X

ಅಂಬೇಡ್ಕರ್‍ಗೆ ರಾಜ್ಯ ಸರಕಾರ ಮಾಡಿದ ಘೋರ ಅಪಮಾನವೇನು ಗೊತ್ತೇ? ಇದನ್ನು ನೋಡಿದರೆ ಯಾರೂ ಕಾಂಗ್ರೆಸ್ಸಿಗೆ ಓಟು ಹಾಕಲ್ಲ!

ನೋಡಿದ್ರಲ್ಲಾ… ಮತ್ತೆ ಬಯಲಾಯಿತು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್‍ರವರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಇರುವ ಗೌರವ. ಇಷ್ಟು ವರ್ಷಗಳ ಕಾಲ ನಾವೇ ಅಂಬೆಡ್ಕರ್‍ಗೆ ಗೌರವ ಕೊಡುತ್ತಿದ್ದೇವೆ, ಸಂಘಪರಿವಾರದವರು ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡುತ್ತಲೇ ಇದ್ದರು ಕಾಂಗ್ರೆಸ್ಸಿಗರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಜರೂಪ ಬಯಲಾಗುತ್ತಲೇ ಬಂದಿತ್ತು. ಕಾಂಗ್ರೆಸ್‍ನವರು ಹಿಂದಿನಿಂದಲೂ ಅಧಿಕಾರಕ್ಕೆ ಬರಬೇಕಾದರೆ ಅಂಬೆಡ್ಕರ್‍ರನ್ನೇ ಬಳಸುತ್ತಿತ್ತು. ಅಂಬೆಡ್ಕರ್ ಹೆಸರು ಹೇಳಿ ದಲಿತರನ್ನು ಮೋಸಗೊಳಿಸಿ ಇಷ್ಟು ವರ್ಷವೂ ಓಟು ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಮುಖವಾಡ ಬಟಬಯಲಾಗಿತ್ತು.

ನಿನ್ನೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಿಡುಗಡೆಗೊಳಿಸಿದ್ದ ಸರ್ಕಾರದ ಅಧಿಕೃತ ಜಾಹಿರಾತಿನಲ್ಲಿ ಅಂಬೆಡ್ಕರ್ ಭಾವಚಿತ್ರ ಹಾಕದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಮಾತ್ರ ಅಳವಡಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಜಾಹಿರಾತಿನಲ್ಲಿ ಅಂಬೆಡ್ಕರ್‍ರ ಭಾವಚಿತ್ರವಿದೆ. ನಿನ್ನೆ ಕಾನೂನು ದಿನವಾಗಿ ಆಚರಿಸಿರುವುದರಿಂದ ಅಂಬಡ್ಕರ್‍ರವರನ್ನು ವಿಶೇಷವಾಗಿ ನೆನಪಿಸಲಾಗಿತ್ತು.

ಇದೇ ಮೊದಲಲ್ಲ ಕಾಂಗ್ರೆಸ್ ನೆಗ್ಲೆಕ್ಟ್…!!

ಹೌದು. ನಮ್ಮದು ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಬೀಗುತ್ತಿರುವ ಕಾಂಗ್ರೆಸ್‍ನ ದಲಿತ ವಿರೋಧಿ ಕರಾಳ ಮುಖ ಇದೇ ಮೊದಲಲ್ಲ. ಹಿಂದಿನಿಂದಲೂ ಸಂವಿಧಾನ ಶಿಲ್ಪಿಯನ್ನು ಅವಮಾನಿಸುತ್ತಲೇ ಬಂದಿದ್ದಾರೆ ಕಾಂಗ್ರೆಸ್ ಪಕ್ಷದ ನಾಯಕರು. ಅಂಬೆಡ್ಕರ್ ದಲಿತರ ಆರಾಧಕರು ಎಂಬುವುದು ಸತ್ಯ. ದಲಿತ ವರ್ಗದಲ್ಲಿ ಹುಟ್ಟಿ, ಆ ಜಾತಿಯಲ್ಲಿ ಅಸ್ಪರ್ಶತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಬೌಧ್ಧ ಧರ್ಮವನ್ನು ಸ್ವೀಕರಿಸಿದರೂ ದಲಿತರ ಉದ್ಧಾರಕ್ಕಾಗಿ ಹಗಳಿರುಳು ದುಡಿದವರು ಅಂಬೆಡ್ಕರ್. ಭಾರತದ ಸಂವಿಧಾನದ ಶಿಲ್ಪಿಯಾಗಿದ್ದರೂ ಯಾವುದೇ ಅಹಂಕರವಿಲ್ಲದೆ, ದೇಶ ಸೇವೆಯೇ ಈಶ ಸೇವೆ ಎನ್ನುತ್ತಾ ಜೀವನ ಸಾಗಿಸಿದವರು ಅಂಬೆಡ್ಕರ್. ನೆಹರೂ ಪ್ರೇರಿತ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ವಿರುದ್ಧ ಸಮರ ಸಾರಿ ತನ್ನದೇ ಶೈಲಿಯಲ್ಲಿ ಅಧಿಕಾರ ನಡೆಸಿದವರು ಅಂಬೆಡ್ಕರ್.

