X

ಅದ್ಭುತ!! ಲಕ್ಷಾಂತರ ಜನರ ಸಾವಿನ ಮಧ್ಯೆಯೂ ಭೋಪಾಲ್ ಅನಿಲ ಸೋರಿಕೆಯ ದುರಂತದಲ್ಲಿ ಒಂದೇ ಒಂದು ಕುಟುಂಬ ಬದುಕಿದ್ದು ಹೇಗೆ ಗೊತ್ತಾ?!

ಇಡೀ ವಿಶ್ವವೇ ಭಾರತದ ಕಡೆ ಕಣ್ಣೆತ್ತಿ ನೋಡುವಂತೆ ಡಿಸೆಂಬರ್ 1984, ರಾತ್ರಿ 2,3 ರ ಹೊತ್ತಿಗೆ ಮಧ್ಯಪ್ರದೇಶದ, ಭೂಪಾಲದಲ್ಲಿ ನಡೆದ ಘಟನೆ ಮಾಡಿತ್ತು. ಹೌದು! ಆ ದಿನ ರಾತ್ರಿ ಯುನಿಯನ್ ಕಾರ್ಬೈಡ್ ಪ್ಯಾಕ್ಟರಿಯಲ್ಲಿ ಮೆತೈಲ್ ಐಸೋಸೈಯನೇಟ್ ಗ್ಯಾಸ್ ಸೋರಿಕೆಯಾಗಿ ಇಡೀ ಭೂಪಾಲ್ ಆದ್ಯಾಂತ ಹರಡಿತು, ಇದು ಆ ದಿನ ಸಾವಿರಾರು ಜನರನ್ನು ಬಲಿತೆಗೆದುಕೊಂಡು ಬಿಟ್ಟಿತು. ಹಾಗೂ ಸಾವಿರಾರು ಜನರು ಗಂಬೀರವಾಗಿ ಗಾಯಗೊಂಡರು. ಆ ರಾತ್ರಿ ಇಡೀ ನಗರಕ್ಕೆ ನಗರವೇ ಒಂದಾಗಿತ್ತು, ಎಲ್ಲರು ಈ ಘಟನೆಯಿಂದ ಭಯಬೀತರಾಗಿದ್ದು , ಪ್ರಾಣ ಉಳಿಸಿಕೊಳ್ಳಲು ಸೆಣಸಾಡಬೇಕಾಯಿತು.

ಭೂಪಾಲ್‍ನ ನಗರವು ಆ ದಿನ ಭಯದಿಂದ ತತ್ತರಿಸಿ ಹೋಗಿತ್ತು!

ಡಿಸೆಂಬರ್ 1984 ರ 2,3 ಸಮಯದಲ್ಲಿ ಅನಿಲ ಸೋರಿಕೆಯಿಂದ ಹಾನಿಗೊಳಗಾದ ಆ ಪ್ರದೇಶದ ವ್ಯಕ್ತಿ ಕುಶ್ವಾಹ ಎಂಬಾತನಿಗೆ ರಾತ್ರಿ 1.30 ರ ಹೊತ್ತಿಗೆ ನಿದ್ದೆಯಿಂದ ಎಚ್ಚರವಾಗಿ ಗೊಂದಲದ ಪರಿಸ್ಥಿತಿಗೆ ಸಿಲುಕುತ್ತಾನೆ. ಈತನ ಪತ್ನಿ ತ್ರಿವೇಣಿ ವಾಂತಿ ಮಾಡುತ್ತಿರುವ ಶಬ್ಧ ಕೇಳುತ್ತದೆ ತದ ನಂತರ ಆತನ ಮಕ್ಕಳು ಕೆಮ್ಮ, ಎದೆನೋವು ಉಸಿರುಗಟ್ಟುವಿಕೆ ಹಾಗೂ ಕಣ್ಣು ಉರಿಯೆಂದು ಬಳಲುತ್ತಿರುವುದನ್ನು ನೋಡುತ್ತಾನೆ. ಈತ ಹೊರ ನೋಡುತ್ತಿದ್ದಂತೆ ಇಡೀ ಬೀದಿಯ ಜನರು ಗಾಬರಿಗೊಂಡಿರುತ್ತಾರೆ. ಆ ಸಂದರ್ಭದಲ್ಲಿ ಕುಶ್ವನಾ ಯುನಿಯನ್ ಕಾರ್ಬೈಡ್ ಪ್ಯಾಕ್ಟರಿಯಲ್ಲಿ ಅನಿಲ ಸೋರಿರುವಿಕೆಯಾಗಿರುವುದನ್ನು ಜನರಿಗೆ ತಿಳಿಸಿ ಅಲ್ಲಿಯ ಜನರನ್ನು ಕರೆದುಕೊಂಡು ಆ ಪ್ರದೇಶದಿಂದ ಓಡಲು ನಿರ್ಧರಿಸಿದ. ಆ ವೇಳೆ ಕುಶ್ವನಾನ ಹೆಂಡತಿ ನಾವು ಅಗ್ನಿಹೋತ್ರವನ್ನು ಪ್ರಾರಂಭ ಮಾಡುವ ಎಂದು ಸಲಹೆ ಮಾಡುತ್ತಾಳೆ. ಕುಶ್ವಾನನು ಅಗ್ನಿಹೊತ್ರವನ್ನು ಪ್ರಾರಂಭಿಸಲು ನಿರ್ಧಾರ ಮಾಡುತ್ತಾನೆ. ಪ್ರಾರಂಭಿಸಿದ 20 ನಿಮಿಷಗಳ ಒಳಗೆ ಎಂಐಸಿ ಅನಿಲವು ಸೋರಿಕೆಯಾಗುತ್ತದೆ.

