X

ಅಜಿತ್ ದೋವಲ್ ರ ಬಗೆಗೆ ನಿಮಗೆ ಗೊತ್ತಿರದ ಕೆಲವು ಸತ್ಯಗಳು!

ಅಜಿತ್ ದೋವಲ್!! ಅವರ ಬಗ್ಗೆ ಬಹುಷಃ ಅಷ್ಟಾಗಿ ನಿಮಗೆ ಗೊತ್ತಿರಲಿಕ್ಕಿಲ್ಲ!! ಭಾರತದ ಜೇಮ್ಸ್ ಬಾಂಡ್ ಅಂತಲೇ ಖ್ಯಾತಿ ಗಳಿಸಿದ ಅಜಿತ್ ದೋವಲ್ ಎಂಬ ತೀರಾ ಸರಳ ಮತ್ತು ಗಾಂಭೀರ್ಯ ಮೊಗದ ಹಿಂದೆ ಅದೆಷ್ಟೋ ರೋಮಾಂಚನಕಾರಿ ಸಾಹಸಮಯ ಬದುಕಿದೆ! ಅದೆಷ್ಟೋ ವರ್ಷಗಳ ಕಾಲ, ತನ್ನ ಐಡೆಂಟಿಟಿಯನ್ನೇ ಬದಲಿಸಿಕೊಂಡು ಎಲ್ಲೂ ತಪ್ಪಾಗದಂತೆ ಕರ್ತವ್ಯ ನಿರ್ವಹಿಸಿಕೊಂಡು ಬಂದ ಚಾಣಕ್ಯನಿದ‌್ದಾನೆ! ಅಂತಹ ಅಜಿತ್ ದೋವಲ್ ರ ಹೆಸರು ಕೇಳಿದರೆ, ಪಾಕಿಸ್ಥಾನ ನಿಂತಲ್ಲೇ ಬೆವರುತ್ತದೆ! ಇನ್ನೇನು ಕಾದಿದೆಯೋ ಎಂದು ಮಧ್ಯರಾತ್ರಿಯಲ್ಲಿಯೂ ನಿದ್ದೆಯಲ್ಲಿ ಚಡಪಡಿಸುತ್ತದೆ!

ಅಂತಹ ಅಜಿತ್ ದೋವಲ್ ರ ಬಗ್ಗೆ ನಿಮಗೆಷ್ಟು ಗೊತ್ತು?!

ಮೊದಲನೆಯದಾಗಿ, 1988 ರಲ್ಲಿ ಭಾರತದ ಎರಡನೆಯ ಅತ್ಯುನ್ನತ ಶಾಂತಿಕಾಲದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಪಡೆದ ಮೊದಲ ಪೋಲಿಸ್ ಅಧಿಕಾರಿ! ಮಿಲಿಟರಿ ಗೌರವಾರ್ಥವಾಗಿ ಪದಕ ಪಡೆದ ಮೊದಲ ಅಧಿಕಾರಿ ಅಜಿತ್ ದೋವಲ್!

1971 ರಿಂದ 1999 ರ ವರೆಗೆ ನಡೆದ 15 ಭಾರತೀಯ ವಿಮಾನಗಳನ್ನು ಅಪಹರಿಸಿದ್ದ ಆತಂಕವಾದಿಗಳನ್ನು ಪ್ರತೀ ಸಲವೂ ಹಿಮ್ಮೆಟ್ಟಿಸಿ ಯಶಸ್ವಿಯಾಗಿ ಮಿಲಿಟರಿ ಆಪರೇಶನ್ ಗಳನ್ನು ಪೂರ್ಣಗೊಳಿಸಿದ್ದು ಅಜಿತ್ ದೋವಲ್ !

ಪಾಕಿಸ್ಥಾನದಲ್ಲಿ ಏಳು ವರ್ಷಗಳ ಕಾಲ ಮುಸಲ್ಮಾನನ ವೇಷ ಹಾಕಿ ವಾಸಿಸಿ, ತನ್ಮೂಲಕ, ಪಾಕಿಸ್ಥಾನದಿಂದ ತೀರಾ ದುರ್ಲಭವಾದ ದಾಖಲೆಗಳನ್ನು ಭಾರತಕ್ಕೆ ಕಳುಹಿಸಿದ್ದ ಚಾಣಕ್ಯ ಬೇರೆ ಯಾರೂ ಅಲ್ಲ! ಅಜಿತ್ ದೋವಲ್!!