ಅವರು ನೆಹರೂ ಕುಟುಂಬದಂತೆ ಬೆಳ್ಳಿ ಚಮಚವನ್ನು ಬಾಯಿಯಲ್ಲಿಟ್ಟುಕೊಂಡು ಬೆಳೆದವರಲ್ಲ. ಹುಟ್ಟು ಬಡವನಾಗಿ, ಮೇಲ್ವರ್ಗದ ಜನಾಂಗದಿಂದ ಶೋಷಿತರಾಗಿಯೇ ಬೆಳೆದು ಸಾಧನೆ ಮಾಡಿದವರು ಅಂಬೆಡ್ಕರ್. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೀತಿ ರೀತಿಗಳನ್ನು ಚೆನ್ನಾಗಿ ಬಳ್ಳವರಾಗಿದ್ದರು ಅಂಬೆಡ್ಕರ್. ಆದರೆ ಕಾಂಗ್ರೆಸ್ ಮಾತ್ರ ಸಂಘ ಪರಿವಾರವನ್ನು ಕಂಡರೆ ಅಂಬೆಡ್ಕರ್‍ಗೆ ಆಗುವುದಿಲ್ಲ. ಅದನ್ನು ವಿರೋದಿಸುತ್ತಿದ್ದರು ಎಂದು ಸುಳ್ಳು ಹೇಳುತ್ತಿದ್ದು, ದಲಿತರ ಓಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈವಾಗ ಜನರಿಗೆ ಎಲ್ಲಾನೂ ಅರ್ಥವಾಗುತ್ತಿದೆ. ಜನರು ಎಲ್ಲವನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಕಾಲ ಬದಲಾಗಿದೆ. ಈಗ ಜನರು ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳಿದವರಾಗಿದ್ದಾರೆ.

ಸಂವಿಧಾನ ಶಿಲ್ಪಿ ಬಿ.ಆರ್.ಅಂಬೆಡ್ಕರ್-ರಾಜ್ಯದಲ್ಲಿ ಮಾತ್ರ ಸಿದ್ದರಾಮಯ್ಯರದ್ದೇ ದರ್ಬಾರ್…!!!

ಸಂವಿಧಾನ ಶಿಲ್ಪಿ ಅಂದರೆ ಸಾಕು, ಪಕ್ಕನೆ ಕಣ್ಣ ಮುಂದೆ ಬರುವುದು ಅಂಬೆಡ್ಕರ್. ಯಾಕೆಂದರೆ ಇಡಿಯ ಸಂವಿಧಾನವನ್ನು ನಾಜೂಕಾಗಿ ರಚಿಸಿ, ಅದನ್ನು ಇಂದಿಗೂ ಗೌರವಿಸುವಂತೆ ಮಾಡಿದ್ದ ಅಂಬೆಡ್ಕರ್‍ರ ಪ್ರಶ್ನಾತೀತ ವ್ಯಕ್ತಿತ್ವ. ಆದರೆ ಕಾಂಗ್ರೆಸ್‍ಗೆ ಮತ್ರ ಅವರು ಕೇವಲ ಆಟದ ಗೊಂಬೆಯಾಗಿ ಬಿಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನುಡಿಸಿದಂತೆ ಕುಣಿಯುವ ಕಾಂಗ್ರೆಸ್ ನಾಯಕರಿಗೆ ಅಂಬೆಡ್ಕರ್ ಕಾಣೋದೇ ಇಲ್ಲ. ತನ್ನ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಅಂಬೆಡ್ಕರ್‍ರನ್ನು ನೆಪಮಾತ್ರಕ್ಕೆ ಗೌರವಿಸೋದು ಎಂಬುವುದು ಮತ್ತೆ ಸಾಭೀತಾಗಿದೆ.