ಭೂಪಾಲ್ ರೈಲು ನಿಲ್ದಾಣದಲ್ಲಿ, ಎಂಐಸಿ ಅನಿಲ ಸೋರಿಕೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದರು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಕೇವಲ ಒಂದು
ಕುಟುಂಬವು ಬದುಕಿ ಉಳಿದಿತ್ತು. ಹೌದು! ಎಂಎಲ್ ರಾಥೋರೆ ಹಾಗೂ ಅವನ ಹೆಂಡತಿ, ನಾಲ್ವರು ಮಕ್ಕಳು, ಆತನ ತಾಯಿ, ಹಾಗೂ ಸಹೋದರನೊಬ್ಬ ಬದುಕಿ
ಉಳಿದಿದ್ದರು! ಕಾರಣ ಅವರು ಕಳೆದ 5 ವರ್ಷಗಳಿಂದ ಅಗ್ನಿಹೋತ್ರಹೋಮವನ್ನು ನಡೆಸುತ್ತಿದ್ದರು. ಆ ನಂತರ ಅವರು ತ್ರಯಂಭಕ ಹೋಮವನ್ನು ಮುಂದುವರಿಸಿದರು.

ಅದೇ ರೀತಿ ಕುಶ್ವಾನನವರು ವಾಸಿಸುತ್ತಿದ್ದ ಅಗ್ನಿಹೋತ್ರವನ್ನು ಅಲ್ಲಿನ ಸಂತ್ರಸ್ತ ಜನರ ಕಲ್ಯಾಣಕ್ಕೋಸ್ಕರ ನಡೆಸಲಾಯಿತು. ಎಂಐಸಿ ಅನಿಲ ಸೋರಿಕೆಯಾದ
ಪ್ರದೇಶದಲ್ಲಿ ಸ್ವಯಂಸೇವಕರ ತಂಡವು ಅಗ್ನಿಹೋತ್ರದ ಚಟುವಟಿಕೆಯಲ್ಲಿ ತೊಡಗಿದರು, 8 ರಿಂದ 10 ಜನರ ತಂಡವು ವಿವಿಧ ಜಾಗಗಳಲ್ಲಿ ಈ ಹೋಮವನ್ನು ನಡೆಸಲು ನಿರ್ಧರಿಸಿದರು, ಈ ತಂಡದಲ್ಲಿ 40-50 ಪ್ರತಿಷ್ಠಿತ ಜನರಿಂದ ಹೋಮ ನಡೆಸಲಾಯಿತು. ಸೂರ್ಯೋದಯದಿಂದ, ಸೂರ್ಯಾಸ್ತದವರೆಗೂ ಈ ಹೋಮ ನಡೆಸಿ ಉಸಿರುಗಟ್ಟಿರುವ ಜನರು ನೆಮ್ಮದಿಯಿಂದ ಉಸಿರಾಡುವಂತೆ ಈ ಹೋಮವು ಮಾಡಿತು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಅಗ್ನಿಹೊತ್ರ ಹೋಮದ ಬೂದಿಯನ್ನು ಔಷದಿಯಾಗಿ ಜನರಿಗೆ ವಿತರಣೆ ಮಾಡಲಾಯಿತು. ಅಗ್ನಿಹೋತ್ರ ಹೋಮ ನಡೆದ ನಂತರ ಅಲ್ಲಿಯ ಜನರಿಗೆ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಕಣ್ಣಿಗೆ ಕಣ್ಣಿನ ಹನಿಯನ್ನು ಹಾಕುವಂತೆ ತಿಳಿಸಿದರು. ಅಗ್ನಿಹೋತ್ರ ನಡೆಸಿದ ನಂತರ ಅದರಿಂದ ಬರುವ ಹೊಗೆಯಿಂದ ತೊಂದರೆಗೊಳಗಾದವರು ಕಣ್ಣಿಗೆ ಹನಿ ಹಾಕಲು ರೋಗಿಗಳಿಗೆ ಪರಿಹಾರ ಸೂಚಿಸಲಾಯಿತು. ಪೆಬ್ರವರಿ 1985 ರಲ್ಲಿ ಯುಎಸ್ ನ ಬ್ಯಾರಿ ರಾಥ್ನರ್ ಎಂಬಾತ ಅನಿಲ ಸೋರಿಕೆಯಾದ ಪ್ರದೇಶದಲ್ಲಿ ಬಂದು ಅಲ್ಲಿಯ ಜನರ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಅನ್ವೇಷಣೆ ನಡೆಸುತ್ತಾನೆ.. 2 ತಿಂಗಳವರೆಗೆ ಅಲ್ಲಿಯ ಜನರು ಪ್ರತಿ ಬಳಗ್ಗೆ ಹಾಗೂ ಸಂಜೆ ಅಗ್ನಿಹೋತ್ರ ಹೋಮ ನಡೆಸಿ ತಮ್ಮನ್ನು ತಾವು ರಕ್ಷಿಸಿಕೊಂಡಿರುವುದನ್ನು ಆತ ಗಮನಿಸಿದ.

