜ್ಞಾನದ ವಿಶೇಷತ್ವ ಹಾಗೂ ಸತ್ಯತೆ ಈಗೀಗ ವಿಜ್ಞಾನಿಗಳು ಒಪ್ಪಿ ಬರುತ್ತಿದ್ದಾರಲ್ಲದೇ ಹಲವಾರು ರೀತಿಯ ಶೋಧನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕಿಂತಲೂ ಸಂತಸದ ವಿಚಾರ ಮತ್ತೊಂದಿಲ್ಲ. ಆದರೆ ದೇಶದ ಹಲವು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸಲು ಮುಂದೆ ಬರುತ್ತಿದ್ದರೆ ಇತ್ತ ಯೋಗಿ ಆದಿತ್ಯನಾಥ್ ಸರ್ಕಾರ ಗೋಮೂತ್ರದ ಔಷಧಿ ತಯಾರಿಸಲು ಪ್ರೋತ್ಸಾಹ ನೀಡುವ ಮೂಲಕ ದೇಶದ ಮೊದಲ ಸರ್ಕಾರ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

– ಅಲೋಖಾ

Tags

Related Articles

Close