ನಿನ್ನೆ ನಡೆದಿದ್ದ ಕಾನೂನು ದಿನಾಚರಣೆ ಪ್ರಯುಕ್ತ ದೇಶದೆಲ್ಲೆಡೆ ಆಚರಿಸಲಾಗಿತ್ತು. ಅಂಬೆಡ್ಕರ್ ಭಾವಚಿತ್ರವನ್ನಿಟ್ಟು ಪೂಜಿಸಲಾಗಿತ್ತು. ಕೇಂದ್ರದ ಮೋದಿ ಸರ್ಕಾರವೂ ದೇಶದೆಲ್ಲಡೆ ಜಾಹಿರಾತಿನ ಮೂಲಕ ಅಂಬೆಡ್ಕರ್ ಸಾಧನೆಯನ್ನು ನೆನಪಿಸಿದ್ದರು. ಕಾನೂನು ಅಂದರೆ ಸಂಬೆಡ್ಕರ್, ಅಂಬೆಡ್ಕರ್ ಅಂದರೆ ಕಾನೂನು ಎಂಬ ಗೌರವವನ್ನು ಮತ್ತಷ್ಟು ನೆನಪಾಗುವಂತೆ ಮಾಡಿದ್ದರು ಕೇಂದ್ರ ನರೇಂದ್ರ ಮೋದಿ ಸರ್ಕಾರ.

ಆದರೆ ನಮ್ಮ ಘನತೆ “ತೆತ್ತ” ಕರ್ನಾಟಕದ ಮುಖ್ಯಮಂತ್ರಿ ಸಿದ್ದರಮಯ್ಯನವರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಂವಿಧಾನವನ್ನು ನಿರ್ಮಿಸಿದ್ದು ತಾನೇ ಎಂಬಂತೆ ಅಹಂಕಾರದಿಂದ ತಾನು (ರಾಜ್ಯ ಸರ್ಕಾರ) ಬಿಡುಗಡೆಗೊಳಿಸಿದ್ದ ಜಾಹಿರಾತಿನಲ್ಲಿ ತನ್ನದೇ ಭಾವಚಿತ್ರವನ್ನು ಹಾಕಿ ದರ್ಪವನ್ನು ಮೆರೆದಿದ್ದಾರೆ. ಈ ಮೂಲಕ ಅಂಬೆಡ್ಕರ್‍ಗೆ ಮತ್ತೆ ಅವಮಾನ ಮಾಡಿದ್ದಾರೆ. ಬಿಡುಗಡೆಗೊಳಿಸಿದ್ದ ಇಡಿ ಪುಟದ ಜಾಹಿರಾತಿನಲ್ಲಿ ಕೇವಲ ಸಿದ್ದರಾಮಯ್ಯನವರ ಫೋಟೋ ಹಾಕುವ ಮೂಲಕ ತಾನೊಬ್ಬನೇ ಶ್ರೇಷ್ಟ ಎಂಬ ಸಂದೇಶವನ್ನು ಸಾರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತನ್ನನ್ನು ತಾನು ಹೀರೋ ಎಂಬಂತೆ ಬಿಂಬಿಸಿಕೊಳ್ಳುಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಸಿದ್ದರಾಮಯ್ಯನವರು ಈಗ ಅಂಬೆಡ್ಕರ್‍ರನ್ನೂ ಹೈಜಾಕ್ ಮಾಡಿ ತಾನೇ ಸಂವಿಧಾನ ರಚಿಸಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಅಂಬೇಡ್ಕರ್‍ಗೆ ಕಾಂಗ್ರೆಸ್ ಇದು ಮೊದಲೇನಲ್ಲ..!!!