ಅಗ್ನಿಹೋತ್ರ ಹೋಮವು ಅನಿಲ ಸೋರಿಕೆಯಾದ ಪ್ರದೇಶದ ಜನರಿಗೆ ಉತ್ತಮ ಆರೋಗ್ಯದಾಯಕ ಪರಿಸರವನ್ನು ನಿರ್ಮಿಸಿಕೊಟ್ಟಿತು. ಈ ಹೋಮದಿಂದ ಆ
ಪ್ರದೇಶದಲ್ಲೆ ವಾಸಿಸುತ್ತಿದ್ದ ಪ್ರಜಪತಿ ಕುಟುಂಬಕ್ಕೆ ಉತ್ತಮ ಅನುಭವನ್ನು ನೀಡಿತು. ಹೌದು! ಪ್ರಜಪತಿಯವರ ಹೆಂಡತಿ ಹಾಗು ಈತನ ಇಬ್ಬರ ಮಕ್ಕಳ ಆರೋಗ್ಯಕ್ಕೆ ಈ ಧುರಂತವು ತುಂಬಾ ಕೆಟ್ಟ ಪರಿಣಾಮವನ್ನು ಬೀರಿತ್ತು. ಈ ಸನ್ನಿವೇಶದಲ್ಲಿ ಅವರು ಅಗ್ನಿಹೋತ್ರವನ್ನು ಪ್ರಾರಂಬಿಸಿದರು. ಪ್ರಜಪತಿಯವರು ಈ ಹೋಮನಡೆಸಿದ ಸ್ವಲ್ಪ ಸಮಯದಲ್ಲೇ ಅವರ ಹೆಂಡತಿ ಸಂಪೂರ್ಣವಾಗಿ ಗುಣಮುಖರಾದರು. ಇವರ 13 ವರ್ಷದ ಒಬ್ಬ ಮಗ ಕ್ಷಯರೋಗದಿಂದ ಬಳಲುತ್ತಿದ್ದ. ಆದ ಕಾರಣ ಪ್ರಜಪತಿಯವರು ಅಗ್ನಿಹೋತ್ರದ ಔಷಧಿಯನ್ನು ಬಳಸಿ ಅವನಿಗೆ ಚಿಕಿತ್ಸೆಯನ್ನು ನೀಡಿದರು. ಹಾಗೂ ಇನ್ನೊಂದು ಆಶ್ಚರ್ಯದಾಯಕ ಸಂಗತಿಯೆಂದರೆ ಅನಿಲ ಸೋರಿಕೆಯ ನಂತರದ ವರ್ಷದಲ್ಲಿ ಈತನಿಗೆ ಒಬ್ಬ ಮಗಳು ಸಂಪೂರ್ಣ ಆರೋಗ್ಯಕರವಾಗಿ ಹುಟ್ಟಿದ್ದಾಳೆ. ನಂತರಲ್ಲಿ ಆ ಕುಟುಂಬ ನೆಮ್ಮದಿಯಿಂದ ಜೀವನಸಾಗಿಸಿತು.

ಭೂಪಾಲದ ಅನಿಲ ಸೋರಿಕೆಯ ಘಟನೆಯು ವಿಶ್ವದಾದ್ಯಂತ ಸುಧ್ಧಿ ಮಾಡಿತು. ಹಾಗೂ ಆಗಿನ ಪತ್ರಿಕೆಗಳು ಈ ಘಟನೆಯಲ್ಲಿ ಅಗ್ನಿಹೋತ್ರವನ್ನು ಮುಖ್ಯಂಶವಾಗಿ ಎತ್ತಿ ಹಿಡಿಯಿತು. ಎಪ್ರಿಲ್ 7, 1985 ರಲ್ಲಿ ಆಗಿನ ಪ್ರಮುಖ ಪತ್ರಿಕೆಯಾಗಿದ್ದ “ದಿ ಹಿಂದೂ’ ಈ ಘಟನೆಯ ಆಯ್ದ ಭಾಗಗಳನ್ನು ಪ್ರಕಟಿಸಿದ್ದು ಅದರಲ್ಲಿ ಪ್ರಮುಖವಾಗಿ
ಅಗ್ನಿಹೋತ್ರದ ಬಗ್ಗೆಯೆ ಮಾಹಿತಿಯನ್ನು ಪ್ರಕಟಿಸಲಾಯಿತು.

ಪೂರ್ವ ಯುರೋಪಿಯನ್ ಹೇಳುವ ಪ್ರಕಾರ!!
ಸಾಮಾನ್ಯವಾಗಿ ವಿಜ್ಞಾನಿಗಳು ಅಗ್ನಿಹೋತ್ರದಿಂದ ಬರುವ ವಿಕಿರಣಶೀಲತೆಗಳನ್ನು ಒಪ್ಪಲು ಅಥವಾ ಅವುಗಳನ್ನು ನಂಬಲು ತಯಾರಿರುವುದಿಲ್ಲ, ವಿಜ್ಞಾನಿಗಳು
ಯಾವಾಗಲು, ಯಾವುದಾದರು ರಾಸಾಯನಿಕವನ್ನು ಸುಟ್ಟು ಅದರಿಂದ ಹೊರ ಬರುವ ಹೊಗೆಗಳ ಬಗ್ಗೆಯೇ ಚಿಂತಿಸಿರುತ್ತಾರೆ. ಆದರೆ ಈ ರಾಸಾಯನಿಕ ಹಾಗೂ
ಸ್ಪೋಟಕಗಳು ಯಾವುದನ್ನು ಬದಲಿಸುವುದಿಲ್ಲ, ಇವುಗಳಿಂದ ಹೊರ ಬರುವ ವಿಷಕಾರಿ ವಿಕಿರಣಶೀಲತೆಗಳು ಪರಿಸರದಲ್ಲಿ ಅಪಾಯಕಾರಿ ಪರಿಸ್ಥಿತಿಯನ್ನು
ಸೃಷ್ಟಿಮಾಡಿಸುತ್ತದೆ.