ಪಾಕಿಸ್ಥಾನದಲ್ಲಿ ಗೂಢಾಚಾರಿಯಾಗಿ ವಾಸಿಸುತ್ತಿರಬೇಕಾದರೆ, ತಾನೊಬ್ಬ ಗೂಢಾಚಾರಿಯಾಗಿರುವುದು ಯಾರಿಗೂ ತಿಳಿಯದಿರಲಿ ಎಂದು ಮುಸಲ್ಮಾನ ವೇಷದಲ್ಲಿ ಹೊರ ಬರುತ್ತಿದ್ದ ಹಾಗೆ, ದೂರದಲ್ಲಿ ಕುಳಿತಿದ್ದ ಒಬ್ಬ ಉದ್ದ ಬಿಳಿ ಗಡ್ಡದ ಮುಸಲ್ಮಾನ ಮಾತುಕಥೆಗೆ ಕರೆದಿದ್ದರು! ದೋವಲ್ ರವರಿಗೆ ಪ್ರಾಣ ಸಂಕಟಗಕ್ಕಿಟ್ಟುಕೊಂಡಿತ್ತು! ಹೋದರೂ ಕಷ್ಟ ಹೋಗದಿದ್ದರೂ ಕಷ್ಟ! ಅಂತೂ ಧೈರ್ಯ ಮಾಡಿ ಹತ್ತಿರ ಹೋದಾಗ, ನೇರವಾಗಿ ‘ನೀವು ಹಿಂದೂ” ಎಂದಾಗ ಅಜಿತ್ ರವರಿಗೆ ಹೇಗಾಗಿರಬೇಡ?!

ಒಮ್ಮೆ ಯೋಚಿಸಿ! ಪರದೇಶದಲ್ಲಿ ಗೂಢಾಚಾರನಾಗಿ ವಾಸಿಸುವುದು ಅಷ್ಟು ಸುಲಭವಲ್ಲ! ಒಮ್ಮೆ ಹೆಚ್ಚು ಕಡಿಮೆಯಾದರೂ ಸಹ, ಮುಗಿದೇ ಹೋಯಿತು! ಅಜಿತ್ ದೋವಲ್ ,ಮುಸಲ್ಮಾನನ ಮಾತನ್ನು ತಳ್ಳಿ ಹಾಕುತ್ತಾ, ನಾನೊಬ್ಬ ಮುಸಲ್ಮಾನ ಎಂದರೂ ಕೇಳದ ಗಡ್ಡದ ವ್ಯಕ್ತಿ, ಇಲ್ಲ ನೀವು ಹಿಂದೂವೇ ಎಂದು ಪಟ್ಟು ಹಿಡಿದರೂ ಸಹ, ಅಜಿತ್ ದೋವಲ್ ತಮ್ಮ ನಿಲುವನ್ನು ಬದಲಿಸದೇ, ಯಾಕೆ ನಾನು ಮುಸಲ್ಮಾನನಾದರೂ ಪದೇ ಪದೇ ‘ಹಿಂದೂ’ ಎಂದು ಅವಮಾನಿಸುತ್ತೀರಲ್ಲ ಎಂದಿದ್ದೇ, ಒಂದು ಕ್ಷಣವೂ ನಿಲ್ಲದೇ ಅಜಿತ್ ದೋವಲ್ ರನ್ನು ನಾಲ್ಕೈದು ಬೀದಿ ಸುತ್ತಿಸಿ, ಒಂದು ಕೋಣೆಗೆ ಕರೆದುಕೊಂಡು ಹೋದ ವ್ಯಕ್ತಿ ಹೇಳಿದ್ದು ದೋವಲ್ ರವರನ್ನು ಗರಬಡಿಸಿಬಿಟ್ಡಿತ್ತು!