ಯೆಸ್… ಈ ದೇಶದಲ್ಲಿ ದಲಿತರೆನ್ನುವವರು ಕಾಂಗ್ರೆಸ್‍ಗೆ ಮತಹಾಕಬೇಕುನ್ನುವ ಪದ್ದತಿಯನ್ನು ಹುಟ್ಟುಹಾಕಿದ್ದವರು ಕಾಂಗ್ರೆಸ್ಸಿಗರು. ಕೇವಲ ಓಟ್ ಬ್ಯಾಂಕ್‍ಗಾಗಿ ಅಸ್ಪರ್ಶತೆಯೆನ್ನುವ ಭೂತವನ್ನು ಹುಟ್ಟುಹಾಕಿ ಅದನ್ನು ಇಂದಿಗೂ ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತಿದೆ. ಆದರೆ ಪರಿಪರಿಯಾಗಿ ಅವರಿಗೆ ಅವಮಾನ ಮಾಡುತ್ತಿದೆ ಕಾಂಗ್ರೆಸ್. ಈವರೆಗೂ ದಲಿತರಿಗಾಗಿ ಜಾರಿಗೆ ತಂದ ಯಾವುದೇ ಒಂದು ವರದಿಗಳನ್ನು ಜಾರಿ ಮಾಡಲು ಬಿಟ್ಟಿಲ್ಲ. ಹಲವಾರು ಯೋಜನೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೆ ಒಂದೂ ಜಾರಿಯಾಗದೆ ದಲಿತರಿಗೆ ಹಾಗೂ ಅಂಬೇಡ್ಕರ್‍ಗೆ ಅವಮಾನ ಮಾಡಿದ್ದು ಯಾರು..?

ರಾಜ್ಯ ಕಾಂಗ್ರೆಸ್ ಸರ್ಕಾರ ಯಾವೊಬ್ಬ ದಲಿತನಿಗಾದರೂ ಸರ್ಕಾರದಲ್ಲಿ ಉನ್ನತ ಹುದ್ದೆಯ ಅವಕಾಶ ನೀಡಿದೆಯಾ..? ಕಾಂಗ್ರೆಸ್‍ನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಹಿತ ಹಲವಾರು ಕಾಂಗ್ರೆಸ್ ನಾಯಕರು ಇದ್ದರೂ ಅವರನ್ನು ಮೇಲಕ್ಕೆ ಬರಲು ಸಿದ್ದರಾಮಯ್ಯ ಯಾಕೆ ಬಿಟ್ಟಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದಲಿತ ನಾಯಕನಾಗಿದ್ದರೂ ಅವರಿಗೆ ಹಲವಾರು ಬಾರಿ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶ ಇದ್ದರೂ ಯಾಕೆ ಕೊಟ್ಟಿಲ್ಲ..? ಬಿಡಿ… ಕನಿಷ್ಠ ಪಕ್ಷ ಸಚಿವ ಸ್ಥಾನಕ್ಕಾಗಿ ಅವರು ಎಷ್ಟು ಬಾರಿ ದೆಹಲಿಗೆ ತೆರಳಿ ಸೋನಿಯಾ ಮೇಡಂ ಮನೆ ಬಾಗಿಲನ್ನು ಬಡಿಯಬೇಕಾಯ್ತು..?

ಅದೇ ಪರಮೇಶ್ವರ್ ವಿರುದ್ಧ ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಸೋಲುವಂತೆ ಮಾಡಿದ್ದು ವಿರೋಧ ಪಕ್ಷಗಳಂತು ಅಲ್ವೇ ಅಲ್ಲ. ಬದಲಾಗಿ ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯರೇ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮಾತ್ರವಲ್ಲದೆ ದಲಿತ ನಾಯಕನಾಗಿದ್ದ ಪರಮೇಶ್ವರ್ ವಿರುದ್ಧ ಚುನಾವಣೆಯ ಸಂದರ್ಭದಲ್ಲಿ ಮೈಸೂರಿನ ಹಳ್ಳಿಯೊಂದರಲ್ಲಿ ಶತ್ರು ಸಂಹಾರ ಪೂಜೆ ನಡೆಯುತ್ತಿತ್ತು ಎಂದರೆ ನಂಬಲೇಬೇಕು. ಇಷ್ಟರವೆಗೆ ದಲಿತರಿಗೆ ಅವಮಾನ ಮಾಡಿದೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ.

ದಲಿತರೆಂದರೆ ಕಾಂಗ್ರೆಸ್‍ಗೇಕೆ ಭಯ…!!!