ಆದರೆ ಕಳೆದ 5 , 6 ವರ್ಷಗಳಲ್ಲಿ ಕೆಲವು ಲೇಖನಗಳು ಈ ಅಗ್ನಿಹೋತ್ರಿಯ ಬಗ್ಗೆ ಹಲವಾರು ಲೇಖನಗಳು ಬರೆಯಲ್ಪಟ್ಟವು. ಆದರೆ ಇದಾವುದನ್ನು ಪ್ರತಿಷ್ಡಿತ
ವಿಜ್ಞಾನಿಗಳು ಒಪ್ಪಲು ತಯಾರಿರಲಿಲ್ಲ. ಆದರೆ ಈ ವರಧಿಯು ಸಂಪೂರ್ಣವಾಗಿ ನಿಜವಾಗಿತ್ತು.. ಅಗ್ನಿಹೋತ್ರವು ಪರಿಸರವನ್ನು ಸಮಸ್ಥಿತಿಯಲ್ಲಿಡುತ್ತದೆ. ಹಾಗಾದರೆವಿಕಿರಣಶೀಲತೆಯನ್ನು ಹೇಗೆ ಅಲ್ಲಗೆಳೆಯಲು ಸಾಧ್ಯ ? ಅಗ್ನಿಹೋತ್ರದ ಜ್ವಾಲೆಯ ಮುಂದೆ ಕುಳಿತರೆ ಅದು ಮನುಷ್ಯನ ಮೆದುಳಿನ ಮೇಲೆ ಪರಿಣಾಮ ಬೀಳುತ್ತದೆ. ಆದರೆ ಈ ಜ್ವಾಲೆಯು ಆವರ್ತನಗಳು ಮನುಷ್ಯರಿಗೆ ಉತ್ತಮ ಅಂಶಗಳನ್ನು ಒದಗಿಸುತ್ತವೆ.

ಅಗ್ನಿಹೋತ್ರ ಹಾಗೂ ವಿಕಿರಣಶೀಲತೆ!!

ನ್ಯೂಕ್ಲಿಯರ್ ಘಟನೆಯ ನಂತರ ಮುನಿಚ್‍ನಲ್ಲಿ ಒಂದು ಸಭೆಯನ್ನು ವಿಜ್ಞಾನಿಗಳು ಹಾಗೂ ಸುವೈತ್ ನ ರೈತರ ನಡುವೆ ಏರ್ಪಡಿಸಲಾಯಿತು. ವೆಷ್ಟ್ ಜರ್ಮನಿಯಲ್ಲಿ ಮುಂದೇನು ನಡೆಯಬಹುದು ಎಂಬುವದರ ಬಗ್ಗೆ ಸುವೈತ್‍ನ ವಿಜ್ಞಾನಿಗಳು ವಾದ-ವಿವಾದಗಳನ್ನು ಇಲ್ಲಿ ಮಂಡಿಸಿದರು.

ಹಾಗೂ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರು..

