X

ಅಳಿವಿನ ಅಂಚಿನತ್ತ ಜಿಯೋ!! ವಿಶ್ವಕ್ಕೆ ಉಚಿತವಾಗಿ ಇಂಟರ್‍ನೆಟ್ ನೀಡಲು ಸಜ್ಜಾಗಿರುವ ಆನ್‍ಲೈನ್ ದಿಗ್ಗಜರು ರೆಡಿ!!

ನೆಟ್ ನ್ಯೂಟ್ರಾಲಿಟಿಗೆ ಮತ್ತೆ ಮರುಜೀವ ಬಂದಿದೆ.!

ಅಂತರ್ಜಾಲ ಸೇವೆಗಾಗಿ ಅಗ್ಗವಾಗಿ ಸಿಗುತ್ತಿರುವ ಜಿಯೋ ಕಥೆಯೂ ಮುಗಿಯುವ ದಿನಹತ್ತಿರ ಬಂದಂತೆ ಕಾಣುತ್ತಿದೆ ಯಾಕೆಂದರೆ ಈಗಾಗಲೇ ಈಡೀ ವಿಶ್ವಕ್ಕೆ ಉಚಿತವಾಗಿ ಅಂತರ್ಜಾಲವನ್ನು ನೀಡಲು ಆನ್ ಲೈನ್ ದಿಗ್ಗಜರು ರೆಡಿಯಾಗಿದ್ದು, ಹಾಗಾಗಿ, ಅಂತರ್ಜಾಲ ಆಧಾರಿತ ಸೇವೆಗಳು ಯಾವುದೇ ತೊಡಕು ಅಥವಾ ತಾರತಮ್ಯ ಇಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ಕಲ್ಪನೆ ಹೊಂದಿರುವ ನೆಟ್ ನ್ಯೂಟ್ರಾಲಿಟಿಗೆ ಮತ್ತೆ ಮರುಜೀವ ಬಂದಿದೆ.!

ಹೌದು… ಈಗಾಗಲೇ ಭಾರತದಲ್ಲಿ ಜಿಯೋ ಅಗ್ಗದಲ್ಲಿ ಸಿಗುತ್ತಿರುವ ಇಂಟರ್ ನೆಟ್ ಸೇವೆಯಾಗಿದ್ದು, ತದ ನಂತರದಲ್ಲಿ ಜಿಯೋಗೆ ಪೈಪೋಟಿ ನೀಡಲು ಏರ್ ಟೆಲ್ ಇನ್ನೊಂದು ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ!! ಇತ್ತ ಗ್ರಾಹಕರನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ವ್ಯವಹಾರಗಳನ್ನು ನಿಯಂತ್ರಿಸುವ ನಿಯಮಗಳನ್ನು ಕೊನೆಗಾಣಿಸಲು ಅಮೆರಿಕಾದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಮತ ಚಲಾಯಿಸಿದ್ದು, ನೆಟ್ ನ್ಯೂಟ್ರಾಲಿಟಿಗೆ ಇದೀಗ ಮರುಜೀವ ಬಂದಂತಾಗಿದೆ.

ಈಗಾಗಲೇ ಎಲ್ಲರಿಗೂ ಸಮಾನ ಇಂಟರ್ ನೆಟ್ ಬಳಕೆಯ ಚರ್ಚೆ ದಿನೇ ದಿನೇ ಕಾವೇರುತ್ತಿದ್ದು, ಟೆಲಿಕಾಂ ಸಂಸ್ಥೆಗಳ ಲಾಬಿ, ಎಲ್ಲಕ್ಕೂ ದುಡ್ಡು ನೀಡಬೇಕಾದ ಅನಿವಾರ್ಯತೆ ಜೊತೆಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಚರ್ಚೆ ನಡುವೆ ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ಕಾರ್ಟ್, ಟೆಲಿಕಾಮ್ ಸೇವೆಗಳ ಏರ್ಟೆಲ್ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಏರ್ಟೆಲ್-ಜೀರೋ ಯೋಜನೆಯಿಂದ ಹೊರ ನಡೆದಿದೆ ಎಂದು 2015ರಲ್ಲಿ ತಿಳಿಸಿತ್ತು!! ಆದರೆ ಕೆಲ ಜಂಜಾಟಗಳಿಂದ ಅರ್ಧಕ್ಕೆ ನಿಂತಿದ್ದ ಈ ವ್ಯವಸ್ಥೆಗೆ ಮರುಜೀವ ಬಂದಿರುವುದಂತೂ ಹೆಮ್ಮೆಯ ವಿಚಾರವಾಗಿದೆ.

