ಪ್ರಚಲಿತ

ನಗರದ ಹೆಸರನ್ನೇ ಬದಲಾಯಿಸಿದ ಯೋಗಿ.! ಇಸ್ಲಾಂನಿಂದ ಹಿಂದುತ್ವದೆಡೆಗೆ ಉತ್ತರ ಪ್ರದೇಶ.! ಯೋಗಿ ನಾಡಿನಲ್ಲಾಗುತ್ತಿದೆ ಮಹತ್ವದ ಕ್ರಾಂತಿ.!

ಓರ್ವ ಸಂನ್ಯಾಸತ್ವ ಸ್ವೀಕರಿಸಿದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ನೀಡಿದರೆ ಯಾವ ರೀತಿಯ ಬದಲಾವಣೆ ಮಾಡಬಹುದು ಎಂಬುದನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಾಧಿಸಿ ತೋರಿಸಿದ್ದಾರೆ. ಇತಿಹಾಸದಲ್ಲಿ ಭಾರತದ ಮೇಲೆ ದಾಳಿ ನಡೆಸಿ ತಮ್ಮದೇ ಪಾರುಪತ್ಯ ಸಾಧಿಸಿ ತಮ್ಮ ಹೆಸರುಗಳನ್ನೇ ಭಾರತದ ಕೆಲವೊಂದು ಊರುಗಳಿಗೆ ನೀಡುತ್ತಿದ್ದ ಮೊಘಲರ ಕರಾಳ ಇತಿಹಾಸ ನಮ್ಮ ಕಣ್ಣ ಮುಂದಿದೆ. ಸ್ವಾತಂತ್ರ್ಯ ದೊರಕಿ ೭೦ ವರ್ಷಗಳೇ ಕಳೆದರೂ ನಮ್ಮಲ್ಲಿ ಇನ್ನೂ ಅನೇಕ ಬದಲಾವಣೆಗಳು ಬಾಕಿ ಉಳಿದಿದೆ. ಅದೇ ರೀತಿ ಮೊಘಲರು ಭಾರತೀಯರನ್ನು ಗುಲಾಮರನ್ನಾಗಿಸಿದ ಒಂದೊಂದೇ ಘಟನೆಯನ್ನು ಕಿತ್ತೊಗೆಯಲು ಇದೀಗ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಮುಂದಾಗಿದೆ. ಈಗಾಗಲೇ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಿ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ತಮ್ಮ ರಾಜ್ಯದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿ ದೇಶದ ಗಮನ ಸೆಳೆದಿದ್ದಾರೆ. ಯಾಕೆಂದರೆ ಈಗಾಗಲೇ ಉತ್ತರ ಪ್ರದೇಶದ ಅನೇಕ ನಗರಗಳ ಹೆಸರುಗಳನ್ನು ಮರುನಾಮಕರಣ ಮಾಡಿ ಹಿಂದೂ ವಿರೋಧಿಗಳ ಹೊಟ್ಟೆಗೆ ಬೆಂಕಿ ಇಟ್ಟಿರುವ ಯೋಗಿ ಸರಕಾರ ಇದೀಗ ಪ್ರಮುಖ ನಗರದ ಹೆಸರನ್ನೇ ಬದಲಾಯಿಸಿ ಮರುನಾಮಕರಣ ಮಾಡಿಬಿಟ್ಟಿದೆ..!

ಅಲಹಬಾದ್ ಇನ್ನು ಮುಂದೆ ಪ್ರಯಾಗ್‌ರಾಜ್..!