ನಮಗೆಲ್ಲ ಗೊತ್ತಿರುವ ಹಾಗೆ ಅಗ್ನಿಹೋತ್ರದ ಬೂದಿಯು ಶುದ್ಧವಾದ ವಸ್ತು. ಹಾಗೂ ಇದು ರಾಸಾಯನಿಕ ವಿಕಿರಣಶೀಲತೆಗೆ ವಿರುದ್ಧವಾಗಿದ್ದುದ್ದಾಗಿದೆ. ಇದು ಸಾಮಾನ್ಯ ತತ್ವಗಳಿಂದ ಕಾರ್ಯನಿರ್ವಹಿಸುವಂತಹದು. ನಮ್ಮ ದೇಹವು ಎಲ್ಲಾ ಅಂಶಗಳನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ, ದೇಹವು ಯಾವುದು ಯೋಗ್ಯವೋ ಅದನ್ನು ಮಾತ್ರ ಸ್ವೀಕರಿಸುವುದು. ಉದಾಹರಣೆಗೆ ನಾವು ಊಟದ ಜೊತೆಗೆ ಕಬ್ಬಿಣವನ್ನು ತಿಂದರೆ ಅದನ್ನು ನಮ್ಮ ದೇಹವು ಸ್ವೀಕರಿಸಲು ತಯಾರಿರುವುದಿಲ್ಲ. ಯಾವಾಗ ನಾವು ಸೇವಿಸುವ ಆಹಾರವು ವಿಕಿರಣಶೀಲತೆ ಇಲ್ಲದ ಅಂಶಗಳನ್ನು ಒಳಗೊಂಡಿರುತ್ತವೆಯೋ ಆಗ ನಮ್ಮ ದೇಹವು ಎಲ್ಲಾ ವಿಕಿರಣ ಅಂಶಗಳನ್ನು ನಮ್ಮ ದೇಹದಿಂದ ಹೊರಹಾಕುತ್ತವೆ. ಇದೊಂದು ಮೆಟಾಬಲಿಸಮ್ (ಚಯಾಪಚಯ) ತತ್ವ. ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಬೇಕೆ ಬೇಕು ನಾವು ಯಾವಾಗ ವಿಕಿರಣವಿಲ್ಲದ ಅಂಶಗಳನ್ನು ಒಳತೆಗೆದು ಕೊಳ್ಳುತ್ತೆವೆಯೋ ಆ ಸಂದರ್ಭದಲ್ಲಿ ಅಗ್ನಿಯೋತ್ರದ ಬೂದಿಯನ್ನು ಸೇವಿಸುವುದರಿಂದ ವಿಕಿರಣಶೀಲತೆಯ ಅಂಶಗಳು ನಮ್ಮ ದೇಹದಲ್ಲಿ ಉಳಿಯುತ್ತದೆ ಹಾಗೂ ಇದು ಉಸಿರಾಟ ಕ್ರಿಯೆಯು ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಅಗ್ನಿಹೋತ್ರದ ಬೂದಿಯು ನಮ್ಮ ದೇಹಕ್ಕೆ ಔಷಧಿಯ ಗುಣವನ್ನು ನೀಡುತ್ತದೆ. ಈ ವಾದದ ಪ್ರಮುಖ ಅಂಶಗಳನ್ನು ಆ ಸಭೆಯಲ್ಲಿ ಸೇರಿದ್ದ ಎಲ್ಲಾ ವಿಜ್ಞಾನಿಗಳು ಒಪ್ಪುತ್ತಾರೆ.

ಹೌದು! ದನದ ಸಗಣಿ, ತುಪ್ಪ, ಅಕ್ಕಿ ಮುಂತಾದವುಗಳನ್ನು ಅಗ್ನಿಹೋತ್ರ ಹೋಮ ನಡೆಸುವ ಹಂತದಲ್ಲಿ ಬಳಸುತ್ತಾರೆ. ಹಾಗಾಗಿ ವಿಕಿರಣತೆಗೆ ಯಾವುದೇ ರೀತಿಯ ತೊಂದರೆಯುಂಟಾಗುವುದಿಲ್ಲ. ಆಗಾಗಿ ಇಂಡಿಯಾ ಹಾಗೂ ಆಸ್ಟ್ರೇಲಿಯ ಯಾವುದೇ ಮಾಲಿನ್ಯಕ್ಕೆ ಒಳಗಾಗಿಲ್ಲ ಎಂಬುವದು ಸಾಬೀತಾಗುತ್ತದೆ.. ಅದ್ದರಿಂದ ಅಗ್ನಿಹೋತ್ರದ ಬೂದಿಗಳನ್ನು ಗುಳಿಗೆಗಳಾಗಿ ಪರಿವರ್ತಿಸಿ ಭಾರತ ಹಾಗೂ ಯುರೋಪ್‍ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹಂಚಲು ನಿರ್ಧರಿಸಲಾಯಿತು ಇದು ಒಂದು ರೀತಿಯ ವ್ಯವಹಾರ ಎಂದು ತಿಳಿಯಬೇಕಿಲ್ಲ. ಇದು ಕೇವಲ ಮಾನವೀಯತೆಗೆ ಮಾಡಲಾದ ಸಹಾಯವಷ್ಟೇ ಎಂದು ಅಲ್ಲಿಯ ವಿಜ್ಞಾನಿಗಳು ಸ್ಪಷ್ಟಪಡಿಸಿದರು. ಚೆರ್ನೋಬಿಲ್ ವಿಕಿರಣ ತುಂಬಾ ಅಪಾಯಕಾರಿ ಅನಿಲ. ಆದರೆ ಈ ಅನಿಲ ಪ್ರಸ್ತುತ ದಿನಗಳಲ್ಲಿ ಇದು ಪರಿಸರಕ್ಕೆ ಬಹಳಷ್ಟು ಪರಿಣಾಮ ಬೀರಿದೆ. ಹೌದು! ಈ ಭಯಾನಕ ಅನಿಲದಿಂದ ಇಡೀ ಯುರೋಪ್ ದೇಶವೆ ತತ್ತರಿಸಿ ಹೋಗಿವೆ. ಆಪ್ರದೇಶದ ಮಕ್ಕಳಲ್ಲಿ ಸಾಕಷ್ಟು ವಿಕಿರಣಾತ್ಮಕ ಶಕ್ತಿಯಿಲ್ಲ. ಖಂಡಿತವಾಗಿಯು ಅಲ್ಲಿಯ ಟಿವಿ ಚಾನಲ್ ಗಳು, ರೇಡಿಯೋ, ನ್ಯೂಸ್ ಪೇಪರ್ ಗಳು ಅಲ್ಲಿರುವ ನಿಜವಾದ ಪರಿಸ್ಥಿಯ ಬಗ್ಗೆ ಧ್ವನಿ ಎತ್ತುವುದಿಲ್ಲ. ಆದರೆ ವಿಜ್ಞಾನಿಗಳು ಹಾಗೂ ಇತರ ತಜ್ಞರು ಇದು ತುಂಬಾ ಅಪಾಯಕಾರಿ ಸಂಗತಿಯೆಂದು ಅರಿತ್ತಿದ್ದರು. ದಿನದಿಂದ ದಿನಕ್ಕೆ ಪರಿಸ್ಥಿತಿ ತೀವ್ರಕ್ಲಿಷ್ಟಕರ ಪರಿಸ್ಥಿಯನ್ನು ಎದುರಿಸುವಂತಾಗಿದೆ. ಆದರಿಂದ ಮಗದೊಮ್ಮೆ ನಾವು ಹೇಳೋದೆನೆಂದರೆ ನಾವು ಬೃಹತ್ ಪ್ರಮಾಣದಲ್ಲಿ ಅಗ್ನಿಹೋತ್ರ ಬೂದಿಯ ಗುಳಿಗೆಗಳನ್ನು ಉತ್ಪತ್ತಿ ಮಾಡಬೇಕಿದೆ ಎಂದು ಆ ಸಭೆಯಲ್ಲಿ ವಿಜ್ಞಾನಿಗಳು ಧ್ವನಿ ಎತ್ತಿದರು..