“ಮುಸಲ್ಮಾನ ಎನ್ನುತ್ತೀರಿ! ಆದರೆ, ಕಿವಿ ಚುಚ್ಚಿದ ಗುರುತಿದೆ! ಮುಸಲ್ಮಾನರು ಇದನ್ನು ಮಾಡುವುದಿಲ್ಲ, ಹಿಂದೂ ಮಾತ್ರ ಇದನ್ನು ಮಾಡುವುದು” ಎಂದ ಗಡ್ಡಧಾರಿ ವ್ಯಕ್ತಿಯ ಮಾತನ್ನು ಮತ್ತೆ ತಳ್ಳೆ ಹಾಕಿದ ಅಜಿತ್ , ‘ನಾನು ಹುಟ್ಟಿದ್ದು ಹಿಂದೂ ಧರ್ಮದಲ್ಲಿ, ಇಸ್ಲಾಂ ಗೆ ಮತಾಂತರವಾಗಿದ್ದೇನೆ” ಎಂದಾಗ ಜೋರಾಗಿ ನಕ್ಕ ಗಡ್ಡಧಾರಿ ವ್ಯಕ್ತಿಯೂ ತಮ್ಮ ಕೋಣೆಯಲ್ಲಿ ಅಡಗಿಸಿದ್ದ ಕಪಾಟನ್ನು ತೆರೆದು, ಶಿವಾಜಿ ಹಾಗೂ ದುರ್ಗಾರ ಮೂರ್ತಿಯನ್ನು ತೋರಿಸಿ, ನಾನೂ ಹಿಂದೂವೇ! ಭಾರತದವನು! ಎಂದಾಗ ಅಜಿತ್ ರಿಗೆ ಒಮ್ಮೆ ನಿರಾಳವಾಗಿತ್ತು! ಕೊನೆಗೆ ಅದೇ ಗಡ್ಡಧಾರಿ ವ್ಯಕ್ತಿಯ ಸಲಹೆಯಂತೆ, ಕಿವಿಯ ತೂತು ಕಾಣದಂತೆ ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿಸಿಕೊಂಡಿದ್ದರು ಅಜಿತ್!

ಅದೂ ಬಿಡಿ! ಜೂನ್ 2014 ರಲ್ಲಿ, ಇರಾಕಿನ ಟಿಕ್ರಿಟ್ ಎಂಬ ಪ್ರದೇಶದ ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದಿದ್ದ 46 ಭಾರತೀಯ ನರ್ಸುಗಳನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ದೋವಲ್, ಇರಾಕಿನ ಸ್ಥಿತಿಗತಿಗಳನ್ನು ಅರ್ಥೈಸಲು ರಹಸ್ಯ ಕಾರ್ಯಾಚರಣೆ ನಡೆಸಿದ್ದು ಬೇರೆ ಯಾರೂ ಅಲ್ಲ! ದೋವಲ್!

ಪೋಲಿಸ್ ಅಧಿಕಾರಿಯಾಗಿ ಆರು ವರ್ಷ ಕರ್ತವ್ಯ ನಿರ್ವಹಿಸಿದ ನಂತರ,ಶ್ಲಾಘನೀಯ ಕಾರ್ಯಚಟುವಟಿಕೆಗಳಿಗೆ ಪೋಲಿಸ್ ಪದಕ ಪಡೆದ ಮೊದಲ ಕಿರಿಯ ಅಧಿಕಾರಿ!

1986 ರಲ್ಲಿ ಈಶಾನ್ಯದಲ್ಲೆದ್ದ ದಂಗೆಕೋರರನ್ನು ಯಶಸ್ವಿಯಾಗಿ ಹತ್ತಿಕಿದ ಅಜಿತ್ ದೋವಲ್ ರಿಗೆ ತಮ್ಮ ಕ್ಷೇತ್ರದಲ್ಲಿ ಉನ್ನತ ಹೆಸರುಗಳಿಸುವಲ್ಲಿ ಯಶಸ್ವಿಯಾಯಿತು! ದಂಗೆ ಎದ್ದಿದ್ದ ಏಳು ಲಾಡ್ಜೆಂಡಾ ಕಮಾಂಡರ್ ಗಳ ಪೈಕಿ, ಆರು ಜನರನ್ನು ಶಾಂತಿ ಒಪ್ಪಂದಕ್ಕೆ ಸಹಿ ಮಾಡಿಸಿ ಕುಳಿತಲ್ಲಿಯೇ ದಂಗೆಯನ್ನು ತಣ್ಣಗಾಗಿಸಿದ್ದು ಇದೇ ಅಜಿತ್ ದೋವಲ್!