ಏನಿದು ನೆಟ್ ನ್ಯೂಟ್ರಾಲಿಟಿ?

ಇದೊಂದು ಆಂದೋಲನವಾಗಿದ್ದು, ಈ ಆಂದೋಲನ ಅಂತರ್ಜಾಲ ಮುಕ್ತ ಬಳಕೆಗೆ ಬೆಂಬಲವಾಗಿರುತ್ತದೆ. ಇದು ಟೆಲಿಕಾಂ ಕಂಪನಿಗಳಿಗೆ ಗ್ರಾಹಕನ ಅಂತರ್ಜಾಲ ಬಳಕೆಯನ್ನು ನಿಯಂತ್ರಿಸುವುದನ್ನು ವಿರೋಧಿಸುತ್ತದೆ. ಅಷ್ಟೇ ಅಲ್ಲದೇ, ಅಂತರ್ಜಾಲದ ಮುಕ್ತ ಬಳಕೆ ಇದರ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಎಲ್ಲಾ ಜಾಲತಾಣಗಳೂ, ಮಾಹಿತಿ ವಿನಿಮಯಗಳೂ ಒಂದೇ ವೇಗದಲ್ಲಿ ಗ್ರಾಹಕರಿಗೆ ದೊರೆಯಬೇಕು. ಇದರ ಜೊತೆಗೆ ಸೇವಾ ಪೂರೈಕೆದಾರರಿಂದ ಡೇಟಾಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ಜಾಲತಾಣ ಹಾಗು ಅಪ್ಲಿಕೇಷನ್ ಗಳನ್ನು ಮುಕ್ತವಾಗಿ ಬಳಸುವಂತಾಗಬೇಕು ಎನ್ನುವುದೇ ಇದರ ಮುಖ್ಯ ಗುರಿಯಾಗಿದೆ.

ವಿಶ್ವಾದ್ಯಂತ ಮುಕ್ತ ಮಾಹಿತಿ ಹಂಚುವ ಅಂತರ್ಜಾಲವನ್ನು ಸುಮಾರು 292 ಕೋಟಿ ಮಂದಿ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಸೇವಾ ಕಂಪನಿಗಳು ತಮಗೆ ಹಣ ನೀಡುವ ಕಂಪೆನಿಗಳ ಜಾಲತಾಣ ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ. ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಆ ಕಂಪೆನಿಗಳ ಜಾಲತಾಣ ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಹೀಗೆ ಜಾಲ ತಾಣಗಳು ಹಾಗೂ ಗ್ರಾಹಕರಿಂದ ಹಣ ಪೀಕುವ ಈ ಲಾಬಿಯು ನಮಗೇ ಗೊತ್ತಿಲ್ಲದೆ ನಡೆಯುವ ಪ್ರಕ್ರಿಯೆಯಾಗಿದೆ.

ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆ ನಿರ್ಮಾಣವಾಗುತ್ತದೆ!!!