ಅಗ್ನಿಹೋತ್ರದ ಬೂದಿಯಲ್ಲಿ 92 ಅಂಶಗಳಿವೆ! ನಾವು ಆ ಬೂದಿಯಲ್ಲಿರುವ ಅಂಶಗಳನ್ನು ಪರಿಕ್ಷಿಸಬೇಕು! ನಂತರ ನಾವು ಅದರ ಗುಣಮಟ್ಟ ಮತ್ತು ಪ್ರಮಾಣವನ್ನು ಹಾಗೂ ಪ್ರತಿಯೊಂದು ಅಂಶಗಳನ್ನು ಹೇಗೆ ಎಂಬುವುದನ್ನು ಪರಿಕ್ಷಿಸಬೇಕು. ಹಾಗೂ ಓರ್ವ ಮನುಷ್ಯನು ತನ್ನ ದೈನಂದಿನ ದಿನಚರಿಗಳಲ್ಲಿ ಅಗ್ನಿಹೋತ್ರ ಎಷ್ಟೊಂದು ಪಾತ್ರವಹಿಸುತ್ತದೆ ಎಂಬುದನ್ನು ಅರಿಯಬೇಕು. ಪ್ರಮುಖ ಅಂಶವೆಂದರೆ ಅಗ್ನಿಹೋತ್ರದ ಬೂದಿಯು ರಾಸಾಯನಿಕ ವಿಕಿರಣಶೀಲವಲ್ಲ. ಪ್ರಮುಖವಾಗಿ ಯುರೋಪ್‍ನಲ್ಲಿ ಎಲ್ಲಾ ಮೆಡಿಕಲ್ ಗಳ ಔಷಧಿಗಳು, ಎಲ್ಲಾ ಗುಳಿಗಳು, ಹಾಗೂ ವಿಟಮಿನ್ ಪ್ರತಿಯೊಂದು ಕೂಡ ವಿಕಿರಣಶೀಲ. ನಾವಿಲ್ಲಿ ಎರಡು ಪ್ರಮುಖವಾದ ಅಂಶಗಳನ್ನು ಗಮನಿಸಬೇಕಾಗಿದೆ.ಹೌದು! ಅಗ್ನಿಹೋತ್ರದ ಬೂದಿಯು ಇತರೆ ಗುಳಿಗೆಗಳಿಗಿಂತ ಹೆಚ್ಚಿನ ಉತ್ತಮ ವಿಕಿರಣ ಅಂಶಗಳನ್ನು ಒಳಗೊಂಡಿದೆ. ಎರಡನೆಯದಾಗಿ ಸಾಂಪ್ರಧಾಯಕ ಗುಳಿಗೆಗಳು ವಿಕಿರಣಶೀಲ ವಾಗಿದ್ದು, ಮತ್ತು ಅಗ್ನಿಹೋತ್ರ ಬೂದಿಯು ವಿಕಿರಣಶೀಲ ಅಲ್ಲ. ಉದಾಹರಣೆಗೆ ದನವು 92 ಪ್ರತಿದಿನವು ಹುಲ್ಲು ಮೇಯುವಾಗ 92 ಅಂಶಗಳನ್ನು ತೆಗೆದುಕೊಳ್ಳುತ್ತವೆ. ಆ ಆಹಾರ ಚಕ್ರ ಕ್ರೀಯೆಯಲ್ಲಿ ದಿನಾಲೂ 92 ಅಂಶಗಳನ್ನು ಒಳತೆಗೊಂಡು, 92 ಅಂಶಗಳನ್ನು ಹೊರ ಹಾಕುತ್ತವೆ. ದನ ಕೂಡ ಪ್ರತಿ ಕ್ಷಣವು 92 ಅಂಶಗಳನ್ನು ತನ್ನೊಳಗೆ ಹೊಂದಿರುತ್ತದೆ. ಇದುವೇ ಚಕ್ರ. ಈ ರೀತಿಯ ಕ್ರಿಯೆಯೆ ಎಲ್ಲಾ ಪ್ರಾಣಿಗಳಲ್ಲಾಗುತ್ತವೆ. ಇದು ಕೇವಲ ಅಂಶಗಳ ಸಾಂದ್ರತೆಯ ಬದಲಾವಣೆಯಷ್ಟೇ.ನಾವು ದನದ ಉತ್ಪಾದಕಗಳನ್ನು ಉಪಯೋಗಿಸುತ್ತೇವೆ. ಹಾಗಾದರೆ ಅವುಗಳಲ್ಲಿರುವ 92 ಅಂಶಗಳು ಯಾವುದು? ದನ ಒಂದು ಕಾರ್ಖಾನೆ ಇದ್ದಂತೆ. ಅದು ಹಲವಾರು ಬಗೆಯ ಉತ್ಪನ್ನಗಳನ್ನು ನಮಗೆ ಒದಗಿಸುತ್ತವೆ. ಅದರಲ್ಲೂ ಪ್ರಮುಖವಾಗಿ ಅದರ ಸಗಣಿ ಹಾಗೂ ತುಪ್ಪ ತುಂಬಾ ಉಪಯೋಗಕಾರಿ. ತುಪ್ಪವು 90% ರಷ್ಟು ಇಂಗಾಲವನ್ನು ಹೊಂದಿದೆ. ಯಾವುದೇ ವಸ್ತು ಅಷ್ಟು ಪ್ರಮಾಣದ ಇಂಗಾಲವನ್ನು ಹೊಂದಿರುವದು ಬಹಳ ಅಪರೂಪಕಾರಿ ಸಂಗತಿಯೆಂದು ತಿಳಿದು ಬರುತ್ತದೆ. ಆಗಾಗಿ ಅಗ್ನಿಹೋತ್ರದ ಬೂದಿಯು ತುಪ್ಪದ ಈ ವಿಕಿರಣಶೀಲ ಇಂಗಾಲದ ಗುಣವನ್ನು ಹೊಂದಿರುತ್ತದೆ. ಆಗಾಗಿ ತುಪ್ಪವು ಅಗ್ನಿಹೋತ್ರದಲ್ಲಿ ಬಳಸುವುದರಿಂದಾಗಿ ಅದು
ಪರಿಸರಕ್ಕೆ ಒಳ್ಳೆಯ ಅಂಶಗಳನ್ನು ನೀಡುತ್ತವೆ.