1988 ರಲ್ಲಿ ಪಂಜಾಬಿನ ಖಲಿಸ್ತಾನ ಉಗ್ರರು ಅಪಹರಿಸಿದ್ದ ರೊಮೇನಿಯಾ ರಾಯಭಾರಿ ಲಿವಿಡು ರಾಡುರ ಬಿಡುಗಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು
ದೋವಲ್! ಆದರೆ, ಭಾರತದ ಜೇಮ್ಸ್ ಬಾಂಡ್ ಎಂದು ಹೆಸರು ಬಂದಿದ್ದು ಈ ಕಾರಣಕ್ಕಲ್ಲ!

ಹೆಸರೇ ಹೇಳಿತ್ತು ಕಥೆಯನ್ನು!

ಹಾ! ಭಾರತದ ಜೇಮ್ಸ್ ಬಾಂಡ್ ಎಂದು ಹೆಸರು ಬಂದಿದ್ದು ವೇಷ ಬದಲಿಸಿ ನಿರ್ವಹಿಸಿದ ಎರಡು ಪ್ರಕರಣಗಳಿಂದ! 1988 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಂತರ ಮರಳಿ ಖಾಲಿಸ್ತಾನಿ ಉಗ್ರರು ಸ್ವರ್ಣಮಂದಿರ ಪ್ರವೇಶಿಸಿ ಕುಳಿತಿದ್ದರು. ಆದರೆ ಎಷ್ಟುಜನ ಇದ್ದಾರೆ ಎಂಬ ಖಚಿತ ಮಾಹಿತಿ ನಮ್ಮ ಸೇನೆಯ ಬಳಿ ಇರಲಿಲ್ಲ. ಆಗ ಒಬ್ಬ ಸಿಖ್ ರಿಕ್ಷಾ ಚಾಲಕನಾಗಿ ಕಾಣಿಸಿಕೊಂಡ ಅಜಿತ್, ಸ್ವರ್ಣಮಂದಿರದಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿ ಕಳುಹಿಸತೊಡಗಿದರು. ಕೇವಲ 40 ಉಗ್ರರಿದ್ದಾರೆ, ಒಳಪ್ರವೇಶಿಸಬಹುದು ಎಂದು ಲೆಕ್ಕ ಹಾಕುತ್ತಿದ್ದ ಸೇನಾ ಕಮಾಂಡರ್‍ಗಳಿಗೆ, 250ಕ್ಕೂ ಹೆಚ್ಚು ಜನರಿದ್ದಾರೆ ಎಂದು ಹೇಳಿ, ದಾಳಿ ನಡೆಸುವುದು ಬೇಡವೆಂದು ಸಲಹೆ ನೀಡಿದ ದೋವಲ್, ಆ ಸ್ಥಳಕ್ಕೆ ನೀರು ಮತ್ತು ಆಹಾರ ಪೂರೈಕೆ ನಿಲ್ಲಿಸಲು ಹೇಳಿದರಂತೆ. ನಂತರ ರಿಕ್ಷಾ ಚಾಲಕನಾಗಿ ಉಗ್ರರನ್ನು ಭೇಟಿಯಾಗಿ, ತಾನೊಬ್ಬ ಪಾಕಿಸ್ತಾನಿ ಏಜೆಂಟ್ ಎಂದು ನಂಬಿಸುವಲ್ಲಿ ಯಶಸ್ವಿಯಾದ ಅಜಿತ್, ಗಡಿ ದಾಟಿಸಿ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸುತ್ತಲೇ ಶರಣಾಗತಿಗೆ ತಯಾರಿಸಿದರಂತೆ. ಒಂದು ಗುಂಡು ಕೂಡ ಹಾರಿಸದೆ ನಿರ್ವಹಿಸಿದ `ಆಪರೇಷನ್ ಬ್ಲಾಕ್ ಥಂಡರ್’ ಇದೇ.