ಉತ್ತರ ಪ್ರದೇಶದ ಅಲಹಬಾದ್ ನಗರದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಯೋಗಿ ಸರಕಾರ ಈ ಹಿಂದೆಯೇ ನಿರ್ಧರಿಸಿತ್ತು. ಅದರಂತೆಯೇ ಅಲಹಬಾದ್ ಹೆಸರನ್ನು ಕಿತ್ತು ಹಾಕಿ ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿದ್ದರು. ಈ ವಿಚಾರ ಉತ್ತರ ಪ್ರದೇಶ ಮಾತ್ರವಲ್ಲದೆ ಇಡೀ ದೇಶಾದ್ಯಂತ ಹಿಂದೂ ವಿರೋಧಿಗಳ ಕಣ್ಣು ಕೆಂಪಗಾಗುವಂತೆ ಮಾಡಿಬಿಟ್ಟಿತ್ತು. ಯಾಕೆಂದರೆ ಯೋಗಿ ಹೇಳಿ ಕೇಳಿ ಓರ್ವ ಸಂತ, ಆತನ ದೃಷ್ಟಿಕೋನ ಕೇವಲ ಹಿಂದುತ್ವದೆಡೆಗೆ ಎಂಬುದು ಹಿಂದೂ ವಿರೋಧಿಗಳ ಕಲ್ಪನೆ. ಆದರೆ ಯೋಗಿ ಭಾರತೀಯ ಸಂಸ್ಕೃತಿಯನ್ನು ಮತ್ತೆ ಉಳಿಸಿಕೊಳ್ಳುವ ಸಲುವಾಗಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಮೊಘಲರ ಹೆಸರುಗಳನ್ನು ಕಿತ್ತು ಹಾಕಿ ಮತ್ತೆ ಹಳೇ ಹೆಸರನ್ನೇ ಮರುನಾಮಕರಣ ಮಾಡಿದ್ದಾರೆ.!

ಅಕ್ಬರ್ ನಿರ್ಮಿಸಿದ ಇತಿಹಾಸಕ್ಕೆ ಪೂರ್ಣವಿರಾಮ ಹಾಕಿದ ಯೋಗಿ..!

ಮೊಘಲ್ ದೊರೆ ಅಕ್ಬರ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಎಂಬ ನಗರವನ್ನು 1583 ರಲ್ಲಿ ಅಲಹಾಬಾದ್ ಎಂದು ನಾಮಕರಣ ಮಾಡಿದ್ದ ಮತ್ತು ಅದೇ ಹೆಸರು ಶಾಶ್ವತವಾಗಿ ಉಳಿದಿತ್ತು. ಯಾವ ಸರಕಾರ ಕೂಡ ಹೆಸರು ಬದಲಾಯಿಸುವ ಯೋಚನೆ ಅಥವಾ ಧೈರ್ಯ ತೋರಲಿಲ್ಲ. ಆದರೆ ಯೋಗಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಹತ್ವದ ಬದಲಾವಣೆಗೆ ಕೈಹಾಕಿತ್ತು ಮಾತ್ರವಲ್ಲದೆ ಇದೀಗ ಯಶಸ್ಸು ಕೂಡ ಕಂಡಿದೆ. ಸುಮಾರು 435 ವರ್ಷಗಳ ಇತಿಹಾಸ ಇರುವ ಅಲಹಾಬಾದ್ ಹೆಸರನ್ನು ಇದೀಗ ಮತ್ತೆ ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿ ಯೋಗಿ ಮತ್ತೊಂದು ಚರಿತ್ರೆ ಹುಟ್ಟುಹಾಕಿದ್ದಾರೆ.!

ಉತ್ತರ ಪ್ರದೇಶದಲ್ಲಿ ಇನ್ನೂ ಅನೇಕ ಇಂತಹ ಹೆಸರುಗಳುಲ್ಲ ನಗರಗಳನ್ನು ಈಗಾಗಲೇ ಯೋಗಿ ಸರಕಾರ ಗುರುತಿಸಿದ್ದು ಬದಲಾವಣೆ ಪ್ರಕ್ರಿಯೆ ಬಹಳ ಜೋರಾಗಿ ನಡೆಯುತ್ತಿದೆ. ಆದ್ದರಿಂದ ಯೋಗಿ ಕೈಗೊಂಡ ಈ ನಿರ್ಧಾರ ಹಿಂದೂ ವಿರೋಧಿಗಳಿಗೆ ಮತ್ತಷ್ಟು ಉರಿ ನೀಡಿರುವುದು ಗ್ಯಾರಂಟಿ. ಭಾರತದ ಪರಂಪರೆಯನ್ನು ಎತ್ತಿ ಹಿಡಿದು ಮತ್ತೆ ಭಾರತದ ಇತಿಹಾಸವನ್ನೇ ಪರಿಚಯಿಸಿದ ಯೋಗಿ ಆದಿತ್ಯನಾಥ್‌ಜೀ ಗೆ ಧನ್ಯವಾದಗಳು ಅರ್ಪಿಸಲೇಬೇಕು ಅಲ್ವೇ..!

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
Close