ಆದರೆ, ಈ ನೆಟ್ ನ್ಯೂಟ್ರಾಲಿಟಿ ಇಂದು ಪರ ವಿರೋಧಗಳಿಗಳ ಜಂಜಾಟಕ್ಕೆ ಸಿಲುಕಿದ್ದು, ಭವಿಷ್ಯದ ಪ್ರಪಂಚದ ಬದಲಾವಣೆಗಾಗಿ ಸನ್ನದ್ದವಾಗಿ ನಿಂತಿದೆ.!! ಉಚಿತ ಇಂಟರ್‍ನೆಟ್ ಮೂಲಕ ಜನರನ್ನು ತಲುಪಲು ಕಾಪೆರ್Çೀರೇಟ್ ಕಂಪೆನಿಗಳ ಹೋರಾಟವಾದರೆ, ನೆಟ್ ನ್ಯೂಟ್ರಾಲಿಟಿ ಕಲ್ಪನೆ ಜಾರಿಗೆ ಬಂದರೆ ಕೆಲವೇ ಕೆಲವು ಇಂಟರ್ ಸೇವಾ ಪೂರೈಕೆ ಕಂಪೆನಿಗಳು ಮತ್ತು ಐಟಿ ಕಂಪೆನಿಗಳು ಸೇರಿಕೊಂಡು ಇಡೀ ಇಂಟರ್‍ನೆಟ್ ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆ ನಿರ್ಮಾಣವಾಗುತ್ತದೆ ಎನ್ನುತ್ತಿವೆ ವರದಿಗಳು.!!

ಗ್ರಾಹಕರನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ವ್ಯವಹಾರಗಳನ್ನು ನಿಯಂತ್ರಿಸುವ ನಿಯಮಗಳನ್ನು ಕೊನೆಗಾಣಿಸಲು ಅಮೆರಿಕಾದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಮತ ಚಲಾಯಿಸಿದೆ. ಹಾಗಾಗಿ, ಅಂತರ್ಜಾಲ ಆಧಾರಿತ ಸೇವೆಗಳು ಯಾವುದೇ ತೊಡಕು ಅಥವಾ ತಾರತಮ್ಯ ಇಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ಕಲ್ಪನೆ ನೆಟ್ ನ್ಯೂಟ್ರಾಲಿಟಿಗೆ ಮತ್ತೆ ಜೀವ ಬಂದಿರುವುದು ಸಂತಸದ ವಿಚಾರ!!!

ಆದರೆ ಈ ನೆಟ್ ನ್ಯೂಟ್ರಾಲಿಟಿಯಿಂದ ಗ್ರಾಹಕನಿಗೆ ಯಾವುದೇ ಆಯ್ಕೆ ಸ್ವಾತಂತ್ರ್ಯ ಇರುವುದಿಲ್ಲ ಎಂದು 2003ರಲ್ಲೇ ಕೊಲಂಬಿಯಾ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಟಿಮ್ ವೂ ನೀಡಿದ್ದ ಇಂತಹದೊಂದು ಎಚ್ಚರಿಕೆ ಇಂದು ಕೂಡ ಗುನುಗುತ್ತಿದೆ.!!

ಇನ್ನು, ಮೊಬೈಲ್‍ನಲ್ಲಿ ಇಂಟರ್‍ನೆಟ್ ಬಳಕೆಯ ಸೇವೆಗಳಿಂದ ಬರುವ ವರಮಾನ ಆನ್‍ಲೈನ್ ಮತ್ತು ಟೆಲಿಕಾಂ ಕಂಪೆನಿಗಳಿಗೆ ಗಣನೀಯವಾಗಿ ಹೆಚ್ಚಿದೆ. ಹಾಗಾಗಿ, ಎರಡನೆಯ ಹಂತದಲ್ಲಿ ಇದನ್ನು ಇನ್ನಷ್ಟು ವ್ಯಾವಹಾರಿಕವಾಗಿ ವಿಸ್ತರಿಸಲು ಈ ಕಂಪನಿಗಳು ಯೋಜನೆ ರೂಪಿಸಿವೆ. ಆಯ್ದ ಜಾಲತಾಣಗಳನ್ನು ಅಥವಾ ತನ್ನದೇ ಜಾಲತಾಣಗಳನ್ನು ಇಂಟರ್ನೆಟ್ ಶುಲ್ಕವಿಲ್ಲದೆ ನೀಡಲು ಮುಂದಾಗಿವೆ.!!