ಎರಡನೇ ಘಟನೆ ಇನ್ನೂ ರೋಚಕ!! ಪಾಕಿಸ್ತಾನದಲ್ಲಿ ಏಳು ವರ್ಷಗಳ ಕಾಲ ಲಾಹೋರ್, ಕರಾಚಿ ಪೇಶಾವರ್‍ಗಳಲ್ಲಿ ಮುಸ್ಲಿಮನಾಗಿ ದೋವಲ್ ವೇಷ ಮರೆಸಿಕೊಂಡು ಇದ್ದದ್ದು. ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿದು ಕರೆದುಕೊಂಡು ಬರುವ ಕಾರ್ಯಾಚರಣೆ ನಡೆಸಲು ಅಜಿತ್ ಪಾಕ್‍ನಲ್ಲಿದ್ದರು. ಒಮ್ಮೆ, ಅಜಿತ್ ಮುಸ್ಲಿಂ ವೇಷ ಧರಿಸಿ ಲಾಹೋರ್‍ನ ಮಸೀದಿ ಎದುರು ಕುಳಿತಿದ್ದಾಗ, ವೃದ್ಧನೊಬ್ಬ ಕರೆದು, “ನೀನು ಹಿಂದೂ ಅಲ್ಲವೇ?” ಎಂದು ಕೇಳಿದನಂತೆ. ಅಜಿತ್‍ರಿಗೆ ಭೂಮಿ ಬಿರಿದ ಅನುಭವ. ತನ್ನ ಮನೆಗೆ ಕರೆದುಕೊಂಡು ಹೋದ ವೃದ್ಧ, “ನಿನ್ನ ಕಿವಿಯಲ್ಲಿ ರಂಧ್ರವಿದೆ, ನೀನು ಹಿಂದೂ. ಮುಸ್ಲಿಮರಲ್ಲಿ ಈ ಪದ್ಧತಿ ಇಲ್ಲ,” ಎಂದು ಹೇಳಿದನಂತೆ. ಹೀಗಾಗಿ ವಾಪಸು ಭಾರತಕ್ಕೆ ಮರಳಿದಾಗ ದೋವಲ್ ಮಾಡಿದ ಮೊದಲ ಕೆಲಸ, ಕಿವಿಯ ರಂಧ್ರವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಚ್ಚಿಸಿಕೊಂಡಿದ್ದು.

ಈ ಎರಡು ಕಾರಣಗಳಿಂದಭಾರತ ಅಜಿತರಿಗೆ ಜೇಮ್ಸ್ ಬಾಂಡ್ ಎಂಬ ಬಿರುದು ಕೊಟ್ಟಿತ್ತು!!

ನಂತರ 2005ರಲ್ಲಿ ಭಾರತೀಯ ಬೇಹುಗಾರಿಕಾ ದಳದ ನಿರ್ದೇಶಕನಾಗಿ ನಿವೃತ್ತರಾದ ದೋವಲ್, ನಂತರ ಆರ್‍ಎಸ್‍ಎಸ್ ವಿಚಾರಧಾರೆ ಒಪ್ಪುವ ಕೆಲ ಚಿಂತಕರ ಜೊತೆ ಸೇರಿಕೊಂಡು ವಿವೇಕಾನಂದ ಫೌಂಡೇಶನ್ ಎಂಬ ಥಿಂಕ್ ಟ್ಯಾಂಕ್ ಸ್ಥಾಪಿಸಿದರು. ಪಾಕಿಸ್ತಾನ ಮತ್ತು ಉಗ್ರರ ಬಗೆಗಿನ ಸ್ಪಷ್ಟಖಚಿತ ಕಠಿಣ ನೀತಿಯಿಂದಾಗಿ ಮೊದಲಿನಿಂದಲೂ ಸಹಜವಾಗಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಜೊತೆ ಆತ್ಮೀಯತೆ ಹೊಂದಿದ್ದ ದೋವಲ್, ನಿವೃತ್ತರಾದ ನಂತರ ಬಿಜೆಪಿ ಆಡಳಿತವಿದ್ದ ಹಲವು ರಾಜ್ಯಗಳ ಭದ್ರತಾ ಸಲಹೆಗಾರರಾಗಿ ಕೂಡ ಕೆಲಸ ಮಾಡಿದರು! 1996ರಲ್ಲಿ ಎನ್‍ಡಿಎ ಸರ್ಕಾರ ಬಂದಾಗ ಗೃಹಸಚಿವರಾಗಿದ್ದ ಎಲ್ ಕೆ ಆಡ್ವಾಣಿ ಅವರಿಗೆ, ಉಗ್ರರನ್ನು ಸದೆಬಡಿಯಲು ಪೋಟಾ ಕಾಯ್ದೆ ಜಾರಿಗೆ ತರುವಂತೆ ಮನವರಿಕೆ ಮಾಡಿಕೊಟ್ಟಿದ್ದೇ ದೋವಲ್ ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಗುಜರಾತ್‍ನಲ್ಲಿ ಉಗ್ರರನ್ನು ಹತ್ಯೆಗೈಯುವ ಸರಣಿ ಎನ್‍ಕೌಂಟರ್‍ಗಳ ಹಿಂದೆಯೂ ದೋವಲ್ ಸಲಹೆ ಕೆಲಸ ಮಾಡಿತ್ತಂತೆ. ಆಗ ದೋವಲ್, ಕೇಂದ್ರ ಬೇಹುಗಾರಿಕಾ ದಳದ ಮುಖ್ಯಸ್ಥರಾಗಿದ್ದರು.

ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ತಕ್ಷಣ ವಿದೇಶಾಂಗ ನೀತಿ ಕುರಿತಾಗಿ ನಡೆದ ಮೊದಲ ಸಭೆಯಲ್ಲಿ ಅಜಿತ್ ಸ್ಪಷ್ಟಶಬ್ದಗಳಲ್ಲಿ, “ಶತ್ರುರಾಷ್ಟ್ರ ಸತತವಾಗಿ ನಮ್ಮ ರಕ್ತ ಸುರಿಸುತ್ತಿರುವಾಗ ಒಂದೋ ನಾವು ರಕ್ಷಣಾತ್ಮಕವಾಗಿ ಹೆಜ್ಜೆ ಇಡಬೇಕು, ಇದನ್ನು ನಾವು ಸ್ವಾತಂತ್ರ್ಯ ಸಿಕ್ಕಾಗಿನಿಂದ ಮಾಡಿದ್ದೇವೆ; ಇಲ್ಲವೇ, ಆಕ್ರಮಣಕಾರಿ ರಕ್ಷಣಾತ್ಮಕ ಹೆಜ್ಜೆ ಇಡಬೇಕು, ಅದು ನಡೆಯದಿದ್ದರೆ ಅಂತಿಮವಾಗಿ ಆಕ್ರಮಣ,” ಎಂದು ಹೇಳಿದ್ದರಂತೆ. ಹೀಗಾಗಿ, ವಿಶ್ವದ ಇತರ ನಾಯಕರಿಗೆ ತೋರಿಸಲೆಂಬಂತೆ ಪ್ರಮಾಣವಚನ ಕಾರ್ಯಕ್ರಮಕ್ಕೆ ನವಾಜ್ ಷರೀಫ್‍ರನ್ನು ಆಹ್ವಾನಿಸಿ, ನಂತರ ದಾಳಿಗಳು ನಿಲ್ಲದೆ ಇದ್ದಾಗಲೂ ಒಲ್ಲದ ಪ್ರಧಾನಿಯನ್ನು ಒಪ್ಪಿಸಿ ಷರೀಫ್ ಪುತ್ರಿಯ ಮದುವೆಗೆ ಲಾಹೋರ್‍ಗೆ ಕರೆದುಕೊಂಡು ಹೋದ ದೋವಲ್, ಉರಿ ಘಟನೆ ಆದಾಗ ಮಾತ್ರ, ಇನ್ನು ಆಕ್ರಮಣಕಾರಿ ಹೆಜ್ಜೆ ಇಡಲೇಬೇಕು ಎಂದು ಪ್ರಧಾನಿಗೆ ಸಲಹೆ ನೀಡಿದ್ದರಂತೆ. ಇಂಥದ್ದೊಂದು ಸರ್ಜಿಕಲ್ ದಾಳಿ ಯೋಜಿಸುವ ಹೊಣೆಯನ್ನು ದೋವಲ್’ರಿಗೆ ವಹಿಸಿದ್ದ ಪ್ರಧಾನಿ, ಇದಾದ ನಂತರ ವಿಶ್ವದ ಪ್ರಮುಖ ರಾಷ್ಟ್ರಗಳ ರಾಯಭಾರಿಗಳನ್ನು ಸಮಾಧಾನಪಡಿಸುವ ಹೊಣೆ ವಹಿಸಿದ್ದು ವಿದೇಶಾಂಗ ಕಾರ್ಯದರ್ಶಿ ಎಸ್ ಜಯಶಂಕರ್ ಅವರಿಗೆ.