ವಿಕಿರಣಶೀಲತೆಯ ಮೇಲೆ ಡಾ ಮೈರೊಸ್ಲಾವ್ ಹ್ಯಾಬರ್ :

ಶಾರೀರಿಕವಾಗಿ ನಮ್ಮ ದೇಹವು ಅಲವಾರು ಅಂಶಗಳ ಬದಲಾವಣೆಯ ಕ್ರಿಯೆಯನ್ನು ಮಾಡುತ್ತವೆ. ಆದರೆ ಇದರಿಂದ ಕೆಲವು ಅಪವಾದಗಳಿವೆ ಕಣ್ಣಿಗೆ ಹಾಗೂ ನರಮಂಡಲಗಳಂತಹ ಸೂಕ್ಷ್ಮವಾದ ಭಾಗಗಳಿಗೆ ತೊಂದರೆಗಳಿವೆ.ಹಾಗೂ ದೇಹದಲ್ಲಿನ ಈ ಅಂಶಗಳ ವಿನಿಮಯದ ಕಾರ್ಯವಿಧಾನವು ಕೂಡ ನಮಗೆ ನಿಖರವಾಗಿ ತಿಳಿದಿಲ್ಲ. ಈ ವಿಧಾನದಲ್ಲಿ ನಮ್ಮ ದೇಹವು ಕಾರ್ಪರ್, ಕ್ಯಾಲ್ಸಿಯಂ, ಹಾಗೂ ಕಬ್ಬಿಣದ ಅಂಶಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ. ನಮ್ಮ ದೇಹವು ಈ ಗ್ರಹದಲ್ಲಿ ಸಾವಿರಾರು ವರ್ಷಗಳಿಂದ ನೈಸರ್ಗಿಕ ವಿಕಿರಣಗಳನ್ನು ಹರಡುತ್ತಿವೆ. ಚೆರ್ನೋಬಿಲ್ ಅಪಘಾತದಿಂದಾಗಿ ಭೂಮಿಯಲ್ಲಿ ಮಾನವ ನಿರ್ಮಿತ ವಿಕಿರಣಗಳು ಹೆಚ್ಚುತ್ತಾ ಹೋಗಿವೆ. ಉದಾಹರಣೆಗೆ ಸೀಸಿಯಮ್, ಲೋಡಿನ್ , ಕಬ್ಬಿಣ ಮುಂತಾದವುಗಳು ಭೂಮಿಯೆಲ್ಲಾ ಹರಡಿದೆ. ಇವುಗಳೆಲ್ಲಾ ಗಾಳಿಯೊಂದಿಗೆ ಹರಡಿ ನಾವು ಸೇವಿಸುವ ಆಹಾರ, ತರಕಾರಿ, ಹಣ್ಣುಗಳಲ್ಲಿ ಹರಡುತ್ತವೆ. ಆಗಾಗಿ ನಮ್ಮ ದೇಹವು ವಿಕಿರಣಶೀಲ ಅಂಶಗಳಿಂದ ಕೂಡಿದೆ. ಒಮ್ಮೆ ನಮ್ಮ ದೇಹವನ್ನು ಈ ವಿಕಿರಣಗಳು ಪ್ರವೇಶಿಸಿದರೆ ಅದು ನಮ್ಮನ್ನು ನಾಶ ಮಾಡುವುದು ನಿಸ್ಸಂಶಯ! ನಮ್ಮ ದೇಹವು ಭಯಾನಕ ಕಾಯಿಲೆಗಳಿಗೆ ತುತ್ತಾಗುವುದು ಶತಸಿದ್ಧ.