ಫೇಸ್‍ಬುಕ್ ಮತ್ತು ಫ್ಲಿಪ್‍ಕಾರ್ಟ್ ಉದಾಹರಣೆ!!

ನಿಮಗೆ ಗೊತ್ತಿರಬಹುದು ವಿಶ್ವದ ಅತ್ಯಂತ ದೊಡ್ಡ ಜಾಲತಾಣ ಫೇಸ್‍ಬುಕ್ ಇಂದು ಯಶಸ್ಸಿನ ಉತ್ತುಂಗದಲ್ಲಿದೆ. ಆದರೆ, ಅದಕ್ಕೆ ತೊಡಕಾಗಿರುವುದು ಜನರಿಗೆ ಇಂಟರ್‍ನೆಟ್ ಲಭ್ಯವಾಗದಿರುವುದು.!! ಹಾಗಾಗಿ, ತಾನೇ ಇಂಟರ್‍ನೆಟ್ ಅನ್ನು ಜನರಿಗೆ ಉಚಿತವಾಗಿ ನೀಡಿದರೆ ಎನ್ನುವ ಕಲ್ಪನೆ ಫೇಸ್‍ಬುಕ್‍ನದ್ದು.!! ಇನ್ನು ಫ್ಲಿಪ್‍ಕಾರ್ಟ್ ಕಂಪನಿ ಸಹ ಏರ್‍ಟೆಲ್‍ನ ‘ಝೀರೊ’ ಸೇವೆಯಡಿ ಮಾರುಕಟ್ಟೆ ಪ್ರಯೋಗಕ್ಕೆ ಮುಂದಾಗಿದೆ!!

ಆದರೆ, ಮುಕ್ತ ಅಂತರ್ಜಾಲ ಪರಿಕಲ್ಪನೆಯನ್ನು ವೇದಿಕೆಯಾಗಿ ಬಳಸಿಕೊಂಡು ಮಧ್ಯಮ ಗಾತ್ರದ ಕಂಪನಿಗಳಿಗೆ ಮಾರುಕಟ್ಟೆ ವಿಸ್ತರಿಸಲು ನೆರವಾಗುವ ಪ್ರಯತ್ನವಾಗಿದೆ. ಅಂದರೆ, ಇಂಟರ್‍ನೆಟ್ ಸೇವಾ ಪೂರೈಕೆ ಕಂಪೆನಿಯು ಈ ಸಂಸ್ಥೆಗಳ ವೆಬ್‍ಸೈಟ್ ಹಾಗೂ ಇತರ ಇಂಟರ್ನೆಟ್ ಸೇವೆಗಳನ್ನು ಉಚಿತವಾಗಿ ಬಳಕೆದಾರರಿಗೆ ನೀಡುವುದರಿಂದ ಗ್ರಾಹಕರನ್ನು ಸೆಳೆಯುವ ಪ್ರಯತ್ನವೇ ಇದರದ್ದಾಗಿದೆ!!

ನೆಟ್ ನ್ಯೂಟ್ರಾಲಿಟಿ ಪರಿಣಾಮ ಹೇಗಿರಲಿದೆ?