ದಲಿತರೆಂದರೆ ಸಾಕು ಈ ಕಾಂಗ್ರೆಸ್ ನಾಯಕರಿಗೆ ಅದೇನೋ ಭಯ. ದಲಿತ ಮೀಸಲಾತಿಯ ಅಡಿಯಲ್ಲಿ ದಲಿತರಿಗೆ ಹೆಚ್ಚಿನ ಮಣೆ ಹಾಕಬೇಕಾಗುತ್ತದೆ. ಹೀಗಾದರೆ ನಾಯಕರೆನಿಸಿಕೊಂಡವರಿಗೆ ಕುರ್ಚಿ ತಪ್ಪಿ ಹೋಗುತ್ತದೆ. 2ನೇ ಸ್ಥಾನದಲ್ಲಿರಲು ಬಯಸದ ನಾಯಕರುಗಳು ದಲಿತ ನಾಯಕರನ್ನು ಕಡೆಗಣಿಸುತ್ತಾ ಬರುತ್ತಾರೆ. ಹೀಗಾಗಿಯೇ ಪರಮೇಶ್ವರ್ ಚುನಾವಣೆಯಲ್ಲಿ ಸೋತಿದ್ದರು. ಅಷ್ಟೇ ಅಲ್ಲ. ಪರಿಷತ್‍ನಲ್ಲಿ ಸ್ಥಾನ ಗಿಟ್ಟಿಸಿಕೊಂಡರೂ ಮಂತ್ರಿ ಸ್ಥಾನ ಮಾತ್ರ ಗಿಟ್ಟಿಸಲು ದೆಹಲಿಗೆ ಅಲೆಯಬೇಕಾಯ್ತು. ಆದರೆ ಎಷ್ಟೇ ಅಲೆದರೂ ಮಂತ್ರಿ ಸ್ಥಾನ ಸಿಗಲೇ ಇಲ್ಲ. ನಂತರ ಸತತ ಪ್ರಯತ್ನದ ನಂತರ ಅದೆಷ್ಟೋ ಸಮಯದ ನಂತರ ಮಂತ್ರಿ ಸ್ಥಾನದ ಪಟ್ಟ ಒಲಿದು ಬಂತು. ಆದರೆ ಕಾಂಗ್ರೆಸ್‍ನ ಒಳಪಿತೂರಿಯಿಂದ ಮತ್ತೆ ಸಚಿವ ಸ್ಥಾನ ತಪ್ಪಿಹೋಗಿತ್ತು. ನೆಪ ಮಾತ್ರಕ್ಕೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ.

ಒಟ್ಟಿನಲ್ಲಿ ದಲಿತರ ನೆಪದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್‍ಗೆ ಅವಮಾನ ಮಾಡುತ್ತಿರುವ ಕಾಂಗ್ರೆಸ್ಸಿಗರು ಚುನಾವಣೆ ಸಮಯದಲ್ಲಿ ಮಾತ್ರ ಅಂಬೇಡ್ಕರ್‍ ನೆನಪಿಗೆ ಬರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅಂಬೆಡ್ಕರ್ ಫೋಟೋ ಹಿಡಿದುಕೊಂಡು ದಲಿತ ವರ್ಗದ ಮತವನ್ನು ಸೆಳೆಯಲು ಬರುತ್ತೆ. ಈ ಕಾಂಗ್ರೆಸ್ಸಿಗರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ..? ನೆಹರೂ ಕಾಲದಿಂದಲೂ ಅಂಬೆಡ್ಕರ್‍ಗೆ ಅವಮಾನ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಈಗಲೂ ಅದನ್ನು ಮುಂದುವರೆಸುತ್ತಲೇ ಇದೆ.

ಡೋಂಟ್ ವರಿ ಅಂಬೆಡ್ಕರ್ ಜೀ… ಕಾಂಗ್ರೆಸ್ಸಿಗರಿಂದ ಮತ್ತೆ ನಿಮ್ಮ ಮುಖ ನೋಡಬೇಕಾದರೆ ಚುನಾವಣೆ ಬರಬೇಕು. ಅಂದು ಖಂಡಿತಾ ನಿಮ್ಮ ಭಾವಚಿತ್ರ ತೋರಿಸಿಕೊಂಡು ಮತ ಬೇಡಲು ಬಂದೇ ಬರುತ್ತಾರೆ. ಅಂದು ನಾವು ಅವರಿಗೆ ಪಾಠ ಕಳಿಸುತ್ತೇವೆ… ಮುಂದಿನ ಸರ್ಕಾರ ನಿಮ್ಮನ್ನು ನೈಜವಾಗಿ ಪೂಜಿಸುವ ಸರ್ಕಾರವಾಗಿರುತ್ತದೆ…

-ಸುನಿಲ್ ಪಣಪಿಲ

Editor Postcard Kannada:
Related Post