ದೋವಲ್ ರವರು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಕಾರಣಕ್ಕೆ, ಕಾಶ್ಮೀರದಲ್ಲಿ ದಂಗೆ ಎದ್ದಿದ್ದ ಕುಕಾ ಪ್ಯಾರೆ ಎಂಬ ಆತಂಕವಾದಿಗಳ ಮನವೊಲಿಸಿ, ಉಳಿದ ಉಗ್ರರನ್ನು ಮಣ್ಣಾಗಿಸಿದ್ದರು ದೋವಲ್! ಸದ್ದಿಲ್ಲದೇ ಕಣಿವೆಯ ಉಗ್ರರು ಮಣ್ಣಾಗಿ ಹೋಗಿದ್ದರು!

ಅದಲ್ಲದೇ, ಪ್ರತ್ಯೇಕತಾವಾದಿಗಳಾದ ಯೋವನ್ ಮಲಿಕ್, ಶಬ್ಬೀರ್ ಶಾ ಮೌಲ್ವಿ, ಫಾರೂಕ್ ಸೇರಿದಂತೆ ಗಿಲಾನಿಯನ್ನೂ ಸಮಾಲೋಚನೆ ಸಭೆಯ ನೆಪದಲ್ಲಿ ಹೊರಗೆ ಕರೆತರುವ ಮೂಲಕ, ಅವರ ಶಿಬಿರಗಳನ್ನೂ ಪತ್ತೆ ಹಚ್ಚಿದ್ದ ಅಜಿತ್ ದೋವಲ್, ಇನ್ನೊಂದು ಕಡೆಯಿಂದ ಕಾರ್ಯಾಚರಣೆ ನಡೆಸಿದ್ದರು.!

2015ರಲ್ಲಿ ಮ್ಯಾನ್ಮಾರ್‍ನಲ್ಲಿ ಪ್ರಾಯೋಗಿಕವಾಗಿ ಸರ್ಜಿಕಲ್ ದಾಳಿಯನ್ನು 40 ನಿಮಿಷಗಳಲ್ಲಿ ಕರಾರುವಾಕ್ ಆಗಿ ನಡೆಸಿ ತೋರಿಸಿದ್ದ ದೋವಲ್. ಪಾಕ್‍ನಲ್ಲಿನ ದಾಳಿ ಯೋಜನೆಯನ್ನು ಕೂಡ ಸೇನೆಯ ಅಧಿಕಾರಿಗಳ ಜೊತೆ ಕುಳಿತು ತಾವೇ ತಯಾರಿಸಿದ್ದರಂತೆ. ಮೂರು ದಿನ ಹಗಲೂ ರಾತ್ರಿ ಮಿಲಿಟರಿ
ಕಂಟ್ರೋಲ್ ರೂಮ್’ನಲ್ಲಿ ಕುಳಿತು, ಒಂದು ಕೈಯಲ್ಲಿ ನಕಾಶೆ-ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದು ಬೆಳಗಿನ ಜಾವ 4.32ಕ್ಕೆ ಪ್ರಧಾನಿಗೆ ಮಾಡಿದ ಕರೆಯು ಶಾಶ್ವತವಾಗಿ ನಮ್ಮ ವಿದೇಶಾಂಗ ನೀತಿಯ ಮಗ್ಗುಲನ್ನೇ ಬದಲಾಯಿಸಿದೆ ಎಂಬುದು ಸತ್ಯ..!

ಇಂತಹ, ಅಜಿತ್ ದೋವಲ್ ರವರ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಗೊತ್ತಿರಲೇ ಬೇಕು! ಯಾಕೆ ಗೊತ್ತಾ?! ಮೋದಿಗೆ ಪಾಕಿಸ್ಥಾನದ ಇಂಚಿಂಚು ತಿಳಿಸಿದ್ದು ಇದೇ ಅಜಿತ್ ದೋವಲ್! ಪಾಕಿಸ್ಥಾನದ ಹೆಡೆಮುರಿ ಕಟ್ಟಲು ಸಾಧ್ಯವಾಗಿದ್ದೂ ಇದೇ ಅಜಿತ್ ದೋವಲ್ ರಿಂದ! ಅದಕ್ಕಾದರೂ, ಒಂದು ಸಲ್ಯೂಟ್ ನೀಡಲೇಬೇಕಿದೆ!

Hats off to Indian James Bond, “Ajit Doval”!

– ತಪಸ್ವಿ

Editor Postcard Kannada:
Related Post