ಗೂಗಲ್, ಮೈಕ್ರೊಸಾಫ್ಟ್, ಅಮೆಜಾನ್, ಆಪಲ್ ಮತ್ತು ಫೇಸ್‍ಬುಕ್ ಈ ಐದು ಅಮೆರಿಕದ ಕಂಪನಿಗಳು ಸದ್ಯ ಆನ್‍ಲೈನ್ ಜಗತ್ತನ್ನು ಆಳುತ್ತಿವೆ. ಇಡೀ ಅಂತರ್ಜಾಲ ಮೂಲಸೌಕರ್ಯ ವ್ಯವಸ್ಥೆ ಈ ಕಂಪೆನಿಗಳ ಕೈಗಳಲ್ಲಿದೆ. ಇಂಟರ್‍ನೆಟ್‍ನ ಬಹುತೇಕ ಜಾಹೀರಾತು ವ್ಯವಹಾರವನ್ನು ಈ ಕಂಪನಿಗಳೇ ನಿಭಾಯಿಸುತ್ತವೆ.!! ಇವವೆಲ್ಲವೂ ಜತೆಯಾದರೆ ಮುಕ್ತ ಅಂತರ್ಜಾಲ ಎನ್ನುವ ಪರಿಕಲ್ಪನೆ ಕಾಪೆರ್Çರೇಟ್ ನಿಯಂತ್ರಣವಾಗುತ್ತದೆ ಎಂದು ಟಿಮ್ ವೂ ಹೇಳಿದ್ದಾರೆ.!!

ಅಷ್ಟೇ ಅಲ್ಲದೇ, ನೆಟ್ ನ್ಯೂಟ್ರಾಲಿಟಿ ಭವಿಷ್ಯದಲ್ಲಿ ಮುಕ್ತ ಅಂತರ್ಜಾಲ ಪರಿಕಲ್ಪನೆ ಮುಕ್ತ ಮಾರುಕಟ್ಟೆ ಸ್ಪರ್ಧೆಗೆ ವಿರುದ್ಧವಾಗಲಿದೆ. ಇದರೊಂದಿಗೆ ದಿಗ್ಗಜ ಕಂಪೆನಿಗಳು ಸಣ್ಣ ಕಂಪೆನಿಗಳನ್ನು ಮುಳುಗಿಸುತ್ತವೆ.! ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಪ್ರಪಂಚದ ಹಣವೆಲ್ಲಾ ಅಮೆರಿಕಾ ಪಾಲಾಗಿ ಇಂಟರ್‍ನೆಟ್ ಎಂಬ ಅಸ್ತ್ರದಿಂದ ಅಮೆರಿಕಾ ಇಡೀ ಪ್ರಪಂಚವನ್ನೇ ತನ್ನ ವಸವಹಾತನ್ನಾಗಿ ಮಾಡಿಕೊಂಡತಾಗುತ್ತದೆ ಎಂಬುದು ಸತ್ಯ ಸಂಗತಿ!!

ಅಂತರ್ಜಾಲ ವಿಶ್ವವ್ಯಾಪಿ ಜಾಲಗಳನ್ನು ರೂಪಿಸಿ ಬೆಳೆಸಿದ ಮಹನೀಯರ ಉದ್ದೇಶದಂತೆ ಅವು ಮುಕ್ತವಾಗಿಯೇ ಉಳಿಯಬೇಕು, ಯಾವುದೇ ಪಕ್ಷಪಾತ ತೋರದೆ ತಟಸ್ಥವಾಗುಳಿದು ಎಲ್ಲರಿಗೂ ಸಮಾನ ಅವಕಾಶ ಒದಗಿಸಬೇಕು, ಹೊಸಹೊಸ ಆವಿಷ್ಕಾರಗಳನ್ನು ಯಾರೇ ಮಾಡಿದರೂ ಪೆÇ್ರೀತ್ಸಾಹಿಸಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಯ ಮೂಲಮಂತ್ರವಾಗಿದ್ದು, ಇನ್ನು ಮುಂದೆ ಜಿಯೋ ಗೂ ಕೂಡ ಬೈ ಬೈ ಹೇಳುವ ಕಾಲವೂ ಬರಲಿದೆ ಎನ್ನುವುದು ಸದ್ಯದ ಮಾತು!!

source: http://www.desipearl.com/tracker/772969/517/newsmirchi.in/14/smp/

– ಅಲೋಖಾ

 

Editor Postcard Kannada:
Related Post