ನಾವು ಈ ಭಯಾನಕ ಕಿರಣಗಳು ನಮ್ಮ ದೇಹವನ್ನು ಸೇರುವುದನ್ನು ಹೆಗೆ ತಡೆಯಬಹುದು? ಹಾಗೂ ಅವುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವ ಬಗೆ ಹೇಗೆ?

ಇವುಗಳಿಗೆ ಉತ್ತರ ತುಂಬಾ ಸುಲಭ! ಹೌದು! ನಮ್ಮ ದೇಹಕ್ಕೆ ನಾವು ನೈಸರ್ಗಿಕವಾದ ಅಂಶಗಳನ್ನು ಒದಗಿಸಬೇಕು! ನಾವು ನಮ್ಮ ದೇಹಕ್ಕೆ ನೈಸರ್ಗಿಕವಾದ
ಅಂಶಗಳನ್ನು ನೀಡುವುದರಿಂದ ನಮ್ಮ ದೇಹವು ಅಪಾಯಕಾರಿ ವಿಕಿರಣಗಳಿಂದ ರಕ್ಷಿಸಲ್ಪಡುತ್ತದೆ. ಹಾಗದರೆ ವಿಕಿರಣ ಶೀಲವಲ್ಲದ ಅಂಶಗಳು ನಮ್ಮ ದೇಹಕ್ಕೆ ಎಲ್ಲಿಂದ ಸಿಗುತ್ತದೆ? ಅವುಗಳನ್ನು ನಾವು ಹೇಗೆ ಪಡೆಯಬವುದು? ಹೌದು! ಇದೆಲ್ಲಾದಕ್ಕೂ ಒಂದೇ ಪರಿಹಾರ ಅಗ್ನಿಹೋತ್ರ ಹೋಮವನ್ನು ನಡೆಸಿ, ಅದರಿಂದ ಉತ್ಪತಿಯಾಗುವ ಬೂದಿಯನ್ನು ಔಷಧಿಯನ್ನಾಗಿ ಉಪಯೋಗಿಸುವುದು. ಇದು ಡಾ. ಹ್ಯಾಬರ್ ಅವರು ಎಲ್ಲರಿಗೂ ನೀಡಿರುವ ಮಾರ್ಗದರ್ಶನ ಕೂಡ ಹೌದು. ಅಗ್ನಿಹೋತ್ರ ಬೂದಿಯು ವಿಕಿರಣಗಳಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಒದಗಿಸುತ್ತವೆ.

ಇಷ್ಟೆಲ್ಲ ನಡೆದರು ಕೂಡ ರಾಸಾಯನಿಕಶಾಸ್ತ್ರದಲ್ಲಿ ಅವುಗಳ ಬಗ್ಗೆ ಸಂಶೋಧನೆ ನಡೆಸುತ್ತಲೆ ಇದ್ದಾರೆ, ಆದರೆ ಇಷ್ಟರವರೆಗೂ ಅದರ ಮೂಲವನ್ನು ಅವರಿಂದ ಅಳೆಯಲು ಸಾಧ್ಯವಾಗಿಲ್ಲ! ಅವರೆಷ್ಟೇ ಪ್ರಯೋಗ ಮಾಡಿದರು ಕೂಡ ಎಲ್ಲಾ ಸಂದರ್ಭದಲ್ಲೂ ಅಗ್ನಿಹೋತ್ರವು ನೈಸರ್ಗಿಕ ವಿಕಿರಣ ಹೊಂದಿದೆ ಎಂಬುವುದು ಸಾಬೀತಾಗುತ್ತಲೆ ಬಂದಿದೆ. ಹಾಗಾಗಿ ಅಗ್ನಿಹೋತ್ರವು 92 ನೈಸರ್ಗಿಕವಾದ ಅಂಶಗಳ್ನು ಒಳಗೊಂಡಿದ್ದು ಈ ವಿಧಾನವು ನಮ್ಮ ದೇಹವನ್ನು ಸಂಪೂರ್ಣವಾಗಿ ಸರಿ ಪಡಿಸುತ್ತವೆ. ನಾವೆಲ್ಲರೂ ಅಗ್ನಿಹೋತ್ರವನ್ನು ನಡೆಸುವುದರಿಂದ ಹಾಗೂ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿಯ ವೇಳೆ ಅದರ ಬೂದಿಯನ್ನು ಸೇವಿಸುವುದರಿಂದ ನಾವು ಹಾಗೂ ನಮ್ಮ ಸುತ್ತಮುತ್ತಲಿರುವ ಪ್ರದೇಶವು ಆರೋಗ್ಯಕರವಾಗಿರಬಹುದು. ಹಾಗಾಗಿ ಹ್ಯಾಬರ್ ಬೃಹತ್ ಪ್ರಮಾಣದ ಅಗ್ನಿಹೋತ್ರಿಬೂದಿಯನ್ನು ಉತ್ಪತಿಮಾಡುತ್ತಿದ್ದು ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ.

-Kavya Anchan

Editor Postcard Kannada:
Related Post